ಪೂಜೆ ನಡೆಯುವ ಸಂದರ್ಭದಲ್ಲಿ ಈ ರೀತಿಯ ಶಕುನ ಕಂಡು ಬಂದರೆ ನಿಮಗೆ ಒಳ್ಳೆಯದು ಆಗಲಿದೆ ಎಂದರ್ಥ. ಪೂಜೆ ಮಾಡುವ ಸಮಯದಲ್ಲಿ ಯಾವ ಸಂಕೇತಗಳು ಅಂದರೆ ಯಾವ ಘಟನೆಗಳು ನಡೆದರೆ ಒಳ್ಳೆಯದಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪೂಜೆ ಮಾಡುವ ಸಮಯದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಯಾರು ಕೂಡ ಅವುಗಳನ್ನು ಸೂಕ್ಷ್ಮವಾಗಿ ಪರಿಗಣಿಸುವುದಿಲ್ಲ. ಆದರೆ ಅವು ನಮ್ಮ ಜೀವನದಲ್ಲಿ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತವೆ.
ಶುಭ ಸೂಚನೆ ಎಂದು ಕೂಡ ಹೇಳಬಹುದು. ಪ್ರತಿದಿನ ಸಾಮಾನ್ಯವಾಗಿ ಪೂಜೆ ಮಾಡುವಾಗ ಆ ಸಮಯದಲ್ಲಿ ಮನೆಯ ಆಚೆ ಭಿಕ್ಷುಕ ಅಥವಾ ಸಾಧು ಬಂದು ನಿಮ್ಮನ್ನು ಏನು ಕೇಳದೇ ಜೋರಾಗಿ ಶಿವ ನಾಮಸ್ಮರಣೆಯನ್ನು ಮಾಡಿದರೆ ಇದು ಬಹಳಷ್ಟು ಒಳ್ಳೆಯ ಸಂಕೇತ ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ನಿಮ್ಮ ಬಾಗಿಲಿಗೆ ಬಂದ ಭಿಕ್ಷುಕ ಅಥವಾ ಸಾಧುಗಳಿಗೆ ದಾನ ಕೊಡಬೇಕು. ಈ ರೀತಿಯಾಗಿ ಒಳ್ಳೆಯ ಮನಸ್ಸಿನಿಂದ ದಾನ ಮಾಡುವುದರಿಂದ ಒಳ್ಳೆಯ ಲಾಭ ಸಿಗುತ್ತದೆ ಹಾಗೂ ನಿಮಗೆ ಇದರಿಂದಾಗಿ ಪುಣ್ಯ ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಅಥವಾ ಸಾಯಂಕಾಲ ದೀಪವನ್ನು ಹಚ್ಚುವಾಗ ದೀಪದ ಬೆಳಕು ಜೋರಾಗಿ ಉರಿಯಲು ಪ್ರಾರಂಭಿಸಿದರೆ ಇದು ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಗಳನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಒಳ್ಳೆಯ ಸಂಕೇತವನ್ನು ಸೂಚಿಸುತ್ತದೆ. ಇದರಿಂದಾಗಿ ಸಾಕಷ್ಟು ಒಳ್ಳೆಯ ಲಾಭಗಳು ದೊರೆಯುತ್ತವೆ. ದೀಪವನ್ನ ಹಚ್ಚುವಾಗ ಊದು ಬತ್ತಿ ಹಚ್ಚುವ ಸಮಯದಲ್ಲಿ ಊದುಬತ್ತಿ ಹೊಗೆ ನಿಮ್ಮ ಇಷ್ಟದೇವರ ಬಳಿಗೆ ಹೋಗುತ್ತಿದ್ದರೆ ಇದರಿಂದ ಕೂಡ ಸಾಕಷ್ಟು ಒಳ್ಳೆಯದಾಗುತ್ತದೆ. ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ.
ಪೂಜೆ ಮಾಡುವಾಗ ದೇವರ ಪೋಟೋ ಅಥವಾ ಮೂರ್ತಿಗೆ ಹೂ ಸಮರ್ಪಿಸುವಾಗ ನೀವು ಮುಡಿಸಿದ ಹೂವು ತಕ್ಷಣ ನೇರವಾಗಿ ಬಿದ್ದರೆ ಇದರಿಂದ ಕೂಡ ನಿಮಗೆ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ. ಈ ರೀತಿ ಹೂವು ಬೀಳುವುದರಿಂದ ವಿಶೇಷವಾಗಿ ನೀವು ದೇವರಿಗೆ ಸಮರ್ಪಿಸಿದ ಹೂ ದೇವರಿಗೆ ಇಷ್ಟವಾಗಿದೆ ತೃಪ್ತಿಯಾಗಿದೆ ಎಂದು ಅರ್ಥ. ನೀವು ದೇವರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಕೋರಿಕೆಗಳನ್ನು ಹೇಳಿಕೊಂಡರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಶೀರ್ಘವಾಗಿ ನೆರವೇರುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ.
ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಖಂಡಿತವಾಗಿ ಸಾಧಿಸುತ್ತೀರಿ. ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ಈ ಎಲ್ಲಾ ಶುಭ ಘಟನೆಗಳು ನಡೆದರೆ ನಮ್ಮ ಭವಿಷ್ಯದಲ್ಲಿ ಮುಂದೆ ಒಳ್ಳೆಯ ಫಲಗಳನ್ನು ಕಾಣುತ್ತೀರ ಹಾಗೂ ಶುಭಕಾರ್ಯಗಳು ಯಾವುದೇ ವಿಘ್ನವಿಲ್ಲದೆ ನಡೆಯುತ್ತವೆ ಎಂದು ಹೇಳಲಾಗುತ್ತದೆ. ದೇವರ ಅನುಗ್ರಹ ನಮ್ಮ ಮೇಲೆ ಇರಲು ನಿಷ್ಮಲ್ಮಶ ಭಕ್ತಿ ಬಹಳ ಮುಖ್ಯವಾಗಿ ಇರಬೇಕಾಗುತ್ತದೆ.