ನಾವು ಈ ಲೇಖನದಲ್ಲಿ ಕಾಗೆ ನೀಡುವ ಶುಭ ಸಂಕೇತಗಳು ಯಾವುವು ಎಂಬುದನ್ನು ನಾವು ಈ ಲೇಖನದಲ್ಲಿ ನೋಡೋಣ. ಹಿಂದಿನ ಕಾಲದಿಂದಲೂ ಕಾಗೆಗೆ ಯಾವುದೇ ಒಳಿತು ಅಥವಾ ಕೆಡಕು ಆಗುವುದು ಮೊದಲೇ ತಿಳಿಯುತ್ತದೆ. ಎಂದು ನಂಬಲಾಗಿದೆ. ವಿವಿಧ ಶಾಸ್ತ್ರ ಪುರಾಣಗಳು ಕೂಡ ಇದನ್ನು ಖಚಿತ ಪಡಿಸುತ್ತವೆ. ಶಕುನ ಶಾಸ್ತ್ರದಲ್ಲಿ ಸಹ ಕಾಗೆ ಕುರಿತು ಅನೇಕ ಮಾಹಿತಿ ಲಭ್ಯವಿದೆ
ಈಗ ಕಾಗೆ ಇಂದ ಯಾವ ರೀತಿ ಶುಭ ಸಂಕೇತಗಳು ದೊರೆಯುತ್ತವೆ ಎನ್ನುವುದನ್ನು ನೋಡೋಣ. 1 ನೀವು ಯಾವುದಾದರೂ ಕೆಲಸಕ್ಕೆ ಹೊರಟಾಗ ಕಾಗೆ ನೀರು ಕುಡಿಯುವುದನ್ನು ನೋಡಿದರೆ ನಿಮ್ಮ ಕಾರ್ಯ ಸಫಲ ವಾಗುವುದು. ಮತ್ತು ನಿಮಗೆ ಧನ ಲಾಭವಾಗುವುದು.
2 ಮುಂಜಾನೆ ಬೆಳಗಿನ ಸಮಯದಲ್ಲಿ ಕಾಗೆ ಬಂದು ನಿಮ್ಮ ಮನೆ ಮುಂದೆ ಕುಳಿತು ಹೋದರೆ ನಿಮಗೆ ಶುಭ ಆಗುವುದು. 3 ಕಾಗೆ ತನ್ನ ಕೊಕ್ಕಿನಿಂದ ತುಂಬಾ ಮಗ್ನ ಆಗಿ ಭೂಮಿಯನ್ನು ಹಗೆ ಯುತ್ತ ಏನನ್ನು ಹುಡುಕುವಂತೆ ಕಂಡು ಬಂದರೆ ನಿಮಗೆ ಬೇಕಾದ ಸಾಮಗ್ರಿಗಳು ಅಥವಾ ಹಣ ಸಿಗುವ ಸಾಧ್ಯತೆ ಇದೆ.
4 ನೀವು ಹೊರಗೆ ಹೊರಟಾಗ ಕಾಗೆ ಹಗ್ಗದ ಮೇಲೆ ಕುಳಿತಿರುವುದನ್ನು ನೀವು ನೋಡಿದರೆ ನಿಮ್ಮ ಮನಸ್ಸಿನಲ್ಲಿ ಇರುವುದು ನೆರವೇರುವುದರ ಸೂಚನೆಯಾಗಿದೆ.. 5 ಸೂರ್ಯೋದಯದ ಸಮಯದಲ್ಲಿ ಮನೆ ಎದುರಿಗೆ ಕಾಗೆ ಕೂತು ಕೂಗಿದರೆ ಆ ದಿನ ಒಳ್ಳೆಯದಾಗುವುದು. 6 ಕಾಗೆ ಬಾಯಲ್ಲಿ ಹುಲ್ಲು ಕಡ್ಡಿಗಳನ್ನು ಹಿಡಿದುಕೊಂಡು ಎಡದಿಂದ ಬಲಕ್ಕೆ ಹಾರಿ ಹೋದರೆ ಆ ದಿನದ ಕೆಲಸ ಸಫಲ ಆಗುವುದು.
ನೀವು ಪ್ರವಾಸಕ್ಕೆ ಹೊರಟಾಗ ಕಾಗೆ ನಿಮ್ಮ ಬಲಭಾಗದಿಂದ ಎಡಕ್ಕೆ ಹಾರಿದರೆ ನಿಮ್ಮ ಪ್ರವಾಸ ಸುಖ ಮಯವಾಗಿ ಆಗುವುದು. 8 ಮುಂಜಾನೆಯ ಸಮಯದಲ್ಲಿ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಕಾಗೆಯ ಧ್ವನಿ ಪದೇ ಪದೇ ಕೇಳಿದರೆ ಪುರುಷರಿಗೆ ಸ್ತ್ರೀಯರಿಂದ ಒಳ್ಳೆಯದು ಆಗುವುದರ ಸೂಚನೆ. 9 ಕಾಗೆಯು ತಿನ್ನುವ ಪದಾರ್ಥಗಳನ್ನು ತಂದು ನಿಮ್ಮ ಮನೆಯ ಮುಂದೆ ಕುಳಿತು ತಿನ್ನ ತೊಡಗಿದರೆ ಮನೆಯಲ್ಲಿ
ಆಹಾರ ಧಾನ್ಯಕ್ಕೆ ಕೊರತೆ ಆಗುವುದಿಲ್ಲ ಎಂಬುದರ ಸೂಚನೆ. 10 ಕಾಗೆಯು ನಿಮ್ಮ ಮನೆಯ ಸಮೀಪದ ಗಿಡದಲ್ಲಿ ಗೂಡನ್ನು ಕಟ್ಟಿದರೆ ಅದು ಅಭಿವೃದ್ಧಿಯ ಸಂಕೇತ. 11 ಕಾಗೆಯು ಮರಿಗಳಿಗೆ ತನ್ನ ಕೊಕ್ಕಿನಿಂದ ಆಹಾರದ ಗುಟುಕು ನೀಡುವ ಅಪರೂಪದ ದೃಶ್ಯವನ್ನು ನೀವು ನೋಡಿದರೆ ನಿಮಗೂ ಕಾಳಜಿ ಪ್ರೀತಿ ಸಿಗುವುದು . 12 ಕಾಗೆಗಳು ದೂರದಲ್ಲಿ ಗುಂಪು ಗುಂಪಾಗಿ ಕುಳಿತಿರುವುದನ್ನು ನೋಡಿದರೆ ಶುಭವಾಗುತ್ತದೆ.
13 ಕಾಗೆ ಮನೆಯ ಮುಂದೆ ಕುಳಿತು ಕೂಗ ತೊಡಗಿದರೆ ಮನೆಗೆ ಅತಿಥಿಗಳು ಬರುವ ಸಂಕೇತವಾಗಿದೆ. 14 ಕಾಗೆಗಳು ಉಳಿದ ಪಕ್ಷಿಗಳಿಗೆ ಹೋಲಿಸಿದರೆ ಬಹಳ ಕಾಲ ಬದುಕುತ್ತವೆ. ಕಾಗೆಯನ್ನು ಶನಿದೇವರ ವಾಹನ ಎಂದು ಪರಿಗಣಿಸಲಾಗಿದೆ ಕಾಗೆಗಳಿಗೆ ಆಹಾರವನ್ನು ನೀಡುವುದರಿಂದ ಶುಭ ಆಗುವುದು. ಹೀಗೆ ಕಾಗೆ ಗಳಿಂದ ಬಹಳಷ್ಟು ಸೂಚನೆಗಳು ನಮಗೆ ಒಳ್ಳೆಯದು ಆಗುವುದಕ್ಕೆ ಕಾಗೆಗಳು ಕೊಡುತ್ತವೆ.