ಪಿತೃ ಪಕ್ಷದ ಸಮಯದಲ್ಲಿ ಈ ಐದು ಪ್ರಾಣಿಗಳು ನಿಮ್ಮ ಮನೆಯ ಮುಂದೆ ಬರುತ್ತಿದ್ದರೆ, ಮರೆತು ಸಹ ನಿರ್ಲಕ್ಷವನ್ನು ಮಾಡಬೇಡಿ. ಈ ಸಲದ ಪಿತೃಪಕ್ಷವು ಸೆಪ್ಟೆಂಬರ್ 29ರಿಂದ ಆರಂಭವಾಗಿ ಅಕ್ಟೋಬರ್ 14ರವರೆಗೆ ಇರುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಪಿತೃ ಗಳಿಗಾಗಿ ನೈವೇದ್ಯವನ್ನು ಮಾಡುತ್ತಾರೆ ಈ ನೈವೇದ್ಯ ಮಾಡಿದ ಆಹಾರವನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತವೆ.
ಪಿತೃಗಳನ್ನು ಒಲಿಸಿಕೊಳ್ಳಬೇಕಾದರೆ ಅವರಿಗೆ ಬಿನ್ನ,ಬಿನ್ನ ಸಾತ್ವಿಕ ಆಹಾರಗಳನ್ನು ನೀಡಿ ಒಲಿಸಿಕೊಳ್ಳಬೇಕು. ಪುರಾಣದ ಪ್ರಕಾರ ಪಿತೃಪಕ್ಷದ ಸಮಯದಲ್ಲಿ ಪಿತೃಗಳು ಅರಳಿ ಮರದ ಮೂಲಕ ಬರುತ್ತಾರೆ. ತಮ್ಮ ಕುಟುಂಬದವರು ನೀಡಿದ ಗೌರವಗಳನ್ನು ಸ್ವೀಕರಿಸಿ ಸಂತೋಷದಿಂದ ಮರಳಿ ಪಿತೃ ಲೋಕಕ್ಕೆ ಹೋಗುತ್ತಾರೆ. ಭಗವಂತನಾದ
ಶ್ರೀ ಕೃಷ್ಣನು ಗರುಡ ಪುರಾಣದಲ್ಲಿ ಗರುಡನಿಗೆ ಪಿತೃರ ಶದ್ರದ ಬಗ್ಗೆ ತುಂಬಾನೇ ಮಹತ್ವಪೂರ್ಣ ವಿಚಾರಗಳನ್ನು ತಿಳಿಸಿದ್ದಾರೆ. ನಮ್ಮ ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಸಮಯದಲ್ಲಿ ಯಾರು ತಮ್ಮ ಪಿತೃಗಳಿಗೆ ಶಾಸ್ತ್ರೋತವಾಗಿ ಶಾದ್ರಗಳನ್ನು ಮಾಡುತ್ತಾರೋ ಅವರು ಉತ್ತಮ ಫಲವನ್ನು ಪಡೆದುಕೊಳ್ಳುತ್ತಾರೆ. ಪಿತೃ ಪಕ್ಷದ ಸಮಯದಲ್ಲಿ ಐದು ಪ್ರಾಣಿಗಳು ನಿಮ್ಮ ಮನೆಯ ಮುಂದೆ ಬಂದರೆ ತುಂಬಾನೆ ಒಳ್ಳೆಯದು ಎಂದು ನಂಬಬೇಕು.
ಒಂದು ಮಾಹಿತಿ ಅನುಸಾರವಾಗಿ, ಮನುಷ್ಯನ ಮೃತ್ಯುವಾಗುತ್ತದೆಯೋ, ಅವರಿಗೆ ಯಾವ ಶರೀರ ಸಿಕ್ಕಿರುತ್ತದೆಯೋ, ಅದು ವಾಯುವಿನ ರೂಪದಲ್ಲಿ ಇರುತ್ತದೆ. ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆಗ ಶರೀರವು ಪ್ರಾಣಿಗಳ ಮೂಲಕ ಭೂಮಿ ಮೇಲೆ ಸುತ್ತಾಡುತ್ತದೆ. ಇದೇ ಕಾರಣಕ್ಕಾಗಿ ಪಿತೃಪಕ್ಷದ ಸಮಯದಲ್ಲಿ ಯಾವುದೇ ಪ್ರಾಣಿ ಬಂದರೂ ಅವುಗಳಿಗೆ ಅವಮಾನ ಮಾಡಬಾರದು.
ಯಾಕೆಂದರೆ ಅವುಗಳ ಒಳಗಡೆ ನಿಮ್ಮ ಪಿತ್ರರವಾಸವಿರಬಹುದು. ಐದು ಪ್ರಾಣಿಗಳು ಯಾವುದೆಂದರೆ, ಮೊದಲನೆಯದು ಕಾಗೆ, ಕರುಣ ಗರುಡ ಪುರಾಣದ ಪ್ರಕಾರ ನಮ್ಮ ಪೂರ್ವಜರು ಕಾಗೆಯ ರೂಪವನ್ನು ಧರಿಸಿಕೊಂಡು ತಮ್ಮ ಪ್ರಿಯ ಜನರನ್ನು ಭೇಟಿಯಾಗಲು ಬರುತ್ತಾರೆ. ಪಿತೃಪಕ್ಷದ ಸಮಯದಲ್ಲಿ ಅರಳಿ ಮರದ ಮೇಲೆ ಕಾಗೆ ಕುಳಿತುಕೊಂಡಿರುವುದನ್ನು ಕಂಡುಬಂದರೆ ಅದು ಒಳ್ಳೆಯ ಸಂಕೇತ ಎಂದು ತಿಳಿಯಿರಿ. ಪಿತೃಪಕ್ಷದ ಸಮಯದಲ್ಲಿ ನೀವು ಇಟ್ಟಂತಹ ಆಹಾರವನ್ನು ಕಾಗೆ ಬಂದು ಸ್ವೀಕಾರ ಮಾಡಿದರೆ ,
ನಿಮಗೆ ಇದ್ದಂತಹ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹೇಳಬಹುದು. ಅಥವಾ ಯಾವುದಾದರೂ ಕಾಗೆ ಬಂದು ನಿಮ್ಮ ಮನೆಯ ಮುಂದೆ ಕೂಗುತ್ತಿದ್ದಾರೆ ನಿಮ್ಮ ಪೂರ್ವಜರು ನಿಮ್ಮ ಮೇಲೆ ಸಿಟ್ಟಾಗಿದ್ದಾರೆ ಎಂದರ್ಥ. ಎರಡನೇ ಪ್ರಾಣಿ ಯಾವುದು ಎಂದರೆ ನಾಯಿ ಪಿತೃಪಕ್ಷದ ಸಮಯದಲ್ಲಿ ನಿಮ್ಮ ಮನೆಯ ಹತ್ತಿರ ಬಂದರೆ ಇದು ಸಹ ಶುಭ ಸಂಕೇತ ಎಂದು ಹೇಳಬಹುದು.
ಇಲ್ಲಿ ನಿಮ್ಮ ಪಿತ್ರರು ನಾಯಿ ರೂಪದಲ್ಲಿ ನಿಮಗೆ ಆಶೀರ್ವಾದ ನೀಡಲು ಬಂದಿರುತ್ತಾರೆ. ಯಾವುದೇ ಕಾರಣಕ್ಕೂ ಬಂದಿರುವ ನಾಯಿಯನ್ನು ಅವಮಾನಿಸಬೇಡಿ. ನಾಯಿಗೆ ನಮಸ್ಕಾರ ಮಾಡಿ ತಿನ್ನಲು ಊಟವನ್ನು ಕೊಡಿ. ಖಂಡಿತವಾಗಿ ಇಲ್ಲಿ ನಿಮ್ಮ ಹಿರಿಯರು ಸಂತೋಷ ಪಡುತ್ತಾರೆ. ಹಾಗೆ ಮೂರನೇ ಪ್ರಾಣಿ ಯಾವುದೆಂದರೆ ಹಸು ಪಿತೃಪಕ್ಷದ ಸಮಯದಲ್ಲಿ ಹಸು ನಿಮ್ಮ ಮನೆಯ ಮುಂದೆ ಬಂದರೆ,
ಇಲ್ಲಿ ನೀವು ತುಂಬಾ ಅದೃಷ್ಟಶಾಲಿ ಆಗಿದ್ದೀರಾ ಎಂದು ಹೇಳಬಹುದು. ಹಸುವಿನ ರೂಪದಲ್ಲಿ ಬರುವ ಪೂರ್ವಜರು ತುಂಬಾ ಪುಣ್ಯವಂತರಾಗಿರುತ್ತಾರೆ. ಹಸುವಿನ ರೂಪದಲ್ಲಿ ಪೂರ್ವಜರು ಬಂದರೆ ಇದು ನಿಮ್ಮ ಸುಖ ಸಮೃದ್ಧಿಯ ಸಂಕೇತ ಎಂದು ಹೇಳಬಹುದು. ಹಾಗಾಗಿ ಹಸುವಿಗೆ ಅವಮಾನವನ್ನು ಮಾಡದೆ ಹಸುವಿಗೆ ಆಹಾರವನ್ನು ಕೊಡಿ. ಹಾಗೂ ನಮಸ್ಕಾರ ಮಾಡಿ,
ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಿಕೊಳ್ಳಿ. ಖಂಡಿತವಾಗಿ ನಿಮ್ಮ ಕೋರಿಕೆಗಳು ಈಡೇರುತ್ತವೆ. ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಿದರು, ಅಧಿಕ ಫಲವನ್ನು ಪಡೆದು ಕೊಡುತ್ತೀರಾ. ಹಾಗೇ ನಾಲ್ಕನೇದಾಗಿ ಪಿತೃಪಕ್ಷದ ಸಮಯದಲ್ಲಿ ನಿಮಗೆ ಕನಸಿನಲ್ಲಿ, ಯಾವುದೇ ಪ್ರಾಣಿ, ಮನುಷ್ಯನ ವಾಣಿಯಲ್ಲಿ ಮಾತನಾಡುವುದು ಕಂಡು ಬಂದರೆ, ಇದನ್ನು ನೀವು ಅಶುಭ ಸಂಕೇತ ಎಂದು ತಿಳಿಯಬೇಕು. ಇಲ್ಲಿ ನಿಮ್ಮ ಹಿರಿಯರು ನಿಮ್ಮಿಂದ ದುಃಖದಲ್ಲಿ ಇದ್ದಾರೆ ಎಂದು ತಿಳಿಯಬೇಕಾಗುತ್ತದೆ. ಆದ್ದರಿಂದ ಅವರಿಗೆ ಮತ್ತೊಮ್ಮೆ ಮುಕ್ತಿ ಸಿಗಲು ಸರಿಯಾದ ರೀತಿಯಲ್ಲಿ ದರ್ಪಣವನ್ನು ಬಿಡಬೇಕು.