ಹನುಮಾನ್ ಮತ್ತು ಶನಿದೇವರ ಕದನ

0

ಪುರಾಣಗಳಲ್ಲಿ ಸೂರ್ಯ ಪುತ್ರ ಶನಿದೇವನ ಬಾಲ್ಯಲೀಲೆ ಪ್ರಚಲಿತ ಮತ್ತು ಪ್ರಸಿದ್ಧವಾಗಿದೆ. ಶನಿದೇವ ಬಾಲ್ಯದಿಂದಲೇ ಚಂಚಲ ಸ್ವಭಾವದವನಾಗಿದ್ದ. ಶನಿದೇವನ ಬಾಲ್ಯಲೀಲೆ ಪ್ರತಿಸಲನೂ ತಮಾಷೆಯಾಗುತ್ತಿತ್ತು. ಆದರೇ ಅವನ ತುಂಟತನ ಮಾತ್ರ ಮುಗಿಯುತ್ತಿರಲಿಲ್ಲ. ಶನಿದೇವ ಹಳ್ಳಿಯ ಉದ್ಯಾನವನಕ್ಕೆ ಹೋಗಿ ಅಲ್ಲಿನ ಹಣ್ಣನ್ನು ಕಿತ್ತು ತಿನ್ನುತ್ತಿದ್ದ ಮತ್ತು ಮರವನ್ನು ಬೇರು ಸಮೇತ ಎತ್ತುತ್ತಿದ್ದ.

ಶನಿದೇವನ ಈ ಲೀಲೆಯಿಂದಾಗಿ ಉದ್ಯಾನದ ಜನರು ಕೋಪಿಸಿಕೊಳ್ಳುತ್ತಾರೆ. ಶನಿದೇವ ಅವರ ಕೋಪವನ್ನು ಉಪಹಾಸ್ಯ ಮಾಡುತ್ತಾರೆ. ನಾನು ಸೂರ್ಯ ಪುತ್ರ ಶನಿ ನಾನು ಇದನ್ನು ನಾಶ ಮಾಡಲು ಬಂದಿದ್ದೇನೆ, ನಿಮ್ಮನ್ನೆಲ್ಲಾ ಇಲ್ಲಿಂದ ಕಳುಹಿಸಲು ಬಂದಿದ್ದೇನೆ. ಹಳ್ಳಿಯ ಜನರು ಹೇಳುತ್ತಾರೆ ನೀವು ದೇವರು ಇಂತಹ ಕೆಲಸವನ್ನು ಏಕೆ ಮಾಡುತ್ತಿದ್ದೀರಾ?

ಅದಕ್ಕೆ ಶನಿದೇವ ಇದರಿಂದ ನನಗೆ ಖುಷಿ ಸಿಗುತ್ತದೆ ಎಂದಾಗ ಹಳ್ಳಿ ಜನರು ಬೇರೆಯವರ ದುಃಖದಲ್ಲಿ ನಿಮ್ಮ ಸುಖವನ್ನು ಹುಡುಕುತ್ತಿದ್ದೀರಾ? ಇದು ಒಳ್ಳೆಯದ್ದಲ್ಲ, ದೇವರು ಸೃಷ್ಠಿಯನ್ನ ಕಾಪಾಡುತ್ತಾರೆ ಆದರೇ ನೀವು ಈ ಸೃಷ್ಠಿಯನ್ನ ನಾಶಮಾಡುತ್ತಿದ್ದೀರಾ ಎಂದು ಹಳ್ಳಿ ಜನರ ಮಾತಿಗೆ ಶನಿದೇವರು ನನಗೆ ಉಪದೇಶ ಮಾಡುತ್ತಿದ್ದೀರೋ ಅದು ನನಗೆ ಆಟ ಎಂದಾಗ

ಹಳ್ಳಿ ಜನರು ನಿಮ್ಮ ಮೇಲೆ ಪವನಸುತ ಹನುಮಾನರಿಗೆ ದೂರನ್ನು ನೀಡುತ್ತೀವಿ ಎಂದಾಗ ಶನಿದೇವನು ಉಪಹಾಸ್ಯವನ್ನ ಮಾಡುತ್ತಾ ಉದ್ಯಾನವನವನ್ನು ಬೆಂಕಿಯಲ್ಲಿ ಸುಡಲು ಶುರು ಮಾಡುತ್ತಾನೆ. ಹಳ್ಳಿಜನರು ಶನಿದೇವನಿಂದ ಬೇಸತ್ತು ಆಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಹನುಮಂತ ಧ್ಯಾನಮಗ್ನನಾಗಿದ್ದ, ಹಳ್ಳಿ ಜನರು ಹನುಮಂತರ ಬಳಿ ಶನಿದೇವನಿಂದ ನಮ್ಮನ್ನು ಕಾಪಾಡಿ

ಎಂದಾಗ ಹನುಮಂತನು ಶನಿದೇವನು ಚಿಕ್ಕವನು ಅವನಿಂದ ನಿಮಗೇನು ತೊಂದರೆಯಾಗಿದೆ? ಎಂದಾಗ ಹಳ್ಳಿಗರು ಶನಿದೇವನಿಂದ ನಮ್ಮ ಉದ್ಯಾನವನ, ನಮ್ಮ ಮನೆ ಅಂಗಡಿ ಯಾವುದು ಸುರಕ್ಷಿತವಾಗಿಲ್ಲ ಅವರ ಆಟದಿಂದ ನಮಗೆ ಹಾನಿಯಾಗುತ್ತಿದೆ. ಶನಿದೇವನ ಬಾಲ್ಯಲೀಲೆ ತೊಂದರೆಯನ್ನು ತಂದೊಡ್ಡುತ್ತಿದೆ ಎಂದು ಹನುಮಂತ ಹೇಳಿ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದುಕೊಳ್ಳುತ್ತಾರೆ. ಇತ್ತ ಕಡೆ ಶನಿದೇವನಿಗೆ ದಾಹ ಉಂಟಾಗುತ್ತದೆ. ಹತ್ತಿರ

ಎಲ್ಲೂ ನೀರು ಇಲ್ಲದ ಕಾರಣ ಹಳ್ಳಿಯ ಮನೆಯ ಹತ್ತಿರ ಬರುತ್ತಾನೆ. ಆದರೇ ಹಳ್ಳಿಯ ಜನರು ಶನಿದೇವನ ತುಂಟಾಟದಿಂದ ಬೇಜಾರಾಗಿದ್ದರಿಂದ ನೀರನ್ನು ಕೊಡುವುದಿಲ್ಲ ಎನ್ನುತ್ತಾರೆ. ಇದರಿಂದ ಶನಿದೇವ ಕೋಪಿಸಿಕೊಂಡು ನಾಲ್ಕು ದಿಕ್ಕನ್ನು ನೋಡುತ್ತಾನೆ. ಇದರಿಂದ ಅವನ ಕಣ್ಣಿನಿಂದ ಅಗ್ನಿದೇವ ಹೊರಬರುತ್ತಾನೆ ಮತ್ತು ಆ ಅಗ್ನಿ ಮನೆಗಳನ್ನ ಸುಡುತ್ತಿರುತ್ತದೆ. ಜನರು ಮನೆಯಿಂದ ಹೊರಬಂದು ಓಡುತ್ತಿರುತ್ತಾರೆ. ಹಳ್ಳಿಜನರ ಕೂಗಾಟವನ್ನು ಕೇಳಿ ಶನಿದೇವ ನಗಾಡುತ್ತಾನೆ.

ಸೂರ್ಯದೇವ ತನ್ನ ಮಗ ಶನಿಯ ಈ ಕಾರ್ಯದಿಂದ ಚಿಂತಿತನಾಗುತ್ತಾನೆ ಮತ್ತು ಪತ್ನಿ ಛಾಯಾಗೆ ಹೇಳುತ್ತಾನೆ ಶನಿಯ ಸ್ವಭಾವ ಅವನನ್ನು ಅಹಂಕಾರಿಯನ್ನಾಗಿ ಮಾಡುತ್ತಿದೆ, ಅವನ ಚರಿತ್ರೆಗೆ ಇದು ಒಳ್ಳೆಯದಲ್ಲ ಎಂದು ಛಾಯಾದೇವಿ ಹೇಳುತ್ತಾಳೆ. ಶನಿದೇವನಿಗೆ ಹಳ್ಳಿಗರು ಹೊಡೆಯಲು ಶುರು ಮಾಡುತ್ತಾರೆ ಶನಿದೇವ ಓಡಲು ಶುರುಮಾಡುತ್ತಾನೆ. ಅದೇ ಸಮಯಕ್ಕೆ ಹನುಮಂತ ಅಲ್ಲಿಗೆ ಬಂದು ಶನಿದೇವನನ್ನು ಹಳ್ಳಿ ಜನರಿಂದ ಕಾಪಾಡುತ್ತಾನೆ.

ಶಾಂತವಾಗಿ ಶನಿದೇವನನ್ನ ಬಿಟ್ಟುಬಿಡಿ ಎಂದು ಹನುಮಂತನು ಹಳ್ಳಿಗರನ್ನು ಕೇಳಿಕೊಳ್ಳುತ್ತಾನೆ. ಹನುಮಂತ ಬಾಯಲ್ಲಿ ಗಾಳಿಯನ್ನು ಊದಿ ಬೆಂಕಿಯನ್ನ ಹಾರಿಸುತ್ತಾನೆ ಅದರಿಂದ ಹಳ್ಳಿಜನರ ಕೋಪ ತಣ್ಣಗಾಗುತ್ತದೆ. ಹನುಮಂತ ಶನಿದೇವನನ್ನ ಹಳ್ಳಿಗರರಿಂದ ಕಾಪಾಡಿ ಏಕಾಂತಕ್ಕೆ ಕರೆದುಕೊಂಡು ಹೋಗುತ್ತಾನೆ. ಭವಿಷ್ಯದಲ್ಲಿ ಇಂತಹ ಕೆಲಸವನ್ನು ಯಾವತ್ತು ಮಾಡಬಾರದು ಇಲ್ಲದಿದ್ದರೇ ಇದೇ ರೀತಿ ಅವಮಾನವಾಗುತ್ತದೆ ಮತ್ತು ಹಳ್ಳಿಜನರು ನಾನು ಬರಲಿಲ್ಲವೆಂದಿದ್ದರೆ

ನಿಮ್ಮನ್ನು ಸಾಯಿಸುತ್ತಿದ್ದರು ಎಂದು ಹನುಮಂತನು ಶನಿದೇವನಿಗೆ ಹೇಳುತ್ತಾನೆ. ಅದಕ್ಕೆ ಶನಿದೇವನು ನನ್ನನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ. ಅದಕ್ಕೆ ಹನುಮಂತನು ನಿಮ್ಮ ಮಾತಿನಲ್ಲಿ ಕೃತಜ್ಞತೆ ಇಲ್ಲ ಅಹಂಕಾರ ಇದೆ ಎಂದಾಗ, ಶನಿದೇವನು ಅಹಂಕಾರ ತೋರಿಸುವುದಕ್ಕೂ ಯೋಗ್ಯತೆ ಇರಬೇಕು. ನಿಮ್ಮ ಉಪದೇಶ ನನಗೆ ಬೇಡ ಇಲ್ಲಿಂದ ಹೊರಟು ಹೋಗಿ ಎನ್ನುತ್ತಾನೆ ಶನಿದೇವ.

ಅದಕ್ಕೆ ಹನುಮಂತನು ನೀವು ಸೂರ್ಯಪುತ್ರರಾಗಿಲ್ಲದಿದ್ದರೇ ಈಗಲೇ ನಿಮ್ಮ ಅಹಂಕಾರವನ್ನು ನನ್ನ ಗಧೆಯಿಂದ ಮುರಿಯುತ್ತಿದ್ದೆ ಎಂದಾಗ ಶನಿದೇವ ತನ್ನ ಗಧೆಯನ್ನ ಪ್ರಕಟ ಮಾಡಿಕೊಂಡು ಹಮಮಂತನ ಮೇಲೆ ಪ್ರಹಾರ ಮಾಡಲು ಶುರುಮಾಡಿದ ಈ ಪ್ರಕಾರ ಗಧಾಯುದ್ಧ ಆರಂಭವಾಗುತ್ತದೆ. ಕೊನೆಯಲ್ಲಿ ಹನುಮಂತನ ಗಧೆಯ ಪ್ರಹಾರದಿಂದ ಶನಿದೇವ ಮೂರ್ಛೆ ಹೋಗಿ ಹಳ್ಳಿಯ ನೆಲದ ಮೇಲೆ ಬಿದ್ದು ಹೋಗುತ್ತಾನೆ.

ಹನುಮಂತ ಶನಿದೇವನನ್ನು ತನ್ನ ಬಾಲದಲ್ಲಿ ಸುತ್ತುಹಾಕಿಕೊಂಡು ಬೆಂಕಿ ಹಾಕಿದ್ದಂತಹ ಹಳ್ಳಿಗೆ ಮತ್ತೆ ಹೋಗುತ್ತಾನೆ. ಹಳ್ಳಿ ಜನರು ಶನಿದೇವನ ಈ ಪರಿಸ್ಥಿತಿಯನ್ನ ನೋಡಿ ಉಪಹಾಸ್ಯ ಮಾಡಲು ಶುರುಮಾಡುತ್ತಾರೆ. ನಂತರ ತುಂಬಾ ಹೊತ್ತು ಬಾಲದಲ್ಲೇ ಕಟ್ಟಿಹಾಕಿಕೊಂಡು ಸುತ್ತಾಡಿಸುತ್ತಾ ಕೊನೆಯಲ್ಲಿ ಸೂರ್ಯದೇವನ ಹತ್ತಿರ ಕರೆದುಕೊಂಡು ಹೋಗುತ್ತಾನೆ.

ಹನುಮಂತನು ಶನಿದೇವನನ್ನು ತನ್ನ ಬಾಲದಿಂದ ಮುಕ್ತಗೊಳಿಸಿ ಸೂರ್ಯದೇವನಿಗೆ ನನ್ನನ್ನು ಕ್ಷಮಿಸಿ ಎಂದಾಗ ಸೂರ್ಯದೇವ ಹೇಳುತ್ತಾನೆ ನೀವು ಕ್ಷಮೆ ಕೇಳುವುದಲ್ಲ ಶನಿ ಕೇಳಬೇಕು ಎನ್ನುತ್ತಾನೆ ಛಾಯಾದೇವಿ ನನ್ನ ಮಗ ಶನಿದೇವ ನಿಮಗೆ ಅಪಹಾಸ್ಯ ಮತ್ತು ಹಳ್ಳಿ ಜನರಿಗೆ ನಷ್ಟ ಮಾಡಿದ್ದಾನೆ. ನಾವು ನಿಮ್ಮ ಹತ್ತಿರ ಕ್ಷಮೆ ಕೇಳುತ್ತೀವಿ ಎಂದಾಗ ಶನಿದೇವನು ಮಾತಾ ನನ್ನ ತಪ್ಪಿನ ಅರಿವು ಆಗಿದೆ

ಅದಕ್ಕೆ ನಿಮ್ಮ ಮೂವರ ಹತ್ತಿರ ಕ್ಷಮೆಯನ್ನು ಕೇಳುತ್ತೇನೆ ಮತ್ತು ಇನ್ನು ಭವಿಷ್ಯದಲ್ಲಿ ಶನಿ ಜನಕಲ್ಯಾಣಕ್ಕಾಗಿ ಕೆಲಸವನ್ನು ಮಾಡುತ್ತೇನೆ ಹಾಗೂ ಎಲ್ಲರಿಗೂ ಒಳ್ಳೆಯದ್ದನ್ನೇ ಮಾಡುತ್ತೇನೆ ಎಂದು ಹೇಳುತ್ತಾನೆ. ಹನುಮಂತ ಪ್ರಸನ್ನನಾಗಿ ಶನಿದೇವನನ್ನ ಅಪ್ಪಿಕೊಳ್ಳುತ್ತಾನೆ ಮತ್ತು ಸೂರ್ಯದೇವ ಆಶೀರ್ವಾದ ಮಾಡುತ್ತಾನೆ.

Leave A Reply

Your email address will not be published.