ಮಹಿಳೆಯರಿಗಾಗಿ ಮಾಹಿತಿ

0

ನಾವು ಈ ಲೇಖನದಲ್ಲಿ ಮಹಿಳೆಯರ ಅಭ್ಯಾಸವೇ ಮನೆಗೆ ಕಂಟಕ ಮತ್ತು ಮಹಿಳೆಯರ ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದು ಪುರುಷರಿಗೂ ಕೂಡ ಅನ್ವಯಿಸುತ್ತದೆ.
ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಏನು ಮಾಡಬೇಕು ಗೊತ್ತಾ? ಮನೆಯ ಮಹಿಳೆಯರು ಈ ತಪ್ಪುಗಳನ್ನು ಮಾಡಿದರೆ ಆ ಮನೆಯಲ್ಲಿ ಸಂತೋಷ , ಸಮೃದ್ಧಿ ನಾಶವಾಗಿ ಬಡತನ ಹೆಚ್ಚಾಗುವುದು ಖಂಡಿತ…!

ಓರ್ವ ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯು ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ . ಮಹಿಳೆ ಬಯಸಿದರೆ ಯಾವ ಮನೆಯನ್ನು ಕೂಡ ಸ್ವರ್ಗವನ್ನಾಗಿ ಮಾಡಬಹುದು , ಹಾಗೂ ನರಕವನ್ನಾಗಿ ಕೂಡ ಮಾಡ ಬಹುದು. ಧರ್ಮ ಗ್ರಂಥಗಳ ಪ್ರಕಾರ ಮಹಿಳೆಯರು ಮನೆಯಲ್ಲಿ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುವಳು ಎನ್ನಲಾಗಿದೆ .ಹಾಗೂ ಮಹಿಳೆಯರು ಈ ತಪ್ಪುಗಳನ್ನು ಮಾಡುವ ಮನೆಯಲ್ಲಿ ಬಡತನ ಹೆಚ್ಚಾಗುವುದು,

ಪೊರಕೆಯನ್ನು ಕಾಲಲ್ಲಿ ಮುಟ್ಟದಿರಿ . ಯಾವುದೇ ಮಹಿಳೆಯು ಪೊರಕೆಯನ್ನು ಕಾಲಲ್ಲಿ ಮುಟ್ಟುವ ಮನೆಯಲ್ಲಿ ಅಥವಾ ಕಾಲಿನಿಂದ ಪೊರಕೆಯನ್ನು ಒದೆಯುವ ಮನೆಯಲ್ಲಿ ಎಂದಿಗೂ ಲಕ್ಷ್ಮೀ ದೇವಿಯು ವಾಸವಾಗಿರಲಾರಳು .
ಪೊರಕೆಯನ್ನು ಕಾಲಿನಿಂದ ಮುಟ್ಟುವುದರಿಂದ ಲಕ್ಷ್ಮೀದೇವಿಯು ಕೋಪಿಸಿಕೊಳ್ಳುವಳು. ಮಹಿಳೆಯರ ಈ ಅಭ್ಯಾಸದಿಂದ ಲಕ್ಷ್ಮೀದೇವಿಯು ಮನೆಯಿಂದ ಹೊರ ನಡೆಯುವಳು . ಲಕ್ಷ್ಮಿ ದೇವಿಯು ಪೊರಕೆಯಲ್ಲಿ ವಾಸಿಸುತ್ತಾಳೆ ಎನ್ನುವ ನಂಬಿಕೆ ಇರುವುದರಿಂದ ,ಯಾವ ಮನೆಯಲ್ಲಿ ಪೊರಕೆಯನ್ನು ಅವಮಾನಿಸ ಲಾಗುತ್ತದೆ , ಆ ಮನೆಯಲ್ಲಿ ಲಕ್ಷ್ಮೀ ದೇವಿಯು ವಾಸವಾಗಿ ಇರುವುದಿಲ್ಲ.

ರಾತ್ರಿ ಒಲೆಯ ಮೇಲೆ ಪಾತ್ರೆಗಳನ್ನು ಇಡದಿರಿ, ಸಾಮಾನ್ಯವಾಗಿ ಮಹಿಳೆಯರಿಗೆ ಒಲೆಯ ಮೇಲೆ ಏನಾದರೂ ಪಾತ್ರೆ ಇಟ್ಟು ಮಲಗುವ ಅಭ್ಯಾಸ ಇರುತ್ತದೆ . ಅಥವಾ ಒಲೆಯನ್ನು ಹೊತ್ತಿಸಿ ಪಾತ್ರೆಯನ್ನು ಇಡದೆ ಬೆಂಕಿಯನ್ನು ವ್ಯರ್ಥ ಮಾಡುತ್ತಿರುತ್ತಾರೆ. ಅಥವಾ ರಾತ್ರಿ ವೇಳೆ ಒಲೆಯ ಮೇಲೆ ಪಾತ್ರೆಗಳನ್ನು ಇಟ್ಟು ಮಲಗುತ್ತಾರೆ . ಈ ಅಭ್ಯಾಸ ಇರುವ ಮಹಿಳೆಯರ ಮನೆಗೆ ಎಂದಿಗೂ ಲಕ್ಷ್ಮೀ ದೇವಿಯು ಬರುವುದಿಲ್ಲ. ಲಕ್ಷ್ಮಿ ಯಾವ ಮನೆಗೆ ಬರುವುದಿಲ್ಲ ಆ ಮನೆಯಲ್ಲಿ ಬಡತನ ಉಂಟಾಗುತ್ತದೆ. ಅದರಿಂದ ರಾತ್ರಿ ವೇಳೆ ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಮಲಗಲು ಬೇಡಿ. ಅದು ಖಾಲಿ ಪಾತ್ರೆಯಾಗಲಿ ಅಥವಾ ಆಹಾರ ಇದ್ದ ಪಾತ್ರೆಯಾಗಿರಲಿ ಇಡಬಾರದು .

ಕಾಲಿನಿಂದ ಹೊಸ್ತಿಲು ತುಳಿಯಬೇಡಿ. ಲಕ್ಷ್ಮೀ ದೇವಿಯು ಮನೆಯ ಮುಖ್ಯ ಹೊಸ್ತಿಲಲ್ಲಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ,ಹಿಂದೂ ಧರ್ಮದಲ್ಲಿದೆ. ಆದ್ದರಿಂದ ಮನೆಯ ಮಹಿಳೆಯರು ಹೊಸ್ತಿಲನ್ನು ಕಾಲಿನಿಂದ ತುಳಿದರೆ ಹೊಸ್ತಿಲಿನ ಮೇಲೆ ಕಾಲಿಟ್ಟು ನಿಂತು ಕೊಂಡರೆ, ಮುಸ್ಸಂಜೆ ವೇಳೆ ಬಾಗಿಲನ್ನು ಮುಚ್ಚಿದರೆ, ಲಕ್ಷ್ಮೀ ದೇವಿಯು ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಮನೆಯ ಬಾಗಿಲನ್ನು ಮುಸ್ಸಂಜೆ ವೇಳೆ ಮುಚ್ಚಬಾರದು. ಮತ್ತು ಮನೆಯ ಹೊಸ್ತಿಲುಗಳನ್ನು ಮಹಿಳೆಯರು ತುಳಿಯಬಾರದು .

ಒಂದು ವೇಳೆ ನಿಮ್ಮ ಮನೆಯ ಮಹಿಳೆಯರು ಈ ತಪ್ಪುಗಳನ್ನು ಮಾಡುತ್ತಿದ್ದರೆ ,ತಕ್ಷಣವೇ ನಿಲ್ಲಿಸಲು ಪ್ರಯತ್ನಿಸಿ. ನಿಮ್ಮ ಮನೆಯ ಮಹಿಳೆಯರು ಹೊಸ್ತಿಲಿನ ಮೇಲೆ ಕುಳಿತು ಊಟ ಮಾಡುತ್ತಿದ್ದರೆ ,ಆಕೆಯನ್ನು ಮೊದಲು ಹೊಸ್ತಿಲಿ ನಿಂದ ಹೆದ್ದೇಳಿಸಿ ಬೇರೆ ಕಡೆ ಕುಳಿತು ಊಟ ಮಾಡಲು ಸಲಹೆ ನೀಡಿ. ಮನೆಯ ಮಹಿಳೆಯರು ಹೊಸ್ತಲಿನ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರೆ .ಅಥವಾ ಊಟ ಮಾಡುತ್ತಿದ್ದರೆ ,ಅದು ಆ ಮನೆಯ ಸಂಪೂರ್ಣ ಸದಸ್ಯರ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಇದು ಮನೆ ಹಾಳಾಗಲು ಮುಖ್ಯ ಕಾರಣ.ಮಹಿಳೆಯರು ಹೊಸ್ತಿಲ ಮೇಲೆ ಕುಳಿತು ಆಹಾರ ಸೇವಿಸುವುದನ್ನು ಅತ್ಯಂತ ಅಸಹ್ಯ ಎಂದು ಹಿಂದೂ ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ .

ರಾತ್ರಿ ತೊಳೆಯದೆ ಪಾತ್ರೆಯನ್ನು ಇಡದಿರಿ . ರಾತ್ರಿ ವೇಳೆ ತಿಂದ ಪಾತ್ರೆಗಳನ್ನು ಹಾಗೆ ಇಡಬಾರದು .ರಾತ್ರಿ ಊಟದ ನಂತರ ಎಲ್ಲಾ ಪಾತ್ರೆಗಳನ್ನು ತೊಳೆದು ಶುದ್ಧವಾಗಿ ಇಡಬೇಕು .ಒಂದು ವೇಳೆ ರಾತ್ರಿ ಪಾತ್ರೆಗಳನ್ನು ತೊಳೆಯದೇ ಹಾಗೆ ಮಲಗಿದರೆ ಆ ಮನೆಯಲ್ಲಿ ಬಡತನ ಮನೆ ಮಾಡುತ್ತದೆ .ಯಾವುದೇ ಮನೆಯಲ್ಲಿ ಆಗಲಿ ಇದನ್ನು ಸಂಭವಿಸಲು ಬಿಡದಿರಿ . ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛಗೊಳಿಸಿ ನಂತರ ಮಲಗಿ. ಮನೆಯಲ್ಲಿ ಶಾಂತಿಗಾಗಿ ,

ಸಮೃದ್ಧಿಗಾಗಿ ಲಕ್ಷ್ಮಿ ಆಶೀರ್ವಾದಕ್ಕಾಗಿ ವಾರಕ್ಕೊಮ್ಮೆ ಸಮುದ್ರದ ಉಪ್ಪಿನಿಂದ ಪಾತ್ರೆಗಳನ್ನು ತೊಳೆದು ಅಥವಾ ಕಲ್ಲುಪ್ಪಿನಿಂದ ಪಾತ್ರೆಗಳನ್ನು ತೊಳೆದು ಇಡಬೇಕು. ಇದರಿಂದ ಆರ್ಥಿಕ ಸಂಪತ್ತು ದೊರೆಯುತ್ತದೆ ಮತ್ತು ಮಹಾಲಕ್ಷ್ಮಿ ಆಶೀರ್ವಾದ ಸಿಗುತ್ತದೆ. ರಾತ್ರಿ ಮನೆಯನ್ನು ಗುಡಿಸದಿರಿ . ಮಹಿಳೆಯರು ಮನೆಯಲ್ಲಿ ಸ್ವಚ್ಛವಾಗಿಟ್ಟು ಕೊಳ್ಳಬೇಕು. ಆದರೆ ಸೂರ್ಯಾಸ್ತದ ಸಮಯದಲ್ಲಿ ಅಂದರೆ ಸಂಜೆ ಮತ್ತು ರಾತ್ರಿ ಮನೆಯನ್ನು ಗುಡಿಸ ಬಾರದು . ಸಂಜೆ ಮತ್ತು ರಾತ್ರಿ ಗುಡಿಸುವ ಮನೆಯಲ್ಲಿ ಬಡತನ ಹೆಚ್ಚಾಗುತ್ತದೆ ಆದ್ದರಿಂದ ಮಹಿಳೆಯರು ಮನೆಯನ್ನು ಸಂಜೆ ಮತ್ತು ರಾತ್ರಿ ಗುಡಿಸುವುದನ್ನು ಬಿಡಬೇಕು.

ಮುಂಜಾನೆ ತಡವಾಗಿ ಏಳದಿರಿ. ಮಹಿಳೆಯರೆಂದರೆ ಮುಂಜಾನೆ ಬೇಗ ಎದ್ದು ಶುಚಿಯಾಗಿ ರಂಗೋಲಿಯನ್ನು ಇಟ್ಟು ದೇವರ ಪೂಜೆಯನ್ನು ಮಾಡಬೇಕು. ಮುಂಜಾನೆ ಬೇಗ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮತ್ತು ಬೇಗ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಅವರ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮನೆಯ ಸಮೃದ್ಧಿಗೂ ಕೂಡ ಒಳ್ಳೆಯದು . ಮನೆಯ ಮಹಿಳೆಯರು ಮುಂಜಾನೆ ತಡವಾಗಿ ಹೇಳುವುದರಿಂದ ಆಕೆಯ ಗಂಡ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .

ಮುಂಜಾನೆ ಅಂಗಳವನ್ನು ಸ್ವಚ್ಛಗೊಳಿಸಿ. ಯಾವ ಮನೆಯಲ್ಲಿ ಮಹಿಳೆಯರು ಮುಂಜಾನೆ ಬೇಗ ಎದ್ದು ಶುಚಿಯಾಗಿ ಅಂಗಳವನ್ನು ಸ್ವಚ್ಛಗೊಳಿಸುತ್ತಾಳೋ ,ಆ ಮನೆಗೆ ಮಾತ್ರ ಲಕ್ಷ್ಮಿ ದೇವಿ ಆಗಮಿಸುತ್ತಾಳೆ .ಇಲ್ಲವಾದರೆ ಆಕೆ ಆ ಮನೆಯ ಹೊಸ್ತಿಲ ಬಳಿ ಕೂಡ ನಿಲ್ಲುವುದಿಲ್ಲ. ಮನೆಯ ಮಹಿಳೆಯರು ಮುಂಜಾನೆ ಅಂಗಳವನ್ನು ಸ್ವಚ್ಛವಾಗಿಸಿ ಲಕ್ಷ್ಮೀ ದೇವಿಯನ್ನು ಆಹ್ವಾನಿಸಲು ಪ್ರತಿದಿನ ರಂಗೋಲಿಯನ್ನು ಹಾಕಬೇಕು. ಇದರಿಂದ ಮಾತ್ರ ಲಕ್ಷ್ಮೀ ದೇವಿಯು ಮನೆಯನ್ನು ಪ್ರವೇಶ ಮಾಡುತ್ತಾಳೆ .

Leave A Reply

Your email address will not be published.