ಮನೆಯಲ್ಲಿ ಇಂತಹ ಹೆಂಗಸರು ಇದ್ದರೇ ಮನೆಗೆ ಶ್ರೇಯಸ್ಕರ ಅಲ್ಲ. ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುವುದಿಲ್ಲ. ದಟ್ಟ ದಾರಿದ್ರ್ಯ ಎನ್ನುವುದು ಕಾಡುತ್ತದೆ. ಗೊತ್ತಿದ್ದೋ ಗೊತ್ತಿಲ್ಲದೇ ಹೆಂಗಸರು ಇಂತಹ ತಪ್ಪುಗಳನ್ನು ಹೆಂಗಸರು ಮಾಡುತ್ತಿರುತ್ತಾರೆ. ಇಂತಹ ತಪ್ಪುಗಳನ್ನು ಮಾಡಿದರೇ ಮನೆಗೆ ದಾರಿದ್ರ್ಯತೆ ಉಂಟಾಗಿ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸುತ್ತಾಳೆ ಆದ್ದರಿಂದ ಯಾವ ರೀತಿ ಹೆಣ್ಣು ಮಕ್ಕಳು ಮನೆಯಲ್ಲಿ ಇರಬೇಕೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಹೆಣ್ಣು ಮಕ್ಕಳು ಅಪ್ಪಿತಪ್ಪಿಯೂ ಪೊರಕೆಯ ಮೇಲೆ ಕಾಲನ್ನ ಇಡಬಾರದು ಮತ್ತು ಪೊರಕೆಯನ್ನು ಕಾಲಿನಿಂದ ಒದೆಯಬಾರದು. ಪೊರಕೆಯು ಲಕ್ಷ್ಮಿದೇವಿಯ ಸ್ವರೂಪ ಪೊರಕೆಗೆ ವಿಶೇಷವಾದ ಮಹತ್ತ್ವವಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಪೊರಕೆಯನ್ನ ಕಾಲಿನಿಂದ ತುಳಿಯುತ್ತಿದ್ದರೇ ಅಂತಹ ತಪ್ಪನ್ನು ನಿಲ್ಲಿಸಬೇಕು
ಯಾವುದೇ ಕಾರಣಕ್ಕೂ ನಿಮ್ಮ ಕಾಲಿನಿಂದ ಬಾಗಿಲನ್ನು ಒದೆಯಬಾರದು ಆಥವಾ ನಿಮ್ಮ ಕಾಲಿನಿಂದ ಬಾಗಿಲನ್ನು ತೆಗೆಯುವುದು ಮತ್ತು ಮುಚ್ಚುವುದಾಗಲಿ ಮಾಡಬಾರದು. ಬಾಗಿಲು, ಹೊಸ್ತಿಲು ಎಂದರೆ ಮಹಾಲಕ್ಷ್ಮಿದೇವಿಯ ನೆಲೆಯಾಗಿರುತ್ತದೆ. ಬಾಗಿಲಿಗೆ ನಾವು ದೇವರ ಸ್ವರೂಪವನ್ನು ನೀಡಿದ್ದೀವಿ ಆದ್ದರಿಂದ ಮನೆಯ ಯಾವುದೇ ಬಾಗಿಲನ್ನು ಕಾಲಿನಿಂದ ಒದೆಯಬಾರದು. ಮತ್ತು ಬಾಗಿಲ ಬಳಿ ಕುಳಿತುಕೊಂಡು ಊಟವನ್ನು ಮಾಡಬಾರದು. ಓಡಾಡುವ ದಾರಿಯಲ್ಲಿ ಕೂತುಕೊಂಡು ಊಟ ಮಾಡುವ ಅಭ್ಯಾಸವಿದ್ದರೇ ಅದನ್ನು ಮೊದಲು ನಿಲ್ಲಿಸಬೇಕು. ಬಾಗಿಲಿಗೆ ಹೊರಗಿಕೊಂಡು ಕೂತು ಊಟ ಮಾಡುತ್ತಿದ್ದರೇ ಅಂತಹ ತಪ್ಪನ್ನು ಮೊದಲು ನಿಲ್ಲಿಸಬೇಕು.
ರಾತ್ರಿ ವೇಳೆ ಎಂಜಲು ತಟ್ಟೆ ಅಥವಾ ಲೋಟಗಳು ಇದ್ದರೇ ಅದನ್ನು ಸ್ವಚ್ಛ ಮಾಡಿಯೇ ಮಲಗಬೇಕು. ಮನೆಗೆ ಮಹಾಲಕ್ಷ್ಮಿಯು ಬರುವ ಸಮಯವಾಗಿರುತ್ತದೆ ಆದ್ದರಿಂದ ನೀವು ಮಲಗುವ ಮುಂಚೆ ಯಾವುದೇ ಬಳಸಿದ ಪಾತ್ರೆಯಿದ್ದರೂ ಅದನ್ನು ಸ್ವಚ್ಛ ಮಾಡಿ ಮಲಗಬೇಕು. ಸ್ವಚ್ಛ ಮಾಡದೇ ಇದ್ದರೇ ಮನೆಗೆ ಶ್ರೇಯಸ್ಕರ ಅಲ್ಲ, ಅಭಿವೃದ್ಧಿ ಆಗುವುದಿಲ್ಲ. ಹಣಕಾಸಿನ ತೊಂದರೆಯು ಬರುತ್ತದೆ.
ಮುಸ್ಸಂಜೆ ವೇಳೆ ಮರೆತೂ ಕೂಡ ಕಸವನ್ನು ಗುಡಿಸಬಾರದು. ಸಂಜೆ 6 ಗಂಟೆಯ ನಂತರ ಕಸವನ್ನು ಗುಡಿಸಲೇಬಾರದು ನೆನಪಿಟ್ಟುಕೊಳ್ಳಿ. ಮುಸ್ಸಂಜೆ ವೇಳೆ ಹಾಲು, ಮೊಸರು, ಉಪ್ಪು, ಅರಿಶಿಣವನ್ನು ಇನ್ನೊಬ್ಬರಿಗೆ ಕೊಡಬಾರದು. ನೀವು ಈ ವಸ್ತುಗಳನ್ನು ಕೊಟ್ಟರೇ ನಿಮ್ಮ ಮನೆಯಲ್ಲಿರುವ ಲಕ್ಷ್ಮಿಯನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ. ನೀವು ಈ ವಸ್ತುಗಳನ್ನು ಕೊಟ್ಟರೇ ಮನೆಯಲ್ಲಿ ದುಡ್ಡು ನೆಲೆಸುವುದಿಲ್ಲ. ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.
ಸೂರ್ಯ ಉದಯಿಸಿದ ನಂತರವೂ ಹೆಣ್ಣು ಮಕ್ಕಳು ನಿದ್ರಿಸಬಾರದು. ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಬರುತ್ತದೆ. ಮನೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಮನೆಯ ಅಂಗಳವನ್ನು ಸ್ವಚ್ಛ ಮಾಡಬೇಕು. ಮನೆಯ ಬಾಗಿಲಿಗೆ ನೀರನ್ನು ಹಾಕಬೇಕು. ಮನೆಗೆ ನೀರನ್ನು ಹಾಕದೇ ದಿನವನ್ನು ಪ್ರಾರಂಭ ಮಾಡಿದರೇ ಮನೆಯ ಯಜಮಾನನಿಗೆ ಶ್ರೇಯಸ್ಕರ ಅಲ್ಲ, ಆತನಿಗೆ ನಷ್ಟವಾಗುತ್ತದೆ.
ಆದ್ದರಿಂದ ಮನೆಯ ಬಾಗಿಲಿಗೆ ತಪ್ಪದೇ ನೀರನ್ನು ಹಾಕುವುದರ ಜೊತೆಗೆ ರಂಗೋಲಿಯನ್ನು ಹಾಕಿ ಮಹಾಲಕ್ಷ್ಮಿದೇವಿಯನ್ನು ಸ್ವಾಗತ ಮಾಡಬೇಕು. ಅಕ್ಕಪಕ್ಕದ ಮನೆಯವರ ಜೊತೆ ಬೇರೆಯವರ ಸಂಸಾರದ ಬಗ್ಗೆ ಮಾತನಾಡಿಕೊಂಡು ಮನೆಯಲ್ಲಿ ಚರ್ಚೆ ಮಾಡಿದ್ದೇ ಆದರೆ ಮನೆಯಲ್ಲಿ ಲಕ್ಷ್ಮಿದೇವಿಯು ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. ಬೇರೆಯವರ ಮನೆಯ ಸಂಸಾರದ ಬಗ್ಗೆ ನಿಮ್ಮ ಮನೆಯಲ್ಲಿ ಮಾತನಾಡಬೇಡಿ.
ಎಲ್ಲಾ ರೀತಿಯಿಂದಲೂ ಒಳ್ಳೆಯದಾಗಬೇಕೆಂದರೆ ಇಂತಹ ತಪ್ಪುಗಳನ್ನು ಸರಿಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ.