ಹಿರಿಯರ ಕಿವಿಮಾತುಗಳು

ನಾವು ಈ ಲೇಖನದಲ್ಲಿ ಹಿರಿಯರ ಅನುಭವದ ಕಿವಿ ಮಾತುಗಳು ಯಾವುವು ಎಂಬುದನ್ನು ನಾವು ನೋಡೊಣ.1 . ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ. 3 . ಇಡೀ ಕುಂಬಳ ಕಾಯಿಯನ್ನು ಮನೆಗೆ ತರಬೇಡಿ .4 . ಮನೆಯಲ್ಲಿ ಉಗುರು ಕತ್ತರಿಸಬೇಡಿ .

5 . ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡಿ . 6 . ಹೊತ್ತು ಮುಳುಗಿದ ಮೇಲೆ ಕಸ ಗುಡಿಸುವುದು ಬೇಡಿ. ತಲೆ ಬಾಚುವದು ಬೇಡಿ. 7 . ಸಾಯಂಕಾಲದ ಹೊತ್ತು ಉಪ್ಪು ಮೊಸರು ಸಾಲ ಕೊಡುವುದು ಬೇಡ. ಬಿಸಿ ಅನ್ನಕ್ಕೆ ಮೊಸರು ಹಾಕಬೇಡಿ.

ಊಟ ಮಾಡುವಾಗ ಮಧ್ಯೆ ಎದ್ದು ಹೋಗಬೇಡಿ. 10 . ತಲೆ ಕೂದಲನ್ನು ಒಲೆಗೆ ಹಾಕಬೇಡಿ. 11 . ಹೊಸ್ತಿಲ ಮೇಲೆ ಕೂರುವುದು ,ನಿಲ್ಲುವುದು ,ತುಳಿಯುವುದು ಮಾಡಬೇಡಿ. 12.ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡಿ.13 . ಗೋಡೆ ಮತ್ತು ಬಾಗಿಲಿಗೆ ಕಾಲು ಕೊಟ್ಟು ಮಲಗಬೇಡಿ.14 . ಸಾಯಂಕಾಲದ ನಂತರ ಬಟ್ಟೆಯನ್ನು ಒಗೆಯುವುದು ಬೇಡಿ .

15 . ಒಡೆದಿರುವ ಬಳೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದೂ ಧರಿಸಬೇಡಿ.16 . ಮಲಗಿ ಎದ್ದ ಮೇಲೆ ಹಾಸಿಗೆ ಯನ್ನು ಮಡಚದೆ ಹಾಗೆ ಬಿಡಬೇಡ17 . ಯಾವತ್ತೂ ಉಗುರು ಕಚ್ಚುವುದು ಬೇಡಿ 18 . ಸಹೋದರರು ತಂದೆ ಮಕ್ಕಳು ಒಟ್ಟಿಗೆ ಒಂದೇ ದಿನ ಕ್ಷೌರ ಮಾಡಿಸಬಾರದು.19 . ಒಂದೇ ಬಾಳೆ ಎಲೆಯನ್ನು ತರಬೇಡಿ .2೦ . ಊಟ ಮಾಡಿದ ಮೇಲೆ ಕೈ ಒಣಗಲು ಬಿಡಬೇಡಿ. ಹಾಗೂ ಕೈ ತೊಳೆದ ನಂತರ ನೀರನ್ನು ಜಾಡಿಸಬೇಡಿ.

21 . ಮುಸ್ಸಂಜೆ ಹೊತ್ತಲ್ಲಿ ಮಲಗಬೇಡಿ.22 . ಕಾಲು ತೊಳೆಯುವಾಗ ಹಿಮ್ಮಡಿ ಯನ್ನು ತೊಳೆಯುವುದು ಮರೆಯಬೇಡಿ.23 . ತಿಂದ ತಕ್ಷಣ ಮಲಗಬೇಡಿ.24 ಹಿರಿಯರ ಮುಂದೆ ಕಾಲು ಚಾಚಿ ಅಥವಾ ಕಾಲ ಮೇಲೆ ಕಾಲು ಹಾಕಿ ಕೂರಬೇಡಿ.ರಾತ್ರಿ ಊಟದ ತಟ್ಟೆಯನ್ನು ತೊಳೆಯದೆ ಹಾಗೆ ಬಿಡಬೇಡಿ.26 ಎಂಜಲು ಕೈಯಲಿಊಟವನ್ನು ಬಡಿಸ ಬೇಡಿ.

27 .ಅನ್ನ ಸಾರು ಪಲ್ಯ ಮಾಡಿದ ಪಾತ್ರೆಗಳಲ್ಲಿಯೇ ಊಟ ಮಾಡಬೇಡ. 28 . ಪಾತ್ರೆಗಳ ಮೇಲೆ ಎಂಜಲು ಕೈಯನ್ನು ತೊಳೆಯ ಬೇಡಿ.29 . ಹಸು ಕರುಗಳಿಗೆ ಪ್ರಾಣಿಗಳಿಗೆ ಹಳಸಿದ ಅನ್ನವನ್ನು ಹಾಕಬೇಡಿ.30 . ಒಬ್ಬರು ಹಾಕಿಕೊಂಡ ಬಟ್ಟೆಯನ್ನು ಇನ್ನೊಬ್ಬರು ಹಾಕಿಕೊಳ್ಳುವುದು ಬೇಡಿ ,31 . ಮನೆಗೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಟ್ಟು ಕಳುಹಿಸುವುದನ್ನು ರೂಢಿ ಮಾಡಿಕೊಳ್ಳಿ .32 . ಹರಿದ ತೂತಾದ ಒಳ ಉಡುಪು, ಚಪ್ಪಲಿ , ಶೂ, ಸಾಕ್ಸ್ ಧರಿಸಬೇಡ. ನಿಮಗೆ ಎಷ್ಟೇ ಹಣವಿದ್ದರೂ , ಸಾಕಾಗುವುದಿಲ್ಲ. ಅನಾವಶ್ಯಕವಾಗಿ ಹಣ ಖರ್ಚಾಗುತ್ತದೆ.

ಮನೆಯ ಒಳಗೆ ಚಪ್ಪಲಿ, ಶೂ ತರಬೇಡಿ . ಹೊರಗಡೆ ಬಿಡಿ. ಅದು ಕಳೆದರೂ ನಿಮ್ಮ ಕರ್ಮ ಕಳೆಯುತ್ತದೆ.
34 . ದೇವಸ್ಥಾನ, ಮಠ, ಮಂದಿರಗಳಿಗೆ ಹೋದಾಗ ಅಕಸ್ಮಾತ್ ಚಪ್ಪಲಿ ಕಳೆದರೆ, ಬದಲಾದರೆ ನಿಮ್ಮ ಕರ್ಮ ಕಳೆಯಿತು. ಎಂದು ತಿಳಿಯಿರಿ ಬೇರೆಯವರ ಚಪ್ಪಲಿ ಹಾಕಿಕೊಂಡು ಬಂದರೆ ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆ ತಂದಂತೆ

35 . ಹಾಲು – ಮೊಸರು , ಹಾಲು – ಅಡುಗೆ ಎಣ್ಣೆ ಒಟ್ಟಿಗೆ ತರಬೇಡಿ . 36 . ಶನಿವಾರ ಉಪ್ಪು , ಎಣ್ಣೆ ತರಬೇಡಿ .37 . ಮನೆಯಲ್ಲಿ ನಿಂತಿರುವ ಗಡಿಯಾರ , ಹೊಲಿಗೆ ಯಂತ್ರ, ಸೈಕಲ್, ಸ್ಕೂಟರ್ ಕೂಡಲೇ ರಿಪೇರಿ ಮಾಡಿಸಿ, ಇಲ್ಲವೇ ಮಾರಾಟ ಮಾಡಿ .38 . ದೇವರಲ್ಲಿ ಬೇಡಿ ನಿರಾಶರಾಗಬೇಡಿ. ನಿಮಗೆ ಸಿಗುವ ಸಮಯ ಬಂದಾಗ ಸಿಕ್ಕೆ ಸಿಗುತ್ತದೆ.39 . ಅರ್ಹರಿಗೆ ದಾನವನ್ನು ಮಾಡಿ, ನಿಮ್ಮ ದಾನ ಗುಪ್ತವಾಗಿ ಇರಲಿ. ಅದನ್ನು ಯಾರ ಮುಂದೆಯೂ ಹೇಳಬೇಡಿ.40 . ಮಠ ಮಂದಿರಗಳ ಸ್ವತ್ತು ,ಹಣಕಾಸು, ಒಡವೆ ವಿಷವೆಂದು ತಿಳಿಯಿರಿ.

ಅದನ್ನು ದುರುಪಯೋಗ ಮಾಡಿದರೆ ಶಿಕ್ಷೆ ನಿಮ್ಮ ಬೆನ್ನ ಹಿಂದೆ ನೆರಳಿನಂತೆ ಬರುವುದು .41 .ಯಾರನ್ನು ಹಾಡಿಕೊಳ್ಳಬೇಡಿ ನಿಮ್ಮನ್ನು ಹೊಗಳಿಕೊಳ್ಳಲು ಬೇಡಿ .42 . ಪ್ರಯಾಣದಲ್ಲಿ ಅಪರಿಚಿತರು ಕೊಟ್ಟ ತಿಂಡಿ ತಿನಿಸು ಪಾನಿಯ ಸೇವಿಸಬೇಡಿ .43 . ನೀವು ನಿಮ್ಮ ಅಧಿಕಾರ ಶಾಶ್ವತವಲ್ಲ , ಬೇರೆಯವರನ್ನು ಬೆಳೆಯಲು ಬಿಡಿ ಅವರಿಗೆ ನೆರವಾಗಿ .44 . ಅನಾವಶ್ಯಕವಾಗಿ ಸಾಲವನ್ನು ಮಾಡಿ ಮೆರೆಯಬೇಡಿ .45 . ಹಿರಿಯರು ಮತ್ತು ಗುರುಗಳ ಮಾತುಗಳನ್ನು ಎಂದು ಕಡೆಗಣಿಸಬೇಡಿ .ಹಿರಿಯರು ಹೇಳಿರುವ ಈ ಎಲ್ಲಾ ಅನುಭವದ ಮಾತುಗಳನ್ನು ನೀವು ಪಾಲಿಸುವುದರಿಂದ ನಿಮ್ಮ ಜೀವನದಲ್ಲಿ ಸುಖ ಶಾಂತಿಯಿಂದ ನೆಮ್ಮದಿಯಿಂದ ಇರಬಹುದು .

Leave a Comment