ಉಪಯುಕ್ತ ಮಾಹಿತಿಗಳು ಸದಾ ತಂಗಳು ಆಹಾರ ರೋಗವನ್ನು ಉಂಟುಮಾಡುತ್ತದೆ. ಊಟ, ವ್ಯಾಯಾಮ, ಸ್ನಾನ ಹಾಗೂ ದುಡಿಮೆಯ ನಂತರ ತಕ್ಷಣ ಮೂತ್ರ ಮಾಡುವುದು ಆರೋಗ್ಯಕರ.
ಸಂಧಿವಾತಕೆ ಪ್ರತಿದಿನ ಎರಡು ದಳ ಬಿಲ್ವಪತ್ರೆ ಸೇವಿಸಿ. ಆರೋಗ್ಯವಂತರಿಗೆ ತಣ್ಣೀರಿನ ಸ್ನಾನ ಸರ್ವಶ್ರೇಷ್ಠ ನಿತ್ಯ ಮಲಗುವಾಗ ಹದವಾದ ಬಿಸಿ ನೀರು ಕುಡಿಯುವುದು ಉತ್ತಮ.
ನೀರನ್ನು ಶುದ್ಧಗೊಳಿಸಲು ಐದಾರು ತುಳಸಿ ಎಲೆ ಹಾಕಿರಿ. ನೆಲ್ಲಿಕಾಯಿ ಸೇವಿಸಿದ ಎರಡು ಗಂಟೆ ಹೊತ್ತು ಹಾಲು ಸೇವಿಸಬಾರದು.
ಕಬ್ಬು ಪ್ರಕೃತಿ ಬೆಲ್ಲ ಸಂಸ್ಕೃತಿ ಸಕ್ಕರೆ ವಿಕೃತಿ. ಬಾಯಿಯ ಹುಣ್ಣಿಗೆ ಕೊಬ್ಬರಿ ಮತ್ತು ಗಸಗಸೆಯನ್ನು ಅಗಿದರೆ ಬಾಯಿಹುಣ್ಣು ಗುಣವಾಗುತ್ತದೆ.
ರಕ್ತಶುದ್ಧಿಗೆ ಕಿತ್ತಳೆ ಹಣ್ಣು ತುಂಬಾ ಒಳ್ಳೆಯದು. ಜೀರಿಗೆ ಬೆಲ್ಲ ಸೇವಿಸಿದರೆ ತಲೆಸುತ್ತು ನಿವಾರಣೆಯಾಗುತ್ತದೆ. ಹಲ್ಲು ಸಡಿಲವಾದರೆ ಎಳ್ಳೆಣ್ಣೆಯಲ್ಲಿ 10 ನಿಮಿಷ ನಿಧಾನವಾಗಿ ಬಾಯಿಮುಕ್ಕಳಿಸಬೇಕು.