ಹಿರಿಯರು ಹೇಳಿಕೊಟ್ಟ ಸಂಸ್ಕಾರಗಳು ತಪ್ಪದೇ ತಾಳ್ಮೆಯಿಂದ ಓದಿರಿಪ್ರತಿ ತಿಂಗಳಲ್ಲಿ ಬರುವ ಹಬ್ಬ ಹರಿದಿನಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಿ. ಬೆಳಿಗ್ಗೆ ಸ್ನಾನವಾದ ನಂತರ ಮಕ್ಕಳಿಗೆ ದೇವರ ಕೋಣೆಯಲ್ಲಿ ನಿಂತು ಕೈ ಮುಗಿಯುವುದನ್ನು ಹೇಳಿಕೊಡಿ.
ಪೂಜೆ ಪುನಸ್ಕಾರಗಳಲ್ಲಿ ಮನೆಯ ಹಿರಿಯರನ್ನು ಮುಂದೆ ನಿಲ್ಲಿಸಿ ಪ್ರಾರ್ಥನೆ ಮಾಡಿಸಿ ಹಿರಿಯರಿಂದ ಪ್ರಸಾದ ಸ್ವೀಕರಿಸಿ. ಪೂರ್ತಿ ಕತ್ತಲಿರುವ ಕೋಣೆಯಲ್ಲಿ ಮಲಗಬಾರದು, ಸ್ವಲ್ಪವಾದರೂ ಬೆಳಕು ಇರಬೇಕು.
ತಟ್ಟೆ ಯಲ್ಲಿ ಮೊದಲೇ ಅನ್ನವನ್ನು ಬಡಿಸಬಾರದು. ಯಾವುದಾದರೂ ಪಲ್ಯ ಅಥವಾ ಉಪ್ಪಿನಕಾಯಿಯನ್ನು ತಟ್ಟೆಗೆ ಬಳಸಿದ ನಂತರ ಅನ್ನವನ್ನು ಬಳಸಿ.
ಊಟ ಮಾಡುವ ಸಮಯದಲ್ಲಿ ಮನೆಗೆ ಯಾರಾದರೂ ಬಂದರೆ ಎಂಜಲು ಕೈಯಿಂದ ಏನನ್ನು ಕೊಡಬೇಡಿ. ಹೊಸ ಬಟ್ಟೆಯನ್ನು ಮನೆಗೆ ತಂದು ಯಾವುದೇ ಕಾರಣಕ್ಕೂ ಧರಿಸದೇ ಆಗೇ ಇಟ್ಟುಕೊಳ್ಳಬಾರದು.
ಊಟ ಮಾಡಲು ಕೂತುಕೊಂಡ ಮೇಲೆ ಅರ್ಧದಲ್ಲಿ ಎದ್ದು ಹೋಗಬೇಡಿ. ದೀಪ ಆರಿ ಹೋಗಿದೆ ಅಕ್ಕಿ ಖಾಲಿಯಾಗಿದೆ ಈ ರೀತಿ ಮಾತುಗಳನ್ನು ಮನೆಯಲ್ಲಿ ಹೇಳಬಾರದು. ದೀಪ ಸಣ್ಣದಾಗಿದೆ ಅಕ್ಕಿ ತರಬೇಕು ಎಂದು ಮಕ್ಕಳಿಗೆ ಈ ರೀತಿ ತಿಳಿಸಿಕೊಡಬೇಕು. ತಲೆ ಬಾಚಿದಾಗ ಉದುರಿದ ಕೂದಲನ್ನು ಮನೆಯೊಳಗೆ ಬಿಡಬಾರದು