ಜೀವನದಲ್ಲಿ ಯಶಸ್ಸು ಆಗಬೇಕಾದರೆ ಈ ಐದು ಮಾತುಗಳನ್ನು ಕಸದ ಡಬ್ಬಿಗೆ ಎಸೆಯಿರಿ

0

ಜೀವನದಲ್ಲಿ ಯಶಸ್ಸು ಆಗಬೇಕಾದರೆ ಈ ಐದು ಮಾತುಗಳನ್ನು ಕಸದ ಡಬ್ಬಿಗೆ ಎಸೆಯಿರಿ.ನನ್ನ ಹಣೆಬರಹ ಸರಿ ಇಲ್ಲ ,ನನಗೆ ಮನಸ್ಸಿಲ್ಲ,ನನ್ನ ಬಳಿ ಸಮಯವಿಲ್ಲ, ಇದು ನನ್ನಿಂದ ಆಗುವುದಿಲ್ಲ, ಜನ ಏನು ಅಂದುಕೊಳ್ಳುತ್ತಾರೋ, ಈ ತರಹದ ನಾಚಿಕೆ ಬೇಡ.

ಹಳೆಯ ಬಟ್ಟೆಯಲ್ಲಿ, ಬಡವ ಸ್ನೇಹಿತರಲ್ಲಿ, ವೃದ್ಧತಂದೆ ತಾಯಿಯಲ್ಲಿ ,ಸರಳ ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಈ ಐದು ಮಾತುಗಳನ್ನು ನೆನಪಿರಲಿ ಕಳೆದ ಸಮಯವನ್ನು ಮರೆತುಬಿಡಿ. ವರ್ತಮಾನದಲ್ಲಿ ಬದುಕಿ. ಭವಿಷ್ಯದ ಚಿಂತೆ ಮಾಡಬೇಡಿ.

ನಿಮ್ಮ ಕೆಲಸವನ್ನು ಮುಂದೆ ಹಾಕುವುದನ್ನು ನಿಲ್ಲಿಸಿ. ನಕಾರಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿ. ಮೂರ್ಖರೊಂದಿಗೆ ತಂದೆ ತಾಯಿಯೊಂದಿಗೆ ಗುರುಗಳೊಂದಿಗೆ ಹುಚ್ಚನೊಂದಿಗೆ ವಾದ ಮಾಡಬೇಡಿ. ನಿಮ್ಮ ಮೇಲೆ ನಿಮಗೆ ಭರವಸೆ ಇರಲಿ.

ನಗುವಿನ ಹಿಂದೆ ಅಡಗಿರುವ ದುಃಖ ಸಿಟ್ಟಿನ ಹಿಂದೆ ಅಡಗಿರುವ ಪ್ರೀತಿ ಮೌನದ ಹಿಂದಿನ ಕಾರಣ ಜೀವನದ ಕೆಲವು ನಿಯಮಗಳನ್ನು ಯಾವಾಗಲೂ ಯೋಚಿಸಬೇಡಿ. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಿರಿ.

Leave A Reply

Your email address will not be published.