ಪೂಜೆಯಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು ಯಾವುವು

ನಾವು ಈ ಲೇಖನದಲ್ಲಿ ಪೂಜೆಯಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಗಣೇಶನಿಗೆ ತುಳಸಿ ಏರಿಸಬಾರದು . ಅಮ್ಮನವರಿಗೆ ದೂರ್ವೆ (ದರ್ಬೆ ) ಏರಿಸಬಾರದು . ಶಿವಲಿಂಗಕ್ಕೆ ಕೇತಕೀ ಪುಷ್ಪ ಏರಿಸಬಾರದು . ವಿಷ್ಣುವಿಗೆ ಅಕ್ಷತೆಯ ತಿಲಕ ಇಡಬಾರದು . ಒಂದೇ ಪೂಜೆ ಕೋಣೆಯಲ್ಲಿ ಎರಡು (ಸಾಲಿಗ್ರಾಮ) ಶಂಖಗಳು ಇರಬಾರದು . ಒಂದು ದೇವಸ್ಥಾನದಲ್ಲಿ ಮೂರು ಗಣೇಶನ ವಿಗ್ರಹಗಳನ್ನು ಇಡಬಾರದು .

ತುಳಸಿ ದಳಗಳನ್ನು ಜಗಿದು ತಿನ್ನಬಾರದು . ದೇವಾಲಯದ ಮುಖ್ಯ ದ್ವಾರದ ಎದುರು ಕೆಳಗೆ ಚಪ್ಪಲಿ ಬಿಡಬಾರದು .ದೇವರ ದರ್ಶನ ಮಾಡಿ , ಹಿಂತಿರುಗುವಾಗ ಗಂಟೆ ಬಾರಿಸಬಾರದು . ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು . ಮನೆಯಲ್ಲಿ ಪೂಜಿಸುವ ಶಿವಲಿಂಗ ಹೆಬ್ಬೆರಳಿಗಿಂತ ದೊಡ್ಡದು ಇರಬಾರದು . ಶಿವಲಿಂಗವನ್ನು ತುಳಸಿ ಗಿಡದಲ್ಲಿ ಇಡಬಾರದು .

ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು . ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನಕಾಯಿ ಒಡೆಯಬಾರದು .ಕುಟುಂಬದಲ್ಲಿ ಸೂತಕ ಇದ್ದಾಗ , ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು . ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು . ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ , ಅದನ್ನು ದಾಟಬಾರದು . ಒಂದು ಕೈಯಿಂದ ನಮಸ್ಕರಿಸಬಾರದು .

ನೀವು ಹಚ್ಚುವ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು . ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗೆ ಒಂದು ಕರ ವಸ್ತ್ರವನ್ನು ಇಟ್ಟುಕೊಳ್ಳಬೇಕು . ತೀರ್ಥದ ಒಂದು ಹನಿಯೂ ಕೆಳಗೆ ಬೀಳಬಾರದು . ತೀರ್ಥ ಕುಡಿದು ಕೈಯನ್ನು ತಲೆಗೆ ಅಥವಾ ಶಿಖೆಗೆ ಒರೆಸಿಕೊಳ್ಳಬಾರದು . ಬದಲಿಗೆ ಕಣ್ಣುಗಳಿಗೆ ಹಚ್ಚಿಕೊಳ್ಳಬೇಕು . ಗಾಯಿತ್ರಿ ಶಿಖೆಯಲ್ಲಿ ನೆಲೆಸಿರುತ್ತಾಳೆ. ದೇವಿಗೆ ಅಪವಿತ್ರತೆ ಉಂಟಾಗುತ್ತದೆ .

ದೇವರಿಗೆ ಹಣ ಇತ್ಯಾದಿ ದುರಾಸೆ ತೋರಿಸಬಾರದು . ಸ್ತ್ರೀಯರು ಹನುಮಂತ ದೇವರನ್ನು ಮತ್ತು ಶನಿ ದೇವರನ್ನು ಮುಟ್ಟಿ ನಮಿಸಬಾರದು . ಅವಿವಾಹಿತ ಸ್ತ್ರೀಯರು ಹನುಮಂತ ದೇವರ ಮತ್ತು ಶನಿದೇವರ ಕಾಲಿಗೆ ಬೀಳದೆ ನಿಂತೇ ನಮಿಸಬೇಕು . ದೇವಸ್ಥಾನದ ಅಥವಾ ಪೂಜಾ ಕೋಣೆಯ ಆವರಣವನ್ನು ಯಾವಾಗಲೂ ಶುಚಿಯಾಗಿ ಇಟ್ಟುಕೊಳ್ಳಬೇಕು .

ದೇವಾಲಯದಲ್ಲಿ ಜನ ಜಂಗುಳಿ ಇದ್ದಾಗ , ಭಗವಂತನ ನಾಮಸ್ಮರಣೆ ಮಾಡುತ್ತಾ , ನಿಮ್ಮ ಸರದಿಯಲ್ಲಿ ಮುಂದೆ ಹೋಗುತ್ತಿರಬೇಕು . ಭೈರವ ದೇವಾಲಯವನ್ನು ಬಿಟ್ಟು , ಉಳಿದ ದೇವಾಲಯಗಳಲ್ಲಿ ಕುಡುಕರು ಪ್ರವೇಶಿಸಬಾರದು .ದೇವಾಲಯವನ್ನು ಪ್ರವೇಶಿಸುವ ಮೊದಲು ಬಲಗಾಲನ್ನು ಇಟ್ಟು , ಮತ್ತು ದೇವಾಲಯದಿಂದ ಹಿಂತಿರುಗುವಾಗ ಮೊದಲು ಎಡಗಾಲನ್ನು ಹೊರಗಿಟ್ಟು ಹೋಗಬೇಕು .

ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಜೋರಾಗಿ ಕರ್ಕಶವಾಗಿ ಭಾರಿಸಬಾರದು . ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗಿ ಬರಲು ಬೇರೆ ಜೊತೆ ಬಟ್ಟೆಗಳನ್ನೇ ಇಟ್ಟುಕೊಂಡು ಧರಿಸಿ ಹೋಗಬೇಕು . ದೇವಾಲಯ ಬಹಳ ದೂರ ಇಲ್ಲದಿದ್ದರೆ , ಶೂ , ಚಪ್ಪಲಿ ಹಾಕದೇ ಹೋಗಬೇಕು .

ದೇವರ ದರ್ಶನವನ್ನು ನಿಂತು ತೆರೆದ ಕಣ್ಣುಗಳಿಂದ ಪಡೆದು , ಹಾಗೆಯೇ ಹಿಂತಿರುಗಬಾರದು . ಎರಡು ನಿಮಿಷ ಕುಳಿತು ದೇವರ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು . ಆರತಿ ತೆಗೆದುಕೊಂಡ ನಂತರ ಅಥವಾ ದೀಪ ಮುಟ್ಟಿದ ಆನಂತರ ಕೈ ತೊಳೆದುಕೊಳ್ಳಬೇಕು . ಇವುಗಳನ್ನು ಪ್ರಾಚೀನ ಋಷಿಗಳು ತಿಳಿಸಿಕೊಟ್ಟಿದ್ದಾರೆ .

Leave a Comment