ನಿದ್ರೆಯಲ್ಲಿ ಕನಸು ಬೀಳುವುದು ಸಹಜ ಕೆಲವೊಮ್ಮೆ ಕನಸುಗಳು ನಮ್ಮ ಭವಿಷ್ಯ ಸೂಚಕವೂ ಆಗಿರುತ್ತದೆ… ಅಪ್ಪಿ ತಪ್ಪಿಯು ಅದನ್ನು ಬೇರೆಯವರ ಬಳಿ ಹೇಳಿದರೆ ಸ್ವಪ್ನ ಫಲ ಲಭಿಸುವುದಿಲ್ಲ ಎಚ್ಚರ. 1.ಕನಸಿನಲ್ಲಿ ಯಾರಾದರೂ ಸತ್ತಂತೆ ಅಥವಾ ನೀವೇ ಸತ್ತಂತೆ ಬಿದ್ದರೆ ಹೆದರುವುದು ಬೇಡ ನಿಮ್ಮ ಜೀವನದಲ್ಲಿರುವ ತೊಂದರೆಗಳು ಕಷ್ಟಗಳು ಆದಷ್ಟು ಬೇಗ ಪರಿಹಾರವಾಗಲಿದೆ. ಒಳ್ಳೆಯ ದಿನಗಳು ಬರಲಿವೆ ಎಂಬುವ ಸೂಚನೆ ಇದಾಗಿದೆ. ಆದರೆ ಯಾರಿಗೂ ಹೇಳಬೇಡಿ ನೆನಪಿರಲಿ.
ನೀವು ಒಂಟಿಯಾಗಿ ಕಾಡಿನಲ್ಲಿ ಅಥವಾ ನದಿ ಅಥವಾ ಸಮುದ್ರ ದಡದಲ್ಲಿ ಓಡಾಡುತ್ತಿರುವ ಕನಸು ಕಂಡರೆ ಬಹಳ ಶ್ರೇಷ್ಠ. ಇದು ಪ್ರಗತಿಗೆ ಸಂಬಂಧಿಸಿದ ಕನಸಾಗಿದೆ. ಪ್ರಕೃತಿ ಎಂದರೆ ಶುಭ ಸಂಕೇತ. ಇದನ್ನು ಕಂಡರೆ ಶೀಘ್ರದಲ್ಲಿ ನಿಮಗೆ ಗುಡ್ ನ್ಯೂಸ್ ಸಿಗುತ್ತದೆ. ಅದೃಷ್ಟ ಒಲಿಯುತ್ತದೆ ನಿಮಗೆ ಒಳ್ಳೆಯ ಕಾಲ ಶುರುವಾಗುತ್ತದೆ ಈ ಕನಸನ್ನು ಯಾರ ಬಳಿಯೂ ಹೇಳಬೇಡಿ ನೆನಪಿರಲಿ.
3.ಕನಸಿನಲ್ಲಿ ಹಾವು ಕಂಡರೆ ಭಯಪಡುತ್ತವೆ ಆದರೆ ವ್ಯಾಪಾರ ವ್ಯವಹಾರ ನೌಕರಿಯಲ್ಲಿ ಅಭಿವೃದ್ಧಿ ಸೂಚಕವಂತೆ ಇಂತಹ ಕನಸುಗಳು ಕಾರ್ಯ ಸಿದ್ದಿ ಸಂಕೇತವಾಗಿದೆ ಜೊತೆಗೆ ದನ ಲಾಭವು ಆಗುತ್ತದೆ. ಎಂದು ಸ್ವಪ್ನ ಶಾಸ್ತ್ರವು ಹೇಳುತ್ತದೆ. ಆದರೆ ಈ ಕನಸನ್ನು ಯಾರ ಬಳಿಯೂ ಹೇಳಬೇಡಿ ನೆನಪಿರಲಿ
ಕನಸಿನಲ್ಲಿ ಯಾವುದೇ ದೇವತೆಗಳ ದರ್ಶನವಾಗುವುದು ಇದು ಮುಂದೆ ಬರುವ ದಿನದಲ್ಲಿ ಖುಷಿಯನ್ನು ಹೊತ್ತು ತರುತ್ತದೆ ಅಲ್ಲದೆ ನಿಮ್ಮ ಜೀವನದಲ್ಲಿ ಧನ ಲಾಭ, ಅಭಿವೃದ್ಧಿ, ಮನೆಯಲ್ಲಿ ಮಂಗಳಕಾರ್ಯ ಹೀಗೆ ಶುಭಕಾಲ ಬರುವ ಸೂಚನೆ ಆದರೆ ಈ ಕನಸನ್ನು ಯಾರಿಗೂ ಹೇಳಬೇಡಿ ನೆನಪಿರಲಿ
ಕನಸಿನಲ್ಲಿ ಮೀನುಗಳು ಇದು ತುಂಬಾ ಶುಭ ಸೂಚಕ ಯಾವುದೇ ರೀತಿಯ ಮೀನು ಕಂಡರೆ ಅಥವಾ ಮೀನು ಹಿಡಿಯುವಂತೆ ಕನಸು ಬಿದ್ದರೆ.. ಇದು ಅತ್ಯಂತ ಶುಭ ಆಕಸ್ಮಿಕ ಧನ ಲಾಭವಾಗುತ್ತದೆ. ಈ ಕನಸಿನ ಫಲ ನಿಮಗೆ ಒಂದು ತಿಂಗಳ ಒಳಗೆ ದೊರೆಯುತ್ತದೆ ಆದರೆ ಯಾರಿಗೂ ಹೇಳಬೇಡಿ ನೆನಪಿರಲಿ..