2024 ರಲ್ಲಿ ಈ 5 ರಾಶಿಯವರಿಗೆ ಶನಿದೇವರ ಕೃಪೆ ಇರಲ್ಲ. ಶನಿಯಿಂದ ತುಂಬಾ ಕಷ್ಟಗಳನ್ನು ಅನುಭವಿಸಲಿವೆ ಈ ರಾಶಿಗಳು. ನಮಸ್ತೇ ಗೆಳೆಯರೇ, 2024ರಲ್ಲಿ ಈ ಐದು ರಾಶಿಯವರಿಗೆ ಶನಿದೇವನ ಕೃಪೆ ಇರುವುದಿಲ್ಲವಂತೆ. ಹೌದು ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ
ಈ ಐದು ರಾಶಿಯವರಿಗೆ ಶನಿದೇವನ ಕೃಪೆ ಖಂಡಿತಾ ಇರುವುದಿಲ್ಲವಂತೆ, 2024ರಲ್ಲಿ ಹಾಗಾಗಿ ಈ ಐದು ರಾಶಿ ಅವರು ಒಂದು ಎಚ್ಚರಿಕೆಯ ದಿನಗಳನ್ನು ಕಳೆಯಬೇಕಾಗುತ್ತದೆ 2024ರಲ್ಲಿ ಎಂದು ಹೇಳಲಾಗುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ ಶನಿದೇವನ ಕೃಪೆಯನ್ನು ನೀವು ಪಡೆಯಬೇಕಾದರೆ ಕೆಲವೊಂದಿಷ್ಟು ಸಲಹೆಗಳು ಇವೆ. ಹೀಗೆ ಮಾಡಿದರೆ ನಿಮಗೆ ಶನಿದೇವನ ಕೃಪೆಯೊಂದಿಗೆ ಭಗವಂತನ ಕೃಪೆಯು
ಸಹ ನಿಮ್ಮ ಮೇಲೆ ಇರುತ್ತದೆ, ಹಾಗಾದರೆ ನಾವು ಈ ಐದು ರಾಶಿಯವರು ಏನು ಮಾಡಿದರೆ ಶನಿದೇವನ ಕೃಪೆ ಪಡಿಯಬಹುದು ಮತ್ತೆ 2024ರಲ್ಲಿ ಯಾವ ರಾಶಿಯವರಿಗೆ ಶನಿ ಮಹಾತ್ಮನ ಕೃಪೆ ಇರಲಾರದು ಎನ್ನುವುದರ ಕುರಿತು ಒಂದು ವಿಶೇಷ ಮಾಹಿತಿಯನ್ನ ಸ್ನೇಹಿತರೆ ಮಾಹಿತಿ ಏನೆಂದು ತಿಳಿದುಕೊಳ್ಳೋಣ .ಇತ್ತೀಚಿಗೆ ನಾವು ಕೆಲವೊಂದು ಗ್ರಹಗಳಿಗೆ ಅಷ್ಟೊಂದು ಒಳ್ಳೆಯದಲ್ಲ ಮತ್ತೆ ಕೆಟ್ಟ ಪ್ರಭಾವಗಳು ಉಂಟಾಗುತ್ತದೆ ಅಂತ ಹೇಳಿರುವುದನ್ನು ಕೇಳಿದ್ದೀವಿ ಮತ್ತೆ ಕೆಲವಂದು
ರಾಶಿಗಳಿಗಂತೂ ಅಖಂಡವಾದಂತಹ ರಾಜಯೋಗಗಳು ಉಂಟಾಗಿದೆ. ಅದರ ಕುರಿತು ನಾನು ಎಷ್ಟೋ ವಿಡಿಯೋಗಳನ್ನು ಪೋಸ್ಟ್ ಇದ್ದೀನಿ ನೀವು ಚಾನೆಲ್ ಗೆ ವಿಸಿಟ್ ಮಾಡಿ ಆ ವಿಡಿಯೋಗಳನ್ನು ತಿಳ್ಕೋಬಹುದು ಎಷ್ಟೋ ಅದೃಷ್ಟ ಶಾಲಿ ರಾಶಿಗಳಿಗೆ ನಾಲ್ಕೈದು ರಾಜಯೋಗಗಳು ಸುಮಾರು 500 400 ವರ್ಷಗಳ ನಂತರ ಉಂಟಾಗಿದೆ ಅಂತ ವಿಶೇಷ ಮಾಹಿತಿಯನ್ನು ಕೂಡ ನಾನು ನಿಮಗೆ ತಿಳಿಸಿಕೊಟ್ಟಿದ್ದೇನೆ .
ಆ ಲಕ್ಕಿ ರಾಶಿಗಳು ಯಾವುದು ಅಂತ ನೋಡಿ ನೀವು ತಿಳ್ಕೋಬಹುದು ಇನ್ನೇನು ನೋಡು ನೋಡುತ್ತಿದ್ದಂತೆ ದೀಪಾವಳಿ ಹಬ್ಬ ಮುಗಿದೆ ಹೋಯಿತು ಈ ವರ್ಷದ ಅಂತ್ಯದಲ್ಲಿ ನಾವಿದ್ದೀವಿ ಅಂದ್ರೆ 2023ನೇ ವರ್ಷವನ್ನು ನಾವು ಇನ್ನೇನು ಮುಗಿಸಿ ಬಿಡ್ತೀವಿ.2023ನೇ ವರ್ಷದ ಅಂತ್ಯವನ್ನು ಸಮೀಪಿಸಿದ್ದೀವಿ ಇನ್ನೂ ಒಂದುವರೆ ತಿಂಗಳಲ್ಲಿ ನಾವೆಲ್ಲರೂ 2024ನೇ ವರ್ಷಕ್ಕೆ ಪ್ರವೇಶ ಮಾಡ್ತಾ
ಇದೀವಿ ಹೊಸ ವರ್ಷ ಹೇಗಿರುತ್ತೆ ಅನ್ನೋ ಕುತೂಹಲ ನಮಗೆಲ್ಲರಿಗೂ ಅವಶ್ಯಕವಾಗಿ ಇದ್ದೇ ಇರುತ್ತೆ. ಹಾಗಾದ್ರೆ ಮತ್ತೇನಕ್ಕೆ ತಡ ನೋಡೋಣ ಬನ್ನಿ. ಆದರೆ ಯಾವುದೇ ಶುಭ ಹಾಗು ಅಶುಭವಾದ ಫಲಿತಾಂಶಗಳು ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ ಅದರಲ್ಲೂ ಮುಖ್ಯವಾಗಿ ಒಬ್ಬರ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವ ಗ್ರಹವಾದ ಶನಿ ಮಹಾತ್ಮನು ಉತ್ತಮ ಸ್ಥಿತಿಯಲ್ಲಿ
ಇದ್ದರೆ ಅವರ ಅದೃಷ್ಟವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಶನಿಯ ಬಗ್ಗೆ ಎಲ್ಲರಿಗೂ ಭಯವಿದೆ ,ಏಕೆಂದರೆ ಶನಿದೇವನು ನಿಷ್ಪಕ್ಷಪಾತವಾಗಿ ಮತ್ತು ಕಾರ್ಯಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ .ಒಬ್ಬರ ಕಾರ್ಯಗಳು ಉತ್ತಮವಾಗಿದ್ದರೆ ಶನಿದೇವರು ಅವರನ್ನು ಶ್ರೀಮಂತರನ್ನಾಗಿ ಮಾಡುತ್ತಾನೆ ಅಂದರೆ ಶನಿದೇವನು ಕೆಟ್ಟ ಕೆಲಸ ಮಾಡುವವರಿಗೆ
ಅನಿರೀಕ್ಷಿತ ಕಷ್ಟಗಳನ್ನು ಮತ್ತು ಸವಾಲುಗಳನ್ನು ಸಹ ನೀಡುತ್ತಾನೆ. ಕುಂಭ ರಾಶಿಯಲ್ಲಿ ಸಂಚರಿಸುವ ಶನಿ ಈ 5 ರಾಶಿಯವರಿಗೆ ಕ್ಷಟಗಳನ್ನು ನೀಡುತ್ತಾನೆ.ಹಾಗಾದರೆ ಆ ರಾಶಿಯವರು ಯಾರೆಂದು ನೋಡೋಣ ಜೊತೆಗೆ ಶನಿದೇವನ ಕೋಪ ಹೆಚ್ಚಾಗದೆ ಇರಲು ಯಾವೆಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತೆ ಶನಿ ಮಹಾತ್ಮನಿಂದ ಆಗುವ
ಕೆಟ್ಟ ಪರಿಣಾಮಗಳನ್ನು ತಪ್ಪಿಸಬೇಕು ಅನ್ನುವುದಕ್ಕೆ ಸರಳ ಮಾರ್ಗಗಳು ಇವೆ ಆ ರಾಶಿಗಳು ಹೀಗಿದೆ ನೋಡಿ. ಮೊದಲನೆಯ ರಾಶಿ ಕರ್ಕಾಟಕ ರಾಶಿ ನವೆಂಬರ್ 4ರಂದು ವಕ್ರ ನಿವೃತ್ತಿಯನ್ನು ತಲುಪಿದ ಶನಿ ಮಹಾತ್ಮನು 2024ರಲ್ಲಿ ಕುಂಭ ರಾಶಿಯಲ್ಲಿ ಸಾಗುವುದರಿಂದ ಕರ್ಕಾಟಕ ರಾಶಿಯವರಿಗೆ ಶನಿಯ ಪ್ರಭಾವವು ಹೆಚ್ಚಾಗಿಯೇ ಇರುತ್ತದೆ.
ಇನ್ನು ಸ್ವಲ್ಪ ಹೆಚ್ಚೇ ಇರುತ್ತದೆ ಅಂದರು ತಪ್ಪಾಗುವುದಿಲ್ಲ ಆದ್ದರಿಂದ ಕರ್ಕಾಟಕ ರಾಶಿಯ ಜನರು 2024ರಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನ ತಪ್ಪಿಸಬೇಕು ಇಲ್ಲದಿದ್ದರೆ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ .ಶನಿ ಮಹಾತ್ಮನು ಕೋಪವನ್ನು ಒಂದು ಬಾರಿ ನಿಮ್ಮ ಮೇಲೆ ತೋರಿದರೆ ಖಂಡಿತ ನಿಮಗದು ಶುಭವಾಗುವುದಿಲ್ಲ ಎಚ್ಚರಿಕೆ ಇರಲಿ.
ಶನಿಯ ಕೋಪವನ್ನು ತಪ್ಪಿಸುವುದಕ್ಕೆ ನೀವು ಶನಿವಾರದಂದು ಶನಿದೇವರ ಪೂಜೆ ಅಥವಾ ಶನಿ ಮಹಾತ್ಮನ ದೇವಸ್ಥಾನಗಳಿಗೆ ತೆರಳಿ ಪೂಜೆಯನ್ನು ಸಲ್ಲಿಸಿದರೆ ಇದರಿಂದ ಉಂಟಾಗುವ ಸ್ವಲ್ಪ ಪ್ರಮಾಣದ ದುಷ್ಪರಿಣಾಮಗಳನ್ನ ನಾವು ತೆಗೆದು ಹಾಕಬಹುದಾಗಿದೆ.ಇನ್ನೂ ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರ ಮೇಲೆ 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿ ಇರುತ್ತದೆ
ಇನ್ನು ವರ್ಷವಿಡಿ ಶನಿಯ ಪ್ರಭಾವ ಇರುವುದರಿಂದ ಈ ರಾಶಿಯವರು ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿ ಇರಲು ಸಲಹೆ ನೀಡಲಾಗುತ್ತಿದೆ ,ಜ್ಯೋತಿಷ್ಯದ ಪ್ರಕಾರ ಸಾಧ್ಯವಾದರೆ ಚಾಲನೆಯನ್ನು ತಪ್ಪಿಸುವುದು ಕೂಡ ಉತ್ತಮವೆಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ ನೀವು ಅಪಘಾತಗಳನ್ನ ಎದುರಿಸಬಹುದು ಮತ್ತು
ನಿಮ್ಮ ಮೇಲೆ ಶನಿದೇವರ ಕೃಪೆ ಇರಬೇಕು ಅನ್ನೋದಾದರೆ ಶನಿಯ ಮಂತ್ರವನ್ನು ಪಠಿಸಿ ಹಾಗೂ ಶನಿ ಮಹಾತ್ಮನಿಗೆ ಪೂಜೆಯನ್ನ ಸಲ್ಲಿಸಿ ಎಂದು ಹೇಳಲಾಗುತ್ತಿದೆ.ಅಂದ್ರೆ ಈ ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಪ್ರಮಾಣದ ಅಪಘಾತಗಳು ಆಗುವಂತ ಸಂಭವ ಇದೆ 2024ರಲ್ಲಿ ಶನಿ ದೇವನ ಪ್ರಭಾವದಿಂದ ಅಂತ ಹೇಳಲಾಗುತ್ತಿದೆ.ಸೋ ಇಂತಹ ಕೆಲವು ಘಟನೆಗಳು ನಡಿಬಾರದು ಅನ್ನೋದು ನಮ್ಮೆಲ್ಲರ ಆಶಯ ಕೂಡ ಆದರೆ ಅದಕ್ಕೆ ನಾವು ಮಾಡಬೇಕಾಗಿರುವ ಪರಿಹಾರ ಇಷ್ಟೇ.
ವೃಶ್ಚಿಕ ರಾಶಿಯವರು ತಪ್ಪದೆ ಯಾವುದೇ ರೀತಿ ದೂರ ಪ್ರಯಾಣ ಅಥವಾ ಯಾವುದೇ ಅಪಘಾತ ವಲಯಗಳಲ್ಲಿ ಜಾಗರೂಕರಾಗಿ ಪ್ರಯಾಣ ಬೆಳೆಸಿ,ಇಲ್ಲವಾದರೆ ಅವಶ್ಯಕತೆ ಇಲ್ಲ ಎಂದಾದರೆ ಪ್ರಯಾಣಗಳಿಗೆ ಹೋಗಲೇಬೇಡಿ, ಒಂದು ವೇಳೆ ಅಂತ ಕನಿಷ್ಠ ಪರಿಸ್ಥಿತಿಗಳು ಅಥವಾ ಯಾವುದೇ ಎಮರ್ಜೆನ್ಸಿ ಬಂದಾಗ ನೀವು ಶನಿದೇವನ ಮಂತ್ರಗಳನ್ನ ಪಠಿಸಬಹುದು ಮತ್ತೆ ಶನಿ ಮಹಾತ್ಮನ ದೇವಾಲಯಗಳಿಗೆ ಹೋಗಿ ಪೂಜೆಯನ್ನು ಸಲ್ಲಿಸಿ ಯಾವುದೇ ಅಡಚಣೆಗಳು ಉಂಟಾಗದೇ
ಇರೋ ರೀತಿ ಆಶೀರ್ವದಿಸು ಎನ್ನುವಂತೆ ಪ್ರಾರ್ಥಿಸುವುದು ತುಂಬಾ ಒಳ್ಳೆಯದು ಎನ್ನಲಾಗುತ್ತಿದೆ. ಇನ್ನು ಮಕರ ರಾಶಿ ಮಕರ ರಾಶಿಯವರಿಗೆ 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿಯೇ ಇರಲಿದೆ ಹೀಗಾಗಿ ಈ ರಾಶಿಯವರು ಈ ವರ್ಷ ತಮ್ಮ ನಡವಳಿಕೆಯಲ್ಲಿ ಜಾಗರೂಕರಾಗಿ ಇರಬೇಕು ಎನ್ನಲಾಗುತ್ತಿದೆ, ಇನ್ನು ಮಕರ ರಾಶಿಯವರು ಈವರೆಗೂ ಸಹಾಯ ಮಾಡಿದ್ದರು ಪರವಾಗಿಲ್ಲ, ಆದರೆ ಮಾಡದಿದ್ದರೂ ಪರವಾಗಿಲ್ಲ ಈ ಹೊಸವರ್ಷದಲ್ಲಿ ಯಾರಾದರೂ ಸಹಾಯ ಕೇಳಲು ಬಂದರೆ ನೀವು ಇದುವರೆಗೂ ಯಾರಿಗೂ ಸಹಾಯ ಮಾಡದಿದ್ದರೂ ಪರವಾಗಿಲ್ಲ,
ಆದರೆ ಈ ಒಂದು ಹೊಸ ವರ್ಷದಲ್ಲಿ ಯಾರಾದರೂ ಸಹಾಯ ಕೇಳಲು ಬಂದರೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ನಿಮಗೆ ಸಾಧ್ಯವಾಗುತ್ತಿದ್ದರೆ ಅವರಿಗೆ ಸಹಾಯ ಮಾಡುವುದಕ್ಕೆ ಹಿಂಜರಿಯಬೇಡಿ ಎಂದು ಹೇಳಲಾಗುತ್ತಿದೆ .ಬಹಳಷ್ಟು ದಾನ ಮಾಡುವುದರಿಂದ ನಿಮ್ಮ ಪುಣ್ಯವೂ ಹೆಚ್ಚುತ್ತದೆ ಜೊತೆಗೆ ಶನಿದೇವನ ಮೆಚ್ಚುಗೆಗೆ ನೀವು ಪಾತ್ರರಾಗ ಬಹುದು ಎಂದು ಹೇಳಲಾಗುತ್ತಿದೆ
ಜ್ಯೋತಿಷ್ಯದ ಪ್ರಕಾರ .ಅಂದ್ರೆ ಮಕರ ರಾಶಿಯವರು ಶನಿ ಮಹಾತ್ಮನ ಕಂಟಕದಿಂದ ತಪ್ಪಿಸಿಕೊಳ್ಳಬೇಕಾದರೆ ಕೆಲವೊಂದಿಷ್ಟು ದಾನ ಧರ್ಮಗಳನ್ನುಮಾಡಬೇಕು ಎಂದು ಸೂಚಿಸಲಾಗುತ್ತಿದೆ. ಸೊ ಇಷ್ಟು ದಿನ ನೀವು ಯಾರ್ಗಾದ್ರು ಸಹಾಯ ಮಾಡಿಲ್ಲ ಅಥವಾ ಮಾಡಿದ್ರೂ ಪರವಾಗಿಲ್ಲ ಈಗ ನಿಮ್ಮ ಪ್ರೆಸೆಂಟ್ ಪರಿಸ್ಥಿತಿಯಲ್ಲಿ ಯಾರಾದರೂ 2024ರ
ನಂತರ ಬಂದು ಸಹಾಯ ಕೇಳಿದರೆ ನಿಮ್ಮ ಕೈಲಿ ಅದನ್ನ ಮಾಡೋದಕ್ಕೆ ಸಾಧ್ಯ ಇದೆ ಅನ್ನೋವಂತಹ ಸಹಾಯ ಆಗಿದ್ರೆ ಖಂಡಿತವಾಗಲೂ ಮಾಡಿ, ಕೆಲವೊಂದಿಷ್ಟು ದಾನ ಧರ್ಮಗಳನ್ನು ಮಾಡಿ ಇದರಿಂದ ಶನಿ ಮಹಾತ್ಮನ ಕೆಲವು ವಕ್ರ ದೃಷ್ಟಿಯಿಂದ ನೀವು ತಪ್ಪಿಸಿಕೊಳ್ಳಬಹುದು ಅಂತ ಹೇಳಲಾಗ್ತಿದೆ. ಇನ್ನು ಕುಂಭ ರಾಶಿ ಶನಿಯು ಕುಂಭ ರಾಶಿಯ ಅಧಿಪತಿ ಆಗಿದ್ದು 2024ರಲ್ಲಿ ಶನಿದೇವನ ಪ್ರಭಾವ ಹೆಚ್ಚಾಗಿರಲಿದೆ, ನೀವು ಶನಿಯ ಕೆಟ್ಟ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ ಯಾವಾಗಲೂ ಶನಿದೇವರಿಗೆ ಸೂಕ್ತವಾದ
ಸ್ತೋತ್ರವನ್ನು ಪಠಿಸಿ ಮತ್ತು ಯಾರೊಂದಿಗೂ ಜಗಳಗಳನ್ನ ಆಡಬೇಡಿ ,ಇಲ್ಲದಿದ್ದರೆ ದ್ವೇಷ ಹೆಚ್ಚಾಗುತ್ತದೆ ಮತ್ತೆ ದ್ವೇಷದ ಪರಿಣಾಮ ಹೆಚ್ಚು ಗಂಭೀರವಾಗುತ್ತ ಹೋಗುತ್ತದೆ,ಮುಂದಿನ ವರ್ಷ ನಿಮಗೆ ಶುಭವಾಗಿರಲು ಶನಿದೇವನ ಪೂಜೆ ಮಾಡುವುದನ್ನು ಖಂಡಿತಾ ಮರೆಯಬೇಡಿ. ಇನ್ನೂ ಕೊನೆಯ ರಾಶಿ ಮೀನ ರಾಶಿಯವರಿಗೆ ಶನಿಯು ಮೀನ ರಾಶಿಯವರಿಗೆ 2024ರಲ್ಲಿ ಹೆಚ್ಚಾಗಿ ಪ್ರಭಾವ ಬೀರಲಿದ್ದು
ಈ ಕಾರಣದಿಂದಾಗಿ 2024 ರ ವರ್ಷವೂ ಮೀನ ರಾಶಿಯವರಿಗೆ ತುಂಬಾನೇ ಕಷ್ಟಕರವಾಗಿರಲಿದೆ .ಈ ವರ್ಷ ಇವರು ಮಾತನಾಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು, ತಾಳ್ಮೆ ಎನ್ನುವುದು ಅಧಿಕವಾಗಿ ಇರಬೇಕು, ನಿಮ್ಮ ಮಾತೆ ನಿಮಗೆ ಮುಳ್ಳಾಗಬಹುದು, ಇಲ್ಲವಾದಲ್ಲಿ ಮಾತಿನಲ್ಲಿ ಹಲವಾರು ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ. ಮಾತೆ ಕೆಲವೊಮ್ಮೆ ನಮ್ಮ ಜೀವನಕ್ಕೆ ದೊಡ್ಡ ಕಂಠಕವೂ ಆಗಿಬಿಡುತ್ತದೆ, ಅಂತಹ ತಪ್ಪುಗಳನ್ನು ಶನಿ
ಮಹಾತ್ಮನ ಕೆಲವು ವಕ್ರ ದೃಷ್ಟಿಗಳಿಂದ ಪ್ರಭಾವಗಳು ನಿಮಗೆ ಬೀರಲಿವೆ ಹಾಗಾಗಿ ಯಾವುದೇ ಕಾರಣಕ್ಕೂ ನೀವು ಮಾತಿನ ಮೇಲೆ ನಿಗಾ ಇರಬೇಕು, ಮಾತಿನ ಮೇಲೆ ಹಿಡಿತ ಹೊಂದಿರಬೇಕು ,ಅಂತ ಹೇಳಲಾಗುತ್ತಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ. ಸ್ನೇಹಿತರೆ ಒಟ್ಟಾರೆ ತಿಳ್ಕೊಂಡ್ರಲ್ವಾ 2024ರಲ್ಲಿ ಈ ಐದು ರಾಶಿ ಅವರಿಗೆ ಶನಿದೇವನ ಕೃಪೆ ಇರುವುದಿಲ್ಲ, ಆದರೂ ಶನಿ ಮಹಾತ್ಮನ ಪೂಜೆ, ಮಂತ್ರ ಕೆಲವೊಂದು ದಾನ, ಧರ್ಮಗಳನ್ನ, ಮಾಡುವುದರ ಮೂಲಕ ಶನಿದೇವನ ಕೃಪೆ ಪಡ್ಕೊಳ್ಬಹುದು ಮತ್ತೆ ಅವನಿಂದ ಉಂಟಾಗುವಂತ
ಕೆಲವು ದುಷ್ಪರಿಣಾಮಗಳನ್ನು ತಪ್ಪಿಸುವುದಕ್ಕೆ ಸಹಾಯ ಆಗುತ್ತೆ ಅಂತ ಹೇಳಲಾಗುತ್ತಿದೆ .ಸೋ ಭಯಪಡುವ ಅಗತ್ಯ ಇಲ್ಲ ,ಕೆಲವು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ದೇವಸ್ಥಾನಗಳಿಗೆ ಹೋಗಿ ಹೀಗೆಲ್ಲ ಮಾಡುವುದರ ಮೂಲಕ ಯಾವುದೇ ಕೆಟ್ಟ ಪ್ರಭಾವ ಇದ್ರು ಕೂಡ ಅದರಿಂದ ತಪ್ಪಿಸಿಕೊಳ್ಳಬಹುದು.
ಸ್ನೇಹಿತರೆ ಈ ಸಂದೇಶಗಳು ನಿಮಗೆ ಇಷ್ಟ ಆಗಿದ್ದರೆ ವಿಡಿಯೋನ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಇದೇ ರೀತಿಯ ಉತ್ತಮವಾದಂತಹ ವಿಚಾರಗಳನ್ನು ತಿಳಿದುಕೊಳ್ಳಕೋಸ್ಕರ ಯೂಟ್ಯೂಬ್ ಚಾನಲ್ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿಯೊಂದಿಗೆ ಇನ್ನೊಂದು ವಿಡಿಯೋದಲ್ಲಿ ಭೇಟಿ ಮಾಡ್ತೀನಿ ಕೇಳಿದ್ದಕ್ಕೆ ಧನ್ಯವಾದಗಳು, ಶುಭವಾಗಲಿ ನಿಮಗೆಲ್ಲರಿಗೂ.