ನಾವು ಈ ಲೇಖನದಲ್ಲಿ 2024 ರ ವೃಷಭ ರಾಶಿಯ ವರ್ಷ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಕರ್ಮ ಕಾರಕ , ಉದ್ಯೋಗ ಕಾರಕ , ಕರ್ಮ ಫಲದಾತ , ಅಂತಹ ಶನಿ ಒಂದು ವಿಚಿತ್ರವಾದ ಕೆಲಸ ಕಾರ್ಯಗಳಿಗೆ ನಿಮ್ಮನ್ನು ತೆಗೆದುಕೊಂಡು ಹೋಗುತ್ತದೆ . ನೀವು ಊಹಿಸಲಾರದ ಕೆಲಸಗಳನ್ನು ಮಾಡಬೇಕಾಗುತ್ತದೆ . ನಿಮಗೆ ಕೆಲಸದಲ್ಲಿ ಬೇಡಿಕೆಗಳು ಹೆಚ್ಚಾಗುತ್ತಾ ಹೋಗುತ್ತದೆ . ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾ ಹೋಗಬೇಕಾಗುತ್ತದೆ .
ಹೊಸ ಹೊಸ ತಂತ್ರಜ್ಞಾನಗಳಿಗೆ ನೀವು ಹೊಂದಿಕೊಂಡು ಹೋಗಬೇಕು . ವೃಷಭ ರಾಶಿಯವರಿಗೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ . ಯಾಕೆಂದರೆ ನಿಮಗೆ ಹೊಂದಿಕೊಂಡು ಹೋಗುವ ಶಕ್ತಿ ಇರುವುದರಿಂದ , ನಿಮ್ಮ ಕೆಲಸ ಸ್ಥಿರವಾಗಿ ಇರುತ್ತದೆ . ಈ ತರಹದ ಸಾಮರ್ಥ್ಯ ನಿಮ್ಮಲ್ಲೇ ಇರುವುದರಿಂದ ನಿಮ್ಮ ಕೆಲಸ ಕಳೆದುಹೋಗುವ ಸಾಧ್ಯತೆ ಇಲ್ಲ . ದಶ ಭುಕ್ತಿಗಳ ಕಾರಣದಿಂದ ಕೆಲಸ ಹೋದರೂ ಕೂಡ , ಈ ವೃಷಭ ರಾಶಿಯವರಿಗೆ ಯಾವುದೇ ದೊಡ್ಡ ತೊಂದರೆಗಳು ಉಂಟಾಗುವುದಿಲ್ಲ .
ಶನಿ ಗ್ರಹವು ನಿಮ್ಮನ್ನ ಕೆಲಸದಲ್ಲಿ ಇರಿಸಲು ಹೆಚ್ಚು ಖುಷಿ ಪಡುತ್ತದೆ . ಹಾಗೆಯೇ ಕೇಂದ್ರದಲ್ಲಿ ಶನಿ ಗ್ರಹವು ಇರುವುದರಿಂದ ಬಲಿಷ್ಠನಾಗಿ ಇರುತ್ತಾನೆ . ಏಕಾದಶ ಭಾವದಲ್ಲಿ ರಾಹುವಿನ ಬೆಂಬಲ ಕೂಡ ಇದೆ .ರಾಹು ಲಾಭಗಳನ್ನು ತಂದು ಕೊಡುತ್ತಾನೆ . ರಾಹುವನ್ನು ಅರ್ಧ ಶನಿ ಎಂದು ಕರೆಯುತ್ತಾರೆ . ಶನಿ ಮತ್ತು ರಾಹು ಗ್ರಹ ಅಕ್ಕಪಕ್ಕದಲ್ಲಿ ಇದ್ದುಕೊಂಡು , ವೃಷಭ ರಾಶಿಯವರಿಗೆ ಒಳ್ಳೆಯದನ್ನೇ ಮಾಡುತ್ತಾರೆ . ಪ್ರಗತಿಯ ವಿಚಾರದಲ್ಲಿ ನಿಧಾನವಾಗಿ ಬೆಳವಣಿಗೆ ಆಗುವ ಸಾಧ್ಯತೆ ಇದೆ .
ಈ ಎಲ್ಲಾ ವಿಷಯಗಳು ಹಣ ಮತ್ತು ಕೆಲಸದ ಕಡೆ ಇರುತ್ತದೆ . ನಂತರ ಖುಷಿ , ಮೋಜು , ಮಸ್ತಿ , ಆಹಾರ , ವಿಹಾರ , ಆರೋಗ್ಯ , ಇವೆಲ್ಲವೂ ಬೇರೆ ಪಥವನ್ನು ತೆಗೆದುಕೊಳ್ಳುತ್ತದೆ .ಇದರ ಬಗ್ಗೆ ಗಮನ ಕೊಡಲು ನಿಮಗೆ ಸಮಯ ಸಾಕಾಗುತ್ತಿಲ್ಲ . ನಿಮ್ಮ ಕೆಲಸದ ಬಗ್ಗೆ ನಿಮಗೆ ಅಚ್ಚರಿಯಾಗುವ ಸಾಧ್ಯತೆ ಇದೆ .ಅಂದರೆ ನಿಮಗೆ ಇಷ್ಟೆಲ್ಲ ಕೆಲಸವನ್ನು ಮಾಡಬೇಕಾ ಅನ್ನುವ ಪ್ರಶ್ನೆ ಉತ್ಪತ್ತಿ ಆಗುತ್ತದೆ . ಕೆಲವು ವ್ಯಕ್ತಿಗಳಿಗೆ ನೈತಿಕತೆಯ ಪ್ರಶ್ನೆ ಕೂಡ ಕಾಡುತ್ತದೆ .
ಕೆಲವೊಂದು ಕೆಲಸ ಕಾರ್ಯಗಳನ್ನು ಮಾಡಲು ಆತ್ಮಸಾಕ್ಷಿ ಒಪ್ಪುವುದಿಲ್ಲ .ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ , ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ , ಆತ್ಮಸಾಕ್ಷಿ ಎನ್ನುವುದು ಪದೇ ಪದೇ ಕಾಡುತ್ತಿರುತ್ತದೆ . ನೀವು ಮಾಡುವ ಕೆಲಸ ನ್ಯಾಯಯುತವಾಗಿ ಇರುವುದಿಲ್ಲ .ಈ ತರಹದ ಸಂದಿಗ್ಧ , ಬಿಕ್ಕಟ್ಟು ನಿಮ್ಮ ಮನಸ್ಸನ್ನೇ ಪ್ರಶ್ನೆ ಕೇಳುವ ಸಮಸ್ಯೆಗಳು ಬರುತ್ತವೆ . ನಿಮ್ಮ ಮನಸ್ಸು ಸತತವಾಗಿ ಪ್ರಶ್ನೆ ಮಾಡುತ್ತಿರುತ್ತದೆ . ಇದು ಸರೀನಾ ಅಂತ ಪ್ರಶ್ನೆ ಬರುತ್ತಲೇ ಇರುತ್ತದೆ . ಇನ್ನು ರಾಹುವಿನಿಂದ ನಿಮ್ಮ ಜೀವನದಲ್ಲಿ ಖುಷಿ ಇರುತ್ತದೆ . ಸಾಕಷ್ಟು ಲಾಭಗಳು ಕೂಡ ಇದೆ .
ನಿಮಗೆ ಇಷ್ಟವಿಲ್ಲದ ಜಾಗಗಳಿಗೆ ನೀವು ಹೋಗಬೇಕಾಗುತ್ತದೆ .ವಿಶೇಷವಾಗಿ ಉದ್ಯೋಗ ಮಾಡುವವರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ .ಇದೆಲ್ಲಾ ನಡೆಯುವುದು ಮೇ ತಿಂಗಳ ನಂತರ . ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ .ವರ್ಗಾವಣೆ ಆಗುವುದರಿಂದ ಮನೆಯಲ್ಲಿ ಖರ್ಚು ವೆಚ್ಚಗಳ ಸಾಧ್ಯತೆ ಹೆಚ್ಚಾಗಿರುತ್ತದೆ . ಜೀವನದ ಬಗ್ಗೆ ಇವರ ದೃಷ್ಟಿಕೋನವೇ ಬದಲಾಗುತ್ತದೆ . ಸುತ್ತಮುತ್ತಲಿರುವ ಜನರು ಬದುಕಲು ಬಿಡುವುದಿಲ್ಲ .
ಈ ಕಾಲಕ್ಕೆ ತಕ್ಕಂತೆ ನಡೆದುಕೊಂಡು ಹೋಗಬೇಕು .ಈ ತರಹದ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ . ನಿಮ್ಮಲ್ಲಿ ಪ್ರಾಯೋಗಿಕ ವಿಧಾನಗಳು ಬರುತ್ತವೆ . ಅಂದರೆ ಸಮಾಜಕ್ಕೆ ಹೊಂದಿಕೊಂಡು ಹೋಗುವ ಗುಣ ವೃಷಭ ರಾಶಿ ಅವರಲ್ಲಿ ಇರುತ್ತದೆ. ಈ ಒಂದು ಸಮಯದಲ್ಲಿ ವೃಷಭ ರಾಶಿಯವರಿಗೆ ಒಂದು ಮಾನಸಿಕವಾದ ದೊಡ್ಡ ಸಮಸ್ಯೆ ಬರುತ್ತದೆ .ಇವರಿಗೆ ಬೇರೆಯವರ ಪ್ರಗತಿಯನ್ನು ಕಂಡಾಗ ನನ್ನ ಪ್ರಗತಿ ಕೆಳಮಟ್ಟದಲ್ಲಿ ಇದೆ ಎಂಬ ಚಿಂತೆ ಶುರುವಾಗುತ್ತದೆ .
ಅಂದರೆ ಈ ವರ್ಷದಲ್ಲಿ ಈ ತರಹದ ಒಂದು ಭಾವನೆಯನ್ನು ನಿಮ್ಮ ತಲೆಯಿಂದ ತೆಗೆದು ಹಾಕಬೇಕು . ಅಂದರೆ ಬೆಳೆಯುತ್ತಿರುವ ವ್ಯಕ್ತಿಯನ್ನು ಕಂಡರೆ ನಮಗೆ ಹೋಲಿಕೆ ಮಾಡಿಕೊಳ್ಳಬಾರದು . ಇಂತಹ ಭಾವನೆ ಇಟ್ಟುಕೊಳ್ಳಬಾರದು. ಅಂಥವರಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಖುಷಿಯಿಂದ ಸಹಕರಿಸಬೇಕು. ನಮ್ಮ ಜೀವನದ ಸಮಯವನ್ನು ಕೆಲಸಕ್ಕಾಗಿಯೇ ಕೊಡಬೇಕಾಗುತ್ತದೆ . 2024 ಮೇ 24ರ ನಂತರ ದ್ವಂದ್ವ , ಗೊಂದಲಗಳು ಹೆಚ್ಚಾಗುತ್ತಾ ಹೋಗುತ್ತದೆ . ನಿಮ್ಮ ರಾಶಿಗೆ ಗುರು ಬಂದಾಗ , ಹಣ ಬರುತ್ತದೆ .
ಮತ್ತು ದೈಹಿಕವಾಗಿ ಆರೋಗ್ಯ ಸುಧಾರಿಸುತ್ತದೆ .ಆದರೆ ಮಾನಸಿಕವಾಗಿ ತೊಂದರೆಯನ್ನು ಗುರು ಕೊಡುವ ಸಾಧ್ಯತೆ ಇದೆ . ಆದರೆ ಒಂದು ವಿಷಯದಲ್ಲಿ ಎಚ್ಚರಿಕೆ ಆಗಿರಬೇಕು ಖರ್ಚು ಹೆಚ್ಚಾಗಬಹುದು . ಅಂದರೆ ನಿಮಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಕಷ್ಟ ಆಗುತ್ತದೆ . ಆದರೆ ಪ್ರಯತ್ನ ಬಿಡಬೇಡಿ . ನಿಮಗೆ ಸ್ಪಷ್ಟತೆ ಬಂದರೆ ಮುಂದೆ ಒಳ್ಳೆಯ ಬೆಳವಣಿಗೆಗೆ ಕಾರಣವಾಗುತ್ತದೆ .ಆಗ ನೀವು ಬೇರೆಯವರಿಗಿಂತ ಮೇಲೆ ಹೋಗಲು ಸಾಧ್ಯವಾಗುತ್ತದೆ . ಅಂದರೆ ಮುಂದೆ ಬರುವ ಒಳ್ಳೆಯ ಸಮಯಕ್ಕಾಗಿ ನೀವು ತಾಳ್ಮೆಯಿಂದ ಕಾಯಬೇಕಾಗುತ್ತದೆ .ಮುಂದೆ 2025ರಲ್ಲಿ ಏಕಾದಶಿಯ ಶನಿ ಬಂದಾಗ ,
ಬಹಳಷ್ಟು ವಿಚಾರಗಳು ಸಮತೋಲನವಾಗಿ ನಡೆಯಲು ಸಾಧ್ಯವಾಗುತ್ತದೆ . ಹಾಗೆಯೇ ಗುರು ಕೂಡ ಮಿಥುನ ರಾಶಿಗೆ ಹೋಗುವುದರಿಂದ , 20 25ಕ್ಕೆ ಬಹಳಷ್ಟು ಒಳ್ಳೆಯ ಫಲಗಳು ದೊರೆಯುತ್ತದೆ .ಹಾಗಾಗಿ ತಾಳ್ಮೆ ಹೆಚ್ಚಾಗಿ ಬೇಕಾಗುತ್ತದೆ .ಆರೋಗ್ಯದ ತೊಂದರೆಗಳು ಸ್ವಲ್ಪ ಬರುವ ಸಾಧ್ಯತೆ ಇರುತ್ತದೆ . ತ್ರಿಕೋನ ಭಾವದಲ್ಲಿ ಕೇತು ಇರುವಾಗ , ಹಣಕಾಸು ನಷ್ಟವಾಗುವ ಸಾಧ್ಯತೆ ಇರುತ್ತದೆ . ಮಕ್ಕಳ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು , ಜಗಳ , ಗಲಾಟೆ ಆಗುವ ಸಾಧ್ಯತೆ ಇರುತ್ತದೆ .
ಒಟ್ಟಾರೆಯಾಗಿ ಕೌಟುಂಬಿಕ ಸಮಸ್ಯೆಗಳು ಆಗುವ ಸಾಧ್ಯತೆ ಇರುತ್ತದೆ . ವೃಷಭ ರಾಶಿಯವರಿಗೆ ವರ್ಗಾವಣೆ ವಿಚಾರದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಗಳು ನಡೆಯುತ್ತಲೇ ಇರುತ್ತವೆ . ಈ ಸ್ಥಿತಿ ನಿಮ್ಮ ಜೀವನದಲ್ಲಿ ಬಹಳಷ್ಟು ರೀತಿಯ ಸಂಚಲನಗಳನ್ನು ಮೂಡಿಸುತ್ತದೆ . ಒಟ್ಟಾರೆಯಾಗಿ ವೃಷಭ ರಾಶಿಯವರಿಗೆ ಈ ಒಂದು ವರ್ಷದಲ್ಲಿ ಅರ್ಧ ಒಳ್ಳೆಯದು ಮತ್ತು ಅರ್ಧ ಕೆಟ್ಟದ್ದು ,
ಎರಡೂ ಕೂಡ ಇವರ ಜೀವನದಲ್ಲಿ ನಡೆಯುತ್ತದೆ . ನಿಮಗೆ ಯೋಚನೆ ಅಥವಾ ಮಾನಸಿಕ ಮಟ್ಟದಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ . ನಕಾರಾತ್ಮಕ ಮತ್ತು ಸಕಾರಾತ್ಮಕ ವಿಚಾರಗಳಲ್ಲಿ ಪರಸ್ಪರ ಗುದ್ದಾಟಗಳು ಆಗುವ ಸಾಧ್ಯತೆ ಇದೆ . ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಚಿಂತೆಗಳನ್ನು ತರುತ್ತದೆ . ನಿಮಗೆ ಉದ್ವೇಗ ಹೆಚ್ಚಾಗುವ ಸಾಧ್ಯತೆ ಇದೆ .ಇದಕ್ಕೆ ಪರಿಹಾರವನ್ನು ಹುಡುಕಿ ಕೊಂಡಾಗ , ನಿಮಗೆ ಖುಷಿ ಸಿಗುತ್ತದೆ .