ಈ ಲೇಖನದಲ್ಲಿ ತಿಳಿಸಿರುವುದನ್ನ ಮನರಂಜನಾತ್ಮಕವಾಗಿ ತೆಗೆದುಕೊಳ್ಳಿ. ಈ ಐದು ನಂಬರ್ಗಳಲ್ಲಿ ನೀವು ಒಂದನ್ನ ಸೆಲೆಕ್ಟ್ ಮಾಡಬೇಕಾಗುತ್ತದೆ. ನೀವು ಯಾವ ವ್ಯಕ್ತಿಯನ್ನ ಇಷ್ಟಪಡುತ್ತೀರ ಮತ್ತು ನಿಮ್ಮನ್ನು ಇಷ್ಟಪಡುವ ವ್ಯಕ್ತಿಯಾಗಿರಬಹುದು, ಸ್ನೇಹಿತರು ಅಥವಾ ತಂದೆತಾಯಿ ಯಾರಾದರೂ ಆಗಲೀ ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೇ ಅದನ್ನು
ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿರುತ್ತೀರೋ ಅವರನ್ನ ನೆನೆಸಿಕೊಂಡು ಈ ಐದು ನಂಬರ್ಗಳಲ್ಲಿ ಒಂದು ನಂಬರ್ ಅನ್ನು ಕಣ್ಣುಮುಚ್ಚಿಕೊಂಡು ಆ ವ್ಯಕ್ತಿಯನ್ನ ನೆನಪುಮಾಡಿಕೊಂಡು ಆ ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಸೆಲೆಕ್ಟ್ ಮಾಡಿದ ನಂಬರ್ನಿಂದ ನೀವು ನೆನಪುಮಾಡಿಕೊಂಡ ವ್ಯಕ್ತಿಯು
ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಎಂಬುದು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ.
ನಂಬರ್ 1 ಅನ್ನು ಸೆಲೆಕ್ಟ್ ಮಾಡಿದರೇ ಅವರು ತುಂಬಾನೇ ಒಳ್ಳೆಯವರು ಎನ್ನಬಹುದು. ಏನಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೂ ಮನಸ್ಸಿನಿಂದ ತೆಗೆದುಕೊಳ್ಳುತ್ತಾರೆ. ಆಳವಾಗಿ ನೋಡಿ ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುವಂತಹವರು ಆಗಿರುತ್ತಾರೆ.
ಬೇರೆಯವರ ಮಾತನ್ನು ಕೇಳಿ ನಿರ್ಧಾರವನ್ನು ಚೇಂಜ್ ಮಾಡುವ ಬುದ್ಧಿ ಇವರಿಗೆ ಇರುವುದಿಲ್ಲ. ಇವರು ನಿಮ್ಮ ಏನು ಯೋಚನೆ ಮಾಡುತ್ತಿರುತ್ತಾರೆಂದರೆ ಬೇರೆಯವರ ಬಗ್ಗೆ ಕೆಟ್ಟದ್ದನ್ನ ಬಯಸುವುದಿಲ್ಲ. ನಿಮ್ಮ ಬಗ್ಗೆಯೂ ಒಳ್ಳೆಯ ಯೋಚನೆಯನ್ನು ಮಾಡುತ್ತಿರುತ್ತಾರೆ. ನಮ್ಮಿಂದ ಒಳ್ಳೆಯದೇ ಆಗಬೇಕು, ಕೆಟ್ಟದಾಗಬಾರದೆಂದು ಯೋಚನೆ ಮಾಡುತ್ತಿರುತ್ತಾರೆ.
ಎರಡನೇಯದಾಗಿ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರುತ್ತೀರ ಅವರು ನಿಮ್ಮ ಬಗ್ಗೆ ಅಹಂಕಾರ ಮತ್ತು ಕೋಪ ಜಾಸ್ತಿ ಇರುತ್ತದೆ ಎಂದುಕೊಂಡಿರುತ್ತಾರೆ. ಹೊರಗಡೆಯಿಂದ ನೀವು ತೋರಿಸಿಕೊಳ್ಳುವ ನಿಮ್ಮ ಸ್ವಭಾವವನ್ನ ಮನಸ್ಸಿನಿಂದ ಇರುವುದಿಲ್ಲ ಎಂದುಕೊಂಡಿರುತ್ತಾರೆ. ಅದನ್ನ ಯಾವ ರೀತಿಯಾದರೂ ಯೋಚಿಸಬಹುದು. ನೀವು ಹೊರಗಡೆಯಿಂದ ಅಹಂಕಾರದಿಂದ ತೋರಿಸಿಕೊಳ್ಳುತ್ತಿದ್ದರೆ
ಒಳಮನಸ್ಸು ತುಂಬಾ ವಿನಯವಂತರಾಗಿರುತ್ತೀರಿ ಎಂದುಕೊಳ್ಳಬಹುದು. ಇದು ಯಾವ ರೀತಿ ಇರುತ್ತದೆ ಎಂಬುದು ನಿಮ್ಮ ಮನಸ್ಸಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ನಂಬರ್ 3ರನ್ನು ಆಯ್ಕೆ ಮಾಡಿದ್ದರೆ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರುತ್ತೀರೋ ಅವರು ನಿಮಗೆ ಹೆಚ್ಚಿನ ಪ್ರೀತಿಯನ್ನ ಕೊಡಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ. ಯಾವುದೇ ರೀತಿಯ ಕೆಟ್ಟ ಬಯಕೆ
ಅವರಿಗೆ ಇರುವುದಿಲ್ಲ. ಮನಸ್ಸಿನಿಂದ ನಿಮ್ಮನ್ನು ಪ್ರೀತಿ ಮಾಡುತ್ತಾರೆ ಎಂದು ಹೇಳಬಹುದು. ಇವರಿಗೆ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ನೀವು ಬೇಜಾರು ಮಾಡಿಕೊಂಡರೆ ಇವರು ಅದನ್ನ ಸಹಿಸಿಕೊಳ್ಳುವುದಿಲ್ಲ. ನಿಮ್ಮನ್ನು ಸಮಾಧಾನ ಮಾಡುವ ಮನಸ್ಸಿನವರು ಆಗಿರುತ್ತಾರೆ. ನಿಮ್ಮ ಬಗ್ಗೆ ಕೇರಿಂಗ್ ಭಾವನೆ ಇರುತ್ತದೆ.
ನಂಬರ್ 4ನ್ನು ಆಯ್ಕೆ ಮಾಡಿದರೆ ಅವರು
ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಎಂದರೆ ನಿಮಗೆ ನಿಮ್ಮ ಜೀವನದಲ್ಲಿ ಇರುವ ಕನಸ್ಸುಗಳು ಮ್ಯಾಚ್ ಆಗುತ್ತಿಲ್ಲ ಎನ್ನವುದು ಇರುತ್ತದೆ. ನೀವು ಇಟ್ಟಿರುವ ಗುರಿಯ ಬಗ್ಗೆ ಹೆಚ್ಚಿನ ಗಮನವಿದೆ ನನ್ನ ಬಗ್ಗೆ ಹೆಚ್ಚಿನ ಸಮಯ ಕೊಡುವುದಿಲ್ಲ ಎಂಬ ಭಾವನೆ ಅವರಿಗೆ ಇರುತ್ತದೆ. ನಿಮ್ಮ ನಡವಳಿಕೆಯಿಂದ ಅವರಿಗೆ ಹಾಗೇ ಅನಿಸಿರುತ್ತದೆ ಎನ್ನಬಹುದು. ಪ್ರೀತಿಯ ವಿಷಯದ ಬಗ್ಗೆ ಹೇಳುವುದಾದರೆ ಅವರಿಗಿಂತ ನೀವು ಸ್ಟ್ಯಾಂಡರ್ ಆಗಿ ಇರುತ್ತೀರ, ಒಳ್ಳೆಯ ಕುಟುಂಬದಿಂದ ಬಂದಿರುತ್ತೀರ
ಎಂಬ ಯೋಚನೆ ಇರುವುದರಿಂದ ನಿಮ್ಮ ರಿಲೇಷನ್ಶಿಪ್ನಲ್ಲಿ ಏನಾದರೂ ಅಡೆತಡೆಗಳು ಬರುತ್ತಿರುತ್ತವೆ. ನೀವು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ಸ್ವಲ್ಪ ಗೊಂದಲದಲ್ಲಿ ಇದ್ದಾರೆಂಬುದನ್ನ ಹೇಳಬಹುದು. ನಿಮ್ಮ ಬಗ್ಗೆ ಅವರ ತಲೆಯಲ್ಲಿ ನನ್ನ ಮತ್ತು ಅವರ ಸ್ಟೇಟಸ್ ಮ್ಯಾಚ್ ಆಗುತ್ತಾ ಎಂಬ ಯೋಚನೆ ಇರುತ್ತದೆ. ನಿಮಗೂ ಕೂಡ ಇಷ್ಟವಿದ್ದರೆ ಅವರ ಜೊತೆ ನೇರವಾಗಿ ಮಾತನಾಡಿ ಗೊಂದಲವನ್ನು ದೂರಮಾಡಿಕೊಳ್ಳಬಹುದು.
5ನೇ ನಂಬರ್ ಅನ್ನು ಸೆಲೆಕ್ಟ್ ಮಾಡಿದ್ದರೇ ನೀವು ನೆನಸಿಕೊಂಡ ವ್ಯಕ್ತಿಯು ನಿಮ್ಮನ್ನು ಯಾವಾಗಲೂ ಖುಷಿಯಾಗಿರುವ ವ್ಯಕ್ತಿತ್ವದವರು ಮತ್ತು ಖುಷಿಯನ್ನ ಹಂಚುವ ವ್ಯಕ್ತಿತ್ವದವರು ಎಂದು ಯೋಚನೆ ಮಾಡುತ್ತಿರುತ್ತಾರೆ. ಅವರು ನಿಮ್ಮ ಜೊತೆ ಹೆಚ್ಚು ಸಮಯ ಕಾಲ ಕಳೆಯಬೇಕು ಎನ್ನುವ ಬಯಕೆ ಇರುತ್ತದೆ. ಕಾರಣ ಪ್ರತಿಯೊಬ್ಬರಿಗೂ
ಖುಷಿಯಿಂದ ಇರುವ ಮತ್ತು ಖುಷಿಯನ್ನ ಹಂಚುವ ಸ್ವಭಾವದವರು ಇಷ್ಟವಾಗುತ್ತಾರೆ. ನೀವು ನಿಮ್ಮ ಪ್ರೀತಿಮಾಡುವವರ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇವರಿಗೆ ನೀವು ತುಂಬಾ ಇಷ್ಟವಾಗಿದ್ದೀರ ಹಾಗೂ ಮದುವೆವರೆಗೂ ಹೋಗುವ ಮಾತುಕತೆಗಳು ಇರುತ್ತದೆ. ನಿಮಗೆ ಒಳ್ಳೆಯ ವ್ಯಕ್ತಿತ್ವ ಇರುತ್ತದೆ ಎಂದು ಅವರು ಯೋಚನೆ ಮಾಡುತ್ತಿರುತ್ತಾರೆ. ನಿಮ್ಮ ಬಗ್ಗೆ ಅವರಿಗೆ ಒಳ್ಳೆಯ ಭಾವನೆ ಇದೆ ಎಂದು ಹೇಳಬಹುದು.