ತಾಯಿ ಇಲ್ಲದಿದ್ದರೆ ಹೆಣ್ಣುಮಕ್ಕಳಿಗೆ ತವರುಮನೆ ಇಲ್ವಾ?

0

ತಂದೆ ತಾಯಿ ಇಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ತವರು ಮನೆ ಇರೋದಿಲ್ವಾ? ತವರು ಮನೆ ಎಂದರೆ ಅಮ್ಮ ಇರೋವರ್ಗು ಮಾತ್ರಾನ ಅಂತ ಕೇಳಿದ್ಲು ನನ್ನ ತಂಗಿ ದೀಪ. ಇದುವರೆಗೂ ನಾನು ಕೇಳದ ಪ್ರಶ್ನೆಯನ್ನು ನನ್ನ ತಂಗಿ ಕೇಳಿದ ಕೂಡಲೇ ನನ್ನ ಕಣ್ಣುಗಳು ಆಶ್ಚರ್ಯದಿಂದ ಆಕೆಯ ಕಡೆಗೆ ನೋಡುತ್ತವೆ. ದೀಪ ಕೇಳಿದ ಪ್ರಶ್ನೆಗೆ ದೀಪಾಳ ಅಣ್ಣ ತಲೆತಗ್ಗಿಸುತ್ತಾನೆ.

ಅತ್ತಿಗೆಯ ಬಾಯಿಂದ ಒಂದು ಅಕ್ಷರ ಕೂಡ ಮಾತು ಬರುವುದಿಲ್ಲ. ಬಂದ ಬಂಧುಗಳೆಲ್ಲರೂ ದೀಪಳ ಮಾತು ಕೇಳಿ ಶಾಕ್ ಆದರೂ. ನಾನು ಮಾತ್ರ ನನ್ನ ಮೊದಲಿನ ಹಳೆ ಕಥೆಯೊಳಗೆ ಜಾರಿದೆನು. ನನ್ನ ತಂದೆ ಹೆಸರು ರಾಜಣ್ಣ ಸುತ್ತಲೂ ನಾಲ್ಕು ಊರಿನಲ್ಲಿ ನನ್ನ ತಂದೆಗೆ ಒಳ್ಳೆಯ ಘನತೆ ಗೌರವ ಇದೆ ಎಂಥ ಪರಿಸ್ಥಿತಿಯಲ್ಲೂ ಎಂತಹ ಸಹಾಯ ಬೇಕಾದರೂ ಮಾಡುತ್ತಿದ್ದರೂ ನನ್ನ ತಂದೆ ರಾಜಣ್ಣ.

ಅಮ್ಮನ ಹೆಸರು ಮಹಾಲಕ್ಷ್ಮಿ. ಹೆಸರಿಗೆ ತಕ್ಕಂತೆ ಯಾವಾಗಲೂ ತುಂಬಿ ಹಸನ್ಮುಖಿಯಾಗಿ ಇರುತ್ತಿದ್ದರು. ನನ್ನ ತಾಯಿ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಮನೆಯ ಹೊಸ್ತಿಲು ದಾಟಿ ಎಲ್ಲಿಗೂ ಹೋಗುತ್ತಿರಲಿಲ್ಲ. ಅಷ್ಟರೊಳಗೆ ನನ್ನ ಅಣ್ಣ ಜನಿಸಿದನು. ಅಣ್ಣಾ ಹುಟ್ಟಿದ ಮೇಲೆ ಎರಡು ವರ್ಷದ ನಂತರ ನಾನು ಹುಟ್ಟಿದೆನು. ನನ್ನ ತಂದೆಗೆ ಅಣ್ಣನಿಗಿಂತ

ನನ್ನನ್ನು ಕಂಡರೆ ತುಂಬಾ ಪ್ರೀತಿ ಯಾವಾಗಲೂ ಮನೆಯ ಮಹಾಲಕ್ಷ್ಮಿ ನೀನು ಅಂತ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ನನ್ನ ಅಣ್ಣನಿಗೆ ನನ್ನನ್ನು ಕಂಡರೆ ಆಗುತ್ತೇ ಇರಲಿಲ್ಲ. ಯಾವಾಗಲೂ ನನಗೆ ಬಯ್ಯುವುದು ಹೊಡೆಯುವುದು ಮಾಡುತ್ತಿದ್ದ ನನ್ನ ಅಣ್ಣ. ಮನೆಗೆ ಬಂದ ಕೂಡಲೇ ಅಣ್ಣ ಹೊಡೆಯುತ್ತಾನೆ ಬಯ್ಯುತ್ತಾನೆ ಎಂದು ಅಪ್ಪನ ಹತ್ತಿರ ಹೇಳಿದರೆ ಅಪ್ಪ ಅಣ್ಣನನ್ನು ಬೈಯುತ್ತಿದ್ದರು. ಆ ದೃಷ್ಠಿಯಿಂದ ಅಣ್ಣನ ಕಣ್ಣಿಗೆ ಶತೃವಾಗಿ ಬಿಟ್ಟೆನು ನಾನು.

ನಮ್ಮಿಬ್ಬರನ್ನು ಚೆನ್ನಾಗಿ ಓದಿಸಿ ಗಂಭೀರವಾಗಿ ನಮ್ಮಿಬ್ಬರ ಮದುವೆ ಮಾಡಿಸುತ್ತಾರೆ. ಒಂದು ದಿನ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಕಾರ್ ಆಕ್ಸಿಡೆಂಟ್ ನಲ್ಲಿ ತಂದೆ ತಾಯಿ ಇಬ್ಬರು ಸಹ ತೀರಿಕೊಳ್ಳುತ್ತಾರೆ. ಆವಾಗಿನಿಂದ ನನ್ನ ಅಣ್ಣನಿಗೆ ಯಾವ ಜವಾಬ್ದಾರಿ ಇಲ್ಲದೆ ಆಯಿತು. ಕಾರ್ಯಕ್ರಮದಲ್ಲಿ ನನ್ನನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾನೆ ನನ್ನ ಅಣ್ಣ.

ಆ ಸಮಯದಲ್ಲಿ ಮನಸ್ಸಿನ ದುಃಖದಿಂದ ಹಾಗೆ ಮಾತಾಡಿರಬಹುದು ಅಂತ ನಾನು ಸುಮ್ಮನಾದೆ. ಅದಾದ ಮೇಲೆ ನಿಧಾನವಾಗಿ ಮಾತು ಕೂಡ ಇರೋದಿಲ್ಲ, ಯಾವಾಗಲೂ ಮನೆಗೆ ಹೋದಾಗ ಯಾರೂ ಬಂದಿದ್ದಾರೆ ಅಂತ ಅಂದುಕೊಳ್ಳುತ್ತಿದ್ದ. ಅತ್ತಿಗೆ ಗುಣ ಒಳ್ಳೆಯದು ಅಣ್ಣನಿಗೆ ಭಯಪಟ್ಟು ಅವರು ಕೂಡ ಮಾತಾಡುತ್ತಿರಲಿಲ್ಲ. ಹಾಗೆ ದಿನ ಕಳೆಯುತ್ತವೆ.

ಸಂಕ್ರಾಂತಿ ಹಬ್ಬ ಬರುತ್ತದೆ. ಆ ಹಬ್ಬದಲ್ಲಿ ತೀರಿ ಹೋದ ದೊಡ್ಡವರಿಗೆ ಬಟ್ಟೆಗಳು ಹಾಗೂ ಅವರಿಗೆ ಇಷ್ಟವಿರುವ ಆಹಾರ ಮಾಡಿ, ಬ್ರಾಹ್ಮಣರಿಗೆ ದಾನ ಕೊಡುವ ಪದ್ದತಿ ಇರುತ್ತದೆ. ಅದಕ್ಕೆ ನಾನು ತವರು ಮನೆಗೆ ಹೋದೆನು. ನಾನು ಹೋದ ಮೇಲೆ ಅಣ್ಣನ ಮುಖದಲ್ಲಿ ಸಂತೋಷವೇ ಇರುವುದಿಲ್ಲ. ಅಷ್ಟೇ ಅಲ್ಲದೆ ನಾನು ಹೊರಗೆ ಇದ್ದರೆ ಅಣ್ಣ ಒಳಗೆ ಇರುತ್ತಿದ್ದ.

ನಾನು ಒಳಗೆ ಇದ್ದರೆ ಅಣ್ಣ ರೂಮಿನೊಳಗೆ ಇರುತ್ತಿದ್ದ. ಅತ್ತಿಗೆ ಏನು ಮಾತಾಡದೇ ಮೌನವಾಗಿರುತ್ತಿದ್ದರು. ನಾನು ತವರು ಮನೆಗೆ ಬಂದ ಮೇಲಿಂದ ಎಷ್ಟು ಮಾತಾಡಲು ಪ್ರಯತ್ನಿಸಿದರು ಒಂದು ಮಾತು ಆಡೋದಕ್ಕೆ ಸಾಧ್ಯವಾಗಿಲ್ಲ. ಹಿರಿಯರಿಗೆ ಬಟ್ಟೆ ಇಡುವ ದಿನ ಬಂದೇಬಿಟ್ಟಿತು. ಹತ್ತಿರ ಇರುವ ಬಂಧುಗಳನ್ನು ಸೇರಿಸಿ ಈ ಕಾರ್ಯಕ್ರಮ ಚೆನ್ನಾಗಿ ಆಯಿತು.

ಆ ಕಾರ್ಯಕ್ರಮದಲ್ಲಿ ಬಂಧುಗಳು ಹೇಳಿದ ಮೇಲೆ ಗೊತ್ತಾಯಿತು ಅತ್ತಿಗೆ ಗರ್ಭಿಣಿಯಂತ. ನಾನು ಅಣ್ಣನಿಗೆ ಎಷ್ಟು ದೊಡ್ಡ ಶತೃ ಆಗಿರಬಹುದು ಅಂತ ನನಗೆ ಇಲ್ಲೇ ತಿಳಿಯಿತು. ಇಷ್ಟು ಸಂತೋಷವಾದ ವಿಷಯವನ್ನು ಇದುವರೆಗೂ ನನ್ನ ಹತ್ತಿರ ಅಣ್ಣ ಆಗಲಿ ಅತ್ತಿಗೆ ಆಗಲಿ ಯಾರು ಹೇಳಲಿಲ್ಲ. ಅಷ್ಟರೊಳಗೆ ಕಾರ್ಯಕ್ರಮಕೆಕ ಬಂದವರಲ್ಲಿ ಒಬ್ಬ ಮಹಿಳೆ ಹೇಳುತ್ತಾರೆ.

ನಿನ್ನ ಅಣ್ಣನಿಗೆ ಹೆಣ್ಣು ಮಗು ಆದರೆ ದೀಪಾ ನಿನ್ನ ಮನೆಗೆ ಸೊಸೆಯಾಗಿ ನಿನ್ನ ಅಣ್ಣ ಕೊಡುತ್ತಾನೆ ಬಿಡು ಅಂತ ಅಲ್ಲಿ ಎಲ್ಲೋ ದೂರ ಕೂತಿರುವ ಅಣ್ಣನ ಕಿವಿಗೆ ಈ ಈ ಮಾತು ಬಿದ್ದ ತಕ್ಷಣ ಕೂತಲ್ಲಿಂದ ಎದ್ದು ಸಿಟ್ಟಿನಿಂದ ನಿನ್ನಂತ ದರಿದ್ರದವಳು ಇಲ್ಲಿಗೆ ಬರೋದೆ ನನಗಿಷ್ಟ ಇಲ್ಲ. ನಿನ್ನ ಮುಖ ನೋಡೋದಕ್ಕೂ ನನಗೆ ಒಂಚೂರು ಇಷ್ಟಿಲ್ಲ ಅದರಲ್ಲಿ ನನಗೆ ಮಗಳು

ಹುಟ್ಟಿದರೆ ನಿನ್ನ ಮನೆಗೆ ಕಳಿಸ್ತೀನಿ ಛೀ ಅಂತ ಹೇಳಿ ಸಿಟ್ಟಿನಿಂದ ಮನೆಯಲ್ಲಿ ಬಂಧುಗಳೆಲ್ಲರೂ ಇದ್ದಾರೆ ಎಂದು ಕೂಡ ಅರಿವಿಲ್ಲದೆ ಹೇಳುತ್ತಾನೆ ಅಣ್ಣ. ಈ ಮಾತು ಕೇಳಿ ನನ್ನ ಕಣ್ಣಲ್ಲಿ ನೀರು ಜಾರುತ್ತನೆ ಇತ್ತು. ಇಷ್ಟು ದಿನ ಈ ಸಿಟ್ಟು ದ್ವೇಷವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೆಯಲ್ಲ ಅಷ್ಟಕ್ಕೆ ನಾನೇನು ತಪ್ಪು ಮಾಡಿದ್ದೆ ಸಣ್ಣವಳಿದ್ದಾಗ ನನ್ನನ್ನು ಹೊಡೆಯುವಾಗ

ಅಣ್ಣ ಎನ್ನುವ ಅಧಿಕಾರದಿಂದ ಹೊಡೆಯುತ್ತಿದ್ದೆ ಎಂದು ಅಂದುಕೊಳ್ಳುತ್ತಿದ್ದೆ. ಆದರೂ ನಿನ್ನ ಮನಸಲ್ಲಿ ಇಷ್ಟು ದ್ವೇಷ ಯಾಕೆ ಅಣ್ಣ ಅಪ್ಪ ಅಮ್ಮ ಇರೋವರ್ಗು ಮಾತ್ರ ಅಣ್ಣ ತವರು ಮನೆ ಆಮೇಲೆ ಹೆಣ್ಣು ಮಕ್ಕಳಿಗೆ ತವರು ಮನೆ ಇಲ್ವಾ? ಮೆಟ್ಟಿದ ಮನೆಯಲ್ಲಿ ಕಷ್ಟ ಬಂದರೆ ತವರು ಮನೆಯಲ್ಲಿ ಹೇಳಿಕೊಳ್ಳಲು ಬರಲು ಅಧಿಕಾರ ಇಲ್ವಾ? ಅಂತ ಹೇಳಿ ದೀಪಾ ಗಂಡನ ಮನೆಗೆ ಹೋಗುತ್ತಾನೆ.

ಹೋದ ನಂತರ ದೀಪಾಳ ಕೈ ಹಿಡಿದು ನಾನು ತುಂಬಾ ದೊಡ್ಡ ತಪ್ಪು ಮಾಡಿದ್ದೇನೆ ತಂಗಿ ಕ್ಷಮಿಸಿ ಬಿಡಮ್ಮ ಎಂದು ಕ್ಷಮೆ ಕೇಳುತ್ತಾನೆ. ಅಯ್ಯೋ ಹಾಗೇನಿಲ್ಲ ಅಣ್ಣ ಈಗಲಾದರೂ ನನ್ನ ಮನಸ್ಸು ನಿನಗೆ ಅರ್ಥವಾಯಿತಲ್ಲ ಎಂದು ಸಂತೋಷ ನನಗೆ ಎಂದು ಅಣ್ಣನ ಹತ್ತಿರ ದೀಪ ಹೇಳುತ್ತಾಳೆ. ಇನ್ನು ಮುಂದೆ ದೀಪ ಅಣ್ಣನ ಜೊತೆಗೆ ಚೆನ್ನಾಗಿ ತವರು ಮನೆಗೆ ಹೋಗಿ ಬಂದು ಇರುತ್ತಾಳೆ. ದೀಪಾಳಿಗೆ ಬೇಕಾದದನ್ನೆಲ್ಲ ಅಣ್ಣನು ಸಹ ಸಂತೋಷದಿಂದ ಮಾಡಿಕೊಡುತ್ತಾನೆ.

Leave A Reply

Your email address will not be published.