ತಾಳಿ ಯಾಕೆ ಧರಿಸಬೇಕು?

0

ವಿವಾಹಿತ ಮಹಿಳೆ ತಾಳಿ ಧರಿಸದಿದ್ದರೆ ಏನಾಗುತ್ತದೆ?ತಾಳಿ ಯಾಕೆ ಧರಿಸಬೇಕು? ಒಬ್ಬ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು ತಾಳಿ ಹಣೆಬೊಟ್ಟು,ಕಾಲುಂಗುರ ಮೂಗುತಿ, ಬಳೆ ಇವು ಇಷ್ಟು ಓರ್ವ ವಿವಾಹಿತ ಮಹಿಳೆ ಹಾಕುವ ಆಭರಣ ಹಾಗಾಗಿ ಆಕೆಯನ್ನು ಮುತ್ತೈದೆ ಎಂದು ಕರೆಯುತ್ತಾರೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಅರ್ಥವಿದೆ ಹಾಗೂ ಅದರದೇ ಆದ ಮಹತ್ವ ಕೂಡ ಇದೆ. ಹಾಗಾಗಿ ಮುತ್ತೈದೆ ತಾಳಿಯನ್ನು ಯಾಕೆ ಧರಿಸಬೇಕು

ತಾಳಿ ಧರಿಸುವುದರ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಸಿಕೊಡುತ್ತೇವೆ ಸೌಂದರ್ಯ ಲಹರಿಯಲ್ಲಿ ತಾಳಿಯ ಮಹತ್ವದ ಬಗ್ಗೆ ತಿಳಿಸಲಾಗಿದೆ. ಸೌಂದರ್ಯ ಲಹರಿ ಪ್ರಕಾರ ತಾಳಿಯಲ್ಲಿ ಬರುವ ಚಿನ್ನ ಮತ್ತು ಕಪ್ಪು ಮಣಿಯನ್ನು ಶಿವಪಾರ್ವತಿಗೆ ಹೋಲಿಸಲಾಗಿದೆ. ಕರಿಮಣಿ ಎಂದರೆ ಶಿವ, ಚಿನ್ನ ಅಥವಾ ಅರಿಶಿನ ಪಾರ್ವತಿ ಎಂದು ಹೇಳಲಾಗಿದೆ.
ಹಿಂದೂ ಧರ್ಮದ ಕಥೆಗಳ ಪ್ರಕಾರ ಕೃಷ್ಣರಾಧೆ, ರಾಮಸೀತೆ ಇವರೆಲ್ಲ ಸಫಲ ವೈವಾಹಿಕ ಜೀವನವನ್ನು ನಡೆಸಿಲ್ಲ ಆದರೇ ಶಿವಪಾರ್ವತಿ ಮಾತ್ರ ಸಫಲ ವೈವಾಹಿಕ ಜೀವನವನ್ನು ನಡೆಸಿದ್ದಾರೆ.

ಹಾಗಾಗಿ ಇವರಿಬ್ಬರ ಆಶೀರ್ವಾದವಾಗಿ ತಾಳಿಯನ್ನು ಧರಿಸಲಾಗುತ್ತದೆ. ಪತ್ನಿ ತಾಳಿ ಧರಿಸುವುದರಿಂದ ಪತಿಯ ಆಯುಷ್ಯ ಗಟ್ಟಿಯಾಗಿರುತ್ತದೆ. ಆತನಿಗೆ ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ ಎನ್ನುವ ನಂಬಿಕೆ ಇದೆ.
ವಿವಾಹದ ಸಂದರ್ಭದಲ್ಲಿ ಮಂತ್ರ ಹೇಳಿ ಮಂಗಳಸೂತ್ರವನ್ನು ಕಟ್ಟುವುದರಿಂದ ಅದರಲ್ಲಿ ದೈವಿಕ ಶಕ್ತಿ ಇರುತ್ತದೆ. ಈ ದೈವಿಕ ಶಕ್ತಿಯ ಪ್ರಭಾವದಿಂದಾಗಿ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಯ ಪ್ರಭಾವ ಉಂಟಾಗುವುದಿಲ್ಲ ಎಂಬ ನಂಬಿಕೆಯೂ ಹಿಂದೂ ಧರ್ಮದಲ್ಲಿದೆ.

ಅಲ್ಲದೇ ತಾಳಿಯಲ್ಲಿ ಪಂಚತತ್ವಗಳು ಇದ್ದು ಪತಿಪತ್ನಿಯ ಸಂಬಂಧ ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿದೆ ತಾಳಿ ಅನ್ನುವುದು ವಿವಾಹಿತ ಮಹಿಳೆಗೆ ರಕ್ಷಾ ಕವಚವಿದ್ದಂತೆ ಇದು ಆಕೆಯ ಕುತ್ತಿಗೆಯಲ್ಲಿ ಇರುವ ತನಕ ದುಷ್ಟಶಕ್ತಿಗಳು ದುಷ್ಟರ ಕಣ್ಣು ಆಕೆಯ ಮೇಲೆ ಬೀಳುವುದಿಲ್ಲ ಇದರಿಂದ ಅಕೆ ಸುರಕ್ಷಿತವಾಗಿ ಇರುತ್ತಾಳೆ ಹಾಗಾಗಿ ವಿವಾಹಿತ ಹೆಣ್ಣು ತಾಳಿಯನ್ನು ಧರಿಸಲೇಬೇಕು.

ಆದರೇ ಇಂದು ಹಲವು ಹೆಣ್ಣು ಮಕ್ಕಳು ಫ್ಯಾಷನ್ ಹೆಸರಿನಲ್ಲಿ ಮಂಗಳಸೂತ್ರವನ್ನಾಗಲೀ ಕಾಲುಂಗುರುವನ್ನಾಗಲೀ ಹಣೆಗೆ ಕುಂಕುಮ ಧರಿಸುವುದನ್ನಾಗಲೀ ಬಿಟ್ಟು ಬಿಟ್ಟಿದ್ದಾರೆ. ಇದು ಗಂಭೀರವಾದ ವಿಷಯ. ತಾಳಿಯೂ ಅಲಂಕಾರದ ವಸ್ತುವಲ್ಲ ಅದು ತುಂಬಾ ಪವಿತ್ರವಾದ ವಸ್ತು ಎಂಥಾ ಕಾಮುಕ ಪುರುಷನಾದರೂ ತಾಳಿಯನ್ನು ನೋಡಿದ ಕೂಡಲೇ ತಲೆ ತಗ್ಗಿಸಿ ಕೈಮುಗಿಯುವಂತಹ ಮಹತ್ವ ತಾಳಿಗೆ ಇದೆ. ಜನಿವಾರ ಮತ್ತು ಶಿವದಾರ ಹೇಗೆ ಪವಿತ್ರವೋ ಅದೇ ರೀತಿ ತಾಳಿಯೂ ಸ್ತ್ರೀಯರಿಗೆ ಪವಿತ್ರವಾದದ್ದು.

ಕೈಗೆ ಬಳೆ ಭಾರವಾಗುತ್ತದೆ ಎಂದು ಬಳೆ ತೆಗೆದು ಕಾಲಿಗೆ ಕಾಲುಂಗುರ ಒತ್ತುತ್ತದೆ ಎಂದು ಕಾಲುಂಗುರ ತೆಗೆದು ಹಣೆಗೆ ಕುಂಕುಮ ಹಚ್ಚಿದರೆ ಗೌರಮ್ಮನ ತರ ಕಾಣುತ್ತೇನೆ ಎಂದು ಕುಂಕುಮವನ್ನು ಅಳಿಸಿ ಮಲಗುವಾಗ ಕೊರಳಿಗೆ ತಾಳಿ ಚುಚ್ಚುತ್ತದೆ ಎಂದು ತಾಳಿಯನ್ನು ತೆಗೆದು ಹಾಕಿ ಗಂಡ ಬದುಕಿರುವಾಗಲೇ ವಿಧವೆಯಾದರೆ ಸುಮಂಗಲಿ ಎಂಬ ಪದಕ್ಕೆ ಅರ್ಥವೇನು? ಒಟ್ಟಿನಲ್ಲಿ ಮುತ್ತೈದೆ ಎಂದ ಮೇಲೆ ತಾಳಿಯನ್ನು ಧರಿಸುವುದು ತುಂಬಾ ಮುಖ್ಯ ತಾಳಿಯಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿ ಇರುತ್ತದೆ ಆ ಧನಾತ್ಮಕ ಶಕ್ತಿಯು ಒಬ್ಬ ಮುತ್ತೈದೆಗೆ ತುಂಬಾ ಮುಖ್ಯ ಹಾಗಾಗಿ ತಾಳಿಯನ್ನು ಶೋಕಿಗಾಗಿ ತೆಗೆದಿಡದೆ ಗಂಡ ಬದುಕಿರುವಾಗಲೇ ಅದನ್ನು ಅಪಮಾನಿಸಬೇಡಿ.

Leave A Reply

Your email address will not be published.