ಬುದ್ಧಿವಂತ ಮಕ್ಕಳನ್ನು ಪಡೆಯಬೇಕೆಂದರೆ ಗರ್ಭಿಣಿ ಇದ್ದಾಗ ಈ ಆಹಾರ ಸೇವಿಸಿ. ಗರ್ಭಿಣಿಯರು ನಾಲ್ಕು ತಿಂಗಳಿನಿಂದ ಪ್ರತಿದಿನ ರಾತ್ರಿ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಚುರುಕಾಗುತ್ತದೆ ಜೊತೆಗೆ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ.
ಮೊಟ್ಟೆಯಲ್ಲಿ ಅತೀ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ವಾರದಲ್ಲಿ ಎರಡು ಅಥವಾ ಮೂರು ಹೊತ್ತಾದರೂ ಮೊಟ್ಟೆ ಇರಲಿ.
ಮಗುವಿನ ಮೆದುಳಿನ ಬೆಳವಣಿಗೆಗೆ ಒಮೇಗಾ 3 ಫ್ಯಾಟಿ ಆಸಿಡ್ ಗಳು ಬಹಳ ಮುಖ್ಯ. ಮೀನು, ಸೋಯಾಬೀನ್ಸ್, ಪಾಲಾಕ್ ಸೊಪ್ಪು, ವಾಲ್ ನಟ್ ಗಳಲ್ಲಿ ಈ ಪೋಷಕಾಂಶ ಹೆಚ್ಚಾಗಿರುತ್ತದೆ. ಗರ್ಭಿಣಿಯರು ಇಂಥಹ ಆಹಾರವನ್ನು ಸೇವನೆ ಮಾಡಬೇಕು. ವೈದ್ಯರು ನೀಡುವ ಮಾತ್ರೆಗಿಂತ ನೈಸರ್ಗಿಕವಾಗಿ ದೊರಕುವ ಈ ಆಹಾರಗಳು ನಮ್ಮ ದೇಹದ ಆರೋಗ್ಯಕ್ಕೆ ಉತ್ತಮವಾಗುತ್ತವೆ.