ಹೊಸ ವರ್ಷ 2024ರ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿವೆ. 2024ರ ಹೊಸ ವರ್ಷ ಆರಂಭಕ್ಕೆ ನೀವು ಈ ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ. 2024ರ ಹೊಸ ವರ್ಷದಲ್ಲಿ ನಾವು ಯಾವ ವಸ್ತುಗಳನ್ನು ಮನೆಗೆ ತರಬೇಕು.? ಈ ವಸ್ತುಗಳನ್ನೇ ಖರೀದಿಸಿ … ಪ್ರಸ್ತುತ ನಾವು ವರ್ಷದ ಕೊನೆಯ ತಿಂಗಳಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ 2024ರ ಹೊಸ ವರ್ಷವೂ ಆರಂಭವಾಗಲಿದೆ.
ಪ್ರತಿಯೊಬ್ಬರು ಹೊಸ ವರ್ಷವನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಮತ್ತು ಮುಂಬರುವ ಹೊಸ ವರ್ಷವು ನಮಗೆ ಸಂತೋಷ ಮತ್ತು ಮಂಗಳಕರವಾಗಿರಲಿ ಎಂದು, ಕುಟುಂಬದಲ್ಲಿ ಸುಖ ಶಾಂತಿ ನೆಲಸಲೆಂದು ಬಯಸುತ್ತಾರೆ. ಈ ಕಾರಣಕ್ಕಾಗಿ ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಮುಂದಿನ ವರ್ಷದಲ್ಲಿ ನಮ್ಮೆಲ್ಲ ಆರ್ಥಿಕ ಸಮಸ್ಯೆಗಳು ದೂರಾಗಿ ಹಣವನ್ನು ಪಡೆಯುವುದಕ್ಕಾಗಿ ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ
ಈ ವಸ್ತುಗಳನ್ನು ನೀವು ಮನೆಗೆ ತರಬೇಕು. ಹೊಸ ವರ್ಷಕ್ಕೂ ಮುನ್ನ ನೀವು ಮನೆಗೆ ಯಾವೆಲ್ಲಾ ವಸ್ತುಗಳನ್ನು ತರಬೇಕು? ಶಾಸ್ತ್ರದ ಪ್ರಕಾರ ಹೊಸ ವರ್ಷಕ್ಕೂ ಮುನ್ನ ನೀವು ಈ ವಸ್ತುಗಳನ್ನು ಮನೆಗೆ ತನ್ನಿ.
ನವಿಲುಗರಿ- ಶಾಸ್ತ್ರದ ಪ್ರಕಾರ ಹೊಸ ವರ್ಷದಂದು ನವಿಲುಗರಿಯನ್ನು ಖರೀದಿಸಿ ಮನೆಗೆ ತಂದರೆ ಲಕ್ಷ್ಮಿ ದೇವಿಗೆ ತುಂಬಾ ಸಂತೋಷವಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ನವಿಲುಗರಿಗಳಿರುವ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆ. ಆದರೆ ಒಂದರಿಂದ ಮೂರು ನವಿಲುಗರಿಗಳನ್ನು ಮಾತ್ರ ಮನೆಗೆ ತರಬೇಕು ಎಂಬುದನ್ನು ನೆನಪಿನಲ್ಲಿಡಿ. ತುಳಸಿ ಗಿಡ – ಶಾಸ್ತ್ರದ ಪ್ರಕಾರ ಹೊಸ ವರ್ಷ ಸಂದರ್ಭದಲ್ಲಿ ತುಳಸಿ ಗಿಡವನ್ನು ಮನೆಗೆ ತಂದರೆ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಏಕೆಂದರೆ ಹೊಸ ವರ್ಷದಂದು ತುಳಸಿ ಗಿಡವನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಇದು ಹೇಳುತ್ತದೆ.
ತೆಂಗಿನಕಾಯಿ – ಶಾಸ್ತ್ರದ ಪ್ರಕಾರ ಹೊಸ ವರ್ಷದಂದು ಚಿಕ್ಕ ತೆಂಗಿನ ಕಾಯಿಯನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಚಿಕ್ಕ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನೀವು ಹಣ ಇಡುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ. ಇದರೊಂದಿಗೆ ನೀವು ಧನಾಗಮನವನ್ನು ಕೂಡ ಪಡೆದುಕೊಳ್ಳಬಹುದು.
ಮುತ್ತಿನ ಶಂಖ- ಹೊಸ ವರ್ಷದಂದು ಮುತ್ತಿನ ಶಂಕವನ್ನು ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹೊಸ ವರ್ಷದಂದು ಮುತ್ತಿನ ಶಂಖವನ್ನು ಮನೆಗೆ ತನ್ನಿ ಮತ್ತು ಅದನ್ನು ನೀವು ಸುರಕ್ಷಿತ ಸ್ಥಳದಲ್ಲಿ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಇಡಿ. ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ನೀವು ವರ್ಷವಿಡಿ ಹಣದ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಿಲ್ಲ.
ಲಾಫಿಂಗ್ ಬುದ್ಧ- ಶಾಸ್ತ್ರದ ಪ್ರಕಾರ ಹೊಸ ವರ್ಷದಂದು ಲಾಫಿಂಗ್ ಬುದ್ಧನನ್ನು ಖರೀದಿಸಿ ಮನೆಗೆ ತರುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಪ್ರಕಾರ ಲಾಫಿಂಗ್ ಬುದ್ಧನನ್ನು ಯಾವಾಗಲೂ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತವಾಗುತ್ತದೆ ಎನ್ನುವ ನಂಬಿಕೆ ಇದೆ.