ಮಕರ ರಾಶಿ ಡಿಸೆಂಬರ್ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ಮಕರ ರಾಶಿ ಡಿಸೆಂಬರ್ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಡಿಸೆಂಬರ್ ತಿಂಗಳು ಈ ರಾಶಿಯವರಿಗೆ ತುಂಬಾ ವಿಚಿತ್ರವಾಗಿ ಇರುತ್ತದೆ.ನಿಮ್ಮ ವಿಚಾರದಲ್ಲಿ ವಿಷಯಗಳು ಎರಡು ಕಡೆ ಇರುವುದನ್ನು ನೋಡಬಹುದು.ಕೆಲವೊಂದು ವಿಚಾರಗಳಲ್ಲಿ ಬಹಳ ಅಭೂತ ಪೂರ್ವ ವಾದ ಯಶಸ್ಸು ನಿಮಗೆ ಸಿಗುತ್ತದೆ.

ಇದು ಕೆಲವೊಂದು ವ್ಯಕ್ತಿಗಳಿಗೆ ಅದು ಸತ್ಯವಾಗುತ್ತದೆ. ಜೀವನದಲ್ಲಿ ಸವಾಲುಗಳು ಎದುರಾಗುತ್ತವೆ. ನಿಮಗೆ ನಕಾರಾತ್ಮಕತೆ ಎನ್ನುವ ಸುದ್ಧಿಗಳು ಕೇಳಿಸುತ್ತದೆ. ಈ ವಿಚಾರಗಳು ನಿಮ್ಮ ಹತ್ತಿರವೇ ಹರಿದಾಡುತ್ತಿರುತ್ತದೆ. ಇದು ಅಂತಹ ದೊಡ್ಡ ಸಮಸ್ಯೆ ಅಲ್ಲ.ಆದರೆ ಅದನ್ನು ನಿಮ್ಮ ಜೀವನಕ್ಕೆ ತೆಗೆದುಕೊಳ್ಳುತ್ತೀರಿ. ಹವಮಾನದಲ್ಲಿ ಏರುಪೇರು ಇರುವುದನ್ನು ನೋಡಬಹುದು.

ಈ ರಾಶಿಯವರಿಗೆ ಸಂಶಯ ಎನ್ನುವುದು ಬಹಳಷ್ಟು ಬರುತ್ತಿರುತ್ತದೆ. ನಿಮ್ಮ ಆರೋಗ್ಯ ಸೂಕ್ಷ್ಮ ಎಂದು ಅನಿಸಿದರೆ ನಿಮಗೆ ಏನೇನು ಕ್ರಮಗಳು ಬೇಕು ಅದನ್ನು ಕೈಗೊಳ್ಳಬೇಕು .ನೀರನ್ನು ಹೆಚ್ಚಾಗಿ ಸೇವಿಸುವುದು, ಮಾಸ್ಕ್ ಧರಿಸುವುದು, ಧೂಳಿನಿಂದ ನಿಮ್ಮನ್ನು ದೂರ ಇಟ್ಟುಕೊಳ್ಳುವುದು. ಇದರಿಂದ ಭಯ ಬೀಳುವ ಅವಶ್ಯಕತೆ ಇಲ್ಲ. ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು.

ಆದರೆ ಅತಿಯಾಗಿ ತಲೆ ಕೆಡಿಸಿ ಕೊಳ್ಳಬಾರದು. ಈ ರಾಶಿಯವರಿಗೆ ಏಳುವರೆ ವರ್ಷ ಅನ್ನೋದು ಮುಗಿಯಲು ಹತ್ತಿರಕ್ಕೆ ಬರುತ್ತಿದೆ.ಧನಾತ್ಮಕವಾಗಿ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಹಾಗೆಯೇ ನಿಮ್ಮ ತೃತೀಯ ರಾಶಿ ಎಲ್ಲಿರುವ ರಾಹು ಭ್ರಾಂತಿ ಯನ್ನು ದೂರ ಮಾಡುತ್ತಾನೆ ಮತ್ತು ಶತ್ರುಗಳನ್ನು ದೂರ ಮಾಡುತ್ತಾನೆ. ಧೈರ್ಯವನ್ನು ಕೊಡುತ್ತಾನೆ.

ಅಂದರೆ ಈ ಏಳುವರೆ ವರ್ಷ ಎದುರಿಸಿರುವ ಅವಧಿ ಅಥವಾ ನೀವು ಯಾವ ಸಮಸ್ಯೆಯಿಂದ ಬಳಲುತ್ತಿರುತ್ತೀರಿ ಮತ್ತು ಅದರಿಂದ ಹೊರಗಡೆ ಬರಲು ನಿಮ್ಮ ವಿಕ್ರಮ ಸ್ಥಾನದಲ್ಲಿ ರಾಹು ಬಂದು ಕೂರುತ್ತಾನೆ. ಆಗ ಧೈರ್ಯ ಆತ್ಮವಿಶ್ವಾಸ ಧನಾತ್ಮಕ ಶಕ್ತಿ ಆಲೋಚನೆಗಳ ಕಡೆ ತಿರುಗುತ್ತವೆ. ಆದರೆ ಹೋದರೆ ಎನ್ನುವ ವಿಚಾರಗಳನ್ನು ಬಿಟ್ಟು ಮುನ್ನುಗ್ಗಬೇಕು ಈ ಸಮಯದಲ್ಲಿ .

ಡಿಸೆಂಬರ್ 16ರ ಒಳಗೆ ಒಳ್ಳೆಯ ಬೆಳವಣಿಗೆಗಳು ನಿಮ್ಮ ಜೀವನದಲ್ಲಿ ನಡೆಯುತ್ತದೆ.ಲಾಭದಲ್ಲಿರುವ ಎರಡು ಗ್ರಹಗಳು ಅಂದರೆ ಕುಜ ಮತ್ತು ರವಿ ಬಹಳ ಅಂದರೆ ಸರ್ಕಾರಿ ಕೆಲಸ ಕೆಲಸ ಕಾರ್ಯಗಳಿಗೆ , ಮನೆ ನಿರ್ಮಾಣ ,ಹೂಡಿಕೆ , ಪ್ರಾಪರ್ಟಿ ಇನ್ವೆಸ್ಟ್ಮೆಂಟ್ ಇಂತಹ ಕೆಲಸಗಳಲ್ಲಿ ಯಶಸ್ಸು ತಂದುಕೊಡುವ ತಾಕತ್ತು ಇವೆರಡು ಗ್ರಹಕ್ಕೆ ಇದೆ . ಎರಡು ಗ್ರಹಗಳು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತವೆ. ಜೀವನ ಒಂದು ಮಟ್ಟಕ್ಕೆ ವೇಗವನ್ನು ಪಡೆಯುತ್ತದೆ.

ನಕಾರಾತ್ಮಕ ನೆನಪುಗಳನ್ನು ನೀವು ನಿಮ್ಮ ತಲೆಯಿಂದ ತೆಗೆದು ಹಾಕಬೇಕು.16ನೇ ತಾರೀಖಿನ ನಂತರ 12ನೇ ಮನೆಗೆ ರವಿ ಬರುತ್ತಾನೆ . ಆಗ ಖರ್ಚು ವೆಚ್ಚಗಳ ವಿಚಾರದಲ್ಲಿ ತುಂಬಾ ನಿಗಾ ವಹಿಸಬೇಕಾಗುತ್ತದೆ . ಖರ್ಚಿನ ವಿಚಾರದಲ್ಲಿ ತುಂಬಾ ಜಾಗೃತವಾಗಿ ಇರಬೇಕು. ಕೆಲವೊಂದು ವಿಚಾರಗಳನ್ನು ಮರೆತು ಹೋಗುವ ಸಾಧ್ಯತೆ ಇರುತ್ತದೆ.ಇದು ನಿಮಗೆ ತಿಂಗಳ ಕೊನೆಯಲ್ಲಿ ನಡೆಯುತ್ತದೆ .ಇದಕ್ಕೆ ನೀವು ಹೆಚ್ಚು ಗಮನ ವಹಿಸಬೇಕು. ಮರೆವು ಅನ್ನುವುದರಿಂದ ನಿಮ್ಮನ್ನ ನೀವು ರಕ್ಷಣೆ ಮಾಡಿಕೊಳ್ಳಬೇಕು . ಈ ರಾಶಿಯವರಿಗೆ ಧನಾತ್ಮಕ ಶಕ್ತಿ ಹೆಚ್ಚಾಗಿ ಇದೆ .

Leave A Reply

Your email address will not be published.