ಕಪ್ಪು ಕಾಳು ಮೆಣಸಿನಿಂದ ಮುಖ್ಯ ದ್ವಾರದಲ್ಲಿ ಈ ಉಪಾಯ ಮಾಡಿ । ಹಣದ ಸುರಿಮಳೆಯೇ ಆಗುತ್ತೆ

0

ನಾವು ಈ ಲೇಖನದಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಕಪ್ಪು ಕಾಳು ಮೆಣಸಿನಿಂದ ಈ ಪ್ರಯೋಗ ಮಾಡಿದರೆ , ಹಣದ ಸುರಿಮಳೆ ಆಗುತ್ತದೆ , ಎಂಬುದನ್ನು ಈ ಲೇಖನದಲ್ಲಿ ನೋಡೋಣ . ನಾವು ಹೇಳುವ ಒಂದು ಮಹತ್ವವಾದ ವಿಷಯವನ್ನು ನೀವು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ , ಚಮತ್ಕಾರಿ ಬದಲಾವಣೆಗಳು ಕಾಣಿಸುತ್ತದೆ .

ನಮ್ಮ ಅಡುಗೆ ಮನೆಯಲ್ಲಿ ದೊರೆಯುವಂತಹ ಕಾಳು ಮೆಣಸಿನ ಚಿಕ್ಕ ಪ್ರಯೋಗದಿಂದ ನಿಮ್ಮ ಜೀವನದಲ್ಲಿ ಹೇಗೆ ಚಮತ್ಕಾರಿ ಬದಲಾವಣೆಯನ್ನು ತರುತ್ತದೆ ಎಂಬುದನ್ನು ನೋಡೊಣ . ಕರಿಮೆಣಸಿನ ಈ ಒಂದು ಪ್ರಯೋಗ ಮಾಡುವುದರಿಂದ , ಮಾತೆ ಮಹಾಲಕ್ಷ್ಮಿಯ ಕೃಪಾ ಕಟಾಕ್ಷ ಸದಾ ನಿಮ್ಮ ಮೇಲಿರುತ್ತದೆ. ಇದು ನಿಮ್ಮ ಮನೆಯ ಮೇಲೆ ಇರುತ್ತದೆ .

ನಿಮ್ಮ ಮನೆಯ ಪ್ರತಿ ಸದಸ್ಯರ ಮೇಲೂ ಕೂಡ ಇರುತ್ತದೆ . ಹಾಗೂ ಅವರು ಮಾಡುವ ಪ್ರತಿ ಕೆಲಸದಲ್ಲೂ ಪ್ರಗತಿ , ಯಶಸ್ಸು ದೊರೆಯುತ್ತದೆ . ನಾವು ಕುಳಿತಿರುವ ಕಡೆಗೆ ಊಟ ತಾನಾಗಿ ತಾನೇ ಬರುವುದಿಲ್ಲ . ಊಟ ಇರುವ ಕಡೆಗೆ ನಾವು ನಡೆದುಕೊಂಡು ಹೋಗಬೇಕು .

ಅಂದರೆ ಕರಿ ಮೆಣಸಿನ ಕಾಳು ಪ್ರಯೋಗ ಮಾಡಿದರೆ ದುಡ್ಡು ಬರುತ್ತದೆ , ಅಂದುಕೊಳ್ಳಬೇಡಿ .ಕರಿಮೆಣಸಿನ ಕಾಳಿನ ಪ್ರಯೋಗವನ್ನು ತಪ್ಪದೇ ಮಾಡಿ .ಚಮತ್ಕಾರ ನಿಮಗೆ ತಿಳಿಯುತ್ತದೆ . ಬದಲಾವಣೆ ಅಥವಾ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ .ಇಷ್ಟಪಟ್ಟು ಕೆಲಸವನ್ನು ಮಾಡಿ .ಕೈ ಕೆಸರಾದರೆ ಬಾಯಿ ಮೊಸರು ಎಂದು ಹೇಳಲಾಗುತ್ತದೆ . ಹಾಗೆಯೇ ಕರಿ ಕಾಳು ಮೆಣಸಿನ ಚಮತ್ಕಾರದ ಬಗ್ಗೆ ತಿಳಿಯೋಣ .

ಹಣವನ್ನು ನಾವು ಹೊರ ಜಗತ್ತಿನ ಸಂಪರ್ಕದಿಂದ ಸಂಪಾದನೆ ಮಾಡುತ್ತೇವೆ .ಅಂದರೆ ನಾವು ಮನೆಯಿಂದ ಹೊರಗಡೆ ತೆರಳಿ ಮನೆಯ ಸದಸ್ಯರು ಬೇರೆ ಬೇರೆ ವೃತ್ತಿಯನ್ನು ಸಂಪರ್ಕ ಮಾಡುತ್ತಾ , ಚಾಲಕ ವೃತ್ತಿ , ಶಿಕ್ಷಕರ ವೃತ್ತಿ , ಸರ್ಕಾರಿ ಕೆಲಸ , ಖಾಸಗಿ ಉದ್ಯೋಗ ಹೀಗೆ ನಾನಾ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡುತ್ತೇವೆ .ಮತ್ತು ಇದರಿಂದ ನಮಗೆ ಹಣ ದೊರೆಯುತ್ತದೆ .

ಮತ್ತು ಜೀವನದ ಬಂಡಿ ಮುಂದೆ ಸಾಗುತ್ತದೆ . ಹೀಗೆ ನಾವು ಹೊರ ಜಗತ್ತಿನೊಂದಿಗೆ ನಮ್ಮನ್ನು ಸಂಪರ್ಕ ಮಾಡಿಕೊಂಡು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗಬೇಕಾದರೆ , ಮನೆಯ ಮುಖ್ಯ ದ್ವಾರದಿಂದ ಹಾದು ಹೊರಗಡೆ ಹೋಗುತ್ತೇವೆ .

ನಮ್ಮ ಸಂಪ್ರದಾಯದಲ್ಲಿ ಯಾವುದೇ ಹಬ್ಬ ಹರಿದಿನಗಳು ಇರಲಿ , ಮೊದಲಿಗೆ ಮಾವಿನ ತೋರಣ ಸಿಂಗರಿಸಿ ನಂತರ ರಂಗೋಲಿ ಹಾಕಿ ಸಿಂಗರಿಸುವುದು ಮನೆಯ ಮುಖ್ಯ ದ್ವಾರವನ್ನು , ಮನೆಯಲ್ಲಿ ಸ್ತ್ರೀಯರು ಬೆಳಿಗ್ಗೆ ಎದ್ದು ಸ್ನಾನ ಮಾಡಿ , ಅಂಗಳದಲ್ಲಿ ಕಸ ಗುಡಿಸಿ ನೀರು ಹಾಕಿ , ತುಳಸಿ ಪೂಜೆ ಮಾಡಿದರೆ , ಮತ್ತೆ ಮಹಾಲಕ್ಷ್ಮಿ ಪ್ರಸನ್ನಳು ಆಗಿ ಪ್ರವೇಶ ಮಾಡುವುದು ಕೂಡ ,

ಇದೇ ಮುಖ್ಯ ದ್ವಾರದಿಂದ .ಈ ಮನೆಯಲ್ಲಿ ಶಾಸ್ತ್ರ ಸಮಾಚಾರ ಸದಾಚಾರಗಳು ಇಲ್ಲದಿದ್ದರೆ , ನಕಾರಾತ್ಮಕ ಶಕ್ತಿಯ ಪ್ರತಿರೂಪವಾಗಿ ದರಿದ್ರ ಲಕ್ಷ್ಮಿಪ್ರವೇಶ ಮಾಡುವುದು , ಇದೇ ಮುಖ್ಯ ದ್ವಾರದಿಂದ .ವಾಸ್ತುಶಾಸ್ತ್ರದಲ್ಲಿ ಹೇಳುವ ಪ್ರಕಾರ ಮನೆಯ ಮುಖ್ಯದ್ವಾರ ಮನೆ ಇತರೆ ಬಾಗಿಲು ಗಳಿಗಿಂತ ದೊಡ್ಡದಾಗಿ ಇರಬೇಕು . ಅಲ್ಲದೆ ಮನೆಯ ಮುಖ್ಯದ್ವಾರ ಸದಾ ಸ್ವಚ್ಛವಾಗಿ ಇರಬೇಕು .

ಮನೆಯ ಮುಖ್ಯದ್ವಾರ ಮುರಿದಿರ ಬಾರದು . ಮನೆಯ ಮುಖ್ಯ ದ್ವಾರದ ಮುಂದೆ ಒಣಗಿದ ಮಾವಿನ ತೋರಣ ಇದ್ದರೆ , ತೆಗೆದುಹಾಕಿ .ಒಣಗಿದ ವಸ್ತುಗಳು ಋಣಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುತ್ತದೆ .ಇನ್ನು ಮನೆಯ ಮುಖ್ಯ ದ್ವಾರದಿಂದ ಯಾವುದೇ ಶಬ್ದ ಬರಬಾರದು .ಅಂದರೆ ಮನೆಯ ಮುಖ್ಯ ದ್ವಾರವನ್ನು ತೆರೆಯುವಾಗ ಕಿರ್ಕಿರೆಂದು ಶಬ್ದ ಬರುತ್ತದೆ .

ಬಾಗಿಲಿಗೆ ಎಣ್ಣೆ ಹಚ್ಚಿ ಅದನ್ನು ರಿಪೇರಿ ಮಾಡಿಸಿ ಸರಿಯಾಗಿ ಇಟ್ಟುಕೊಳ್ಳಬೇಕು .ಬಾಗಿಲಿನಿಂದ ಶಬ್ದ ಬರುವುದು ಹಣಕಾಸಿನ ತೊಂದರೆಗೆ ದಾರಿ ಮಾಡಿಕೊಡುತ್ತದೆ. ಕರಿ ಮೆಣಸಿನ ಕಾಳಿನ ಪ್ರಯೋಗದ ಬಗ್ಗೆ ಹೇಳುವುದಾದರೆ , ಒಂದು ಚಮತ್ಕಾರಿ ಪ್ರಯೋಗ ಎಂದು ಹೇಳಬಹುದು. ಕೆಂಪು ಮೆಣಸಿನ ಕಾಯಿ ,ಹಸಿರು ಮೆಣಸಿನಕಾಯಿ, ಕರಿ ಮೆಣಸಿನಕಾಳು ಹೀಗೇ ವಿಧವಿಧವಾದ ಮೆಣಸು ಬೇರೆ ಬೇರೆ ಗ್ರಹಗಳ ಜೊತೆಗೆ ಇರುವ ನಂಟನ್ನು ಸೂಚಿಸುತ್ತದೆ. ಇವುಗಳಲ್ಲಿ ಪ್ರಭಾವಶಾಲಿ ಯಾವುದು ಎಂದರೆ ,

ಕರಿ ಮೆಣಸಿನ ಕಾಳು ಎಂದು ಹೇಳಲಾಗಿದೆ. ಕರಿ ಮೆಣಸಿನ ಕಾಳಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು .. ಇದರ ಸೇವನೆಯಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಕರಿ ಮೆಣಸಿನ ಸೇವನೆಯು ಕ್ಯಾನ್ಸರ್ ಕೂಡ ತಡೆಗಟ್ಟುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ನೆಗಡಿ , ಶೀತ ,ಜ್ವರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ . ಇನ್ನು ಜ್ಯೋತಿಷ್ಯದಲ್ಲಿ ಕರಿ ಮೆಣಸಿನ ಕಾಳಿನ ಪ್ರಯೋಗ ತುಂಬಾ ಪರಿಣಾಮಕಾರಿಯಾಗಿದೆ .

ಇದರ ಪ್ರಯೋಗದಿಂದ ನಿಮ್ಮ ಜೀವನದಲ್ಲಿ ನಿಂತು ಹೋಗುವ ಕೆಲಸಗಳು ಕೂಡ ಪುನಃ ಶುರುವಾಗುತ್ತದೆ . ಹಣಕಾಸಿನ ಸಮಸ್ಯೆಗಳನ್ನು ನಿವಾರಣೆ ಮಾಡುವ ಅದ್ಭುತ ಪ್ರಯೋಗ ಇದಾಗಿದೆ. ಯಾವುದಾದರೂ ಮಹತ್ವಪೂರ್ಣ ಕೆಲಸದ ಮೇಲೆ ಮನೆಯಿಂದ ಹೊರಗಡೆ ಹೋದರೆ , ನಾಲ್ಕೈದು ಮೆಣಸಿನ ಕಾಳುಗಳನ್ನು ಹೊಸ್ತಿಲಿನ ಎಡಬದಿಯ ಹೊರಗಡೆ ಇಡಬೇಕು .

ನಂತರ ನೀವು ಪಾದರಕ್ಷೆಗಳನ್ನು ಧರಿಸಿ , ಆ ಮೆಣಸಿನ ಕಾಳುಗಳನ್ನು ಕಾಲಿನಿಂದ ತುಳಿದು ಕ್ರಶ್ ಮಾಡಿ ಈ ಚಮತ್ಕಾರಿ ಮಂತ್ರ ಹೇಳಬೇಕು .” ಪ್ರಬೀಸಿ ನಗರ ಕೀಜೆ ಸಬ ಕಾಜಾ ಹೃದಯ ರಾಖಿ ಕೋಸಲ ಪುರ ರಾಜಾ” ಇದರ ಅರ್ಥ ಏನೆಂದರೆ , ಅಯೋಧ್ಯ ಪುರಿಯ ರಾಜ ಶ್ರೀರಾಮನನ್ನು ನಿನ್ನನ್ನು ಹೃದಯದಲ್ಲಿ ಇರಿಸಿಕೊಂಡು ಸ್ಮರಿಸಿ ನೆನೆದು ನಾನು ನಗರದೊಳಗೆ ಪ್ರವೇಶ ಮಾಡುತ್ತೇನೆ .

ಮಹತ್ವದ ಕೆಲಸಕ್ಕೆ ತೆರಳುತ್ತಿದ್ದೇನೆ , ನಿನ್ನನ್ನು ನೆನೆದು ಕೆಲಸ ಮಾಡುವುದರಿಂದ ವಿಷವು ಕೂಡ ಅಮೃತ ಆಗುತ್ತದೆ . ಶತ್ರುಗಳು ಮಿತ್ರರು ಆಗುತ್ತಾರೆ , ಅಗ್ನಿಯು ಶೀತಲ ಆಗುತ್ತದೆ . ಭಗವಂತನ ಶ್ರೀ ರಾಮನ ಈ ಮಂತ್ರ ನಿಮಗೆ ಸುರಕ್ಷಾ ಕವಚವಾಗಿ ಮತ್ತು ನಿಮಗೆ ಧನಾತ್ಮಕವಾಗಿ ಕೆಲಸ ಮಾಡುತ್ತದೆ .ನಿಮಗೆ ಕೆಲಸದಲ್ಲಿ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ .ಆದರೆ ನಿಮ್ಮ ಮನಸ್ಸು ಶುದ್ಧವಾಗಿರಬೇಕು .

ಧನಾತ್ಮಕ ಶಕ್ತಿ ಕೂಡ ಇರಬೇಕು . ಭಗವಂತನಲ್ಲಿ ನಂಬಿಕೆಯನ್ನು ಇಡಬೇಕು .ನಮ್ಮ ಜೀವನದಲ್ಲಿ ಕೆಲವೊಮ್ಮೆ ಯಾವುದೇ ಕೆಲಸಗಳಿಗೂ ಕೈ ಹಾಕಿದರು ಯಶಸ್ಸು ಸಿಗುವುದಿಲ್ಲ , ಬರೀ ಸೋಲನ್ನೇ ಕಾಣುತ್ತಿರುತ್ತೇವೆ .ಹಣ ಕೈಯಲ್ಲಿ ನಿಲ್ಲುವುದಿಲ್ಲ .ಯಶಸ್ಸು ಅನ್ನುವುದು ಮರೀಚಿಕೆ ಆಗುತ್ತದೆ .ಇದಕ್ಕೆ ನಿಮ್ಮ ಮನೆಯ ವಾಸ್ತುದೋಷ ಕೂಡ ಕಾರಣವಾಗಿರುತ್ತದೆ .

ಹೀಗೆ ಜೀವನದಲ್ಲಿ ಸಮಸ್ಯೆಗಳ ಸುಳಿಗೆ ಸಿಲುಕಿದಾಗ ನೀವು ಈ ಕರಿ ಮೆಣಸಿನ ಕಾಳಿನ ಪ್ರಯೋಗ ಮಾಡಿದರೆ , ಮತ್ತು ಕರಿ ಮೆಣಸಿನ ಕಾಳಿನ ಪ್ರಯೋಗ ಸಿದ್ಧಿ ಆಗಬೇಕು ಎಂದರೆ , ಪ್ರತಿದಿನ ತಪ್ಪದೆ 48 ದಿನಗಳ ಕಾಲ ಇದನ್ನು ಮಾಡಬೇಕು .ನಾಲ್ಕು ಕರಿ ಮೆಣಸಿನ ಕಾಳುಗಳನ್ನು ಬಲ ಹೊಸ್ತಿಲಲ್ಲಿ ಮತ್ತು ನಾಲ್ಕು ಕರಿಮೆಣಸಿನ ಕಾಳನ್ನು ಎಡ ಹೊಸ್ತಿಲಲ್ಲಿ ಹಾಕಬೇಕು .

ಕಾಲಿನಿಂದ ಆ ಕಾಳುಮೆಣಸನ್ನು ಹೊಸಕಿ ಮೇಲೆ ಹೇಳಿರುವ ಮಂತ್ರವನ್ನು ಹೇಳಬೇಕು .ನಂತರ ಹೊರಗಡೆ ಹೊರಡಬೇಕು . ನಿಮ್ಮ ಕೆಲಸ ಯಶಸ್ವಿಯಾಗಿ ಆಗುತ್ತದೆ .ನಾವು ಹೇಳಿರುವ ಮಂತ್ರವನ್ನು ಹೇಳಿದ ನಂತರ ಕಾಳುಮೆಣಸನ್ನು ಅಲ್ಲಿಯೇ ಬಿಡಿ . ಇನ್ನು ಮಾರನೆಯ ದಿನ ಬೆಳಗ್ಗೆ ಕಸ ಗುಡಿಸುವಾಗ ಅದನ್ನು ಎತ್ತಿ ಹೊರಗಡೆ ಕಸದ ಜೊತೆಗೆ ಹಾಕಿ . ನೀವು ಪ್ರತಿದಿನ ತಪ್ಪದೆ 48 ದಿನಗಳ ಕಾಲ ಕಾಳು ಮೆಣಸಿನ ಪ್ರಯೋಗ ಮಾಡಿದರೆ, ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ .ಜೀವನದಲ್ಲಿ ಸಂಕಷ್ಟಗಳು ಬಂದಾಗ ದಾರಿ ಕಾಣಿಸದೆ ಇದ್ದಾಗ , ಕರಿ ಮೆಣಸಿನ ಕಾಳು ತುಂಬಾ ಚಮತ್ಕಾರಿ ಆದ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗಿದೆ .

Leave A Reply

Your email address will not be published.