ಯಾರಿಗು ತಲೆಬಾಗಲ್ಲ ಧನುರಾಶಿಯವರು

0

ರಾಶಿಚಕ್ರದಲ್ಲೇ 9 ನೇ ರಾಶಿ ಚಕ್ರವಾದ ಧನುಸ್ಸು ರಾಶಿ ಇತರೆ ಎಲ್ಲಾ ರಾಶಿಗಳಿಗಿಂತ ಹೆಚ್ಚು ಹಾಸ್ಯವುಳ್ಳ ರಾಶಿಯಾಗಿದೆ. ಅತೀ ಹೆಚ್ಚು ಉದಾರಗುಣಗಳನ್ನು ಹೊಂದಿರುವ ಇವರು ತಮ್ಮ ಕೈ ಮೀರುವ ಕೆಲಸಗಳನ್ನು ಹೀಡೇರಿಸುವಂತಹವರು. ಪ್ರಯಾಣ, ಸಮಾಜಮುಖಿ, ಸ್ನೇಹಪರವುಳ್ಳ ಇವರಿಗೆ ನಿರ್ಬಂಧಿಸುವುದು ಇಷ್ಟವಾಗುವುದಿಲ್ಲ.

ಇವರು ಸಾಹಸಿಗರು, ಸತ್ಯಾನ್ವೇಷಣೆ ಮಾಡುವವರು, ಪ್ರಯಾಣಪ್ರಿಯರು, ವಿನೋಧಪ್ರಿಯರು, ಉತ್ತಮ ಜೊತೆಗಾರರಾಗುವ ವ್ಯಕ್ತಿತ್ವವುಳ್ಳವರು ಆಗಿರುತ್ತಾರೆ. ಇವರು ಬಾಹ್ಯನೋಟ ನೋಡಿ ವಸ್ತುಗಳನ್ನು ಕೊಂಡುಕೊಳ್ಳುವುದಿಲ್ಲ ಈ ರಾಶಿಯವರ ಇನ್ನಷ್ಟು ವೃತ್ತಿಜೀವನ, ವ್ಯಕ್ತಿತ್ವ, ಪ್ರೀತಿಯ ಕುತೂಹಲಕಾರಿ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.

ಧನುರ್ ರಾಶಿಯಲ್ಲಿ ಹುಟ್ಟಿದವರು ಅರ್ಧ ಸ್ವಭಾವ ಮನುಷ್ಯ, ಅರ್ಧ ಸ್ವಭಾವ ಮೃಗದಂತೆ ಇರುತ್ತಾರೆ. ಆದ್ದರಿಂದ ಈ ರಾಶಿಯವರಲ್ಲಿ ಮೃಗೀಯತೆ ಮತ್ತು ಮನುಷ್ಯರ ಗುಣ ಎರಡೂ ಗುಣಗಳು ಇರುತ್ತದೆ. ಅಲ್ಲದೇ ಮಾನವೀಯತೆ ಗುಣವೂ ಇರುತ್ತದೆ. ಈ ರಾಶಿಯವರು ಕೋಪದಲ್ಲಿದ್ದಾಗ ಯಾವ ವಿವೇಚನೆಯನ್ನು ಹೊಂದಿರುವುದಿಲ್ಲ. ಇವರು ಸ್ವಾರ್ಥಿಗಳಾಗಿ

ಅನ್ಯರ ಮೇಲೆ ಹೊರೆಸುವ ಆರೋಪಗಳು ಅನ್ಯಾಯದಂತೆ ಕಂಡುಬರುತ್ತದೆ ಮತ್ತು ನ್ಯಾಯವಾಗಿದ್ದೀನಿ ಎಂದು ಹೇಳುತ್ತಾರೇ ಹೊರತೂ ಆ ವರ್ತನೆ ಅವರಲ್ಲಿ ಇರುವುದಿಲ್ಲ. ಧನುರ್ ರಾಶಿಯ ಅಂಶ ಬೆಂಕಿ, ಆಳುವ ಗ್ರಹ ಗುರುಗ್ರಹ, ಬಣ್ಣ ನೀಲಿ, ಗುಣ ರೂಪಾಂತರಿ, ದಿನ ಗುರುವಾರ. ಅತ್ಯುತ್ತಮವಾಗಿ ಹೊಂದಿಕೆ ಆಗುವ ರಾಶಿಚಕ್ರಗಳು ಮಿಥುನ , ಮೇಷ. ಅದೃಷ್ಠ ಸಂಖ್ಯೆ 2,7,9,12, ಮತ್ತು 21 ಆಗಿದೆ. ಇವರು ಬಹಳ ಸಹಕಾರಾತ್ಮಕವಾಗಿ ಯೋಚಿಸುವವರು. ಜೀವನದಲ್ಲಿ ಒಳ್ಳೆಯದ್ದನ್ನೇ ನೋಡಲು ಬಯಸುತ್ತಾರೆ.

ಕೆಲವೊಮ್ಮೆ ಅಸಭ್ಯ ವರ್ತನೆ ತೋರಿಸಬಹುದು ಮತ್ತು ಉತ್ತಮ ಸಲಹೆಯನ್ನು ತಿರಸ್ಕರಿಸಬಹುದು. ಬಹಳ ಸಕ್ರಿಯವಾಗಿರುವ ಇವರು ಪ್ರಕೃತಿಯನ್ನ ಇಷ್ಟಪಡುವವರು. ಎಲ್ಲಾ ಕ್ರೀಡೆಗಳಲ್ಲಿ ಮುಂದೆ ಇರುತ್ತಾರೆ. ಸಹಾನುಭೂತಿಯುಳ್ಳ ಇವರು ಪ್ರಾಮಾಣಿಕರು. ಇವರು ತಮ್ಮ ಪ್ರೀತಿಪಾತ್ರರ ಸಮಸ್ಯೆಗಳನ್ನು ಬಗೆಹರಿಸಲು ಯಾವಾಗಲೂ ಮುಂದೆ ಇರುತ್ತಾರೆ.

ಧನುಸ್ಸು ರಾಶಿಯ ವ್ಯಕ್ತಿತ್ವದ ಲಕ್ಷಣಗಳು ಯಾವುವು ಎಂದರೆ ಧೈರ್ಯಶಾಲಿಯಾದ ಇವರಲ್ಲಿ ಆತ್ಮವಿಶ್ವಾಸ ತುಂಬಾನೇ ಹೆಚ್ಚಾಗಿ ಇರುತ್ತದೆ. ಜೀವನದಲ್ಲಿ ಅತ್ಯಂತ ಸವಾಲುಗಳನ್ನು ಸ್ವೀಕರಿಸುತ್ತಾರೆ. ಇತರೇ ರಾಶಿಯವರಿಗಿಂತ ಹೆಚ್ಚು ಧನಾತ್ಮಕ ಮನೋಭಾವದವರು. ಇವರು ಮುಕ್ತಮನಸ್ಸು ಮತ್ತು ವಾಸ್ತವವಾಗಿ ಸ್ವತಂತ್ರವಾಗಿ ಬಯಸುವವರು.

ಕೆಲವೊಮ್ಮೆ ಇವರನ್ನು ವಿನಯವಿಲ್ಲದವರು, ಅಸಹನೆ ಎಂದು ಪರಿಗಣಿಸಲಾಗುತ್ತದೆ. ಪ್ರಾಮಾಣಿಕರು, ಸತ್ಯವಂತರು, ಉದಾರತೆ, ದೂರದೃಷ್ಠಿ, ದಾರ್ಶನಿಕತೆ, ವಿಶ್ವಾಸಾರ್ಹರು, ಸ್ವಾವಲಂಬನೆ, ಕೃಷಿಸ್ವಭಾವ, ಬುದ್ಧಿವಂತಿಕೆ ಇವರ ಸಕಾರಾತ್ಮಕ ಗುಣಗಳು. ಅತೀಯಾದ ಆತ್ಮವಿಶ್ವಾಸ, ಕಟುವಾದ, ಮೊಂಡುತನ, ಯಾರಿಗೂ ಬಗ್ಗದ ಈ ಗುಣಗಳು ಇವರ ನಕಾರಾತ್ಮಕ ಗುಣಗಳಾಗಿವೆ. ಪ್ರೀತಿಯಲ್ಲಿ ನಿಷ್ಠಾವಂತರು. ತಮ್ಮ ಸಂಗಾತಿಯ ಜೊತೆ ಖುಷಿಯಿಂದ ಕಾಲ ಕಳೆಯಲು ಇಷ್ಟಪಡುತ್ತಾರೆ.

ಸಂಗಾತಿಯನ್ನು ಸಮಾನವಾಗಿ ಕಾಣುವ ಇವರು ಉತ್ತಮ ಸಂಗಾತಿಯಾಗಿರುತ್ತಾರೆ. ಇವರು ಸ್ನೇಹಿತರಾಗಿ ತುಂಬಾ ಪ್ರೋತ್ಸಾಹಿಸುತ್ತಾರೆ. ಸ್ನೇಹಿತರ ವಲಯದಲ್ಲಿ ಸಂತೋಷವನ್ನು ಹರಡುತ್ತಾರೆ. ಕೊನೆಯವರೆಗೂ ಗೆಳೆತನವನ್ನು ಉಳಿಸಿಕೊಳ್ಳುವ ವ್ಯಕ್ತಿತ್ವವುಳ್ಳವರು. ಧನುಸ್ ರಾಶಿಯವರ ಆರಂಭದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬರುವುದಿಲ್ಲ.

ಇವರಿಗೆ ಸೊಂಟ, ತೊಡೆ, ಹೊಟ್ಟೆ, ಕಾಲಿಗೆ ಸಂಬಂಧಿಸಿದ ಸಮಸ್ಯೆಗಳು ಊಂಟಾಗಬಹುದು. ಹೆಚ್ಚು ಮದ್ಯಪಾನ, ಕೊಬ್ಬಿನ ಅಂಶವುಳ್ಳ ಆಹಾರ ಸೇವನೆಯನ್ನು ನಿಲ್ಲಿಸಬೇಕು. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡರೆ ರಕ್ತದೊತ್ತಡದ ಸಮಸ್ಯೆ ಮತ್ತು ಎಕೃತ್ತಿನ ಸಮಸ್ಯೆಗಳನ್ನ ತಪ್ಪಿಸಬಹುದು. ಇವರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕು.

ಈ ರಾಶಿಯವರು ತಮ್ಮ ಗುರಿಯನ್ನು ಸಾಧಿಸಲು ಮುಂದಾಗುವ ಮೊದಲು ಎರಡು ರೀತಿಯಲ್ಲಿ ಯೋಚನೆ ಮಾಡುತ್ತಾರೆ. ತಮ್ಮ ಬುದ್ಧಿವಂತಿಕೆ ಮತ್ತು ಹಾಸ್ಯಪ್ರಜ್ಞೆಯಿಂದ ಕೆಲಸದ ವಾತಾವರಣವನ್ನು ಉತ್ಸಾಹಭರಿತವಾಗಿಸುವುದರಿಂದ ಎಲ್ಲರೂ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತಾರೆ. ಸ್ಫೂರ್ತಿದಾಯಕ ನಾಯಕರಾಗಿರುತ್ತಾರೆ.

ಪ್ರಯಾಣಕ್ಕೆ ಸಂಬಂಧಪಟ್ಟ ವೃತ್ತಿಗಳು ಇವರನ್ನ ಆಕರ್ಷಿಸುತ್ತದೆ. ಇವರ ಉತ್ತಮ ರಾಜಕಾರಣಿಗಳು, ಪ್ರಯಾಣದ ಗೈಡ್ ಕೂಡ ಆಗಬಹುದು. ಮಾನವ ಸಂಪನ್ಮೂಲದ ವ್ಯವಸ್ಥಾಪಕರು, ಕಾರ್ಯಕರ್ತರು, ಶಿಕ್ಷಕರು, ದಾರ್ಶನಿಕರು, ವೈದ್ಯವೃತ್ತಿಯನ್ನು ಮಾಡಬಹುದು. ಧನುಸ್ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಕೊಡುವುದಿಲ್ಲ ಆದ್ದರಿಂದ ಇವರ ಜೀವನ ಸಂಗಾತಿಯು ಇವರ ಆರೋಗ್ಯದ ಬಗ್ಗೆ ಗಮನ ಅರಿಸಬೇಕಾಗುತ್ತದೆ.
ಧನುರ್ ರಾಶಿಯವರ ಜೊತೆ ಉತ್ತಮವಾಗಿ ಹೊಂದಿಕೊಳ್ಳುವ ರಾಶಿಚಕ್ರಗಳು ಮೇಷರಾಶಿ.

ಧನು ಹಾಗೂ ಮೇಷರಾಶಿ ಇವೆರೆಡು ರಾಶಿಗಳು ಸಾಮಾಜಿಕ, ಸಾಹಸ ಮತ್ತು ಹೊಸ ಸವಾಲುಗಳನ್ನು ಪ್ರೀತಿಸುವ ವಿನೋಧ ಪ್ರೀತಿಯ ರಾಶಿಗಳು. ಇವರಿಬ್ಬರು ಸ್ವಭಾವಿಕವಾಗಿ ಆಶಾವಾದಿಗಳಾಗಿದ್ದು, ಸಾಮರಸ್ಯ, ಸಕಾರಾತ್ಮಕ ಸಂಬಂಧಗಳನ್ನು ಹೊಂದಿರುತ್ತಾರೆ. ಧನು ಹಾಗೂ ಕುಂಭರಾಶಿಗಳು ಬದಲಾವಣೆ ಮತ್ತು ವೈವಿಧ್ಯತೆ ವೃದ್ಧಿಗೆ ಹೆಚ್ಚು ಹೊತ್ತು ನೀಡುತ್ತಾರೆ. ಆಳವಾದ ಚರ್ಚೆಗಳನ್ನು ಇಷ್ಟಪಡುವ

ಈ ಎರಡು ರಾಶಿಗಳು ಆಸಕ್ತಿದಾಯಕ ವ್ಯಕ್ತಿಗಳು. ಧನು ಮತ್ತು ಸಿಂಹರಾಶಿಗಳು ಸ್ವತಂತ್ರ ಮನೋಭಾವದ ಪ್ರೀತಿಯ ಸಾಹಸ ಮತ್ತು ಒಂದೇ ರೀತಿಯ ಅಸದಚಬ ಇದು ಸಾಹಸ ಪ್ರೀತಿಯ ಧನುರ್ ರಾಶಿಯವರಿಗೆ ವಿರುದ್ಧವಾಗಿರುತ್ತದೆ. ಮಕರರಾಶಿಯವರು ಪ್ರಾಯೋಗಿಕವಾಗಿರುತ್ತಾರೆ ಆಗ ಅವರು ಧನುರ್ ರಾಶಿಯ ಜನರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಇದು ಧನುರ್ ರಾಶಿಯವರಿಗೆ ಕಿರಿಕಿರಿ ಎನಿಸುತ್ತದೆ. ಕನ್ಯಾರಾಶಿಯವರಿಗೆ ಭದ್ರತೆ, ಬದ್ಧತೆಯ ಅಗತ್ಯವಿರುತ್ತದೆ. ಸ್ವತಂತ್ರ, ಪ್ರವಾಸಿ ಗುಣದ ಧನುರ್ ರಾಶಿಯವರಿಗೆ ತುಂಬಾ ಪರಿಪೂರ್ಣತಾವಾದಿಯಾಗುವುದೇ ಗುರಿಯಾಗಿರುತ್ತದೆ.

Leave A Reply

Your email address will not be published.