ಸೌಂದರ್ಯ ವೃದ್ಧಿ

ಸದಾ ಯೌವನವಾಗಿರಲು ಕೆಲವೊಂದು ಸಲಹೆಗಳು ಸೌಂದರ್ಯ ವೃದ್ಧಿ ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡುಬಿಸಿಲಿನಿಂದ ರಕ್ಷಿಸಿ. ಹೈಡ್ರೇಟ್ ಆಗಿರಿ ಅಂದರೆ ಪ್ರತಿದಿನ ಆರರಿಂದ ಎಂಟು ಗ್ಲಾಸ್ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟಾಗಿ ಇರುತ್ತೀರ. ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ.

ನೀವು ಸೇವಿಸುವ ಆಹಾರದಲ್ಲಿ ವಿಟಮಿನ್ ಸಿ ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ. ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ ವಾಕಿಂಗ್ ಮಾಡುವುದು ತುಂಬಾ ಅಗತ್ಯ.

ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿ ಇರಬೇಕು ಮತ್ತು ಪ್ರೋಟೀನ್ ಭರಿತ ಆಹಾರ ಸೇವಿಸುವುದು ಒಳ್ಳೆಯದು. ಸ್ನಾನ ಮಾಡುವಾಗ ಹೆಚ್ಚು ಹೊತ್ತು ನಿಮ್ಮ ತ್ವಚೆಯನ್ನು ಉಜ್ಜಬೇಡಿ. ಇದರಿಂದ ನಿಮ್ಮ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆಯಾಗುತ್ತದೆ. ನೀವು ಹೆಚ್ಚು ಬೆವರುತ್ತಿದ್ದರೆ ನಿಮ್ಮ ಮುಖವನ್ನು ತೊಳೆಯಿರಿ ಅಥವಾ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ.

ನಿದ್ದೆಗೆ ಪ್ರಾಮುಖ್ಯ ಆದಿತ್ಯ ನೀಡಿ ನಿಮ್ಮ ಸೌಂದರ್ಯವನ್ನು ಕಾಪಾಡಲು ಪ್ರಮುಖ ಅಂಶವೆಂದರೆ ಸರಿಯಾದ ನಿದ್ರೆ ದಿನಕ್ಕೆ ಎಂಟು ಗಂಟೆ ನಿದ್ರೆ ಅತ್ಯವಶ್ಯಕ. ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚಿ ನೀವು ರೋಜ್ ವಾಟರ್ ಕೂಡ ಹಚ್ಚಬಹುದು ಇದರಿಂದ ತ್ವಚೆ ಮೃದುವಾಗುತ್ತದೆ. ಪ್ರತಿದಿನ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮ ಟೈಟ್ ಆಗುತ್ತದೆ.

ಹೊಳಪು ಬರುತ್ತದೆ ಕಲೆಗಳು ಮಾಯವಾಗುತ್ತದೆ. ಸದಾ ಖುಷಿಯಾಗಿರಿ ಒತ್ತಡವನ್ನು ಕಡಿಮೆ ಮಾಡಲು ಯಾವುದಾದರು ಕಾಮಿಡಿ ವಿಡಿಯೋ ನೋಡಿ ಸೌಂದರ್ಯದ ಮತ್ತೊಂದು ಗುಟ್ಟೇನೆಂದರೆ ಅದು ನಗು ಮುಖ. ಮುಖದ ಬಣ್ಣ ಯಾವುದೇ ಇರಲಿ ನಗುಮುಖವೇ ಒಂದು ಅದ್ಭುತ ಸೌಂದರ್ಯ. ಹಾಲು ಮನೆಯಲ್ಲಿ ಹಾಲು ಸುಲಭವಾಗಿ ದೊರೆಯುವ ಉತ್ಪನ್ನ ಶುದ್ಧವಾದ ಹಾಲು ಮೆಲನಿನ್ ನಿಯಂತ್ರಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಮೆಲನಿನ್ ಪ್ರಮಾಣ ಹೆಚ್ಚಾದಾಗ ಚರ್ಮದಲ್ಲಿ ಕಪ್ಪು ಬಣ್ಣ ಉಂಟಾಗುವುದು ಸಹಜ ಇದಕ್ಕೆ ಉತ್ತಮ ಪರಿಹಾರವಾಗಿ ಹಾಲನ್ನು ಬಳಸಬಹುದು. ರಾತ್ರಿ ಮಲಗುವ ಮುನ್ನ ಶುದ್ಧ ಹಾಲನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ ಮುಂಜಾನೆ ಶುದ್ಧ ನೀರಿನಲ್ಲಿ ಮುಖವನ್ನು ತೊಳೆಯಿರಿ. ರಾತ್ರಿಯಿಂದ ಬೆಳಗಾಗುವ ತನಕವೂ ಹಾಲು ಅದ್ಭುತ ಪೋಷಣೆ ನೀಡುವುದರಿಂದ ಚರ್ಮವು ಕಾಂತಿಯನ್ನು ಹಾಗೂ ಹೊಳಪನ್ನು ಪಡೆದುಕೊಳ್ಳುವುದು. ನಿತ್ಯವೂ ಈ ಕ್ರಮವನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

ಒಂದು ಸಣ್ಣ ಚಮಚ ಅರಿಶಿನ ಪುಡಿಯನ್ನು ಅರ್ಧ ಲೋಟ ಹಸಿ ಹಾಲಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ರೀತಿ ತಯಾರಿಸಿಕೊಳ್ಳಿ ತದನಂತರ ಇದಕ್ಕೆ ಒಂದೆರಡು ಚಮಚ ಕೊಬ್ಬರಿ ಎಣ್ಣೆ ಬೆರೆಸಿ, ದಪ್ಪಗಿನ ಲೇಪನ ರೀತಿ ಮಾಡಿಕೊಳ್ಳಿ. ಇಷ್ಟೆಲ್ಲ ಆದ ಬಳಿಕ ಈಗ ತಾನೆ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ಜೆನುತುಪ್ಪ ಇದು ಚರ್ಮದ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗೆಹರಿಸುತ್ತದೆ. ದೀರ್ಘ ಸಮಯಗಳ ಕಾಲ ಚರ್ಮದ ಬಣ್ಣವನ್ನು ಅದ್ಭುತ ರೀತಿಯಲ್ಲಿ ಇರುವಂತೆ ಕಾಯ್ದುಕೊಳ್ಳುವುದು ಬ್ಲೀಚಿಂಗ್ ಗುಣವನ್ನು ಸಹ ಹೊಂದಿರುವುದರಿಂದ ಚರ್ಮ ಅದ್ಭುತ ಬಣ್ಣವನ್ನು ಪಡೆದುಕೊಳ್ಳುವುದು. ಒಂದು ಟೀ ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಿ ಅದನ್ನು ಮುಖದಿಂದ ಕುತ್ತಿಗೆಯವರೆಗೂ ಅನ್ವಯಿಸಿ.

30 ನಿಮಿಷಗಳ ಕಾಲ ಆರಲು ಬಿಡಿ ನಂತರ ಶುದ್ಧವಾದ ನೀರಿನಲ್ಲಿ ತೊಳೆಯಿರಿ. ನಿತ್ಯವು ಈ ಕ್ರಮವನ್ನು ಅನುಸರಿಸುವುದರಿಂದ ಚರ್ಮವು ಹೊಳಪನ್ನು ಪಡೆದುಕೊಳ್ಳುತ್ತದೆ. ಕಡಲೆ ಹಿಟ್ಟು ಕಡಲೆ ಹಿಟ್ಟು ನೈಸರ್ಗಿಕವಾಗಿ ಸತ್ತ ಜೀವಕೋಶಗಳನ್ನು ನಿರ್ಮೂಲನೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಚರ್ಮವನ್ನು ಸ್ವಚ್ಛಗೊಳಿಸಿ ಹೊಸ ಚರ್ಮವನ್ನು

ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಒಂದು ಟೇಬಲ್ ಚಮಚ ಕಡ್ಲೆ ಹಿಟ್ಟಿಗೆ ಸ್ವಲ್ಪ ನೀರನ್ನು ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ. ನಿತ್ಯವೂ ಸ್ನಾನಕ್ಕೂ ಮುನ್ನ ಮುಖ ಹಾಗೂ ಕೈಕಾಲುಗಳಿಗೆ ಹಚ್ಚಿಕೊಳ್ಳಿ ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ನಿತ್ಯವೂ ಈ ಕ್ರಮವನ್ನು ಅನುಸರಿಸಿದರೆ ನೈಸರ್ಗಿಕವಾದ ಹೊಳಪನ್ನು ಪಡೆದುಕೊಳ್ಳಬಹುದು.

Leave a Comment