ಸ್ನೇಹಿತರೇ ಅಧಿಕ ರಕ್ತದ ಒತ್ತಡಕ್ಕೆ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಬಿಪಿ ಬಂದರೆ ಅದು ಜೀವನ ಪರ್ಯಂತ ಇರುವುದಿಲ್ಲ ಅದನ್ನು ಪರಿಹಾರ ಮಾಡಿಕೊಳ್ಳಲು ನಮ್ಮಲ್ಲೇ ಮದ್ದು ಇದೆ. ಅಂದರೆ ನಾವು ಸಂತೋಷವಾಗಿರುವುದು ಮತ್ತು ನಮ್ಮ ಜೊತೆಗಿರುವವರನ್ನು ಸಂತೋಷವಾಗಿರುವಂತೆ ಮಾಡುವುದು. ಧ್ಯಾನ ಮಾಡುವುದರಿಂದ ಬಿಪಿ ಅನ್ನು ಕಂಟ್ರೋಲ್ ಮಾಡಬಹುದು.
ನಮ್ಮ ಉಸಿರನ್ನು ಗಮನಿಸಿದರೇ ಸಾಕು ಎಷ್ಟೋ ಪ್ರಯೋಜನವಾಗುತ್ತದೆ. ಅಗಸೆ ಮಜ್ಜಿಗೆಯನ್ನ ಪ್ರತಿದಿನ ಎರಡು ಟೈಮ್ ಸೇವನೆ ಮಾಡಬೇಕು. ಬೆಳಿಗ್ಗೆ ಮತ್ತು ಮಧ್ಯಾಹ್ನ ಅಥವಾ ಸಂಜೆ ವೇಳೆಯಲ್ಲಿ ಕುಡಿಯಬಹುದು. ಅಗಸೆ ಬೀಜವನ್ನು ಪುಡಿ ಮಾಡಿ ಮೊಸರಿಗೆ ಹಾಕಿ ಗ್ರೈಂಡ್ ಮಾಡಿ ಮಜ್ಜಿಗೆ ಮಾಡಿ ಬಳಸಬೇಕು. ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಎಸೆಳು ಬೆಳ್ಳುಳ್ಳಿ, ಒಂದು ಸೆಂಟಿಮೀಟರ್ ಶುಂಠಿ, ಒಂದು ಟೀ ಸ್ಪೂನ್ ನಷ್ಟು ನೆನಸಿದ ಮೆಂತ್ಯಕಾಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಒಂದು ತಿಂಗಳಿನಲ್ಲಿ ಇದರ ಫಲಿತಾಂಶ ಗೊತ್ತಾಗುತ್ತದೆ. ಒಂದು ನಿಂಬೆಹಣ್ಣು ಅಥವಾ ಅರ್ಧ ನಿಂಬೆಹಣ್ಣನ್ನು ಬಳಸಿಕೊಳ್ಳಬಹುದು. ಬಿ.ಪಿ ಇರುವವರು ಏಕದಳ ಧಾನ್ಯಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು ಮತ್ತು ಎಣ್ಣೆ, ಬೆಣ್ಣೆಯನ್ನ ಮಿತ ಪ್ರಮಾಣದಲ್ಲಿ ಬಳಸಬೇಕು. ಹೆಚ್ಚಾಗಿ ಸೊಪ್ಪು, ತರಕಾರಿಗಳನ್ನು ಬಳಸಬೇಕು.