ಇಲ್ಲಿ ನಾವು ಹಸ್ತ ರೇಖೆಗಳ ಮೂಲಕ ನೀವು ಭಾಗ್ಯಶಾಲಿ ಆಗಿರುವುದಕ್ಕೆ ಇರುವ ಸಂಕೇತಗಳನ್ನು ಹೇಗೆ ತಿಳಿಯುವುದು ಅಂತ ತಿಳಿಸಿಕೊಡ್ತೀವಿ. ಪ್ರತಿದಿನ ನಮ್ಮ ಬಳಿ ಅಂತೂ ಹಲವಾರು ಹಸ್ತಗಳ ಫೋಟೋಗಳು ಬರುತ್ತವೆ. ಇವುಗಳಲ್ಲಿ ತುಂಬಾ ಜನರು ನಮಗೆ ಹೆಚ್ಚಾಗಿ ಕೇಳುವಂತ ಪ್ರಶ್ನೆಗಳು ಹೇಗಿರುತ್ತವೆ ಅಂದ್ರೆ, ನಮ್ಮ ಹಸ್ತ ರೇಖೆಗಳನ್ನ ನೋಡಿ
ನಾವು ಲಕ್ಕಿಯಾಗಿದ್ದೆವಾ ಇಲ್ವಾ ಅನ್ನೋದನ್ನ ತಿಳಿಸ್ಕೊಡಿ ಅಂತ ಕೇಳ್ತಾರೆ. ಹಾಗಾಗಿ ಇದರ ರಿಲೇಟೆಡ್ ಆಗಿರುವಂತ ವಿಷಯ ಇದಾಗಿದೆ. ಇದರಲ್ಲಿ ಯಾವ ಐದು ರೀತಿಯ ಸಂಕೇತಗಳನ್ನು ನಿಮಗೆ ತಿಳಿಸಿಕೊಡ್ತೀವಂದ್ರೆ, ಸುಲಭವಾಗಿ ನೀವು ಇಲ್ಲಿ ನಿಮ್ಮ ಹಸ್ತ ರೇಖೆಗಳ ಬಗ್ಗೆ ತಿಳಿಯಬಹುದು. ಇದನ್ನು ಪೂರ್ತಿಯಾಗಿ ಓದಿದಾಗ ಮಾತ್ರ ನಿಮಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಒಂದು ವೇಳೆ ನೀವು ಪುರುಷರಾಗಿದ್ದರೆ, ಹುಡುಗರಾಗಿದ್ದರೆ ರೈಟ್ ಹ್ಯಾಂಡ್ ಅಂದ್ರೆ ಬಲಗೈಯನ್ನು ನೋಡಿಕೊಳ್ಳಬೇಕು.
ಒಂದು ವೇಳೆ ನೀವು ಹುಡುಗಿಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಹಾಗಾದ್ರೆ ಬನ್ನಿ ಈಗ ಮೇನ್ ಟಾಪಿಕ್ ಬಗ್ಗೆ ನೋಡೋಣ. ಇಲ್ಲಿ ನಾವು ಮೊದಲನೆಯ ಸಂಕೇತದ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯ ಸಂಕೇತದ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ನೀವು ನಿಮ್ಮ ಕೈಗಳಲ್ಲಿ ಇರುವ ಬೆರಳುಗಳನ್ನು ನೋಡಿಕೊಳ್ಳಿ. ಬೆರಳುಗಳಲ್ಲಂತೂ ನಿಮಗೆ ಹಲವಾರು ರೇಖೆಗಳು ನೋಡಲು ಸಿಗುತ್ತವೆ. ಈ ಪ್ರಕಾರದಲ್ಲಿ ಕೆಲವು ವರ್ಟಿಕಲ್ ಲೈನ್ಗಳು ನೋಡಲು ಸಿಗುತ್ತವೆ.
ಕೆಲವರ ಬೆರಳಿನಲ್ಲಿ ತುಂಬಾ ಜಾಸ್ತಿ ಇರುತ್ತದೆ, ಕೆಲವರ ಕೈ ಬೆರಳುಗಳಲ್ಲಿ ತುಂಬಾ ಕಡಿಮೆ ಇರುತ್ತದೆ. ನಾವು ನಿಮಗೆ ಹೇಳೋದಾದ್ರೆ ಈ ರೇಖೆಗಳನ್ನು ನೀವು ಹೇಗೆ ಅನಲೈಸ್ ಮಾಡಬೇಕು ಅಂದ್ರೆ, ಇಲ್ಲಿ ನಿಮ್ಮ ನಾಲ್ಕು ಬೆರಳುಗಳಲ್ಲಿ ಕೆಳಭಾಗದಲ್ಲಿ ರೇಖೆಗಳು ಇರುತ್ತವೆ. ಕೆಲವರಿಗೆ 3 ಬೆರಳುಗಳಲ್ಲಿ ಇರಬಹುದು, ಇನ್ನೂ ಕೆಲವರಿಗೆ ಎರಡು ಬೆರಳುಗಳಲ್ಲಿ ಮತ್ತೆ ಕೆಲವರಿಗೆ ಒಂದೇ ಬೆರಳಲ್ಲಿಯೂ ಇರಬಹುದು. ಒಂದು ವೇಳೆ ಈ ರೇಖೆಗಳು ಏನಾದರೂ ನಾಲ್ಕು ಕೈ ಬೆರಳುಗಳಲ್ಲಿಯೂ ಇದ್ದರೆ ಇದನ್ನ ಅತ್ಯಂತ ಲಕ್ಕಿ ಅಂತ ತಿಳಿಯಲಾಗಿದೆ.
ಯಾರು ತಮ್ಮ ಮನಸ್ಸಿಚ್ಛೆಗಳನ್ನು, ಆಸೆಗಳನ್ನು ಈಡೇರಿಸಿಕೊಳ್ಳಲು ಇಷ್ಟಪಡುತ್ತಾ ಇರುತ್ತಾರೋ ಅವರಿಗಾಗಿ ಇದು ಅತಿ ಉತ್ತಮ ಅಂತ ತಿಳಿಯಲಾಗಿದೆ. ಇಲ್ಲಿ ಅವರ ಮನಸ್ಸಿನಲ್ಲಿ ಏನೇ ಇರಬಹುದು, ನೀವು ಗಾಡಿ ತೆಗೆದುಕೊಳ್ಳಲು ಇಷ್ಟಪಡುತ್ತಾ ಇರಬಹುದು, ಪ್ರಾಪರ್ಟಿ ತೆಗೆದುಕೊಳ್ಳಲು ಇಷ್ಟ ಪಡ್ತಾ ಇರಬಹುದು ಅಥವಾ ನೀವು ವಿದೇಶಕ್ಕೆ ಹೋಗಲು ಇಷ್ಟಪಡುತ್ತಾ ಇರುತ್ತೀರಾ. ಈ ಮಾತಿನ ಅರ್ಥ ಇಲ್ಲಿ ನಿಮ್ಮ ಮನಸ್ಸಿಚ್ಛೆಗಳು ಈಡೇರುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಈ ಚಾನ್ಸಸ್ ಇನ್ನಷ್ಟು ಹೆಚ್ಚಾಗಿ ಯಾವಾಗ ಆಗುತ್ತವೆ ಅಂದರೆ, ಈ ರೇಖೆಗಳು ನಿಮ್ಮ ಕೈ ಬೆರಳುಗಳ ಕೆಳ ಭಾಗದಲ್ಲಿ ಇರಬೇಕು. ಒಂದು ವೇಳೆ ಈ ಲೈನ್ಗಳು ನಿಮ್ಮ ಕೈಬೆರಳುಗಳ ಮೇಲ್ಭಾಗ ಅಂದರೆ ಎರಡು ಲೈನ್ ಗಳ ಮಧ್ಯಭಾಗದಲ್ಲಿ ಇದ್ದರೆ ಇಲ್ಲಿ ನಿಮ್ಮ ಮನಸ್ಸಿಚ್ಛೆಗಳು ಕಡಿಮೆ ವಯಸ್ಸಿನಲ್ಲಿಯೇ ಪೂರ್ತಿಗೊಳ್ಳುತ್ತವೆ. ಈ ಮಾತಿನ ಅರ್ಥ ನಿಮ್ಮ ಕೆರಿಯರ್ ಸಮಯದಲ್ಲಿಯೇ ನೀವು ಮುಂದೆ ಸಾಗ್ತಾ ಇರುತ್ತೀರಾ. ಆಗಿನಿಂದಲೇ ನಿಮ್ಮ ಎಲ್ಲಾ ಮನಸ್ಸಿಚ್ಛೆಗಳು ಪೂರ್ತಿಯಾಗಲು ಶುರುವಾಗಿರುತ್ತವೆ.
ಇಲ್ಲಿ ಈ ಒಂದು ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಿ. ಒಂದು ವೇಳೆ ಈ ರೇಖೆಗಳು ನಿಮ್ಮ ಬೆರಳಿನ ಕೆಳಭಾಗದಲ್ಲಿ ಮಾತ್ರ ಇದ್ದರು ಕೂಡ ನಿಮ್ಮ ಆಸೆಗಳು ಪೂರ್ತಿಯಾಗುತ್ತವೆ. ಈ ಮಾತಿನ ಅರ್ಥ ನಿಮ್ಮ ಮನಸ್ಸಿಚ್ಛೆಗಳು, ಆಸೆಗಳು ಈಡೇರಲು ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಖಂಡಿತವಾಗಿಯೂ ಪೂರ್ತಿಯಾಗುತ್ತವೆ. ಆದರೆ ಈ ಈ ರೇಖೆಗಳೇನಾದ್ರೂ ಕಂಪ್ಲೀಟ್ ಆಗಿ ಇಲ್ಲ ಅಂದ್ರೆ, ಅಂದ್ರೆ ನಾಲ್ಕು ಬೆರಳುಗಳಲ್ಲಿ ಇರೋದಿಲ್ಲ, ಕೇವಲ ಮೂರು ಬೆರಳುಗಳಲ್ಲಿ ಇರುತ್ತವೆ, ಎರಡು, ಒಂದು ಬೆರಳುಗಳಲ್ಲಿ ಇರುತ್ತವೆ.
ಈ ರೇಖೆಗಳು ನಿಮಗಾಗಿ ಪ್ರಾಪರ್ ಆಗಿ ವರ್ಕ್ ಮಾಡೋದಿಲ್ಲ. ಇದಾದ ನಂತರ ನಾವು ಎರಡನೆಯ ಸಂಕೇತದ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕಾಗಿ ನಿಮ್ಮ ಶುಕ್ರ ಪರ್ವತವನ್ನು ನೋಡಬೇಕಾಗುತ್ತದೆ. ಇದರ ಒಳಭಾಗದಲ್ಲಿರುವ ಈ ಭಾಗವನ್ನು ನಾವು ಶುಕ್ರ ಪರ್ವ ಅಥವಾ ಶುಕ್ರ ಪರ್ವತ ಅಂತ ಹೇಳ್ತಿವಿ. ಇಲ್ಲಂತೂ ನಿಮಗೆ ಹಲವಾರು ರೇಖೆಗಳು ಕಾಣುತ್ತವೆ. ಸ್ನೇಹಿತರೆ ಇಲ್ಲಿಯೂ ಈ ರೇಖೆಗಳು ವರ್ಟಿಕಲ್ ಆಗಿರಬಹುದು ಅಥವಾ ಹಾರಿಜಂಟಲ್ ನಲ್ಲಿ ಇರಬಹುದು.
ಈ ರೇಖೆಗಳ ಮೂಲಕವೂ ಸಹ ನಿಮ್ಮ ಮುಂಬರುವ ಜೀವನದಲ್ಲಿ ನಿಮ್ಮ ಹಣಕಾಸಿನ ಭಾಗ್ಯದ ಬಗ್ಗೆ ತಿಳಿದುಕೊಳ್ಳಬಹುದು. ಉದಾಹರಣೆಗಾಗಿ ನಿಮ್ಮ ಶುಕ್ರ ಪರ್ವತದ ಏರಿಯಾದಲ್ಲಿ ವರ್ಟಿಕಲ್ ಲೈನ್ಗಳು ಹೆಚ್ಚಾಗಿವೆ ಅಂತ ತಿಳ್ಕೊಳಿ. ಅಂದರೆ ನಿಂತಿರುವಂತಹ ಲೈನ್ಗಳು ನಿಮಗೆ ಹೆಚ್ಚಾಗಿ ನೋಡಲು ಸಿಗುತ್ತವೆ ಅಂತ ಅಂದ್ಕೊಳ್ಳಿ, ಇದು ನಿಮಗೆ ಲಕ್ಕಿ ಆಗಿದೆ. ಅಂದ್ರೆ ಹಣಕ್ಕೆ ಸಂಬಂಧಿಸಿದಂತಹ ವಿಷಯದಲ್ಲಿ ನಿಮಗೆ ಇದು ಲಕ್ಕಿ ಆಗಿರುತ್ತೆ. ಹಣದ ಕೊರತೆ ಯಾವತ್ತಿಗೂ ಆಗೋದಿಲ್ಲ.
ಇಲ್ಲಿ ಕೆರಿಯರ್ನ ಪ್ರಾರಂಭದಲ್ಲಿ ಸ್ವಲ್ಪ ಏರುಪೇರುಗಳು ಕಾಣಬಹುದು. ಆದರೆ ಮುಂದೆ ಸಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯೂ ಸಹ ಸುಧಾರಣೆಗಳು ಬರುತ್ತವೆ. ಮುಂದೆ ಹಣದ ಆಗಮನವು ನಿಮ್ಮ ಜೀವನದಲ್ಲಿ ಆಗುತ್ತದೆ. ಇದು ಒಂದು ಒಳ್ಳೆಯ ಸಂಕೇತ ಆಗಿದ್ದು, ಇದು ನಿಮ್ಮ ಸ್ಟ್ರಾಂಗ್ ರಿಲೇಷನ್ಶಿಪ್ ಅನ್ನು ತೋರಿಸಿಕೊಡುತ್ತದೆ ನಿಮ್ಮ ಲೈಫ್ ಪಾರ್ಟ್ನರ್ ಜೊತೆ, ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ.
ಇನ್ನೂ ಇದರ ವಿರುದ್ಧವಾಗಿ ಈ ರೇಖೆಗಳೇನಾದರೂ ಅಡ್ಡವಾಗಿ ಅಂದ್ರೆ ಹಾರಿಜಂಟಲ್ ಆಗಿ ಇದ್ದರೆ ಅಡ್ಡವಾಗಿ ಇರುವ ಲೈನ್ಗಳು ಏನಾದರೂ ನಿಮಗೆ ನೋಡಲು ಹೆಚ್ಚಾಗಿ ಕಾಣುತ್ತಿದ್ದರೆ ಈ ರೇಖೆಗಳು ನಿಮಗೆ ಸಮಸ್ಯೆಗಳನ್ನು ತಂದೊಡ್ಡಬಹುದು. ಹಣಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಇರಬಹುದು. ಇಲ್ಲಿ ಪೈನಾನ್ಸಿಯಲ್ ಕಂಡೀಶನ್ ತುಂಬ ದುರ್ಬಲವಾಗಿ ಕಾಣುತ್ತಿರುತ್ತದೆ. ಅಂದರೆ ಹಣ ಬಂದರೂ ಬೇಗನೆ ಖರ್ಚಾಗಿ ಬಿಡುತ್ತದೆ ಅಥವಾ ಮನೆಯಲ್ಲಿ ಹಣದ ಸಮಸ್ಯೆಗಳು ಇರುತ್ತವೆ.
ಹಾಗಾಗಿ ಈ ಪ್ರಕಾರದ ಸಮಸ್ಯೆಗಳು ಇಲ್ಲಿ ಕಾಣುತ್ತವೆ. ಇಲ್ಲಿ ಫ್ಯಾಮಿಲಿ ಆಗಲಿ, ಲೈಫ್ ಪಾರ್ಟ್ನರ್ ಆಗಲಿ, ಸ್ನೇಹಿತರೊಡನೆ ಇರುವ ಸಂಬಂಧ ದುರ್ಬಲವಾಗಿ ಕಾಣಬಹುದು. ಹಾಗಾಗಿ ಇಲ್ಲಿ ಸ್ವಲ್ಪ ಎಚ್ಚರದಿಂದ ಮುಂದೆ ಸಾಗಬೇಕಾಗುತ್ತದೆ. ಆಗ ಮಾತ್ರ ನೀವು ಮುಂದೆ ಸಾಗಿ ನಿಮ್ಮ ಫೈನಾನ್ಸಿಯಲ್ ಕಂಡೀಶನ್ ಅನ್ನ ಶಕ್ತಿಶಾಲಿಯನ್ನಾಗಿಸಬಹುದು. ಹಣ ಉಳಿತಾಯ ಮಾಡಲು ಇಲ್ಲಿ ನೀವು ಹೆಚ್ಚಾಗಿ ಪ್ರಯತ್ನ ಮಾಡಬೇಕು. ಖರ್ಚನ್ನು ಸ್ವಲ್ಪ ಕಡಿಮೆ ಮಾಡಿ.
ಇನ್ನು ಮೂರನೆಯ ಸಂಕೇತ ಇದಕ್ಕಾಗಿ ನೀವು ಸ್ನೇಹಿತರೆ ಮತ್ತೆ ಲೈಫ್ ಲೈನ್ ಅನ್ನು ನೋಡಬೇಕು. ಲೈಫ್ ಲೈನ್ ಕೆಲವರ ಕೈಗಳಲ್ಲಿ ಸಿಂಗಲ್ ಆಗಿಯೇ ಇರುತ್ತದೆ. ನಿಮ್ಮ ಕೈಗಳಲ್ಲಿ ದ್ವಿಮುಖಿವಾಗಿಯೂ ಇರಬಹುದು. ಕೆಳಗನೆಯ ಮುಖ ನಿಮ್ಮ ಲೈಫ್ ಲೈನ್ ನಿಂದ ಮತ್ತೊಂದು ಲೈನ್ ಬರುವಂತೆ ಸೇರಿಕೊಂಡರೆ ಕೆಳಗಡೆ ಹೋಗಿ ಅದು ಸೇರಿಕೊಳ್ಳುತ್ತದೆ. ಇಲ್ಲಿ ಇದು ಒಂದು ಮೀನಿನ ಗುರುತು ಆಗುತ್ತದೆ. ಯಾರ ಕೈಗಳಲ್ಲಿ ಈ ರೀತಿಯಾದ ಗುರುತುಗಳು ಇರುತ್ತವೆಯೋ ಅವರ ಜೀವನದಲ್ಲಿ ಅಚಾನಕ್ಕಾಗಿ ಧನ ಪ್ರಾಪ್ತಿಯಾಗುತ್ತದೆ.
ಈ ಧನ ಪ್ರಾಪ್ತಿ ಹೇಗೆ ಆಗುತ್ತದೆ ಅಂದರೆ, ಉದಾಹರಣೆಗಾಗಿ ನೀವು ನೌಕರಿ ಮಾಡುತ್ತಿದ್ದೀರಿ ಅಂದುಕೊಳ್ಳಿ. ಹೆಚ್ಚಾಗಿ ಈ ಗುರುತು ನೌಕರಿ ಮಾಡುವಂತಹ ಜನರಿಗೆ ಲಾಭವನ್ನು ಕೊಡ್ತಾ ಇರುತ್ತೆ. ನೀವು ನೌಕರಿಯನ್ನು ಮಾಡುತ್ತಾ ಕೆಲವು ವರ್ಷಗಳು ಕಳೆದವೆ ಅಂತ ಅಂದುಕೊಳ್ಳಿ. ಒಂದು ವೇಳೆ ನಿಮ್ಮ ಜೀವನದಲ್ಲಿ ಧನಪ್ರಾಪ್ತಿ ಆಗಲಿದೆ ಅಂತ ಅಂದ್ರೆ, ಮೊದಲು ನಿಮಗೆ ಪ್ರಮೋಷನ್ ಸಿಗುತ್ತದೆ. ಅಚಾನಕ್ಕಾಗಿ ಇಂಪ್ರೂ ಆಗಲು ಅವಕಾಶ ಸಿಗುತ್ತದೆ. ಮೇಲಿನಿಂದ ಅಚಾನಕ್ಕಾಗಿ ದನ ಸಂಪತ್ತಿನ ಲಾಭವೂ ಕೂಡ ಆಗಬಹುದು.
ಇದರ ಬಗ್ಗೆ ನಿಮಗೆ ಕಲ್ಪನೆ ಸಹ ಇರುವುದಿಲ್ಲ ಹಾಗಿದ್ದು ನಿಮಗೆ ಧನಪ್ರಾಪ್ತಿ ಆಗಿಬಿಡುತ್ತದೆ. ಈ ಗುರುತು ನಿಮಗೆ ಯಾವಾಗ ಲಾಭವನ್ನು ಕೊಡುತ್ತದೆ ಅಂದ್ರೆ, 30 ವಯಸ್ಸಿಗೂ ಮೊದಲು ಈ ಚಾನ್ಸಸ್ ನಮಗೆ ಕಂಡು ಬರುತ್ತದೆ. ಇಲ್ಲಿ ನಿಮಗೆ ಇದರ ಲಾಭಗಳು ಸಿಗಬಹುದು. ಅಂದ್ರೆ ಕೆರಿಯರ್ನ ಪ್ರಾರಂಭದಲ್ಲಿಯೇ ನಿಮಗೆ ಈ ಗುರುತಿನಿಂದ ಲಾಭವನ್ನು ಪಡೆಯಬಹುದು. ಆದ್ರೆ ಒಂದು ಮಾತನ್ನು ಗಮನದಲ್ಲಿ ಇಟ್ಟುಕೊಳ್ಳಿ ಗುರುತಿನಲ್ಲಿ ಈ ಪ್ರಕಾರದಲ್ಲಿ ಬೇರೆ ರೇಖೆಗಳು ಪ್ರವೇಶ ಮಾಡ್ತಾ ಇರಬಾರದು.
ಒಂದು ವೇಳೆ ಈ ರೀತಿ ಕಂಡು ಬರ್ತಾ ಇದ್ರೆ ಅಥವಾ ಇದರಲ್ಲಿ ಗ್ಯಾಪ್ ಗಳು ಕಂಡು ಬರ್ತಾ ಇದ್ರೆ ಈ ಗುರುತು ನಿಮಗೆ ಲಾಭವನ್ನು ಕೊಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಈ ಗುರುತಿನಿಂದ ನಿಮಗೆ ಪ್ರಾಪರ್ ಲಾಭಗಳು ಸಿಗಬೇಕಂದ್ರೆ ದೋಷದಿಂದ ಮುಕ್ತರಾಗಿರೋದು ಇಂಪಾರ್ಟೆಂಟ್ ಇದೆ. ಇದಾದ ನಂತರ ನಾಲ್ಕನೆಯ ಸಂಕೇತ. ಇದಕ್ಕಾಗಿ ಕೆಲವು ರೇಖೆಗಳನ್ನು ಇದರಲ್ಲಿ ನೀವು ಆಡ್ ಮಾಡಬೇಕಾಗುತ್ತೆ. ಎಲ್ಲಕ್ಕಿಂತ ಮೊದಲನೇ ವಿಷಯ ಇಲ್ಲಿ ನಿಮ್ಮ ಮೈಂಡ್ ಲೈನ್ ಬರುತ್ತದೆ.
ಇದು ನಿಮ್ಮ ಮೆದುಳಿನ ಲೈನ್ ಆಗಿರುತ್ತದೆ. ಇಲ್ಲಿ ನೀವು ಮತ್ತೊಂದು ಲೈನ್ ಆಡ್ ಮಾಡಬೇಕಾಗುತ್ತದೆ. ಇದನ್ನೇ ಭಾಗ್ಯ ರೇಖಾ ಅಂತ ನಾವು ಕರೆಯುತ್ತೇವೆ. ಈ ಭಾಗ್ಯ ಅಡ್ಡವಾಗಿಯೂ ಇರಬಹುದು ಅಥವಾ ಉದ್ದವಾಗಿಯೂ ಇರಬಹುದು. ಇಲ್ಲಿ ಎರಡು ರೇಖೆಗಳಿಗೆ ಭಿನ್ನವಾದ ಮಹತ್ವವಿದೆ. ಅದರ ಬಗ್ಗೆನೂ ತಿಳಿಸಿಕೊಡ್ತೀವಿ. ಈಗ ಕೇತುವಿನಿಂದ ಶುರುವಾಗಿ ಶನಿ ಪರ್ವತದವರಿಗೆ ಬರುವಂತಹ ರೇಖೆಯ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ಮತ್ತೊಂದು ಲೈನ್ ಕೆಳಭಾಗ ದಿಂದ ಶುರುವಾಗಿ ನಿಮ್ಮ ಮೈಂಡ್ ರೇಖೆಗೆ ಕೂಡಿಕೊಳ್ಳುತ್ತದೆ.
ಸ್ನೇಹಿತರೆ ಇಲ್ಲಿ ಎಲ್ಲಾ ರೇಖೆಗಳು ಸೇರಿಕೊಂಡು ಮನಿ ಟ್ರಯಾಂಗಲ್ ಅನ್ನು ರೆಡಿ ಮಾಡುತ್ತವೆ. ಇದು ಒಂದು ಯಾವ ರೀತಿಯ ಸೈನ್, ಗುರುತು ಆಗಿದೆ ಅಂದ್ರೆ ಇದು ನಿಮ್ಮ ಜೀವನದಲ್ಲಿ ದೊಡ್ಡದಾಗಿರುವ ಧನ ಲಾಭದ ಯೋಗವನ್ನು ನಿರ್ಮಿಸುತ್ತವೆ. ಹಲವು ಜನರು ಜೀವನದಲ್ಲಿ ದೊಡ್ಡದಾಗಿರುವ ಧನ ಲಾಭವನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೆ.
ತಮ್ಮ ಇಚ್ಛೆಗಳನ್ನು ಈಡೇರಿಸಿಕೊಂಡು ದೊಡ್ಡದಾಗಿರುವ ಧನ ಪ್ರಾಪ್ತಿಗಾಗಿ ಕಾಯ್ತಾ ಇರ್ತಾರೆ. ಸ್ನೇಹಿತರೆ ಒಂದು ವೇಳೆ ಈಗ ಇವು ನಿಮ್ಮ ಕೈಗಳಲ್ಲಿ ರೆಡಿಯಾಗ್ತಾ ಇದ್ರೆ ಇದನ್ನು ದೊಡ್ಡದಾಗಿರುವ ಲಾಭದ ಸೈನ್ ಅಂತ ಹೇಳುತ್ತಾರೆ. ಖಂಡಿತವಾಗಿ ನಿಮ್ಮ ಜೀವನದಲ್ಲಿ ಈ ರೀತಿ ಇದ್ದಾಗ ಧನಪ್ರಾಪ್ತಿಯಾಗುತ್ತದೆ. ಆದರೆ ಒಂದು ಮಾತನ್ನ ಗಮನದಲ್ಲಿಟ್ಟುಕೊಳ್ಳಿ. ಯಾವಾಗ ನೀವು ವ್ಯಾಪಾರ ಅಥವಾ ಬಿಸಿನೆಸ್ ನಂತ ಫೀಲ್ಡ್ ನಲ್ಲಿ ಇರುತ್ತೀರೋ ಆಗ ಮಾತ್ರ ಇದು ನಿಮಗೆ ಲಾಭವನ್ನು ಕೊಡುತ್ತವೆ
ಅಥವಾ ನೀವು ಸ್ವಂತವಾಗಿ ಏನನ್ನಾದರೂ ಕಾರ್ಯವನ್ನ ಮಾಡ್ತಾ ಇರಬೇಕು. ಅದೇ ನೀವು ಜಾಬ್ ಮಾಡ್ತಾ ಇದ್ರೆ, ನೌಕರಿ ಮಾಡ್ತಾ ಇದ್ರೆ ಅಲ್ಲಿ ಅಷ್ಟೊಂದು ಲಾಭಗಳು ಸಿಗೋದಿಲ್ಲ. ಇದರ ಬಗ್ಗೆ ಆಯ್ತು ಇನ್ನು ಎರಡನೆಯ ರೇಖೆಯ ಬಗ್ಗೆ ತಿಳಿದುಕೊಳ್ಳೋಣ. ಅಂದ್ರೆ ನಿಮ್ಮ ಭಾಗ್ಯ ರೇಖೆಯ ಚಂದ್ರ ಪರ್ವತದಿಂದ ಬರ್ತಾ ಇದ್ರೆ ಈ ಪ್ರಕಾರದಲ್ಲಿ ಶನಿ ಪರ್ವತದ ತನಕ ಹೋಗುತ್ತದೆ.
ಆನಂತರ ಇದರ ಮೇಲೆ ಈ ರೀತಿ ಮನಿ ಟ್ರೈನ್ಗಲ್ ಸೈನ್, ಗುರುತು ರೆಡಿ ಆಗಿರುತ್ತೆ. ಈ ರೀತಿಯ ಗುರುತಿದ್ದಾಗ ಧನಪ್ರಾಪ್ತಿಗಾಗಿ ನಿಮಗೆ ಸ್ವಲ್ಪ ಸಮಯ ಹಿಡಿಯಬಹುದು. ದೊಡ್ಡದಾಗಿರುವ ಧನ ಲಾಭ ಖಂಡಿತವಾಗಿಯೂ ಆಗುತ್ತದೆ, ಆದರೆ ಇಲ್ಲಿ ಸ್ವಲ್ಪ ಸಮಯ ಹಿಡಿಯುತ್ತದೆ. ಈ ರೀತಿಯ ಲಾಭಗಳು ನಿಮಗೆ ಬಿಸಿನೆಸ್ ನಲ್ಲಿ ಕಡಿಮೆ. ಒಂದು ವೇಳೆ ನೀವು ವಿದೇಶಕ್ಕೆ ಹೋಗಲು ಇಷ್ಟಪಡುತ್ತಿದ್ದರೆ ಅಥವಾ ನೀವು ಪ್ರಯಾಣ ಮಾಡುವಂತಹ ಕೆಲಸಗಳನ್ನು
ನೀವು ಹೆಚ್ಚಾಗಿ ಮಾಡ್ತಾ ಇದ್ರೆ ಅಂತ ವಿಷಯಗಳಲ್ಲಿ ನಿಮಗೆ ಹೆಚ್ಚಿನ ಲಾಭವನ್ನ ಇದು ಕೊಡುತ್ತದೆ. ಸ್ನೇಹಿತರೆ ಈಗ ಒಂದು ಮಾತನ್ನ ಗಮನದಲ್ಲಿಟ್ಟುಕೊಳ್ಳಿ. ಒಂದು ವೇಳೆ ನಿಮಗೆ ಈ ಗುರುತಿನಿಂದ ಲಾಭ ಸಿಗ್ಬೇಕು ಅಂದ್ರೆ ದೋಷ ಮುಕ್ತರಾಗೋದು ತುಂಬಾ ಇಂಪಾರ್ಟೆಂಟ್ ಇದೆ. ಈ ಮಾತಿನ ಅರ್ಥ ಇವುಗಳೆಂದರೆ ಈ ಪ್ರಕಾರದ ರೇಖೆಗಳು ಪ್ರವೇಶ ಮಾಡ್ತಾ ಇದ್ರೆ, ಅಂದ್ರೆ ಇವುಗಳಲ್ಲಿ ಅಡಚಣೆ ತೊಂದ್ರೆ ಮಾಡ್ತಾ ಇದ್ರೆ ಈ ಮಾತಿನ ಅರ್ಥ ಒಂದು ವೇಳೆ ಇವುಗಳಲ್ಲಿ
ಯಾವುದಾದರೂ ರೇಖೆಗಳಲ್ಲಿ ಗ್ಯಾಪ್ ಇದ್ದರೂ ಸರಿ ಗುರುತುಗಳು ನಿಮಗೆ ಪ್ರಾಪರ್ ಆಗಿ ಲಾಭವನ್ನು ಕೊಡೋದಿಲ್ಲ. ಸ್ನೇಹಿತರೆ ಹಾಗಾಗಿ ಈ ಗುರುತುಗಳು ಕಂಪ್ಲೀಟ್ ಆಗಿರೋದು ತುಂಬಾ ಇಂಪಾರ್ಟೆಂಟ್ ಇದೆ. ಈಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿರಬಹುದು, ಈ ಗುರುತಿನಿಂದ ಲಾಭ ಯಾವಾಗ ಸಿಗುತ್ತದೆ ಅನ್ನೋದಾಗಿದೆ. ಇಲ್ಲಿ ನೀವು ಯಾವಾಗ ನಿಮ್ಮ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿರ್ತೀರ, ಆ ಕಾರ್ಯ ಶುರುವಾಗಿ 5 ರಿಂದ 7 ವರ್ಷದ ನಂತರ ಈ ಗುರುತು ನಿಮಗೆ ಲಾಭವನ್ನು ಕೊಡಲು ಸಾಧ್ಯವಿದೆ.
ಇನ್ನು ಐದನೆಯ ಸಂಕೇತ ಇದಕ್ಕಾಗಿ ಮರಳಿ ನೀವು ನಿಮ್ಮ ಭಾಗ್ಯ ರೇಖೆಯನ್ನು ಆಡ್ ಮಾಡಬೇಕು. ಇದು ನಿಮ್ಮ ಶನಿ ಪರ್ವತದತ್ತ ಹೋಗ್ತಾ ಇರುತ್ತೆ. ಇದಾದ ನಂತರ ಇದರಲ್ಲಿ ಒಂದು ಹಾರ್ಟ್ ಲೈನನ್ನ ಆಡ್ ಮಾಡೋಣ. ಇದನ್ನ ಹೃದಯ ರೇಖೆ ಅಂತಾನೂ ಕರೆಯುತ್ತಾರೆ. ಸ್ನೇಹಿತರೆ ನಿಮ್ಮ ಅಂಗೈಯಲ್ಲಿ ಸಹ ಈ ತರ ಗುರುತು ಇರಬಹುದು. ಇದರಲ್ಲಿ ಹಾರ್ಟ್ ಲೈನ್ ಇಂದ ಈ ರೀತಿ ಒಂದು ಚಿಕ್ಕ ಗೆರೆ ಬಂದು ಮೈಂಡ್ ಲೈನ್ ಗೆ ಬಂದು ಕನೆಕ್ಟ್ ಆಗುತ್ತದೆ. ಇದರಿಂದ ಇಲ್ಲಿ ಕ್ರಾಸ್ನ ಗುರುತು ಆಗುತ್ತದೆ.
ಇದನ್ನು ಎಕ್ಸ್ನ ಸೈನ್ ಅಂತಾನೂ ಕರೆಯುತ್ತಾರೆ. ಈ ತರ ಭಾಗ್ಯ ರೇಖೆಯ ಯೋಗದಾನದಿಂದ ರೆಡಿ ಆದಂತ ಈ ಕ್ರಾಸ್ ಸೈನ್ ಆ ಜನರಿಗಾಗಿ ತುಂಬಾನೇ ಭಾಗ್ಯಶಾಲಿಯಾಗಿದೆ. ತಮ್ಮ ಮಲಗಿಕೊಂಡಿರುವ ಅದೃಷ್ಟ ಎದ್ದೇಳಲಿ ಅಂತ ಕೆಲವರು ಇಷ್ಟಪಡುತ್ತಾರೆ ಅಥವಾ ಅವರು ಸ್ವಲ್ಪ ಸ್ಟ್ರಗಲ್ ಮಾಡ್ತಾ ಇರ್ತಾರೆ, ಮುಂದೆ ಸಾಗಿ ಯಶಸ್ಸನ್ನ ಪಡೆದುಕೊಳ್ಳಲು ಇಷ್ಟ ಪಡುತ್ತಿರುತ್ತಾರೆ, ದೊಡ್ಡದಾಗಿರುವ ಯಶಸ್ಸನ್ನು ಗಳಿಸಲು ಇಷ್ಟ ಪಡ್ತಾ ಇರ್ತಾರೆ. ಆದರೆ ಅವರ ಭಾಗ್ಯೋದಯ ಆಗ್ತಾ ಇರೋದಿಲ್ಲ.
ಒಂದು ವೇಳೆ ನಿಮ್ಮ ಅಂಗೈನಲ್ಲಿ ಕ್ರಾಸ್ ಸೈನ್ ಇದ್ದರೆ ಖಂಡಿತವಾಗಿ ನಿಮ್ಮ ಭಾಗ್ಯೋದಯಾಗುತ್ತದೆ. ಆದ್ರೆ ಇಲ್ಲಿ ಯಾವಾಗ ನಿಮ್ಮ ಭಾಗ್ಯವು ನಿಮಗೆ ಸಾತ್ ಕೊಡುತ್ತದೆ ಅನ್ನೋದನ್ನ ತಿಳಿದುಕೊಳ್ಳೋದು ತುಂಬಾನೇ ಇಂಪಾರ್ಟೆಂಟ್ ಇದೆ. ಸ್ನೇಹಿತರೆ, ಬಂಧುಗಳೇ ನಿಮ್ಮ ಅಂಗೈಯಲ್ಲಿ ಈ ಕ್ರಾಸ್ ಸೈನ್ ಇದ್ದರೆ 25 ರಿಂದ 30 ವರ್ಷದ ಒಳಗಡೆ ನಿಮಗೆ ಇದು ಭಾಗ್ಯವನ್ನು ಕೊಡಬಹುದು ಅಥವಾ ನೀವು ಯಾವ ಕೆಲಸಗಳನ್ನು ಮಾಡ್ತಾ ಇರ್ತೀರಾ ಅವುಗಳಲ್ಲಿ ಯಶಸ್ಸನ್ನ ಗಳಿಸುವಂತಹ ಅವಕಾಶಗಳು ಸಿಗಬಹುದು.
ಆದರೆ ನಿಮ್ಮಲ್ಲಿ ಕೆಲವು ಜನರ ವಯಸ್ಸು 30 ಕ್ಕಿಂತ ಹೆಚ್ಚಿಗೆ ಆಗಿರಬಹುದು. ನಿಮ್ಮ ಅಂಗೈಯಲ್ಲಿ ಕ್ರಾಸ್ ನ ಸೈನ್ ಇರಬಹುದು. ಇದಕ್ಕಾಗಿ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಬಂದಿರಬಹುದು. ಇಲ್ಲಿ ನಮಗೆ ಇದರ ಯಾವುದೇ ಲಾಭ ಸಿಕ್ಕಿಲ್ಲ ಅಂತ ಕೆಲವರು ಹೇಳ್ತಾ ಇರಬಹುದು. ಹಾಗೆ ಪ್ರಾಪರ್ ಆಗಿರುವಂತ ಗೈಡೆನ್ಸ್ ಸಿಕ್ಕಿಲ್ಲ ಅನ್ಸುತ್ತೆ ಅಥವಾ ಅವಕಾಶ ನಿಮ್ಮ ಕೈಯನ್ನು ಬಿಟ್ಟು ಹೋಗಿರಬಹುದು ಇಲ್ಲಿ.
ಚಿಂತೆ ಮಾಡಬೇಡಿ, ಈ ಗುರುತು ನಿಮಗೆ ಮರಳಿ ಅವಕಾಶವನ್ನು ಕೊಡುತ್ತದೆ. ಇಲ್ಲಿ 35 ವರ್ಷದ ನಂತರ ಮರಳಿ ಅವಕಾಶ ಸಿಗಬಹುದು. ಅಂದ್ರೆ ಪ್ರತಿ ಐದು ವರ್ಷ ಗ್ಯಾಪ್ ಆದ ನಂತರ ಈ ಗುರುತು ನಿಮಗೆ ಅವಕಾಶಗಳನ್ನು ಕೊಡುತ್ತದೆ. ಇನ್ನೊಂದು ತುಂಬಾ ಇಂಪಾರ್ಟೆಂಟ್ ಆಗಿರುವ ವಿಷಯವನ್ನು ಯಾವತ್ತಿಗೂ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹಸ್ತ ರೇಖೆಯ ಶಾಸ್ತ್ರ ಯಾವತ್ತಿಗೂ 100% ಆಕ್ಯುರೇಟ್ ಆಗಿರೋದಿಲ್ಲ. ಕೆಲವೊಮ್ಮೆ ಕೆಲವರು ಇದನ್ನು ನಂಬುತ್ತಾರೆ, ಕೆಲವರು ಇದನ್ನ ನಂಬೋದಿಲ್ಲ.