ಹಲವಾರು ಯಕ್ಷಿಣಿಗಳು ಇವೆ ಅವುಗಳಲ್ಲಿ ಅದ್ಭುತವಾದ ಫಲಗಳನ್ನ ಕೊಡುವುದು ಯಕ್ಷಿಣಿಯಂತ್ರ. ಯಂತ್ರ ಯಕ್ಷಿಣಿ ಬಹಳ ವಿಶೇಷವಾಗಿರುವಂತದ್ದು, ಯಾರು ಈ ಸಿದ್ಧಿಯನ್ನು ಮಾಡಿಕೊಳ್ಳುತ್ತಾರೋ ಅವರು ಏನು ಅಂದುಕೊಂಡಿರುತ್ತಾರೋ ಅದೆಲ್ಲವೂ ಮಿರಾಕಲ್ ತರಹ ನಡೆಯುತ್ತದೆ. ಯಾವುದೇ ರೀತಿಯದುಷ್ಟಶಕ್ತಿಗಳು ಅಥವಾ ಮಾಂತ್ರಿಕ ದೋಷಗಳು
ಈ ಯಕ್ಷಿಣಿ ಯಂತ್ರವನ್ನ ಇಟ್ಟಿರುವ ಸ್ಥಳದಲ್ಲಿ ಬರುವುದಿಲ್ಲ. ಅಂತಹ ಅದ್ಭುತವಾದ ಯಂತ್ರ ಈ ಯಕ್ಷಿಣಿಯಂತ್ರ. ಈ ಯಂತ್ರದ ವಿಶೇಷತೆ ಏನು ಎಂದರೆ 8 ಮೂಲೆಗಳನ್ನ ಹೊಂದಿರುತ್ತದೆ. ಆ ಎಂಟು ತುದಿಗಳು ಯಕ್ಷಿಣಿ ಚಕ್ರದಲ್ಲಿ ಇರುತ್ತದೆ. ಕೊನೆಯ ತುದಿ ನೆಲಕ್ಕೆ ತಾಕಬಾರದೆಂದು ಕೆಳಗಡೆ ಒಂದು ಸ್ಟ್ಯಾಂಡ್ ಇರುತ್ತದೆ, ಇದರಿಂದ ಯಕ್ಷಿಣಿ ಚಕ್ರವು ಬಹಳ ಅದ್ಭುತವಾದ ಫಲವನ್ನು ಕೊಡುತ್ತದೆ.
ರಕ್ತಚಂದನವನ್ನು ಚೆನ್ನಾಗಿ ತೇದು ಯಕ್ಷಿಣಿಯಂತ್ರವನ್ನು ಹಾಲಿನಲ್ಲಿ ತೊಳೆದು ಪೂಜೆ ಮಾಡಿ ಗಂಧಾಪುಷ್ಪ ಅಕ್ಷತೆಗಳನ್ನ ಇಟ್ಟು ಆ ರಕ್ತಚಂದನವನ್ನು ಆ ಎಂಟು ತುದಿಗೆ ಲೇಪನ ಮಾಡಬೇಕು, ಆ ಸ್ಟ್ಯಾಂಡ್ ಮೇಲೆ ಇಟ್ಟು ನಾವು ಮುಂದೆ ಕುಳಿತುಕೊಂಡು ಯಕ್ಷಿಣಿ ಮಂತ್ರವನ್ನು ಹೇಳುತ್ತಾ ಆ ಯಂತ್ರಕ್ಕೆ ಮಂತ್ರವನ್ನ ಹೇಳಬೇಕು. ಇಲ್ಲಿ ಯಂತ್ರ, ಮಂತ್ರ ಮತ್ತು ತಂತ್ರ
ಈ ಮೂರು ಸೇರಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಗಳಾಗುತ್ತದೆ. ಯಕ್ಷಿಣಿಯಂತ್ರವನ್ನ ಇಟ್ಟ ಜಾಗದಲ್ಲಿ ಪ್ರೇತಗಳ ಸಮಸ್ಯೆ ಇರುವುದಿಲ್ಲ. ಆ ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಬರಲು ಸಾಧ್ಯವಾಗುವುದಿಲ್ಲ. ಅಷ್ಟಲಕ್ಷ್ಮಿ ಯಾವ ರೀತಿ ಇರುತ್ತಾಳೋ ಆ ರೀತಿಯಲ್ಲಿ
ಮೂಲೆಗಳನ್ನ ಮಾಡಿ ಅಂದರೆ 8 ದಿಕ್ಕುಗಳು ಯಾವ ರೀತಿ ಇದೆಯೋ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ವಾಯುವ್ಯ, ನೈರುತ್ಯ, ಈಶಾನ್ಯ ಎಂಟು ದಿಕ್ಕುಗಳನ್ನು ಅದರಲ್ಲಿ ಆಕ್ಟಿವ್ ಮಾಡಿ, ಆ ಎಂಟು ಮೂಲೆಗಳು ಇರುವಂತಹ ಯಕ್ಷಿಣಿಯಂತ್ರವನ್ನ ಸಿದ್ಧಿ ಮಾಡಲಾಗಿರುತ್ತದೆ. ಈ ರೀತಿಯ ಯಕ್ಷಿಣಿಯಂತ್ರದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.