ಔಡಲ (ಹರಳೆಣ್ಣೆ) ಅದ್ಭುತ ಹರಳೆಣ್ಣೆ, ಔಡಲೆಣ್ಣೆ ಅಥವಾ Castor Oil ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಉದ್ದವಾದ ಕೂದಲು ಬಯಸುವವರು ಚರ್ಮದ ಕಾಂತಿ ಹೆಚ್ಚಿಸಲು ಆಸೆ ಪಡುವ ಪ್ರತಿಯೊಬ್ಬರೂ ಹರಳೆಣ್ಣೆಯನ್ನು ಬಲ್ಲವರು. ಆದರೇ ಈ ಎಣ್ಣೆಯನ್ನು ಅನಾದಿ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ ಆದರೇ
ಈ ವಿಚಾರ ಬಹುತೇಕರು ತಿಳಿದಿಲ್ಲ. ಇದು ಮಾನವನ ದೈಹಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೇ, ಹರಳೆಣ್ಣೆಯಿಂದಾಗುವ ಆರೋಗ್ಯಕರ ಪ್ರಯೋಜನಗಳು ಏನು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಕೆಮ್ಮು ನಿವಾರಣೆಗೆ ಸೂಕ್ತ ಔಷಧಿ ಒಂದು ಹಿಡಿ ತುಳಸಿ ಎಲೆಗಳನ್ನು ಅಗಿದು ಅದರ ರಸ 2 ಹನಿ ಔಡಲೆಣ್ಣೆಯಲ್ಲಿ ಬೆರೆಸಿ ಬೆಲ್ಲವನ್ನು ಸಮಪ್ರಮಾಣದಲ್ಲಿ ಬೆರೆಸಿ ಮಿಕ್ಸ್ ಮಾಡಿ ಸೇವಿಸಿದರೆ ಕೆಮ್ಮು ಗುಣವಾಗುತ್ತದೆ.
ಕಪ್ಪು ಕಲೆಗಳ ನಿವಾರಣೆಗೆ 4 ಹಣಿ ಔಡಲೆಣ್ಣೆ ಮತ್ತು 3 ಸ್ಪೂನ್ ನಷ್ಟ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಮುಖದ ಕಪ್ಪು ಕಲೆಗಳ ಮೇಲೆ ಹಚ್ಚಿದರೆ ಕಪ್ಪುಕಲೆಗಳು ನಿವಾರಣೆಯಾಗುತ್ತವೆ.
ಮಲಬದ್ಧತೆ ನಿವಾರಣೆಗೆ ಒಂದು ಕಪ್ ಬೆಚ್ಚಗಿನ ಹಾಲಿಗೆ ಅರ್ಧ ಸ್ಪೂನ್ ನಷ್ಟು ಹರಳೆಣ್ಣೆಯನ್ನು ಬೆರೆಸಿ ಕುಡಿಯಿರಿ.
ಉದ್ದವಾದ ದಟ್ಟ ಕೂದಲಿಗೆ ಕೂದಲಿನ ಸೌಂದರ್ಯ ಮತ್ತು ಕೂದಲಿನ ಸಮಸ್ಯೆಗಳಿಗೆ ಈ ಎಣ್ಣೆಯನ್ನು ಬಳಸಲಾಗುತ್ತದೆ. ಹರಳೆಣ್ಣೆ ಕೂದಲಿಗೆ ಹಚ್ಚುವುದರಿಂದ ಕೂದಲು ಉದ್ದ ಮತ್ತು ದಪ್ಪವಾಗುತ್ತದೆ. ತಲೆಹೊಟ್ಟು ಸಹ ನಿವಾರಣೆಯಾಗುತ್ತದೆ.
ಹೊಟ್ಟೆಯ ಕೊಬ್ಬನ್ನು ಕರಗಿಸುವುದು – 20ರಿಂದ 50 ಗ್ರಾಂನಷ್ಟು ಹಸಿರು ಔಡಲ ಬೇರು ತೆಗೆದುಕೊಳ್ಳಿ ಅದನ್ನು ತೊಳೆದು ಪುಡಿಮಾಡಿ ಒಂದು ಗ್ಲಾಸ್ ನೀರಿನಲ್ಲಿ ಬೇಯಿಸಿ ಸೇವಿಸಿದರೆ ಹೊಟ್ಟೆ ಕೊಬ್ಬು ಕಡಿಮೆಯಾಗುತ್ತದೆ.
ಪೈಲ್ಸ್ ನಿಂದ ಮುಕ್ತಿ ಸಿಗುತ್ತದೆ. 20ರಿಂದ 30 ಔಡಲ ಎಲೆಗಳ ಕಷಾಯವನ್ನು ತಯಾರಿಸಿ ಅದನ್ನು 50 ಮಿಲಿ ಗ್ರಾಂನಷ್ಟು ಅಂದರೆ ಅರ್ಧ ಕಪ್ ಅಲೋವೆರಾ ರಸದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ.
ಮೂತ್ರಪಿಂಡದ ಉರಿಯೂತವನ್ನು ಕಡಿಮೆ ಮಾಡಲು ಔಡಲ ಬೀಜವನ್ನು ಪುಡಿಮಾಡಿ ಬಿಸಿ ಮಾಡಿ ಹೊಟ್ಟೆಯ ಅರ್ಧ ಭಾಗಕ್ಕೆ ಹಚ್ಚಿದರೆ ತುಂಬ ಪ್ರಯೋಜನಕಾರಿ.
ಕಣ್ಣಿನ ಸೌಂದರ್ಯಕ್ಕೆ ಕೆಲವು ಹನಿ ಹರಳೆಣ್ಣೆ ಅನ್ನು ಕಣ್ಣುಗಳ ಸುತ್ತಲೂ ನಿಧಾನವಾಗಿ ಐದು ನಿಮಿಷ ಮಸಾಜ್ ಮಾಡಿ ನಿಮ್ಮ ಎಲ್ಲಾ ಡಾರ್ಕ್ ಸರ್ಕಲ್ ಮಾಯವಾಗುತ್ತವೆ ಅಷ್ಟೇ ಅಲ್ಲ ರೆಪ್ಪೆಗೂದಲುಗಳನ್ನು ಸುಂದರವಾಗಿ ದಪ್ಪವಾಗಿಸಲು ಈ ಎಣ್ಣೆಯನ್ನು ಕಣ್ರೆಪ್ಪೆಗಳ ಮೇಲೆ ಹಚ್ಚಿದರೆ ಕಣ್ಣು ತಂಪಾಗಿರುವುದು ಮಾತ್ರವಲ್ಲದೆ ಸುಂದರವಾದ ಕಣ್ರೆಪ್ಪೆಗಳು ಬೆಳೆಯುತ್ತವೆ.
ಪೀರಿಯಡ್ಸ್ ನೋವನ್ನು ಹೋಗಲಾಡಿಸಲು ಹರಳೆಣ್ಣೆಯನ್ನು ಹೊಟ್ಟೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ.
ದೇಹದ ಮಸಾಜ್. ಈ ಎಣ್ಣೆಯನ್ನು ಮಸಾಜ್ ಗೆ ಬಳಸಬಹುದು. ಇದು ದೇಹಕ್ಕೆ ಹೊಳಪು ಚರ್ಮ ಟೈಟ್ ಮಾಡಿ ನರನಾಡಿಗಳನ್ನು ಸಡಿಲಗೊಳಿಸಿ ಮೈ-ಕೈ ನೋವನ್ನು ಕಡಿಮೆ ಮಾಡುತ್ತದೆ.
ದಯವಿಟ್ಟು ಗಮನಿಸಿ ಹರಳೆಣ್ಣೆ ಕೆಲವು ಸಂದರ್ಭಗಳಲ್ಲಿ ಹಾನಿಕಾರಕವಾಗಿದೆ. ಗರ್ಭಿಣಿಯರು ಮತ್ತು ಪುಟ್ಟ ಮಕ್ಕಳು ಅದರ ಬಳಕೆಯನ್ನು ತಪ್ಪಿಸಬೇಕು.