ವರಮಹಾಲಕ್ಷ್ಮಿ ಪೂಜೆಯಲ್ಲಿ ಅಮ್ಮನವರಿಗೆ ಮಾಡಲೇಬೇಕಾದ “ಕಳಸದಾರತಿ & ಕೆಂಪಾರಾತಿ” ಸಿದ್ಧಪಡಿಸುವ ವಿಧಾನ

0

ವರಮಹಾಲಕ್ಷ್ಮಿಅಮ್ಮನವರಿಗೆ ದೃಷ್ಠಿಯಾಗದ ರೀತಿಯಲ್ಲಿ ಕೆಂಪಾರಾತಿಯ ಸಿದ್ಧತೆ ಮತ್ತು ಅದನ್ನು ಬೆಳಗುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇನೆ. ಸಿದ್ಧತೆ ಎಂದರೆ ಅರಿಶಿಣ ಕುಂಕುಮ, ವೀಳ್ಯೆದೆಲೆ, ಒಂದು ನಿಂಬೆಹಣ್ಣು ಮತ್ತು ನೀರು ಹಾಗೆಯೇ ಕಳಸಕ್ಕೆ ಕಟ್ಟುವಂತಹ ಕಂಕಣ, ಬೆಳಗಲು ಕಳಸಬೇಕು ಜೊತೆಯಲ್ಲಿ ಚಿಕ್ಕದಾದ ದೀಪ ಮತ್ತು ತಟ್ಟೆಯನ್ನು ರೆಡಿಮಾಡಿಕೊಳ್ಳಬೇಕು.

ಬೆಳ್ಳಿ ಅಥವಾ ಹಿತ್ತಾಳೆ ತಟ್ಟೆಯನ್ನ ಬಳಸಿಕೊಳ್ಳಬಹುದು. ಮತ್ತೊಂದು ತಟ್ಟೆಯಲ್ಲಿ ಚಿಕ್ಕದಾದ ಕಳಸ ಮತ್ತು ಎರಡು ದೀಪ ಇರಬೇಕಾಗುತ್ತದೆ. ಮೊದಲು ಕಳಸ ಮತ್ತು ದೀಪಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಹಚ್ಚಬೇಕು. ಸುತ್ತಲೂ ನೀರಿನಿಂದ ಅಲಂಕಾರ ಮಾಡಿ ಕಳಸಕ್ಕೆ ಮುಕ್ಕಾಲು ನೀರನ್ನು ಹಾಕಿ ಅದರ ಒಳಗೆ ಅರಿಶಿಣ, ಕುಂಕುಮ, ಅಕ್ಷತೆಯನ್ನು ಹಾಕಬೇಕು.

ನಂತರದಲ್ಲಿ ಕಳಸ ಬೆಳಗುವ ತಟ್ಟೆಯಾಗಿರುವುದರಿಂದ ಮೂರು ವೀಳ್ಯೆದೆಲ್ಲೆಯನ್ನು ಬಳಸಬಹುದು ಆದರೇ ದಿನನಿತ್ಯ ಪೂಜೆಗೆ ಐದು ವೀಳ್ಯೆದೆಲೆಯನ್ನು ಬಳಸಬೇಕು. ನಂತರದಲ್ಲಿ ಮೂರು ವೀಳ್ಯೆದೆಲೆಯ ತುದಿಯ ಭಾಗಕ್ಕೆ ಅರಿಶಿಣ, ಕುಂಕುಮವನ್ನು ಹಚ್ಚಬೇಕು ಜೊತೆ ಒಂದು ನಿಂಬೆಹಣ್ಣನ್ನುಇಡಬೇಕು, ಅರಿಶಿಣ ಕುಂಕುಮವನ್ನು ಹಚ್ಚಬೇಕು ನಿಂಬೆಹಣ್ಣನ್ನು ಏಕೆ ಇಡಬೇಕೆಂದರೆ ಅಮ್ಮನವರಿಗೆ ದೃಷ್ಠಿಯಾಗಬಾರದೆಂಬುದಾಗಿದೆ.

ನಂತರದಲ್ಲಿ ಕಳಸಕ್ಕೆ ಕಂಕಣವನ್ನು ಕಟ್ಟಬೇಕು. ಕಳಸದ ಮುಂದೆ ಇಟ್ಟಿರುವ ದೀಪಕ್ಕೆ ಎಣ್ಣೆಯನ್ನು ಹಾಕಿ. ಸಿದ್ದತೆಯನ್ನು ಮಾಡಿ. ನಂತರ ಕೆಂಪಾರಾತಿಯ ಸಿದ್ಧತೆ ಹೇಗೆಂದರೆ ಆಳವಾದ ಪ್ಲೇಟ್ ತೆಗೆದುಕೊಂಡು ನೀರು, ಕಾಲ್ ಸ್ಪೂನ್ನಷ್ಟು ಅರಿಶಿಣ ಅರ್ಧಸ್ಪೂನ್ನಷ್ಟು ಕುಂಕುಮವನ್ನು ಹಾಕಿ ಜೊತೆಗೆ ಕಾಲ್ ಸ್ಪೂನ್ನಷ್ಟು ಶ್ರೀಗಂಧವನ್ನು ಮಿಕ್ಸ್ ಮಾಡಿಕೊಳ್ಳಿ.

ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ ದೇವರ ಕೆಂಪಾರಾತಿಗೆ ಸುಣ್ಣವನ್ನು ಬಳಸಬಾರದು ಮತ್ತು ಮೂರು ದಾರಿ ಸೇರುವ ಸ್ಥಳದಲ್ಲಿ ಈ ಕೆಂಪಾರಾತಿಯ ನೀರನ್ನು ಹಾಕಬಾರದು. ಈ ಎರಡು ದೀಪಕ್ಕೆ ತುಪ್ಪವನ್ನು ಹಾಕಿ ರೆಡಿ ಮಾಡಿಕೊಳ್ಳಬೇಕು. ಎಲ್ಲಾ ಮುತ್ತೈದೆಯರು ಬಂದು ಹೋದ ನಂತರ ದೇವರಿಗೆ ದೃಷ್ಠಿಯಾಗಬಾರದೆಂದು ಕಳಸಮತ್ತು ದೀಪ ಮತ್ತು ಕೆಂಪಾರಾತಿಯ ತಟ್ಟೆಯನ್ನು ರೆಡಿ ಮಾಡಬೇಕಾಗುತ್ತದೆ.

ಈ ಕೆಂಪಾರಾತಿಯ ನೀರನ್ನು ಯಾವುದಾದರೂ ಗಿಡಕ್ಕೆ ಹಾಕಿ ಜನರು ಓಡಾಡುವ ಜಾಗದಲ್ಲಿ ಹಾಕಬೇಡಿ. ಕಳಸಾರತಿಯನ್ನು ಬೆಳಿಗ್ಗೆ, ಸಂಜೆ ದೀಪ ಹಚ್ಚುವ ಸಮಯ ಮತ್ತು ರಾತ್ರಿ ಮಲಗುವ ಸಮಯದಲ್ಲಿ ಒಟ್ಟು ಮೂರು ಬಾರಿ ಬೆಳಗುತ್ತೇವೆ. ಕೆಂಪಾರಾತಿಯನ್ನು ರಾತ್ರಿ ಒಂದು ಸಲ ಮಾತ್ರ ಬೆಳಗುವಂತದ್ದು. ಈ ಕಳಸದ ಆರತಿಯಲ್ಲಿರುವ ಕಳಸಕ್ಕೆ ಕಟ್ಟಿರುವ ಕಂಕಣವನ್ನು ನೀರು, ವೀಳ್ಯೆದೆಲೆ ಮತ್ತು ನಿಂಬೆಹಣ್ಣನ್ನು ಗಿಡಕ್ಕೆ ಹಾಕಬಹುದು.

Leave A Reply

Your email address will not be published.