ಬೆಟ್ಟದಷ್ಟು ಸಾಲ ಕರಗುತ್ತಿಲ್ಲವೆ

ನಾವು ಈ ಲೇಖನದಲ್ಲಿ ಸಾಲಕ್ಕೆ ಇರುವ ಐದೂ ಸೂತ್ರಗಳ ಬಗ್ಗೆ ತಿಳಿಯೋಣ . ಬೆಟ್ಟದಷ್ಟು ಇರೋ ಸಾಲ ಕಗುತ್ತಿಲ್ಲವೇ ? ಈ ಐದು ಸೂತ್ರಗಳು ಬದುಕನ್ನು ಬದಲಿಸಬಲ್ಲವು . . .! ಮಿತಿಮೀರಿ ಸಾಲ ಮಾಡಿದರೆ , ಬದುಕು ಕಷ್ಟ ಆಗುತ್ತದೆ . ಸಾಲ ಮಾಡುವುದು ತಪ್ಪಲ್ಲ . ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸದೇ ಜೀವನವೇ ನರಕವಾಗಿ ಬಿಡುತ್ತದೆ . ಸಾಲ ಕೊಟ್ಟವರು ಮನೆ ಬಾಗಿಲಿಗೆ ಬಂದು ನಿಲ್ಲುತ್ತಾರೆ .

ಸಾಲ ಮಾಡಿದ ದುಡ್ಡು ಕೈ ಹಿಡಿದರೆ ಅದೃಷ್ಟ . ಒಂದು ವೇಳೆ ಕೈಕೊಟ್ಟರೆ ಅಷ್ಟೇ ಕಷ್ಟ . ಬಹುತೇಕ ಜನರ ಬಾಳಲ್ಲಿ ಆಗುವುದು ಇದೆ . ಈ ಕೆಲವು ಸೂತ್ರಗಳನ್ನು ಪಾಲನೆ ಮಾಡಿದರೆ , ಸಾಲದಿಂದ ಮುಕ್ತಿಯನ್ನು ಪಡೆಯಬಹುದು . ಮಾಡುವಂತಹ ಕೆಲಸದಲ್ಲಿ ಭಗವಂತನ ಕೃಪಾಕಟಾಕ್ಷ ಇದ್ದರೆ , ಆಗ ಮಾತ್ರ ಸರ್ವ ಸಂಕಷ್ಟ ದೂರ ಆಗುವುದು .

1 . ಸಾಲದಿಂದ ಕಷ್ಟ ಅನುಭವಿಸುವವರಿಗೆ ಆಂಜನೇಯ ಸ್ವಾಮಿಯೇ ದಿಕ್ಕು . ಸಾಲದಲ್ಲಿ ಸಿಲುಕಿ ಕೊಂಡಿದ್ದರೆ , ಮತ್ತು ಭೂಮಿ ವಿಷಯದಲ್ಲಿ ಸಿಲುಕಿ ಕೊಂಡಿದ್ದರೆ , ಪ್ರತಿ ಶನಿವಾರ ಅಥವಾ ಮಂಗಳವಾರ ಆಂಜನೇಯನನ್ನು ಭಕ್ತಿ ಭಾವದಿಂದ ಪೂಜೆ ಮಾಡಿ . ಎರಡು ದಿನ ಆಂಜನೇಯನಿಗೆ ಹಳದಿ ಸಿಂಧೂರ ಹಿಟ್ಟು , ಹನುಮಾನ್ ಚಾಲೀಸ್ ಅನ್ನು ಪಠಿಸಿದರೆ ಸಾಲದಿಂದ ನಿಧಾನವಾಗಿ ಮುಕ್ತಿಯನ್ನು ಹೊಂದಬಹುದು .

2 . ಮಂಗಳವಾರದಂದು ಶಿವನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಹಾಲು ಮತ್ತು ನೀರಿನಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು . ಭಗವಂತನ ಮುಂದೆ ನಿಂತು ” ಓಂ ಋಣ ಮುಕ್ತೇಶ್ವರ ಮಹಾ ದೇವಾಯ ನಮಃ ” ಎಂದು ಕನಿಷ್ಠ 108 ಬಾರಿ ಆದರೂ ಜಪಿಸಬೇಕು . ಜೊತೆಗೆ ಸೋಮವಾರ ಪ್ರದೋಷ ಪೂಜೆಗಳು ಶಿವನಿಗೆ ಅತ್ಯಂತ ಪ್ರಿಯ ಮತ್ತು ಪರಿಣಾಮಕಾರಿ ಕೂಡ ಹೌದು .

3 . ಬುಧವಾರದ ದಿನ ಗೋವುಗಳಿಗೆ ಒಂದೂವರೆ ಕೆಜಿ ಹೆಸರು ಕಾಳನ್ನು ಬೇಯಿಸಿ , ಅದಕ್ಕೆ ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ , ಗೋ ಮಾತೆಗೆ ತಿನ್ನಿಸಬೇಕು . ಇದರಿಂದ ಶೀಘ್ರವಾಗಿ ಸಾಲದಿಂದ ಮುಕ್ತಿಯನ್ನು ಪಡೆಯಬಹುದು .

4 . ಪ್ರತಿಯೊಬ್ಬರ ಮನೆಯ ಈಶಾನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು . ಈ ಮೂಲೆಯಲ್ಲಿ ಧೂಳು ಇದ್ದಷ್ಟು , ಸಾಲ ಎನ್ನುವುದು ನಿಮ್ಮ ಕೈ ಬಿಟ್ಟು ದೂರ ಹೋಗುವುದಿಲ್ಲ . ಹೀಗಾಗಿ ಈಶಾನ್ಯ ದಿಕ್ಕಿಗೆ ಎಲ್ಲರೂ ಕಾಳಜಿ ವಹಿಸಬೇಕು . ಇದು ತುಂಬಾನೇ ಮುಖ್ಯ .

5 . ನಿತ್ಯವೂ ಮೀನುಗಳಿಗೆ ಆಹಾರವನ್ನು ನೀಡುವುದು . ಪಕ್ಷಿ ಪ್ರಾಣಿಗಳಿಗೆ ಕಾಳನ್ನು ತಿನ್ನಿಸುವುದರಿಂದ , ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ . ಈ ಎಲ್ಲಾ ಸೂತ್ರವನ್ನು ಅನುಸರಿಸಿದರೆ , ಸಾಲ ದೂರ ಆಗುವುದು ಖಂಡಿತ ಎಂದು ಹೇಳಲಾಗಿದೆ.

Leave a Comment