ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು

ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪ ಎಂದು ಕೂಡ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು. ಎರಡು ಕಡೆ ಆನೆ ಇರಬೇಕು.
ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ, ಕಚೇರಿಗಳಲ್ಲಿ, ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೇ ವಿಶೇಷವಾದ ಫಲ ದೊರೆಯುತ್ತದೆ.

ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು.ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು.ಒಂದು ಮಣೆ ಮಾತ್ರ, ಇತ್ತಾಳೆ, ಬೆಳ್ಳಿ ತಟ್ಟೆಯ ಮೇಲೆ ಇಡಬೇಕು. ಅಷ್ಟದಳ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು. ಅದರ ಮೇಲೆ ದೀಪ ಇಡಬೇಕು. ನಂತರ ಅರಿಶಿನ ಕುಂಕುಮದಿಂದ ಪೂಜೆ ಮಾಡಬೇಕು.

ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡಬೇಕು. ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ದೀಪ ಹಚ್ಚಬೇಕು. ಕಾಮಾಕ್ಷಿ ದೀಪವನ್ನು ನೇರವಾಗಿ ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದ ಬತ್ತಿಯಿಂದಾಗಲಿ ನೇರವಾಗಿ ಬತ್ತಿ ಹಚ್ಚಬಾರದು, ಈ ತರಹ ಹಚ್ಚಿದರೆ ಶ್ರೀ ಲಕ್ಷ್ಮಿದೇವಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ತುಪ್ಪದಲ್ಲಿ ನೆನೆಸಿರುವ ಬತ್ತಿಯಿಂದ ಅಥವಾ ತುಳಸಿ ಕಾಷ್ಟಗಳಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.

ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು. ದೀಪ ಅತೀ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯಬಾರದು. ಸಾಧಾರಣ ಮಟ್ಟದಲ್ಲಿ ಉರಿಯಬೇಕು. ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಗೋಕುಲದಂತೆ ಇರುತ್ತದೆ. ಮನೆ ಮನಸ್ಸು ಸಂತೋಷದಿಂದ ಇರುತ್ತದೆ.

ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು. ಎಳ್ಳೆಣ್ಣೆಯಿಂದ, ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು. ಈ ದೀಪವನ್ನು ಗೋದೂಳಿ ಸಮಯದಲ್ಲಿ ಹಚ್ಚಬೇಕು. ಇದರಿಂದ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಶಾಸ್ತ್ರ ಪಂಡಿತರು. ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ನೆಮ್ಮದಿ ಪ್ರಾಪ್ತಿಯಾಗುತ್ತದೆ.

ಕಾಮಾಕ್ಷಿ ದೀಪ ಮುಕ್ ಆಗಿರಬಾರದು. ಲಕ್ಷ್ಮಿಯ ಮುಖ ಕಳೆಯಾಗಿ ನೀಟಾಗಿ ಮೂಡಿರಬೇಕು. ದೀಪದಲ್ಲಿ ಯಾವುದೇ ಕಲೆ ಇರಬಾರದು. ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು. ಯಾರಿಗೂ ಉಡುಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲೇ ಪ್ಯಾಕ್ ಮಾಡಿಸಿ ಅದನ್ನು ಕೊಡಿ.

ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು. ನೀವು ಕೊಟ್ಟಷ್ಟು ಲಕ್ಷ್ಮಿ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮಿ ಕಟಾಕ್ಷ ಉಂಟಾಗುತ್ತದೆ. ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಬಳಸಬಾರದು. ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕಬೇಕು. ಶುದ್ಧವಾದ ಬಟ್ಟೆ ಪೇಪರ್ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ. ಯಾವುದೇ ಕಾರಣಕ್ಕೂ ಮಂಗಳವಾರ,

ಶುಕ್ರವಾರ ದೀಪವನ್ನು ಶುದ್ಧೀಕರಣ ಮಾಡಬಾರದು. ಏಕೆಂದರೆ ಲಕ್ಷ್ಮಿ ಅಲ್ಲಿಂದ ಕಾಲು ತೆಗೆಯುತ್ತಾಳೆ ಎಂದು ಹಿರಿಯರು ಹೇಳುತ್ತಾರೆ. ಯಾವತ್ತಿಗೂ ಒಂಟಿ ದೀಪ ಒಂಟಿ ಬತ್ತಿ ಇಡಬಾರದು. ಒಂದು ದೀಪಕ್ಕೆ ಎರಡು ಬತ್ತಿ ಅಥವಾ ಎರಡು ದೀಪಕ್ಕೆ ಬತ್ತಿ ಹಚ್ಚಿ ಇಡಬಹುದು.

ಕಾಮಾಕ್ಷಿ ದೀಪವನ್ನು ದುಡ್ಡಿನ ಸಮಸ್ಯೆ ಇರುವವರು ಆರೋಗ್ಯ ಸಮಸ್ಯೆ ಇರುವವರು ಎಷ್ಟೇ ಪ್ರಯತ್ನ ಪಟ್ಟರೂ ಕೆಲಸ ಕಾರ್ಯ ಮಾಡಿದರು ಕೈ ಹತ್ತುತ್ತ ಇಲ್ಲ ಎನ್ನುವವರು ದಾಂಪತ್ಯದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸ್ವಂತ ಉದ್ಯೋಗದಲ್ಲಿ ಏಳಿಗೆಗಾಗಿ ಕಾಮಾಕ್ಷಿ ದೀಪವನ್ನು ಹಚ್ಚಬೇಕು. ಗೋದೂಳಿ ಸಮಯದಲ್ಲಿ ಹಚ್ಚುವುದರಿಂದ ನಿಮ್ಮಲ್ಲಿರುವ ದಾರಿದ್ರ್ಯ ದೂರವಾಗುತ್ತದೆ.

Leave a Comment