ನಿಮ್ಮ ಶುಭ ಕಾಲ ಆರಂಭವಾಗುವ ಮುನ್ನ ಈ 12 ಸೂಚನೆಗಳು ಕಾಣಿಸುತ್ತದೆ.!

0

ನಾವು ಈ ಲೇಖನದಲ್ಲಿ ನಿಮ್ಮ ಶುಭ ಕಾಲ ಆರಂಭವಾಗುವ ಮುನ್ನ ಈ 12 ಸೂಚನೆಗಳು ಯಾವ ರೀತಿ ಕಾಣಿಸಿಕೊಳ್ಳುತ್ತವೆ . ಎಂದು ನೋಡೋಣ. ಜೀವನ ಎಂಬುದು ಸುಖ – ದುಃಖ ನೋವು – ನಲಿವುಗಳ ಪಯಣ . ಈ ಪಯಣದಲ್ಲಿ ನಾವು ಎಲ್ಲವನ್ನು ಜಯಿಸಿ , ಮುಂದೆ ಸಾಗಲೇಬೇಕು . ಇದಕ್ಕೆ ಜೊತೆಯಾಗಿ ನಿಲ್ಲುವುದೇ ನಮ್ಮ ಸಮಯ . ಸಮಯ ಕೆಟ್ಟದ್ದಾಗಿ ಇದ್ದಾಗ , ನಾವು ಎಷ್ಟೇ ಪ್ರಯತ್ನಿಸಿದರೂ , ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗುವುದಿಲ್ಲ .

ಅದೇ ಸಮಯ ಒಳ್ಳೆಯದಾಗಿ ಇದ್ದರೆ , ಚಿಕ್ಕಪುಟ್ಟ ಕಾರ್ಯಗಳು ನಮಗೆ ದೊಡ್ಡಮಟ್ಟದ ಫಲವನ್ನು ನೀಡುತ್ತದೆ . ನಮ್ಮ ಜೀವನದಲ್ಲಿ ಒಳ್ಳೆಯ ಸಮಯಗಳು ಆರಂಭವಾಗುವ ಮುನ್ನ ಯಾವೆಲ್ಲಾ ಸೂಚನೆಗಳು ಇರುತ್ತವೆ ಗೊತ್ತೇ..? ಈ ಎಲ್ಲಾ ಸೂಚನೆಗಳು ಇದ್ದರೆ , ನಿಮಗೆ ಅದೃಷ್ಟ ಸಾಥ್ ನೀಡುತ್ತಿದೆ ಎಂದರ್ಥ . ನಮ್ಮ ಜೀವನದಲ್ಲಿ ಏರಿಳಿತಗಳು ಹೇಗೆ ಸಾಮಾನ್ಯವಾಗಿ ಇರುತ್ತದೆಯೋ , ಹಾಗೆಯೇ ನಮ್ಮ ಸಮಯವು ಕೆಲವೊಮ್ಮೆ ಶುಭ ಫಲವನ್ನು ನೀಡಿದರೆ , ಇನ್ನೂ ಕೆಲವೊಮ್ಮೆ ಅಶುಭ ಫಲವನ್ನು ನೀಡುತ್ತದೆ .

ಇದಕ್ಕೆ ಸಂಬಂಧಿಸಿದಂತೆ ನಮ್ಮ ಹಿರಿಯರು ಈ ಮಾತನ್ನು ಹೇಳುತ್ತಾರೆ ..ನಮ್ಮ ಕಾಲ ಚೆನ್ನಾಗಿದ್ದರೆ , ಮಣ್ಣು ಮುಟ್ಟಿದರೂ ಚಿನ್ನ ಆಗುತ್ತದೆ . ಆದರೆ ನಮ್ಮ ಕಾಲ ಕೆಟ್ಟಿದ್ದರೆ ಒಂಟೆಯ ಮೇಲೆ ಕುಳಿತರೂ ನಾಯಿ ಕಚ್ಚುತ್ತದೆ ಎನ್ನುತ್ತಾರೆ . ಸಮಯ ಎಂದಿಗೂ ಒಂದೇ ರೀತಿ ಇರುವುದಿಲ್ಲ . ನಮ್ಮ ಸಮಯ ಎಷ್ಟೇ ಕೆಟ್ಟದಾಗಿ ಇದ್ದರೂ ಅದರಿಂದ , ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ .

ಸಾಮಾನ್ಯವಾಗಿ ಓರ್ವ ವ್ಯಕ್ತಿಯ ಹೆಸರು , ಗೌರವ , ಮತ್ತು ಪ್ರಗತಿ ಆತನ ಸಮಯವನ್ನು ಅವಲಂಬಿಸಿರುತ್ತದೆ . ಕೆಟ್ಟ ಸಮಯಗಳು ಪ್ರಾರಂಭವಾದಾಗ , ಕೆಲಸದಲ್ಲಿ ತೊಂದರೆಗಳು ಬರಲು ಪ್ರಾರಂಭಿಸಿದಾಗ , ಯಶಸ್ಸಿನ ಮಾರ್ಗದಲ್ಲಿ ನಾನಾ ಅಡೆತಡೆಗಳು ಎದುರಾಗುತ್ತದೆ . ಅದೇ ಶುಭ ಕಾಲ ಎದುರಾಗುತ್ತಿದ್ದರೆ , ನಮಗೆ ಯಾವೆಲ್ಲಾ ಸೂಚನೆಗಳು ಸಿಗುತ್ತದೆ ಗೊತ್ತೇ …?ಮಾರ್ಗದಲ್ಲಿ ಹಣ :- ನೀವು ಎಲ್ಲಿಗಾದರೂ ಹೋಗುವಾಗ ಅಥವಾ ನೀವು ಹೋಗುವ ಮಾರ್ಗದಲ್ಲಿ ನಿಮಗೆ ಹಣ ಸಿಕ್ಕರೆ , ಅದು ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗಲಿದೆ ಎಂಬುದನ್ನು ಸೂಚಿಸುತ್ತದೆ . ಹೀಗೆ ದಿಢೀರ್ ಹಣ ಸಿಗುವುದು , ಲಕ್ಷ್ಮಿಯ ಕೃಪೆಯ ಸಂಕೇತ . ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲವಾಗಿ ಇರುತ್ತದೆ ಎಂದರ್ಥ .

ಗುಬ್ಬಚ್ಚಿಗಳ ಚಿಲಿಪಿಲಿ :- ನಿಮ್ಮ ಮನೆ ಅಂಗಳದಲ್ಲಿ ಗುಬ್ಬಚ್ಚಿಗಳು ಚಿಲಿಪಿಲಿ ಗುಟ್ಟಲು ಪ್ರಾರಂಭಿಸಿದರೆ , ನಂತರ ಒಳ್ಳೆಯ ಸಮಯ ಪ್ರಾರಂಭವಾಗಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು . ನೀವು ಗುಬ್ಬಚ್ಚಿಗಳಿಗೆ ಧಾನ್ಯಗಳು ಮತ್ತು ನೀರನ್ನು ಇಡಬಹುದು .

ನೀರಿನ ಬಿಂದಿಗೆ : – ವಿಶೇಷವಾಗಿ ವಿಶೇಷ ಕಾರ್ಯದ ನಿಮಿತ್ತ ಮನೆಯಿಂದ ಹೊರಡುತ್ತಿರುವಾಗ , ನೀವು ಯಾರದೋ ಕೈಯಲ್ಲಿ ನೀರು ತುಂಬಿದ ಬಿಂದಿಗೆಯನ್ನು ಅಥವಾ ಪಾತ್ರೆಯನ್ನು ನೋಡಿದರೆ , ಅದು ನಿಮಗೆ ಶುಭ ಸೂಚನೆಯಾಗಿದೆ . ಮತ್ತು ಇದು ನೀವು ಮಾಡಲು ಹೊರಟ ಕೆಲಸದಲ್ಲಿ ಯಶಸ್ಸನ್ನು ಸೂಚಿಸುತ್ತದೆ .

ತೆಂಗಿನ ಕಾಯಿ : – ಪ್ರಯಾಣ ಮಾಡುವಾಗ ಅಥವಾ ಮನೆಯಿಂದ ಹೊರಡುವಾಗ , ಪೂಜೆಯ ತೆಂಗಿನಕಾಯಿಯನ್ನು ನೋಡುವುದು ಸಹ ಮಂಗಳಕರ ಸಂಕೇತವಾಗಿದೆ . ಇದು ಕೆಲಸದ ಯಶಸ್ಸಿನ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಪರಿಗಣಿಸಲಾಗಿದೆ .ಆದರೆ ನೀವಿಲ್ಲಿ ಹಾಳಾದ ತೆಂಗಿನಕಾಯಿಯನ್ನು ನೋಡುವುದು ಅಶುಭವಾಗಿ ಇರುತ್ತದೆ .

ಎಕ್ಕದ ಗಿಡ : – ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಮದರ್ ಗಿಡ ಅಂದರೆ ಎಕ್ಕದ ಗಿಡ ತಾನಾಗಿಯೇ ಬೆಳೆದರೆ , ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ಶುಭ ಕಾಲ ಆರಂಭವಾಗಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು . ಈ ಸಸ್ಯವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ .

ಬಣ್ಣದ ಚಿಟ್ಟೆಗಳು :- ಉತ್ತಮ ಸಮಯ ಪ್ರಾರಂಭವಾಗುವ ಮೊದಲು ವರ್ಣ ರಂಜಿತ ಚಿಟ್ಟೆಗಳು ನಿಮ್ಮ ಸುತ್ತಲೂ ಸುಳಿದಾಡಲು ಪ್ರಾರಂಭಿಸುತ್ತವೆ . ಇದನ್ನು ಮಂಗಳಕರವೆಂದು , ಪರಿಗಣಿಸಲಾಗಿದೆ .

ಮನೆಯಿಂದ ಹೊರಗೆ ಹೋಗುವಾಗ ಹಸಿರು ತರಕಾರಿ , ಹಸಿರು ಹುಲ್ಲು , ಬಿಳಿ ಪಾರಿವಾಳ , ಇತ್ಯಾದಿಗಳನ್ನು ನೋಡುವುದು ಸಹ ಮಂಗಳಕರವಾದ ಸೂಚನೆಯಾಗಿದೆ .

ಹಸುಗಳ ಕೂಗು :- ಬಿಳಿ ಬಣ್ಣದ ಅಥವಾ ಕಂದು ಬಣ್ಣದ ಹಸು ನಿಮ್ಮ ಮನೆಯ ಹೊರಗೆ ಬಂದು ಕೂಗಲು ಪ್ರಾರಂಭಿಸಿದರೆ , ಅದು ಒಳ್ಳೆಯ ಸಮಯ ಆರಂಭವಾಗುತ್ತದೆ ಎಂಬುದರ ಸಂಕೇತವಾಗಿದೆ . ಈ ರೀತಿ ಹಸು ನಿಮ್ಮ ಮನೆ ಮುಂದೆ ಬಂದು ಕೂಗಿದಾಗ , ನೀವು ಅವುಗಳಿಗೆ ರೊಟ್ಟಿ ಅಥವಾ ಬೆಲ್ಲವನ್ನು ತಿನ್ನಲು ನೀಡಬೇಕು .

ನೀವು ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮೂರು ಗಂಟೆಯ ಹೊತ್ತಿಗೆ ಎಚ್ಚರವಾದರೆ , ಅಥವಾ ಯಾರಾದರೂ ಬಂದು ನಿಮ್ಮನ್ನು ಕರೆದಂತೆ ಆದರೆ , ನಿಮಗೆ ಅದೃಷ್ಟದ ಬಾಗಿಲು ತೆರೆಯುವುದಿದೆ ಎಂದು ಸೂಚನೆ ನೀಡಿದೆ.

ಪುಟಾಣಿ ಮಕ್ಕಳು ನಮಗೆಲ್ಲಾ ಗೊತ್ತಿರುವ ಹಾಗೆ ದೇವರ ಸ್ವರೂಪ . ಮಕ್ಕಳು ಎಂದಿಗೂ ಸುಳ್ಳನ್ನು ಹೇಳುವುದಿಲ್ಲ . ಮಕ್ಕಳು ನಿಮ್ಮ ಮನೆ ಮುಂದೆ ಆಟವಾಡುತ್ತಾ ಇದ್ದರೆ , ನಿಮ್ಮನ್ನು ನೋಡಿ ಪದೇ ಪದೇ ನಗ್ತಾ ಇದ್ರೆ ನೀವು ಸಂತೋಷದ ಸಮಾಚಾರಗಳನ್ನು ಕೇಳುತ್ತೀರಾ , ಎಂದು ಸೂಚನೆ . ಮಹಾದೇವನ ಆಶೀರ್ವಾದ ನಿಮ್ಮ ಮೇಲೆ ಇದೆ ಎಂದರ್ಥ .

ಯಾವುದಾದರೂ ಅಪರಿಚಿತ ವ್ಯಕ್ತಿಯು ಕನಸಿನಲ್ಲಿ ಬಂದು ನಿನ್ನನ್ನು ನೋಡಿ ನಗುವ ಹಾಗೆ ಅನಿಸಿದರೆ , ನಿಮ್ಮ ಮನೆಯಲ್ಲಿ ಶುಭ ಕಾರ್ಯವಾಗುವುದಿದೆ ಎಂಬ ಸೂಚನೆ ಬಂಧುಗಳೆಲ್ಲ ಸೇರುತ್ತಾರೆ ಎಂದು ಸೂಚನೆ . ಈ ರೀತಿಯಾಗಿ ವಿಷ್ಣು ದೇವನು ನಾರದ ಮುನಿಯೊಂದಿಗೆ ಭೂಲೋಕಕ್ಕೆ ಮಾನವರಿಗಾಗಿ ಶುಭ ಸಮಯದ ಸಂಕೇತಗಳನ್ನು ಕಳುಹಿಸಿ ಕೊಟ್ಟಿದ್ದಾರೆ . ಆದ್ದರಿಂದ ಈ ರೀತಿಯಾಗಿ ನಿಮಗೆ ಅದರಲ್ಲಿ ಶುಭವಾಗುವುದು ಎಂದು ಮನಸ್ಸಿನಲ್ಲಿ ತಿಳಿದುಕೊಳ್ಳಿ .

ಬೆಕ್ಕುಗಳು ನಿಮ್ಮ ಮನೆಯಲ್ಲಿ ಮರಿಯನ್ನು ಹಾಕಿದರೆ , ನಿಮಗೆ ತುಂಬಾ ಶುಭವಾಗುತ್ತದೆ . ಮುಂಬರುವ ದಿನಗಳಲ್ಲಿ ಶುಭ ಸಮಾಚಾರಗಳನ್ನು ಕೇಳುತ್ತೀರಾ .

ಕೆಲವೊಂದು ಸಾರಿ ನಿಮ್ಮ ಮನೆಯ ಮುಂದೆ ಹಕ್ಕಿಗಳು ಗೂಡು ಕಟ್ಟುತ್ತಿದ್ದರೆ , ಗೋಮಾತೆ ಮನೆಯ ಮುಂದೆ ಪದೇ ಪದೇ ಬಂದು ನಿಲ್ಲುತ್ತಿದ್ದರೆ , ಅಥವಾ ಮಂಗವೊಂದು ಒಳಗೆ ಬಂದು ತಿನ್ನುವ ಪದಾರ್ಥಗಳನ್ನು ತೆಗೆದುಕೊಂಡು ಹೋದರೆ , ಒಳ್ಳೆಯದಾಗುತ್ತದೆ ಎಂದು ಅರ್ಥ . ಇಲ್ಲಿ1 ಕೊಟ್ಟಿರುವ ಸೂಚನೆಗಳಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು .

Leave A Reply

Your email address will not be published.