ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ತ್ವವಿರುತ್ತದೆ. ಶಿವನ ಭಕ್ತರೆಲ್ಲರೂ ಶಿವನ ಆಶೀರ್ವಾದ ಕೃಪೆಯನ್ನು ಪಡೆದುಕೊಳ್ಳಲು ವ್ರತಗಳನ್ನು ಮಾಡುತ್ತಾರೆ, ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಎಲ್ಲಾ ಮನಸ್ಸಿನ ಇಷ್ಟಗಳು ಈಡೇರುತ್ತದೆ. ಶ್ರಾವಣ ಮಾಸದಲ್ಲಿ ಈ ವಿಶೇಷವಾದ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಭಗವಂತ ನಿಮ್ಮ ಇಚ್ಛೆಗಳನ್ನೆಲ್ಲಾ ಈಡೇರಿಸುತ್ತಾನೆ. ಈ ಎಲ್ಲಾ ವಸ್ತುಗಳು ಶಿವನಿಗೆ ಅತೀಪ್ರಿಯವಾಗಿದ್ದು ಈ ವಸ್ತುಗಳಿಂದ ಭಗವಂತನಾದ ಶಿವನು ಒಲಿಯುತ್ತಾನೆ. ಹಾಗಾದರೇ ಆ ವಸ್ತುಗಳು ಯಾವುವು ಎಂದರೆ
ಭಸ್ಮ. ಶಿವನಿಗೆ ಎಲ್ಲಕ್ಕಿಂತ ಪ್ರಿಯವಾಗಿದ್ದು, ಶ್ರಾವಣ ಮಾಸದಲ್ಲಿ ಶಿವನ ದೇವಾಲಯದಿಂದ ಭಸ್ಮವನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬಹುದು. ಮತ್ತು ನಿಮ್ಮ ಒಡವೆಗಳನ್ನು ಇಡುವ ಜಾಗದಲ್ಲಿ ಇಡಬಹುದು ಇದರಿಂದ ಧನಸಂಪತ್ತಿನ ವ್ಯರ್ಥವಾಗುವುದಿಲ್ಲ. ಜೊತೆಗೆ ಶಿವನ ಪೂಜೆ ಮಾಡಿದರೇ ಅನೇಕ ರೀತಿಯಲ್ಲಿ ಒಳಿತಾಗುತ್ತದೆ ಮತ್ತು ಶಿವನ ಕೃಪೆಯಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.
ರುದ್ರಾಕ್ಷಿ: ಶಿವನಿಗೆ ಅತ್ಯಂತ ಪ್ರಿಯವಾಗಿರುವ ವಸ್ತುಗಳಲ್ಲಿ ರುದ್ರಾಕ್ಷಿಯು ಒಂದಾಗಿದೆ. ಮಾಹಿತಿಯ ಪ್ರಕಾರ ಸಾಕ್ಷಾತ್ ಶಿವನೇ ರುದ್ರಾಕ್ಷಿಯಲ್ಲಿ ವಾಸಮಾಡುತ್ತಾನೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ನಿಮ್ಮ ಮನೆಗೆ ತಂದರೆ ಸುಖ, ಸಂಪತ್ತಿನಲ್ಲಿ ವೃದ್ಧಿ ಕಾಣುತ್ತೀರಿ. ಶಿವನ ಕೃಪೆಯಿಂದ ನಿಮ್ಮ ಜೀವನದಲ್ಲಿರುವ ಕಷ್ಟಗಳಿಂದ ಮುಕ್ತಿ ಕೂಡ ದೊರೆಯುತ್ತದೆ. ರುದ್ರಾಕ್ಷಿಯು ಒಂದು ರೀತಿಯ ಹಣ್ಣು,
ಇದನ್ನು ಶಿವನ ಅಂಶ ಎಂದು ತಿಳಿಯಲಾಗಿದೆ. ಶಿವ ಮಹಾಪುರಾಣದಲ್ಲಿ ತಿಳಿಸಿರುವಂತೆ ರುದ್ರಾಕ್ಷಿಯ ಉತ್ಪತ್ತಿಯು ಶಿವನ ಕಣ್ಣೀರಿನ ಹನಿಗಳಿಂದ ಉತ್ಪತ್ತಿಯಾಗಿದೆ. ರುದ್ರಾಕ್ಷಿಯನ್ನು ಧರಿಸಿಕೊಳ್ಳಬೇಕಾದರೇ ಶ್ರಾವಣ ಮಾಸ ಉತ್ತಮವಾಗಿದೆ. ಮತ್ತೊಂದು ಮಾಹಿತಿಯ ಪ್ರಕಾರ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ ಅವರ ಗ್ರಹದೋಷಗಳು ಕಡಿಮೆಯಾಗುವುದಷ್ಟೇ ಅಲ್ಲದೇ ಮನುಷ್ಯನಿಗೆ ಶಾಂತಿ, ನೆಮ್ಮದಿಯನ್ನು ಕೊಡುತ್ತದೆ.
ಗಂಗಾಜಲ: ಗಂಗಾಜಲವು ಶಿವನಿಗೆ ಅತ್ಯಂತ ಪ್ರಿಯವಾಗಿದ್ದು, ಶಿವಲಿಂಗದ ಮೇಲೆ ಒಂದು ಲೋಟದಷ್ಟು ನೀರನ್ನು ಹಾಕಿದ್ದರು ಬೇಗನೇ ಶಿವನು ಒಲಿಯುತ್ತಾನೆ. ಶಿವನು ಗಂಗಾ ಮಾತೆಗೆ ತನ್ನ ಜಡೆಯ ಮೇಲೆ ಸ್ಥಾನವನ್ನು ಕೊಟ್ಟಿದ್ದಾನೆ. ಶ್ರಾವಣ ಮಾಸದಲ್ಲಿ ಗಂಗಾಜಲದಿಂದ ಶಿವನಿಗೆ ಅಭಿಷೇಕ ಮಾಡಿದರೇ ಶಿವನ ಆಶೀರ್ವಾದ ನಿಮಗೆ ಸಿಗುತ್ತದೆ.
ನಿಮ್ಮ ಮನೆಯಲ್ಲಿ ಧನಸಂಪತ್ತಿನ ವೃದ್ಧಿಯಾಗುತ್ತದೆ. ಜೊತೆಗೆ ಗಂಗಾಜಲವನ್ನು ತಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಸಿಂಪಡಿಸಬೇಕು ಆಗ ದೇವರ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.ಬಿಲ್ವಪತ್ರೆ: ಎಲ್ಲಾ ಪೌರಾಣಿಕ ಕತೆಗಳಲ್ಲಿ ಬಿಲ್ವಪತ್ರೆಯ ಮಹತ್ತ್ವನ್ನು ತಿಳಿಸಿದ್ದಾರೆ. ಬಿಲ್ವಪತ್ರೆಯನ್ನು ಶ್ರಾವಣ ಮಾಸದಲ್ಲಿ ಶಿವನಿಗೆ ಅರ್ಪಿಸಿದರೆ ನಿಮ್ಮ ಆಸೆಗಳು ಈಡೇರುತ್ತದೆ.
ಪಾದರಸದಿಂದ ತಯಾರಾದ ಶಿವಲಿಂಗ: ಪಾದರಸಕ್ಕೂ ಶಿವನಿಗೂ ವಿಶೇಷವಾದ ಸಂಬಂಧವಿದೆ ಎಂದು ತಿಳಿಯಲಾಗಿದೆ. ಮಾಹಿತಿಯ ಪ್ರಕಾರ ಪಾದರಸದಿಂದ ತಯಾರಾದ ಶಿವಲಿಂಗವನ್ನು ಮನೆಗೆ ತಂದು ಶ್ರಾವಣ ಮಾಸದಲ್ಲಿ ಪೂಜೆಯನ್ನು ಮಾಡಿದರೇ ನಿಮಗೆ ಇರುವಂತಹ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಶಿವನು ಅವರನ್ನು ರಕ್ಷಣೆ ಮಾಡುತ್ತಾನೆ. ಮನೆಯಲ್ಲಿ ಆರೋಗ್ಯ ಉಂಟಾಗುತ್ತದೆ. ಧನಸಂಪತ್ತಿನಲ್ಲೂ ವೃದ್ಧಿಯಾಗುತ್ತದೆ.
ತ್ರಿಶೂಲ: ತ್ರಿಶೂಲವು ಸದಾ ಶಿವನ ಜೊತೆ ಇರುತ್ತದೆ. ಇದು ಮೂರು ಲೋಕ ಮತ್ತು ತ್ರಿದೇವರ ಪ್ರತೀಕವಾಗಿದ್ದು ಶಿವನ ಜೊತೆಗೆ ತ್ರಿಶೂಲದ ಪೂಜೆಯನ್ನ ಮಾಡಲಾಗುತ್ತದೆ. ತ್ರಿಶೂಲವನ್ನು ಪೂಜೆ ಮಾಡಿದರೇ ನಕಾರಾತ್ಮಕತೆಯ ಶಕ್ತಿ ನಾಶವಾಗುತ್ತದೆ. ಮನುಷ್ಯನಿಗೆ ಶತೃಗಳ ಜೊತೆ ಹೋರಾಡುವಂತಹ ಶಕ್ತಿಯು ಸಿಗುತ್ತದೆ. ಶ್ರಾವಣ ಮಾಸದಲ್ಲಿ ತಾಮ್ರ, ಹಿತ್ತಾಳೆ, ಬೆಳ್ಳಿಯಿಂದ ತಯಾರಾಗಿರುವಂತಹ ತ್ರಿಶೂಲವನ್ನು ಮನೆಗೆ ತೆಗೆದುಕೊಂಡು ಬನ್ನಿರಿ. ಶುದ್ಧವಾದ ನೀರಿನಿಂದ ತೊಳೆದು,
ಶಿವನಿಗೆ ಅರ್ಪಿಸಿ ಪೂಜೆಯನ್ನು ಮಾಡಿರಿ ಆನಂತರ ಈ ತ್ರಿಶೂಲವನ್ನು ನಿಮ್ಮ ಮನೆಯ ಹಾಲ್ನಲ್ಲಿ ಇಟ್ಟುಬಿಡಿ ಅಥವಾ ಮನೆಯ ಮಾಳಿಗೆಯ ಮೇಲೂ ಅಂಟಿಸಬಹುದು. ಇದರಿಂದ ಶಿವನ ಆಶೀರ್ವಾದದಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಜೊತೆಗೆ ತ್ರಿಶೂಲದ ಲಾಕೆಟ್ಅನ್ನು ತೆಗೆದುಕೊಂಡು ಬಂದು ಶಿವನಿಗೆ ಧರಿಸಿ ಆನಂತರ ನೀವು ಧರಿಸಿಕೊಳ್ಳಬಹುದು. ಈ ಮಾಡುವುದರಿಂದ ನಕಾರಾತ್ಮಕ ಶಕ್ತಿಯಿಂದ ಈ ಲಾಕೆಟ್ ನಿಮ್ಮನ್ನು ರಕ್ಷಣೆ ಮಾಡುತ್ತದೆ.
ಡಮರುಗ: ಶಿವನ ಡಮರುಗದ ಧ್ವನಿಯನ್ನ ಅತ್ಯಂತ ಮಹತ್ತ್ವಪೂರ್ಣವೆಂದು ಪರಿಗಣಿಸಿದ್ಧಾರೆ. ಈ ಧ್ವನಿಯ ಮೂಲಕ ಕೆಟ್ಟದಾಗಿರುವ ಶಕ್ತಿಗಳನ್ನ ನಾಶಮಾಡಬಹುದು. ಮನೆಯಲ್ಲಿರುವ ಕೆಟ್ಟ ಶಕ್ತಿಗಳನ್ನು ನಾಶಮಾಡಬೇಕೆಂದರೆ ಶ್ರಾವಣ ಮಾಸದಲ್ಲಿ ಡಮರುಗವನ್ನು ಮನೆಗೆ ತನ್ನಿರಿ. ಶಿವನಿಗೆ ಅರ್ಪಿಸಿದ ಈ ಡಮರುಗವನ್ನು ಪ್ರತಿದಿನ ಸಾಯಂಕಾಲದ ಪೂಜೆಯಲ್ಲಿ ಬಾರಿಸಿರಿ ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಚಿಕ್ಕಮಕ್ಕಳಿಗೆ ಭಯವಾಗುತ್ತಿದ್ದರೇ ಆ ಮಕ್ಕಳು ಮಲಗುವ ಕೋಣೆಯಲ್ಲಿ ಇಡಬಹುದು. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿರುವ ಭಯ ನಾಶವಾಗುತ್ತದೆ.
ನಾಗ: ಶಿವನ ಕೊರಳಿನಲ್ಲಿ ನಾಗದೇವರ ವಾಸವಿದೆ. ಹಾಗಾಗಿ ನಮ್ಮ ಹಿಂದೂ ಧರ್ಮದಲ್ಲಿ ನಾಗದೇವತೆಗಳಿಗೆ ಮಹತ್ತ್ವವಿದೆ. ಬೆಳ್ಳಿಯ ಅಥವಾ ತಾಮ್ರದ ನಾಗಜೋಡಿಗಳನ್ನು ಶ್ರಾವಣ ಮಾಸದಲ್ಲಿ ಮನೆಗೆ ತನ್ನಿರಿ. ಇದನ್ನು ಮನೆಯ ಅಕ್ಕಪಕ್ಕದ ದ್ವಾರದಲ್ಲಿ ಇಡಿ ಮತ್ತು ಮನೆಯ ಮುಖ್ಯದ್ವಾರದ ಒಳಭಾಗದಲ್ಲೂ ಇಡಬಹುದು. ಈ ನಾಗಗಳನ್ನು ಇಡುವ ಮುಂಚೆ ಪವಿತ್ರಗೊಳಿಸಿ ಇಡಬೇಕು. ಈ ನಾಗದೇವತೆಗಳು ಮನೆಯ ಒಳಗೆ ಬರುವ ಕೆಟ್ಟ ಶಕ್ತಿಗಳನ್ನು ಅಲ್ಲಿಯೇ ನಾಶಮಾಡಿಬಿಡುತ್ತವೆ.
ನೀವು ಕಾಲಸರ್ಪ ದೋಷದಿಂದ ಬಳಲುತ್ತಿದ್ದರೇ ಶ್ರಾವಣ ಮಾಸಕ್ಕೂ ಮುನ್ನ ಅಥವಾ ಶ್ರಾವಣ ಮಾಸದ ಮೊದಲನೇ ದಿನ ಬೆಳ್ಳಿಯ ನಾಗಜೋಡಿಗಳನ್ನ ಮನೆಗೆ ತಂದು ಪವಿತ್ರಗೊಳಿಸಿ ದೇವರ ಕೋಣೆಯಲ್ಲಿ ಶಿವನ ಪಕ್ಕದಲ್ಲಿ ಇಡಬೇಕು. ಶಿವನ ಪೂಜೆ ಮಾಡಿದ ಮೇಲೆ ಪ್ರತಿದಿನ ನಾಗ ನಾಗಿಣಿ ಮೇಲೆ ಅರಿಶಿಣ, ಕುಂಕುಮ, ಅಕ್ಷತೆ, ಪುಷ್ಪಗಳನ್ನ ಹಾಕಿ ಪೂಜೆ ಮಾಡಿರಿ.
ಪೂರ್ತಿ ಶ್ರಾವಣ ಮಾಸ ಮುಗಿಯುವ ವರೆಗೂ ಇವುಗಳ ಪೂಜೆಯನ್ನ ಮಾಡಬೇಕು. ಶ್ರಾವಣ ಮಾಸದ ಕೊನೆಯ ದಿನ ಶಿವಲಿಂಗವನ್ನು ಪಂಚಾಮೃತದಿಂದ ಅಭಿಷೇಕ ಮಾಡಿ ಆನಂತರ ಈ ನಾಗ ಜೋಡಿಗಳನ್ನ ಅದರ ಮೇಲೆ ಇಟ್ಟುಬಿಡಿ. ಆ ನಂತರ ಶಿವನ ಬಳಿ ಕಾಲಸರ್ಪದೋಷ, ಪಿತೃದೋಷಗಳನ್ನ ನಿವಾರಣೆ ಮಾಡುವಂತೆ ಬೇಡಿಕೊಳ್ಳಿ.
ಶ್ರಾವಣ ಮಾಸದ ದಿನ ಈ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಮನೆಗೆ ತನ್ನಿರಿ ಶಿವನ ಕೃಪೆಗೆ ಪಾತ್ರರಾಗಿರಿ.