ನಾವು ಈ ಲೇಖನದಲ್ಲಿ ಶ್ರೀ ಕೃಷ್ಣನ ಪ್ರಕಾರ ಪ್ರತಿದಿನ ತುಳಸಿಗೆ ನೀರನ್ನು ಹಾಕಿದರೆ , ಏನು ಫಲ ಸಿಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ . ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಗಿಡ ಎಂದು ತಿಳಿಯಲಾಗಿದೆ . ಈ ತುಳಸಿ ಗಿಡದಲ್ಲಿ ಸಾಕ್ಷಾತ್ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ. ಭಗವಂತನಾದ ಶ್ರೀ ವಿಷ್ಣು ದೇವರು ತುಳಸಿಯಲ್ಲಿ ಇಲ್ಲ ಅಂದರೆ , ಯಾವುದೇ ಪ್ರಕಾರದ ನೈವೇದ್ಯಗಳನ್ನು ಸ್ವೀಕಾರ ಮಾಡುವುದಿಲ್ಲ .
ತುಳಸಿಗೆ ವಿಷ್ಣು ಪ್ರಿಯ ಎಂದು ಕೂಡ ಕರೆಯುತ್ತಾರೆ . ಹಾಗಾಗಿ ಯಾವ ಮನುಷ್ಯರು ತುಳಸಿ ಪೂಜೆಯನ್ನು ಮಾಡುತ್ತಾರೆ ಆ ಮನುಷ್ಯರು ದರಿದ್ರರು ಆಗಿ ಇರುವುದಿಲ್ಲ . ಅವರಿಗೆ ಯಾವತ್ತೂ ದುರ್ಗತಿ ಬರುವುದಿಲ್ಲ . ಇಂತಹ ಮನುಷ್ಯರು ದೊಡ್ಡದಾದ ಪಾಪ ಮಾಡಿದರೂ , ಅವರು ನರಕಕ್ಕೆ ಹೋಗುವುದಿಲ್ಲ . ಕೇವಲ ತುಳಸಿಗೆ ನೀರನ್ನು ಮಾತ್ರ ಅರ್ಪಿಸಿದರೂ ಯಾವ ಫಲ ಸಿಗುತ್ತದೆ . ಇದರ ಬಗ್ಗೆ ಒಂದು ಮಹಾನ್ ಕಥೆಯ ಮೂಲಕ ತಿಳಿದುಕೊಳ್ಳಬಹುದು .
ಒಂದು ಬಾರಿ ದೇವಿ ಸತ್ಯಭಾಮೆ ಭಗವಂತನಾದ ಶ್ರೀ ಕೃಷ್ಣನ ಬಳಿ ಒಂದು ಪ್ರಶ್ನೆಯನ್ನು ಕೇಳುತ್ತಾಳೆ . ಹೇ ಸ್ವಾಮಿ ನೀವು ಮೂರು ಲೋಕದ ಸ್ವಾಮಿ ಆಗಿದ್ದೀರಾ . ಆದರೂ ಸಹ ನೀವು ತುಳಸಿ ಗಿಡದ ಪೂಜೆಯನ್ನು ಏಕೆ ಮಾಡುತ್ತೀರಾ . ಪ್ರತಿನಿತ್ಯ ಇದಕ್ಕೆ ನೀರನ್ನು ಯಾಕೆ ಹಾಕುತ್ತೀರಾ .ಈ ಗಿಡಕ್ಕೆ ನೀರನ್ನು ಹಾಕುವ ಮಹತ್ವವನ್ನು ನಾನು ತಿಳಿದುಕೊಳ್ಳಲು ಇಷ್ಟ ಪಡುತ್ತೇನೆ .ಆಗ ಭಗವಂತನಾದ ಶ್ರೀ ಕೃಷ್ಣನು ಹೇಳುತ್ತಾನೆ . ಸತ್ಯಭಾಮೆ ತುಳಸಿ ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಆಗಿದೆ .
ಪ್ರತಿನಿತ್ಯ ಇದರ ಪೂಜೆ ಮಾಡಿದರೆ, ಕೋಟ್ಯಂತರ ಲಾಭಗಳು ಇದೆ . ಕೇವಲ ಇದಕ್ಕೆ ಜಲವನ್ನ ಅರ್ಪಿಸಿದರೂ ಮನುಷ್ಯನ ಕೋಟ್ಯಂತರ ಪಾಪಗಳು ನಷ್ಟವಾಗುತ್ತವೆ . ತುಳಸಿಗೆ ಜಲವನ್ನು ಅರ್ಪಿಸುವ ಮಹತ್ವವನ್ನು ತಿಳಿಸುವ
ಮುನ್ನ ನಿನಗೆ ಅತ್ಯಂತ ಪ್ರಾಚೀನ ಕಥೆಯನ್ನು ತಿಳಿಸುತ್ತೇನೆ . ಕಥೆಯ ಮೂಲಕ ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ . ಹಾಗಾಗಿ ಈ ಕಥೆಯನ್ನು ಗಮನವಿಟ್ಟು ಕೇಳು . ಶ್ರೀ ಕೃಷ್ಣನು ಹೇಳುತ್ತಾನೆ . ಯಾವ ಮನುಷ್ಯರು ಕೇವಲ ಈ ಕಥೆಯನ್ನು ಕೇಳಿಸಿ ಕೊಳ್ಳುತ್ತಾರೋ ,
ಅಂತವರಿಗೆ ನೂರು ವರ್ಷಗಳ ಕಾಲ ತುಳಸಿಗೆ ಜಲವನ್ನು ಅರ್ಪಿಸಿದಷ್ಟು ಪುಣ್ಯ ದೊರೆಯುತ್ತದೆ . ಆಗ ದೇವಿ ಸತ್ಯಭಾಮೆ ಈ ರೀತಿ ಹೇಳುತ್ತಾರೆ . ಹೇ ಪ್ರಭು ಈ ಕಥೆಯನ್ನು ನಾನು ಖಂಡಿತವಾಗಿಯೂ ಕೇಳಲು ಇಷ್ಟಪಡುತ್ತೇನೆ . ನನಗೆ ನೀವು ಆ ಕಥೆಯನ್ನು ಹೇಳಿ . ನಾನು ಆ ಕಥೆಯನ್ನು ಗಮನವಿಟ್ಟು ಪೂರ್ತಿಯಾಗಿ ಕೇಳುತ್ತೇನೆ . ಶ್ರೀ ಕೃಷ್ಣ ದೇವಿ ಸತ್ಯಭಾಮೆಯವರಿಗೆ , ಪ್ರಾಚೀನವಾದ ಒಂದು ಇತಿಹಾಸವಿದೆ .ಇದು ತುಂಬಾ ಉತ್ತಮ . ಪುಣ್ಯ ಫಲವನ್ನು ನೀಡುವಂತದ್ದು ಆಗಿದೆ .
ಇದು ಪೂರ್ವಕಾಲದ ಮಾತು . ಅವಂತಿ ಪುರದಲ್ಲಿ ಒಬ್ಬ ಬ್ರಾಹ್ಮಣ ಇದ್ದ . ಈತ ಜನ್ಮದಿಂದಲೇ ಬ್ರಾಹ್ಮಣನಾಗಿದ್ದ . ಆದರೆ ಈತ ಕರ್ಮದಲ್ಲಿ ಭ್ರಷ್ಟ ಮತ್ತ ಕಪಟನಾಗಿದ್ದ . ಆತ ಕಂಬಳಿ ಮತ್ತು ಚರ್ಮವನ್ನು ವ್ಯಾಪಾರ ಮಾಡಿ ಹಣವನ್ನು ಗಳಿಸುತ್ತಿದ್ದ . ತುಂಬಾ ಅಧಿಕವಾಗಿ ಸುಳ್ಳನ್ನು ಮಾತನಾಡುವ ವ್ಯಕ್ತಿಯಾಗಿದ್ದ . ಮತ್ತು ಆತನ ಮನಸ್ಸು ಕೆಟ್ಟ ಕಾರ್ಯಗಳನ್ನು ಮಾಡುವ ಬಗ್ಗೆ ಯೋಚನೆ ಮಾಡುತ್ತಿತ್ತು . ಈತ ಕಳ್ಳತನ , ಜೂಜು ಆಡುವುದು , ವೇಶ್ಯಾಗಮನ , ಇದರಲ್ಲಿ ನಿರತನಾಗಿರುತ್ತಿದ್ದ .
ಈತನು ಜೀವನದಲ್ಲಿ ಪುಣ್ಯ ಕೆಲಸಗಳನ್ನು ಮಾಡಿರಲಿಲ್ಲ . ಶಾಸ್ತ್ರಗಳ ಅಧ್ಯಯನ ಮಾಡಲಿಲ್ಲ . ಪೂಜೆ ಪಾಠಗಳನ್ನು ಸಹ ಮಾಡಲಿಲ್ಲ . ಯಾವತ್ತೂ ತನ್ನ ಮನಸ್ಸನ್ನ ಬೇರೆಯವರ ಹಣದ ಮೇಲೆ ಇಡುತ್ತಿದ್ದ. ಈತ ಹಗಲಿನಲ್ಲಿ ಹಣ ಗಳಿಸುತ್ತಿದ್ದ . ರಾತ್ರಿ ವೇಶ್ಯರೊಡನೆ ಹಣ ಕಳೆಯುತ್ತಿದ್ದ . ಈ ರೀತಿಯಾಗಿ ಆ ಬ್ರಾಹ್ಮಣನು ಪಾಪ ಮಾಡುತ್ತಾ ಕಾಲ ಕಳೆಯುತ್ತಿದ್ದನು . ಈತ ತನ್ನ ಬಾಯಿಂದ ಯಾವತ್ತಿಗೂ ಭಗವಂತನಾದ ಶ್ರೀ ವಿಷ್ಣುವಿನ ಜಪವನ್ನು ಮಾಡಿರಲಿಲ್ಲ .ದೇವಾನು ದೇವತೆಗಳ ಪೂಜೆಯನ್ನು ಸಹ ಮಾಡಿರಲಿಲ್ಲ . ಈ ರೀತಿ ಪಾಪಗಳನ್ನು ಮಾಡುತ್ತಲೇ ವರ್ಷಗಳು ಕಳೆದನು .
ನಂತರ ಒಂದು ದಿನ ಆ ಬ್ರಾಹ್ಮಣನು ಖರೀದಿ ಮತ್ತು ವ್ಯಾಪಾರ ಮಾಡಲು ಮಾಹೇಶ್ ಪುರಿ ಅನ್ನೋ ಊರಿಗೆ ಬಂದು ತಲುಪುತ್ತಾನೆ . ಆ ನಗರದ ಹತ್ತಿರದಲ್ಲಿ ನರ್ಮದಾ ನದಿ ಹರಿಯುತ್ತಿತ್ತು . ಆ ನಧಿಯಲ್ಲಿ ಸ್ನಾನ ಮಾಡಲು ತುಂಬಾ ದೂರದ ಊರಿನಿಂದ ಜನ ಬರುತ್ತಿದ್ದರು . ನಂತರ ಆ ಬ್ರಾಹ್ಮಣನು ನದಿಯ ಹತ್ತಿರದಲ್ಲಿ ಇರುವ ಒಂದು ಆಶ್ರಮದಲ್ಲಿ ಉಳಿದು ಕೊಂಡನು . ಆ ಆಶ್ರಮದಲ್ಲಿ ಅನೇಕ ವಿದ್ವಾಂಸರು , ಬ್ರಾಹ್ಮಣರು , ಪುರಾಣಗಳನ್ನು ಜಪ ಮಾಡುವುದರಲ್ಲಿ , ಭಗವಂತನಾದ ಶ್ರೀ ವಿಷ್ಣುವಿನ ನಾಮ ಜಪ ಮಾಡುವುದರಲ್ಲಿ ಮಗ್ನರಾಗಿದ್ದರು . ಈ ಮೋಸಗಾರ ಬ್ರಾಹ್ಮಣ ನಾಟಕವನ್ನು ಮಾಡುತ್ತಾ ,
ಅಲ್ಲಿಯೇ ಅವರ ಜೊತೆ ಉಳಿದು ಕೊಳ್ಳುತ್ತಾನೆ . ಆ ವಿದ್ವಾನ ಬ್ರಾಹ್ಮಣರ ಜೊತೆ ಇದ್ದುಕೊಂಡು , ಇವನಿಗೂ ಸಹ ಶ್ರೀ ಹರಿ ವಿಷ್ಣು ಅವರ ನಾಮಸ್ಮರಣೆ ಕೇಳಲು ಸಿಗುತ್ತಿತ್ತು . ಆ ಸ್ಥಾನದಲ್ಲಿ ಒಂದು ತಿಂಗಳ ತನಕ ಇದ್ದರು. ನಂತರ ಅಲ್ಲಿಗೆ ಬಂದಿರುವ ಜನರು ಗೋಮಾತೆಯ ಸೇವೆಯನ್ನು ಮಾಡಿ , ಬ್ರಾಹ್ಮಣರಿಗೆ ಊಟವನ್ನು ಮಾಡಿಸಿದರು .ಆ ಪಾಪಿ ಬ್ರಾಹ್ಮಣನು ಕೂಡ ಇವರ ಜೊತೆ ಕುಳಿತು ಊಟ ಮಾಡಿದನು . ಇಲ್ಲಿ ಭಗವಂತನ ಪ್ರಸಾದವನ್ನು ಸೇವಿಸಿದ್ದರು .
ಆ ಆಶ್ರಮದಲ್ಲಿ ಒಂದು ತುಳಸಿ ಗಿಡವಿತ್ತು .ಆ ಬ್ರಾಹ್ಮಣನು ಗೊತ್ತಿದ್ದೋ , ಗೊತ್ತಿಲ್ಲದೆಯೋ , ಆ ತುಳಸಿ ಗಿಡಕ್ಕೆ ನೀರನ್ನು ಹಾಕುತ್ತಿದ್ದ . ಈತನ ಮನಸ್ಸಿನಲ್ಲಿ ಯಾವುದೇ ವಿಚಾರಗಳು ಇರಲಿಲ್ಲ . ಪ್ರತಿದಿನ ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಆ ತುಳಸಿ ಗಿಡಕ್ಕೆ ಹಾಕುತ್ತಿದ್ದ . ನಂತರ ಒಂದು ದಿನ ಆಶ್ರಮದಲ್ಲಿ ಆತ ಮಲಗಿ ಕೊಂಡಿದ್ದ . ಆ ಸ್ಥಳಕ್ಕೆ ಒಂದು ಸರ್ಪವು ಬಂದಿತು . ಆತನನ್ನು ಆ ಸರ್ಪ ನಿದ್ರೆಯಲ್ಲಿಯೇ ಕಚ್ಚಿತು . ನಿದ್ರೆಯಲ್ಲಿಯೇ ಆ ಪಾಪಿ ಬ್ರಾಹ್ಮಣನ ಮೃತ್ಯು ಕೂಡ ಆಯ್ತು .
ಮುಂಜಾನೆ ಬೇರೆ ಬ್ರಾಹ್ಮಣರು ಈತನನ್ನು ಆ ಅವಸ್ಥೆಯಲ್ಲಿ ನೋಡಿದರು . ಆಗ ಅವರು ತುಳಸಿ ಎಲೆ ಅಥವಾ ತುಳಸಿ ನೀರನ್ನು ಆತನ ಬಾಯಲ್ಲಿ ಹಾಕುತ್ತಾರೆ . ನಂತರ ಎಲ್ಲಾ ಬ್ರಾಹ್ಮಣರಿಗೆ ಆತನ ಮೃತ್ಯು ಆಗಿದೆ ಅನ್ನುವ ವಿಷಯ ಗೊತ್ತಾಗುತ್ತದೆ .ಆ ಪಾಪಿ ಬ್ರಾಹ್ಮಣನ ಮೃತ್ಯುವಿನ ಸ್ಥಳಕ್ಕೆ ಯಮ ದೂತರು ಬರುತ್ತಾರೆ. ಆತನನ್ನು ಎಳೆದುಕೊಂಡು ಯಮ ಲೋಕಕ್ಕೆ ಹೋಗಲು ಶುರು ಮಾಡುತ್ತಾರೆ . ದಾರಿಯಲ್ಲಿ ಆತ ಅಳಲು ಶುರು ಮಾಡುತ್ತಾನೆ .ಯಮ ದೂತರಿಗೆ ಈ ರೀತಿಯಾಗಿ ಹೇಳುತ್ತಾನೆ .
ಹೇ ಯಮ ಧೂತರೇ ನನ್ನನ್ನು ಎಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದೀರಾ . ನನ್ನ ಮೃತ್ಯು ಯಾವ ಕಾರಣದಿಂದ ಹಾಗಿದೆ . ಆಗ ಯಮ ದೂತರು ಹೇಳುತ್ತಾರೆ . ಹೇ ದುಷ್ಟ ಬ್ರಾಹ್ಮಣನೆ ನೀನು ಜನ್ಮದಿಂದ ಮತ್ತು ಮೃತ್ಯುವಿನ ತನಕ ತುಂಬಾ ಪಾಪಗಳನ್ನು ಮಾಡಿದ್ದೀಯಾ .ನಿನ್ನ ಪಾಪಗಳ ಕಾರಣದಿಂದಲೇ ಒಂದು ಕಪ್ಪು ಹಾವು ನಿನ್ನನ್ನು ಕಚ್ಚಿತು . ಈಗ ನಿನ್ನ ಮೃತ್ಯು ಆಗಿದೆ . ಈಗ ನಾನು ನಿನ್ನನ್ನು ಯಮ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ . ಅಲ್ಲಿ ಯಮ ರಾಜರು ನಿನ್ನ ಪಾಪ ಪುಣ್ಯ ಲೆಕ್ಕಾಚಾರ ಹಾಕುತ್ತಾರೆ . ಖಂಡಿತವಾಗಿ ಅವರು ನಿನ್ನನ್ನು ನರಕಕ್ಕೆ ಹಾಕುತ್ತಾರೆ . ನಂತರ ಬ್ರಾಹ್ಮಣ ಜೋರಾಗಿ ಕಣ್ಣೀರು ಹಾಕಲು ಶುರು ಮಾಡುತ್ತಾನೆ .
ಆ ಯಮ ಧೂತರ ಬಳಿ ಕ್ಷಮೆಯಾಚನೆ ಮಾಡುತ್ತಾನೆ .ಆದರೆ ಯಮ ಧೂತರಿಗೆ ಬ್ರಾಹ್ಮಣನ ಮೇಲೆ ಸ್ವಲ್ಪವೂ ಕರುಣೆ ಬರುವುದಿಲ್ಲ . ಆತನನ್ನು ಹೊಡೆಯುತ್ತಾ ಯಮ ಲೋಕಕ್ಕೆ ಎಳೆದುಕೊಂಡು ಹೋಗುತ್ತಾರೆ. ನಂತರ ಯಮನ ಬಳಿ ಹೋಗಿ ತಲುಪುತ್ತಾರೆ . ಚಿತ್ರ ಗುಪ್ತರು ಆ ಬ್ರಾಹ್ಮಣನ ಜನ್ಮದಿಂದ ಹಿಡಿದು ಮೃತ್ಯುವಿನ ತನಕ ಇರುವ ಎಲ್ಲಾ ಪಾಪ ಪುಣ್ಯಗಳ ಲೆಕ್ಕಾಚಾರವನ್ನು ತೆಗೆಯುತ್ತಾರೆ .ಯಮ ರಾಜರಿಗೆ ಈ ರೀತಿಯಾಗಿ ಹೇಳುತ್ತಾರೆ . ಈ ಬ್ರಾಹ್ಮಣ ಜನ್ಮದಿನದ ಹಿಡಿದು ಮೃತ್ಯುವಿನ ತನಕ ಬರಿ ಪಾಪವನ್ನೇ ಮಾಡಿದ್ದಾನೆ .
ಈತ ಯಾವುದೇ ರೀತಿಯ ಪುಣ್ಯ ಕಾರ್ಯವನ್ನು ಮಾಡಿಲ್ಲ . ಈತನನ್ನು ನರಕದಲ್ಲಿ ಹಾಕಿ ಎಂದು ಹೇಳುತ್ತಾರೆ .ನಂತರ ಯಮ ರಾಜರು ಈ ರೀತಿ ಯಾಕೆ ಹೇಳುತ್ತಾರೆ . ಹೇ ದೂತರೇ ಜೀವನವಿಡೀ ಪಾಪವನ್ನು ಮಾಡಿದ ಈ ಬ್ರಾಹ್ಮಣನನ್ನು ಎತ್ತಿಕೊಂಡು ಈತನನ್ನು ಕುಂಬಿ ಪಾಕ ನರಕದಲ್ಲಿ ಹಾಕಿರಿ .ಯಮ ರಾಜರ ಆದೇಶವನ್ನು ಪಾಲಿಸುತ್ತಾ , ಈ ಯಮ ದೂತರು ನಗುತ್ತಾ ಆ ಪಾಪಿ ಬ್ರಾಹ್ಮಣನನ್ನು ಕರೆದುಕೊಂಡು ಹೋಗುತ್ತಾರೆ. ಆತನನ್ನ ದೊಣ್ಣೆಯಿಂದ ಹೊಡೆಯಲು ಶುರು ಮಾಡುತ್ತಾರೆ .
ಇದರಿಂದ ಆ ಬ್ರಾಹ್ಮಣನ ತಲೆ ಹೊಡೆಯುತ್ತದೆ . ನಂತರ ಆತನನ್ನು ಕುಂಬಿ ಪಾಕ ಹೆಸರಿನ ನರಕಕ್ಕೆ ಕರೆದುಕೊಂಡು ಹೋಗುತ್ತಾರೆ . ಆ ಭಯಂಕರವಾದ ನರಕದಲ್ಲಿ ಕುದಿಯುತ್ತಿರುವ ಎಣ್ಣೆಯ ದೊಡ್ಡದಾದ ಪಾತ್ರೆಗಳು ಇದ್ದವು .ಇದರ ಕೆಳಗೆ ಭಯಂಕರವಾದ ಅಗ್ನಿ ಉರಿಯುತ್ತಿತ್ತು .ನಂತರ ಯಮರಾಜನ ದೂತರು ಕುದಿಯುತ್ತಿರುವ ಎಣ್ಣೆಯಲ್ಲಿ ಆ ಬ್ರಾಹ್ಮಣನನ್ನು ಹಾಕುತ್ತಾರೆ . ಆದರೆ ಆ ಬ್ರಾಹ್ಮಣ ಕುದಿಯುತ್ತಿರುವ ಎಣ್ಣೆಗೆ ಬಿದ್ದರೂ , ಆ ಎಣ್ಣೆ ಪೂರ್ತಿಯಾಗಿ ತಂಪಾಗುತ್ತದೆ .ಈ ವಿಚಿತ್ರವಾದ ಘಟನೆಯನ್ನು ನೋಡಿದ ಆ ಯಮ ದೂತರಿಗೆ ತುಂಬಾ ಆಶ್ಚರ್ಯ ಆಯಿತು .
ಈ ರೀತಿ ಹಿಂದೆ ಯಾವಾಗಲೂ ನಡೆದಿರಲಿಲ್ಲ . ಎಷ್ಟೆಲ್ಲಾ ಪಾಪಿಗಳನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿದಾಗ , ಅವರೆಲ್ಲ ಎಣ್ಣೆಯಲ್ಲಿ ಬಿದ್ದು ನರಳುತ್ತಿದ್ದರು .ಆದರೆ ಹೇಗೆ ಈ ಬ್ರಾಹ್ಮಣನು ಎಣ್ಣೆಯಲ್ಲಿ ಬಿದ್ದರು , ಅಚಾನಕ್ಕಾಗಿ ಆ ಎಣ್ಣೆ ತಂಪು ಮತ್ತು ಶಾಂತವಾಯಿತು . ಈ ಅಚ್ಚರಿಯನ್ನು ಕಂಡ ಯಮ ದೂತರು ವೇಗವಾಗಿ ಓಡಿ ಹೋಗಿ ಯಮ ರಾಜರ ಬಳಿ ತಲುಪುತ್ತಾರೆ . ಯಮ ರಾಜರು ಕೇಳುತ್ತಾರೆ . ಹೇ ದೂತರೇ ಬಂದಿರುವ ವಿಷಯ ಏನು ಇದೆ .ಇಷ್ಟು ವೇಗವಾಗಿ ಬರಲು ಕಾರಣವೇನು .
ಹೇ ಯಮ ರಾಜರೇ ನೀವು ಯಾವ ಬ್ರಾಹ್ಮಣನನ್ನು ಕುಂಬಿ ಪಾಕದಲ್ಲಿ ಹಾಕಲು ಹೇಳಿದ್ದೀರಾ , ನಾವು ಕೂಡ ಕುಂಬಿ ಪಾಕ ನರಕದಲ್ಲಿ ಎಸೆದವು . ನರಕದ ಅಗ್ನಿಯು ಹಾರಿ ಹೋಯಿತು . ಕುದಿಯುತ್ತಿರುವ ಎಣ್ಣೆಯೂ ಕೂಡ ತಂಪಾಯಿತು . ಹೇ ದೂತರೇ ಇದು ವಿಚಿತ್ರವಾದ ಘಟನೆಯಾಗಿದೆ . ಈ ರೀತಿ ಈ ಮೊದಲು ಯಾವತ್ತೂ ಆಗಿರಲಿಲ್ಲ . ಯಮ ರಾಜರು ಯೋಚನೆ ಮಾಡಲು ಶುರು ಮಾಡುತ್ತಾರೆ . ಆ ಸ್ಥಾನಕ್ಕೆ ದೇವ ಖುಷಿ ನಾರದರು ಬರುತ್ತಾರೆ . ನಾರದರನ್ನು ನೋಡಿದ ಯಮ ರಾಜರು ಮತ್ತು ಯಮದೂತರು ಪ್ರಸನ್ನಗೊಳ್ಳುತ್ತಾರೆ .
ಅವರಿಗೆ ನಮಸ್ಕಾರ ಮಾಡಿ ಸ್ವಾಗತ ಮಾಡುತ್ತಾರೆ . ನಂತರ ಯಮ ರಾಜರು ನಾರದರಿಗೆ ಒಂದು ಮಾತನ್ನು ಹೇಳುತ್ತಾರೆ . ಹೇ ನಾರದರೇ ನೀವು ಸರಿಯಾದ ಸಮಯಕ್ಕೆ ಬಂದಿದ್ದೀರಾ . ನಾವು ಇಂದು ಅತ್ಯಂತ ಪಾಪಿಯಾದ ಒಬ್ಬ ಬ್ರಾಹ್ಮಣ ವ್ಯಕ್ತಿಯನ್ನು ಕುಂಬಿ ಪಾಕ ಹೆಸರಿನ ನರಕದಲ್ಲಿ ಎಸೆದವು, ಆದರೆ ಆತ ಬೀಳುತ್ತಿದ್ದಂತೆ , ನರಕದ ಅಗ್ನಿಯು ಹಾರಿ ಹೋಯಿತು .ಮತ್ತು ಕುದಿಯುತ್ತಿರುವ ಎಣ್ಣೆ ತಂಪು ಆಯಿತು . ಆಗ ನಾರದರು ಯಮ ರಾಜರಿಗೆ ಹೇಳುತ್ತಾರೆ . ನೀವು ಯಾವ ಬ್ರಾಹ್ಮನನ್ನು ಕುಂಬಿಪಾಕದಲ್ಲಿ ಹಾಕಿದ್ದೀರೋ ,
ಆತ ನರಕಕ್ಕೆ ಹೋಗಲು ಯೋಗ್ಯನಾಗಿಲ್ಲ .ಯಾಕೆಂದರೆ ಈ ಬ್ರಾಹ್ಮಣ ತನಗೆ ಗೊತ್ತಿಲ್ಲದೆ ಯಾವ ಕರ್ಮವನ್ನು ಮಾಡಿದ್ದಾನೆ ಎಂದರೆ , ಇದು ನರಕವನ್ನೇ ನಾಶ ಮಾಡುವಂಥದ್ದು ಆಗಿದೆ . ಯಾವ ಮನುಷ್ಯನು ಪುಣ್ಯ ಕಾರ್ಯಗಳನ್ನು ಮಾಡುವಂತ ವ್ಯಕ್ತಿಗಳ ಜೊತೆ ಇರುತ್ತಾನೋ , ಆತನಿಗೆ ಅವರ ಪುಣ್ಯದ ಭಾಗ ಖಂಡಿತವಾಗಿ ಸಿಗುತ್ತದೆ .ಈ ಬ್ರಾಹ್ಮಣನು ಒಂದು ತಿಂಗಳ ಕಾಲ ಭಗವಂತನಾದ ವಿಷ್ಣುವಿನ ಭಕ್ತರ ಜೊತೆಯಲ್ಲಿ ಇದ್ದ . ಈ ಬ್ರಾಹ್ಮಣ ಆಶ್ರಮದಲ್ಲಿ ಇದ್ದುಕೊಂಡು ಪ್ರತಿದಿನ ತುಳಸಿಗೆ ಜಲವನ್ನು ಅರ್ಪಿಸಿದ್ದಾನೆ . ಹಾಗಾಗಿ ಈತ ದೊಡ್ಡ ಪುಣ್ಯವಂತನು ಆಗಿದ್ದಾನೆ .
ಈತನ ಎಲ್ಲಾ ಪಾಪಗಳು ನಷ್ಟವಾಗಿದೆ . ಈಗ ಬ್ರಾಹ್ಮಣ ವಿಷ್ಣು ಲೋಕಕ್ಕೆ ಹೋಗುವ ಅಧಿಕಾರವನ್ನು ಹೊಂದಿದ್ದಾನೆ . ಬ್ರಾಹ್ಮಣ ಗೊತ್ತಿಲ್ಲದೆ ಎಷ್ಟು ಪುಣ್ಯಗಳನ್ನ ಗಳಿಸಿದ್ದಾನೆ ಎಂದರೆ , ಜನ್ಮ ಜನ್ಮಂತರದಲ್ಲಿಯೂ ಮನುಷ್ಯನಿಗೆ ಅದು ಸಿಗುವುದಿಲ್ಲ .ಹಾಗಾಗಿ ಈತನನ್ನು ನರಕದಲ್ಲಿ ಹಾಕಬೇಡಿ . ಬ್ರಾಹ್ಮಣನಿಗೆ ಕೇವಲ ಇಷ್ಟು ದಂಡವನ್ನು ಕೊಡಬಹುದು . ಈತನಿಗೆ ನರಕ ಲೋಕದ ದರ್ಶನವನ್ನು ಮಾಡಿಸಿರಿ .ನಾರದ ಮುನಿಯ ಮಾತನ್ನು ಕೇಳಿದ ಯಮ ರಾಜರು ತುಂಬಾ ಪ್ರಸನ್ನ ಗೊಳ್ಳುತ್ತಾರೆ . ಬ್ರಾಹ್ಮಣನನ್ನು ಕುಂಬಿ ಪಾಕ ನರಕದಿಂದ ತೆಗೆದುಕೊಂಡು ಬರುತ್ತಾರೆ .ತನ್ನ ದೂತರಿಗೆ ಈ ರೀತಿ ಹೇಳುತ್ತಾರೆ .
ಈ ಬ್ರಾಹ್ಮಣ ಮಹಾಶಯನನ್ನು ಕರೆದುಕೊಂಡು ಸಂಪೂರ್ಣ ನರಕ ದರ್ಶನ ಮಾಡಿಸಿ . ನಂತರ ಯಮದೂತರು ಆ ಬ್ರಾಹ್ಮಣನನ್ನು ಕರೆದುಕೊಂಡು ಹೋಗುತ್ತಾರೆ .ಸಂಪೂರ್ಣ ನರಕ ದರ್ಶನವನ್ನು ತೋರಿಸುತ್ತಾರೆ . ಭಗವಂತನಾದ ಶ್ರೀ ಕೃಷ್ಣರು ಹೇಳುತ್ತಾರೆ . ಈ ದೇವಿ ಸತ್ಯಭಾಮ ಈ ರೀತಿಯಾಗಿ ಯಮದೂತರು ಸಂಪೂರ್ಣ ನರಕದ ದರ್ಶನ ಮಾಡಿಸುತ್ತಾರೆ .ನಂತರ ಯಕ್ಷ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ . ನಂತರ ಆ ಬ್ರಾಹ್ಮಣ ಒಬ್ಬ ಯಕ್ಷನು ಆಗುತ್ತಾನೆ .ನಂತರ ಶ್ರೀ ಕೃಷ್ಣ ರು ಹೇಳುತ್ತಾರೆ .
ಹೇ ದೇವಿ ವನಸ್ಪತಿ ಹೆಸರಿನ ತುಳಸಿ. ಮಾಸದ ಹೆಸರು ಕಾರ್ತಿಕ , ಏಕಾದಶಿ ತಿಥಿಯ ಹೆಸರು , ಮತ್ತು ಕ್ಷೇತ್ರದಲ್ಲಿ ನನಗೆ ದ್ವಾರಕ ಪ್ರಿಯವಾಗಿದ್ದು , ಹಾಗಾಗಿ ಯಾವ ಮನುಷ್ಯರು ಪ್ರತಿನಿತ್ಯ ತುಳಸಿಯ ಪೂಜೆ ಮಾಡುತ್ತಾರೋ , ತುಳಸಿಗೆ ಜಲವನ್ನು ಅರ್ಪಿಸುತ್ತಾರೋ , ಅವರು ನನಗೆ ಅತ್ಯಧಿಕ ಪ್ರಿಯವಾಗಿ ಇರುತ್ತಾರೆ . ಆ ಮನುಷ್ಯನಿಗೆ ಯಾವತ್ತಿಗೂ ದುರ್ಗತಿ ಆಗುವುದಿಲ್ಲ .ಆತ ಯಾವತ್ತಿಗೂ ನರಕಕ್ಕೆ ಹೋಗಿ ಬೀಳುವುದಿಲ್ಲ .ಯಾರ ಮನೆಯಲ್ಲಿ ಯಾವತ್ತಿಗೂ ತುಳಸಿ ಗಿಡ ಹಚ್ಚ ಹಸಿರಾಗಿ ಇರುತ್ತದೆಯೋ , ಆ ಮನೆಯಲ್ಲಿ ಸುಖ , ಶಾಂತಿ , ಸಮೃದ್ಧಿ ನೆಲೆಸುತ್ತದೆ . ಭಗವಂತನಾದ ಶ್ರೀ ವಿಷ್ಣುವಿನ ಪೂಜೆಯಲ್ಲಿ
ಮತ್ತು ಅವರಿಗೆ ಅರ್ಪಿಸುವ ನೈವೇದ್ಯದಲ್ಲಿ ತುಳಸಿ ಎಲೆ ಕಂಡಿತವಾಗಿ ಇರಬೇಕು . ಯಾಕೆಂದರೆ ತುಳಸಿ ಎಲೆ ಇಲ್ಲ ಎಂದರೆ , ಶ್ರೀ ವಿಷ್ಣು ಯಾವುದೇ ಪ್ರಕಾರದ ನೈವೇದ್ಯವನ್ನ ಸ್ವೀಕಾರ ಮಾಡುವುದಿಲ್ಲ . ಹಾಗಾಗಿ ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡ ಖಂಡಿತವಾಗಿ ಇರಬೇಕು . ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ , ಸುಖ, ಶಾಂತಿ ಮತ್ತು ಸಮೃದ್ದಿಗಾಗಿ ಖಂಡಿತವಾಗಿ ತುಳಸಿ ಗಿಡಕ್ಕೆ ಹಸಿರು ಬಣ್ಣದಿಂದ ರೆಡಿಯಾಗಿರುವ ಬಟ್ಟೆಯನ್ನು ಧರಿಸಬೇಕು . ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆ ಧರಿಸಲಿಲ್ಲ ಎಂದರೆ ,
ಅಪೂರ್ಣವಾಗುತ್ತದೆ . ತುಳಸಿ ಕೇವಲ ಸಸಿ ಅಷ್ಟೇ ಅಲ್ಲ ಬದಲಿಗೆ ದೇವಿಯಾಗಿದ್ದಾರೆ . ವಿಷ್ಣುವಿನ ಪತ್ನಿಯಾಗಿದ್ದಾರೆ .ಆದ್ದರಿಂದ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನು ಅರ್ಪಿಸಬೇಕು. ಇದರಿಂದ ಗಂಡ ಹೆಂಡತಿಯ ನಡುವೆ ಪ್ರೀತಿ – ನಂಬಿಕೆ ಹೆಚ್ಚಾಗುತ್ತದೆ . ಮನೆಯಲ್ಲಿರುವ ಮಹಿಳೆಯರು ಯಾವಾಗಲೂ ಸೌಭಾಗ್ಯ ಶಾಲಿಗಳು ಆಗಿ ಇರುತ್ತಾರೆ . ಖಂಡಿತವಾಗಿ ತುಳಸಿ ವಿವಾಹವನ್ನು ಮಾಡಬೇಕು. ಇದರಿಂದ ದುಃಖಗಳು ಅಂತ್ಯವಾಗುತ್ತದೆ . ಸಾಂಸಾರಿಕ ಜೀವನ ಸುಖಮಯವಾಗಿ ನಡೆಯುತ್ತದೆ.
ತುಳಸಿ ಗಿಡದ ಹತ್ತಿರ ನಿಮ್ಮ ಬಾಯಿಂದ ಅಪಶಬ್ದಗಳನ್ನು ಆಡಬಾರದು . ತುಳಸಿ ಗಿಡದ ಹತ್ತಿರ ಶೂ , ಚಪ್ಪಲಿಗಳನ್ನು ಅಥವಾ ಕಸವನ್ನು ಹಾಕಬಾರದು . ತುಳಸಿ ಹತ್ತಿರ ನೀರಿನಿಂದ ತುಂಬಿದ ಪಾತ್ರೆಗಳನ್ನು ಸಹ ಇಡಬಾರದು . ತುಳಸಿ ಗಿಡದ ಹತ್ತಿರ ದೀಪವನ್ನು ಹಚ್ಚಿದ ನಂತರ ಅದನ್ನು ತೆಗೆಯಬೇಕು . ಏಕೆಂದರೆ ತುಳಸಿಯ ಕೆಳಗಡೆ ಹಾರಿ ಹೋದ ದೀಪ ಇಡಬಾರದು . ಇದನ್ನು ಅಶುಭ ಎಂದು ತಿಳಿಯಲಾಗಿದೆ . ಯಾವ ಸ್ಥಾನದಲ್ಲಿ ತುಳಸಿ ಗಿಡ ಇರುತ್ತದೆಯೋ , ಆ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು . ಹಾಗಾಗಿ ತುಳಸಿ ಗಿಡದ ಹತ್ತಿರ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು .
ತುಳಸಿ ಗಿಡದಲ್ಲಿ ಶಿವಲಿಂಗ ಅಥವಾ ಗಣಪತಿಯ ಮೂರ್ತಿ ಇಡಬಾರದು . ತುಳಸಿ ಗಿಡದ ಜೊತೆ ಬೇರೆ ಸಸ್ಯಗಳನ್ನು ನೆಡುವುದು ಕೂಡ ಅಶುಭ ಆಗಿರುತ್ತದೆ . ತುಳಸಿ ಗಿಡದ ಹತ್ತಿರ ಬಟ್ಟೆಯನ್ನು ಕೂಡ ಒಣ ಹಾಕಬಾರದು .ತುಳಸಿ ಗಿಡದ ಎಲೆಯನ್ನು ಉಗುರಿನಿಂದ ಅಥವಾ ಬೆರಳಿನಿಂದ ಕಿತ್ತು ತೆಗೆಯಬಾರದು . ಇದು ತುಳಸಿ ಗಿಡಕ್ಕೆ ಅವಮಾನ ಆಗುತ್ತದೆ . ಒಂದು ವೇಳೆ ತುಳಸಿ ಗಿಡದ ಎಲೆಗಳು ಬಿದ್ದರೆ , ಅವುಗಳನ್ನು ಕಸದಲ್ಲಿ ಎಸೆಯಬಾರದು . ಅವುಗಳನ್ನು ತುಳಸಿ ಗಿಡದ ಮಣ್ಣಿನಲ್ಲಿಯೇ ಮುಚ್ಚಿರಿ .
ರವಿವಾರದ ದಿನ ತುಳಸಿ ಎಲೆಗಳನ್ನು ತೆಗೆಯಬಾರದು . ಮತ್ತು ರವಿವಾರ ತುಳಸಿ ಗಿಡಕ್ಕೆ ಜಲವನ್ನ ಅರ್ಪಿಸಬಾರದು . ಉಳಿದ ದಿನಗಳಲ್ಲಿ ಪ್ರತಿದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು . ಸಾಯಂಕಾಲ ತುಳಸಿ ಗಿಡದ ಮುಂದೆ ಒಂದು ದೀಪವನ್ನು ಹಚ್ಚಬೇಕು . ಮಹಿಳೆಯರು ತಮ್ಮ ತಲೆ ಕೂದಲನ್ನು ಕಟ್ಟಿಕೊಂಡು ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು . ಇಲ್ಲಿ ತುಳಸಿ ಆಶೀರ್ವಾದ ಸಿಗುತ್ತದೆ . ಮನೆಯಲ್ಲಿರುವ ತುಳಸಿ ಗಿಡ ಯಾವತ್ತಿಗೂ ಒಣಗಬಾರದು . ತುಳಸಿ ಗಿಡ ಒಣಗುವುದು ,
ಅಕಾಲಿಕ ಮೃತ್ಯುವಿನ ಸೂಚನೆಯನ್ನು ಕೊಡುತ್ತದೆ . ಮನೆಯಲ್ಲಿ ತುಳಸಿ ಗಿಡ ಒಣಗಿದರೆ , ಮನೆಯ ಸುಖ – ಸಮೃದ್ಧಿ ನಾಶವಾಗುತ್ತದೆ . ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು . ತುಳಸಿಯನ್ನು ಕೂಡ ಸ್ಪರ್ಶ ಮಾಡಬಾರದು .ಸ್ನಾನ ಮಾಡದೆ ತುಳಸಿ ಗಿಡಕ್ಕೆ ಜಲವನ್ನು ಅರ್ಪಿಸಬಾರದು . ಕಾಲುಗಳಿಗೆ ಚಪ್ಪಲಿಗಳನ್ನು ಹಾಕಿಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು . ನೀವು ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಆ ನೀರು ನಿಮ್ಮ ಕಾಲುಗಳ ಮೇಲೆ ಬೀಳಬಾರದು . ಶ್ರೀ ಕೃಷ್ಣನು ಈ ರೀತಿಯಾಗಿ ಹೇಳುತ್ತಾನೆ . ಪ್ರತಿ ದಿನ ತುಳಸಿಯ ದರ್ಶನವನ್ನು ಮಾಡಿದರೆ , ಸ್ವರ್ಗದ ಪ್ರಾಪ್ತಿಯಾಗುತ್ತದೆ . ತುಳಸಿ ಎಲೆಯ ಸೇವನೆಯಿಂ
ದ ಆತನ ಎಲ್ಲಾ ಪಾಪಗಳು ನಷ್ಟವಾಗುತ್ತವೆ .ತುಳಸಿ ಗಿಡವನ್ನು ಯಾವತ್ತಿಗೂ ಮನೆಯ ಮುಂದೆ ನೆಡಬೇಕು . ಈ ಗಿಡವನ್ನು ಪೂರ್ವಾ ಅಥವಾ ಉತ್ತರ ದಿಕ್ಕಿಗೆ ನೆಡುವುದು ತುಂಬಾ ಶ್ರೇಷ್ಠವಾದದ್ದು ಆಗಿರುತ್ತದೆ . ತುಳಸಿ ಗಿಡದ ಜಾಗದಲ್ಲಿ ಮುಳ್ಳು ಇರುವ ಗಿಡಗಳನ್ನು ಹಾಕಬಾರದು . ಯಾವ ಗಿಡದಲ್ಲಿ ಹಾಲು ಅಂತ ಅಂಶ ಇರುತ್ತದೆಯೋ , ಆ ಗಿಡದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ . ತುಳಸಿ ಗಿಡದ ಜೊತೆ ಬಾಳೆ ಗಿಡವನ್ನು ನೆಡುವುದರಿಂದ , ಅಧಿಕವಾದ ಲಾಭ ಸಿಗುತ್ತದೆ ಎಂದು ಹೇಳಲಾಗಿದೆ . ಬಾಳೆ ಗಿಡದಲ್ಲಿ ಶ್ರೀ ವಿಷ್ಣುವಿನ ವಾಸ ಇದೆ .ಬಾಳೆ ಗಿಡವನ್ನು ತುಳಸಿ ಗಿಡದ ಹತ್ತಿರ ನೆಟ್ಟರೆ , ಮನೆಯಲ್ಲಿ ಸುಖ – ಶಾಂತಿ , ನೆಮ್ಮದಿ ದೊರೆಯುತ್ತದೆ. ಈ ರೀತಿಯಾಗಿ ಭಗವಂತನಾದ ಶ್ರೀ ಕೃಷ್ಣನು ಸತ್ಯಭಾಮೆಗೆ ತುಳಸಿ ಗಿಡದ ಮಹತ್ವ ಮತ್ತು ನಿಯಮಗಳನ್ನು ತಿಳಿಸಿದರು .