ನಾವು ಈ ಲೇಖನದಲ್ಲಿ ಮೇಷ ರಾಶಿಯ 2024ರ ಒಂದು ವರ್ಷ ಪೂರ್ತಿಯಾಗಿ ಲಾಭ ನಷ್ಟಗಳ ಲೆಕ್ಕಾಚಾರ , ಮತ್ತು ನಿಮಗೆ ಏನೆಲ್ಲಾ ಪ್ರಯೋಜನಗಳು ಇವೆ, ಯಾವೆಲ್ಲಾ ಲಾಭಗಳು ಇದೆ. ಮತ್ತು ಯಾವೆಲ್ಲಾ ಪ್ರಯೋಜನಗಳು ಇವೆ ಅಂತಹ ವಿಸ್ತೃತವಾದ ವರದಿಯನ್ನು ಈ ಲೇಖನದಲ್ಲಿ ಸರಳವಾಗಿ ತಿಳಿಸುವ ಪ್ರಯೋಗ ಮಾಡಲಾಗಿದೆ. ಮೇಷ ರಾಶಿಯವರ ಜನ್ಮ ನಕ್ಷತ್ರಗಳು ,
ಅಶ್ವಿನಿ ನಕ್ಷತ್ರದ ನಾಲ್ಕು ಚರಣ , ಭರಣಿ ನಕ್ಷತ್ರದ ನಾಲ್ಕು ಚರಣ , ಕೃತಿಕ ನಕ್ಷತ್ರದ ಮೊದಲನೆ ಚರಣಕ್ಕೆ ಸೇರಿದೆ ಮೇಷ ರಾಶಿ . ಇನ್ನೂ ಇದರ ಲಾಂಛನ ಆಡು. ಮೇಕೆಯ ಒಂದು ಲಾಂಛನವನ್ನು ಹೊಂದಿದೆ. ಕಾಲ ಪುರುಷನ ಅಂಗ ಕಲೆಯಾಗಿರುತ್ತದೆ . ಕ್ಷತ್ರಿಯ ವರುಣಾ ಪುರುಷ ಅಂಗದ ರಾಶಿ . ಈ ರಾಶಿಯದ್ದು ಪೂರ್ವ ದಿಕ್ಕು . ಈ ರಾಶಿಯ ತತ್ವ ಚರ ಆಗಿದ್ದು , ಮತ್ತು ಅಗ್ನಿ ತತ್ವದ ರಾಶಿ ಕೂಡ ಆಗಿರುತ್ತದೆ.
ರಾಶಿಯ ಆಧಿಪತಿ ಕುಜ ಆಗಿದ್ದು ಈ ರಾಶಿಯ ರತ್ನ ಹವಳ ಆಗಿದೆ .ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುತ್ತದೆ. ಅದೃಷ್ಟದ ದಿನಗಳು ಭಾನುವಾರ ಮತ್ತು ಮಂಗಳವಾರ ಆಗಿರುತ್ತದೆ. ಮತ್ತು ಅದೃಷ್ಟದ ದೇವರುಗಳು ಮಹಾ ಶಿವ ಹಾಗೂ ಆಂಜನೇಯ ಸ್ವಾಮಿ ಆಗಿರುತ್ತದೆ. ಅದೃಷ್ಟದ ಸಂಖ್ಯೆಗಳು 6 ಮತ್ತು 9 ಆಗಿದ್ದರೆ, ಅದೃಷ್ಟದ ದಿನಾಂಕಗಳು 9 , 8, 27, ಆಗಿರುತ್ತದೆ.
ಮಿತ್ರ ರಾಶಿಗಳು ತುಲಾ ರಾಶಿ ಮತ್ತು ಧನಸ್ಸು ರಾಶಿಆದರೆ ಶತ್ರು ರಾಶಿ ಮಿಥುನ ಮತ್ತು ಕನ್ಯಾ ರಾಶಿಯಾಗಿರುತ್ತದೆ. ಮೇಷ ರಾಶಿಯವರ ಧೈರ್ಯ ಸಾಹಸಕ್ಕೆ ಸರಿ ಸಾಟಿಯೇ ಇರುವುದಿಲ್ಲ . ಬಹಳಷ್ಟು ಹಠವಾದಿ ಸ್ವಭಾವ , ಕೋಪಿಷ್ಠರು , ಧೈರ್ಯಶಾಲಿಗಳು ಕೆಲವೊಂದು ಸಾಧಿಸಬೇಕು ಅನ್ನುವುದು ಹಠ ಛಲ ರಕ್ತಗತವಾಗಿ ಬಂದಿರುತ್ತದೆ . ಏನೇ ಒಂದು ಯೋಚನೆ ಮಾಡಿದರೂ ದೂರ ದೃಷ್ಟಿ ಇಟ್ಟುಕೊಂಡು ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಕೆಲಸ ಮಾಡುವ ವ್ಯಕ್ತಿ .
ಮತ್ತು ಕೆಲಸದಲ್ಲಿ ಏನೇ ಮಾಡಬೇಕು ಅಂದರೂ ಅದನ್ನು ಹಠದಿಂದ ಸಾಧಿಸುತ್ತಾರೆ . ಎಂತಹ ಕಠಿಣವಾದ ಕೆಲಸ ಅಥವಾ ಸವಾಲುಗಳು ಇದ್ದರೂ ಅದನ್ನು ಸ್ವೀಕರಿಸುತ್ತಾರೆ. ಇನ್ನು ಕೋಪ ಸಹಜವಾಗಿ ಬರುವುದಿಲ್ಲ. ಬಂದರೆ ಭಯಂಕರವಾಗಿ ಬರುತ್ತದೆ. ಈ ಕೋಪ ಬರುವಂತದ್ದು ಮೇಷ ರಾಶಿಯವರಿಗೆ . ನಿಯಂತ್ರಣ ಮಾಡಲು ತುಂಬಾ ಕಷ್ಟ ಆಗುತ್ತದೆ.
ಇನ್ನು ನಿಮ್ಮ ಕಣ್ಣು ಸ್ವಲ್ಪ ಕೆಂಪಾಗಿರುತ್ತದೆ. ಮಾತು ಸ್ವಲ್ಪ ಗಡಸು ಆಗಿರುತ್ತದೆ. ಆದರೆ ಮಾತು ಒರಟಾಗಿ ಮನಸ್ಸು ಮಾತ್ರ ತುಂಬಾ ಮೃದುವಾಗಿ ಇರುತ್ತದೆ ಎಂದು ಹೇಳಬಹುದು . ಗುರು , ಶನಿ ,ರಾಹು , ಕೇತುಗಳ ಗೋಚಾರ ಫಲ ನಿಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ . ಎಂಬ ವಿಚಾರವನ್ನು ಇಲ್ಲಿ ತಿಳಿಸಲಾಗಿದೆ . ಗುರುವಿನ ಪ್ರಭಾವ ನಿಮ್ಮ ಮೇಲೆ ಹೇಗಾಗುತ್ತದೆ ಯಾವ ರೀತಿ ಫಲ ಕೊಡುತ್ತಿದೆ ,
ಈ ವರ್ಷದಲ್ಲಿ ಎಂಬುದನ್ನು ನೋಡಿದರೆ, ಗುರು ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಸಂದರ್ಭ ಒಂದನೇ ಗುರು ಆಗಿರುವುದರಿಂದ , ಗುರುವಿನ ಪ್ರಭಾವ ಅಷ್ಟಾಗಿ ಇರುವುದಿಲ್ಲ . ಹಣಕಾಸಿನ ತೊಂದರೆಗಳು ಮಾಡುವ ಕೆಲಸದಲ್ಲಿ ವಿಜ್ಞಾನಗಳು ಅಥವಾ ತೊಂದರೆಗಳು ಇವರ ಜೀವನದಲ್ಲಿ ಸವಾಲುಗಳು ಹೆಚ್ಚಾಗಿರುತ್ತದೆ . ನಿಮ್ಮ ಆಸೆ ಆಕಾಂಕ್ಷೆಗಳು ಮತ್ತು ಯೋಜನೆಗಳು ಬಹಳ ದೊಡ್ಡದಾಗಿರುತ್ತದೆ .
ಆ ಯೋಜನೆಗಳು ಪೂರ್ಣಗೊಳ್ಳುತ್ತದೆಯೇ ಎಂಬ ಚಿಂತೆ ಇವರ ಮನಸ್ಸಿನಲ್ಲಿ ಕಾಡುತ್ತಿರುತ್ತದೆ . ಮಕ್ಕಳ ವಿಚಾರದಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ಚಿಂತೆ ಇರುತ್ತದೆ . ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅವರ ವಿವಾಹದ ಬಗ್ಗೆ ಅವರ ಬೇಕು ಬೇಡಗಳ ಬಗ್ಗೆ ಜವಾಬ್ದಾರಿಗಳು ಹೆಚ್ಚಾಗಿರುತ್ತದೆ .ಹಣಕಾಸಿನ ತೊಂದರೆ ಎದುರಾದಾಗ ಸಾಲವನ್ನು ಮಾಡಿಕೊಳ್ಳುವ ಸನ್ನಿವೇಶಗಳು ಇರುತ್ತವೆ..ಹಾಗಾಗಿ ಸಾಲವನ್ನು ಮಾಡಬೇಡಿ .
ಸಾಧ್ಯವಾದರೆ ನಿಮ್ಮ ಹತ್ತಿರ ಎಷ್ಟು ಇದೆಯೋ ಅಷ್ಟರಲ್ಲಿ ಜೀವನ ಮಾಡುವ ಪ್ರಯತ್ನವನ್ನು ಮಾಡಿ . ನಿಮಗೆ ಖಂಡಿತವಾಗಿಯೂ ಒಂದು ಒಳ್ಳೆಯ ಫಲ ಸಿಗುತ್ತದೆ . ಮಾನಸಿಕವಾಗಿ ಒಂದು ಚಿಂತೆ ಇರುತ್ತದೆ .ಮಕ್ಕಳ ಬಗ್ಗೆ , ಆರೋಗ್ಯದ ಬಗ್ಗೆ , ಇಂತಹ ಎಲ್ಲಾ ಚಿಂತನೆಗಳು ನಿಮ್ಮ ಯಾವುದೋ ಒಂದು ಮನಸ್ಸಿನ ಮೂಲೆಯಲ್ಲಿ ಕೂತಿರುತ್ತದೆ .ಗುರು ವೃಷಭ ರಾಶಿಯಲ್ಲಿ ಇರುವ ಸಂದರ್ಭದಲ್ಲಿ ಆದಷ್ಟು ನಿಮಗೆ ಒಳ್ಳೆಯ ಫಲ ಸಿಗುತ್ತದೆ . ನಿಮಗೆ ಗುರುವಿನ ಅನುಗ್ರಹ ಸಂಪೂರ್ಣವಾಗಿ ಆಗುತ್ತದೆ .
ಆದಾಯದಲ್ಲಿ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ .ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ . ಅಂದುಕೊಂಡ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ . ನಿಂತು ಹೋಗಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ .ಕುಟುಂಬದಲ್ಲಿ ಶುಭ ಕಾರ್ಯಗಳು ಉಂಟಾಗುತ್ತದೆ .ಮಕ್ಕಳಲ್ಲಿ ಅಭಿವೃದ್ಧಿ ಮತ್ತು ಪ್ರಗತಿ ಕಂಡುಬರುತ್ತದೆ .ಆರ್ಥಿಕವಾಗಿ ಚೇತರಿಕೆ ಕಾಣುವ ಸಂದರ್ಭಗಳು ಇದೆ.
ಗುರು ವೃಷಭ ರಾಶಿಗೆ ಬಂದ ನಂತರ ಈ ಎಲ್ಲಾ ಫಲಗಳು ಅಥವಾ ಪ್ರಯೋಜನಗಳು ಸಿಗುವಂತ ಸಾಧ್ಯತೆಗಳು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಈ ಒಂದು ವರ್ಷದಲ್ಲಿ ಶನಿ ಮಾತ್ಮನ ಪ್ರಭಾವ ಹಾಗೂ ರಾಹು ಕೇತುಗಳ ಪ್ರಭಾವ ಬಹಳ ಮುಖ್ಯವಾಗಿ ಇರುವಂತದ್ದು .ಇದು ಯಾವ ರೀತಿ ನಿಮ್ಮ ಜೀವನದಲ್ಲಿ ಫಲ ಕೊಡುತ್ತದೆ ಎಂಬುದನ್ನು ತಿಳಿಸಲಾಗಿದೆ ..
ಮತ್ತು ಶನಿ ಕುಂಭ ರಾಶಿಯಲ್ಲಿ ಸಂಚರಿಸುವನು ಆಗಿ 11 ನೇ ಮನೆಯಲ್ಲಿ ಇರುವುದರಿಂದ ಕೀರ್ತಿ ಪತಿಷ್ಠೆಗಳು ಅದೃಷ್ಟವನ್ನು ಕೂಡ ತಂದು ಕೊಡುವ ಸಾಧ್ಯತೆ ಕಂಡು ಬರುತ್ತದೆ .ಕೆಲವೊಂದು ಸಂದರ್ಭದಲ್ಲಿ ಅಧಿಕಾರ ಪ್ರಾಪ್ತಿಯಾಗುವ ಸಾಧ್ಯತೆ ಕೂಡ ಇರುತ್ತದೆ .ಕೆಲಸ ಹುಡುಕುವವರಿಗೆ ಸಿಗುವ ಸಾಧ್ಯತೆ ಕೂಡ ಇದೆ .ನೀವು ಮಾಡುವ ಕೆಲಸ ಅತ್ಯಂತ ಪ್ರತಿಷ್ಠೆಯಿಂದ ಕೂಡಿರುತ್ತದೆ .
ಮತ್ತು ನೀವು ಮಾಡುವ ಕೆಲಸದಲ್ಲಿ ಕೀರ್ತಿಯನ್ನು ತಂದು ಕೊಡುತ್ತದೆ . ಇನ್ನು ವಸ್ತುಗಳನ್ನು ಅಥವಾ ಆಸ್ತಿಗಳನ್ನು ಖರೀದಿ ಮಾಡುವುದು . ಶನಿ ಮಹಾತ್ಮನ ಕೃಪೆಯಿಂದ ಆಗುತ್ತದೆ .ಪ್ರಯಾಣದಿಂದ ಬಹಳಷ್ಟು ಲಾಭ ಆಗುತ್ತದೆ. ವಿರುದ್ಧ ಲಿಂಗದ ವ್ಯಕ್ತಿಗಳ ಜೊತೆ ಲಾಭವಾಗುತ್ತದೆ .ವಿಶೇಷವಾಗಿ ರಾಜಕೀಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿಯಾಗುತ್ತದೆ .
ಶನಿ ಮಹಾತ್ಮನ ಕೃಪೆಯಿಂದ ಹೆಚ್ಚು ಫಲಗಳು ಸಿಗುತ್ತದೆ .ಏನೋ ಒಂದು ಹೊಸ ಯೋಜನೆ ರೂಪಿಸಿದರು ಅದು ಖಂಡಿತವಾಗಿಯೂ ಶನಿ ಕೃಪೆಯಿಂದ ಆಗುತ್ತದೆ .ಈ ವರ್ಷದಲ್ಲಿ ನೀವು ಬಹಳಷ್ಟು ಪ್ರಗತಿಯನ್ನು ಕೂಡ ಸಾಧಿಸುತ್ತೀರಿ .ಮುಖ್ಯವಾಗಿ ರಾಹು ಕೇತುವಿನ ಗೋಚಾರ ಫಲಗಳು ಹೇಗಿದೆ ಎಂಬುದನ್ನು ನೋಡುವುದಾದರೆ ,ರಾಹು ಮತ್ತು ಕೇತು ವೃಷಭ ಮತ್ತು ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಸಮಯದಲ್ಲಿ ನಿಮ್ಮ ರಾಶಿಗೆ 12 ಮತ್ತು 6ನೇ ಸ್ಥಾನದಲ್ಲಿ ಇರುತ್ತಾರೆ .
ಕೇತು ಗ್ರಹ ಅನೇಕ ಶುಭ ಫಲವನ್ನು ಕೊಡುವ ಸಾಧ್ಯತೆ ಇದೆ . ಹೆಚ್ಚು ಮಾನಸಿಕವಾಗಿ ಧೈರ್ಯ , ಬುದ್ಧಿ , ಆತ್ಮವಿಶ್ವಾಸ ಅನ್ನೋದು ತುಂಬಾ ಚೆನ್ನಾಗಿ ಕಂಡು ಬರುತ್ತದೆ . ಶತ್ರುಗಳ ಕಾಟ ನಿಗ್ರಹ ಗೊಳಿಸವಂತಹ ಸಾಧ್ಯತೆಗಳು ಹೆಚ್ಚು ಇದೆ.ಕೇತುವಿನ ಪ್ರಭಾವದಿಂದ ನಿಮಗೆ ಒಳ್ಳೆಯ ಫಲಗಳು ಸಿಗುತ್ತವೆ . ಮತ್ತು ಶತ್ರುಗಳಿಂದ ನಿಮಗೆ ಎದುರುವ ಸಾಧ್ಯತೆ ಇದೆ.
ಇನ್ನು ರಾಹು ಇಂದ ಖರ್ಚು ಜಾಸ್ತಿ ಆಗುತ್ತದೆ .ದುಡ್ಡು ಯಾವುದೋ ಒಂದು ಮೂಲೆಯಿಂದ ಬರುತ್ತಿರುತ್ತದೆ .ಆದರೆ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ .ಇನ್ನು ಕೆಲವರಿಗೆ ಉದ್ಯೋಗದಲ್ಲಿ ಸವಾಲುಗಳು ಇರುತ್ತವೆ .ನೀವು ಧೈರ್ಯದಿಂದ ಮುನ್ನುಗ್ಗುವ ಪ್ರಯತ್ನವನ್ನು ಮಾಡಬೇಕು .ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಇರುತ್ತದೆ .ಕೆಲವೊಂದು ದುಷ್ಟ ಕೆಲಸಗಳ ಕಡೆ ಮನಸ್ಸು ವಾಲುವಂತಹ ಸಾಧ್ಯತೆ . ರಾಹುವಿನ ಪ್ರಭಾವದಿಂದ ಆಗುತ್ತದೆ. ಅಧಿಕ ಒತ್ತಡಗಳು ಇರುತ್ತವೆ .
ಮತ್ತು ತೊಂದರೆಗಳು ಕಾಣುವ ಸಾಧ್ಯತೆ ಇರುತ್ತದೆ . ಅದಕ್ಕಾಗಿ ರಾಹು ಕೇತುವಿನ ಶಾಂತಿ ಮಾಡಿಸುವುದರಿಂದ ಒಳ್ಳೆಯ ಫಲಗಳು ಸಿಗುತ್ತವೆ .ಈ ವರ್ಷ ನಿಮಗೆ ಒಳ್ಳೆಯ ಫಲಗಳು ಇದೆ . ಗುರುವಿನ ಫಲ ಅಷ್ಟಕ್ಕೆ ಅಷ್ಟೇ ಇದ್ದರೂ , ನಂತರ ಗುರು ವೃಷಭ ರಾಶಿಗೆ ಬಂದಾಗ ಅದ್ಭುತವಾದ ಫಲಗಳು ನಿಮಗೆ ದೊರೆಯುತ್ತದೆ .ಆದರೆ ಬಹಳ ತಾಳ್ಮೆ ಮತ್ತು ಸಂಯಮದಿಂದ ನಡೆದುಕೊಳ್ಳಬೇಕು .
ಶನಿ ಮಾತ್ಮನ ಪ್ರಭಾವ ತುಂಬಾ ಅದ್ಭುತವಾಗಿದೆ .ಕೆಲವೊಂದು ಸವಾಲುಗಳು ಮಧ್ಯದಲ್ಲೂ ಕೂಡ ಯಶಸ್ವಿಯಾಗುವ ಸಾಧ್ಯತೆ ಇದೆ .ಜೀವನ ಅಂದ ಮೇಲೆ ಅನೇಕ ಎಡರು ತೊಡರುಗಳು ಇರುವುದು ಸಾಧ್ಯ.ಆದರೆ ಅದನ್ನ ಧೈರ್ಯದಿಂದ ಬುದ್ಧಿ ಶಕ್ತಿಯಿಂದ ಎದುರಿಸಿದರೆ ಖಂಡಿತವಾಗಿ ಯಶಸ್ಸು ಅನ್ನುವುದು ಖಂಡಿತ ಸಿಗುತ್ತದೆ . ನೀವು ಮಾಡಬೇಕಾಗಿರುವ ಪರಿಹಾರ ಏನೆಂದರೆ ಮಹಾ ಮೃತ್ಯುಂಜಯ ಮಂತ್ರದ ಪಠಣವನ್ನು ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ .
ಪುರುಷ ಸೂಕ್ತದಿಂದ ವಿಷ್ಣುವಿಗೆ ಅಭಿಷೇಕವನ್ನು ಮಾಡಿ ಇನ್ನೂ ಕುಲ ದೇವತಾ ಆರಾಧನೆ ಮಾಡುವುದರಿಂದ , ನಿಮಗೆ ಯಾವಾಗಲೂ ಶುಭ ಫಲವನ್ನು ತಂದುಕೊಡುತ್ತದೆ .ಜೊತೆಗೆ ಸಾಧು ಸಂತರಿಗೆ ,ವೃದ್ಧರಿಗೆ , ಅನಾಥರಿಗೆ ದಾನ ಧರ್ಮ ಮಾಡಿ ನಿಮ್ಮ ಕೈ ಲಾಗುವಷ್ಟು ದಾನ ಧರ್ಮ ಮಾಡುವುದರಿಂದ , ಒಳ್ಳೆಯ ಫಲ ದೊರೆಯುತ್ತದೆ .ಸಾಧ್ಯವಾದಷ್ಟು ಈ ಹೊಸ ವರ್ಷಕ್ಕೆ ನಿಮ್ಮಲ್ಲಿರುವ ಸಣ್ಣಪುಟ್ಟ ಕೆಟ್ಟ ಚಟಗಳನ್ನು ಬಿಡುವ ಪ್ರಯತ್ನ ಮಾಡಿ .ಸಂಕಲ್ಪವನ್ನು ಮಾಡಿಕೊಳ್ಳಿ ಈ ಹೊಸ ವರ್ಷದ ಆರಂಭದಲ್ಲಿ ಖಂಡಿತವಾಗಿಯೂ ಒಳ್ಳೆಯ ಫಲ ಸಿಗುತ್ತದೆ . ನಾವು ತಿಳಿಸಿರುವ ಈ ಪರಿಹಾರವನ್ನು ಮಾಡಿಕೊಂಡು ತಾಯಿಯ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಎಂದು ಹೇಳಲಾಗಿದೆ.