ನಾವು ಈ ಲೇಖನದಲ್ಲಿ ಯಾರೀ ಅಶ್ವಿನಿ ದೇವತೆಗಳು…? ಇವರೇಕೆ ಅಸ್ತು ಎನ್ನುತ್ತಾರೆ…? ಎಂಬುದರ ಬಗ್ಗೆ
ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಯಾರೀ ಅಶ್ವಿನಿ ದೇವತೆಗಳು…? ಇವರೇಕೆ ಅಸ್ತು ಎನ್ನುತ್ತಾರೆ… ..? ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ . ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು , ಮೋಡಗಳ ದೇವತೆಗಳು . ಇವರು ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ.
ಸೂರ್ಯೋದಯಕ್ಕೆ ಮುಂಚೆ ಆಕಾಶದಲ್ಲಿ ಸುವರ್ಣ ರಥದಲ್ಲಿ ಕಾಣಿಸಿಕೊಳ್ಳುತ್ತಾರೆ . ಮತ್ತು ಮನುಷ್ಯರಿಗೆ ಸಂಪತ್ತನ್ನು ದಯ ಪಾಲಿಸುತ್ತಾರೆ . ಮತ್ತು ಅನಾರೊಗ್ಯವನ್ನು ದೂರ ಮಾಡುತ್ತಾರೆ. ಇವರ ಕೆಲಸ ಏನೆಂದರೆ , ಯಾವಾಗಲೂ ತಥಾಸ್ತು – ಅಸ್ತು ಎಂದು ಹೇಳುವುದು , ಹೆಚ್ಚಾಗಿ ಹೋಮ – ಹವನಗಳು ನಡೆಯುವಂತಹ ಸ್ಥಳಗಳಲ್ಲಿ ಇವರು ಇರುತ್ತಾರೆ.
ಅಸ್ತು ದೇವತೆಗಳೆಂದು ಕರೆಯಲಾಗುವ , ಅಶ್ವಿನಿ ದೇವತೆಗಳ ಬಗ್ಗೆ ನಿಮಗೆಲ್ಲ ಇದಾಗಲೇ ತಿಳಿದಿರಬಹುದು . ಅಶ್ವಿನಿ ದೇವತೆಗಳ ಬಗ್ಗೆ ತಿಳಿಯೋಣ . ನಿಮಗೆ ಅಶ್ವಿನಿ ದೇವತೆಗಳು ಯಾರು..? ಅವರು ಯಾವ ಸಮಯದಲ್ಲಿ ಸಂಚಾರ ಮಾಡುತ್ತಾರೆ….? ಅವರ ಮಹತ್ವ ಏನು ಎಂಬುದು ತಿಳಿಯುತ್ತೆ…!
ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನು ಆಡುವಾಗ ನಮ್ಮ ಹಿರಿಯರು ತಡೆಯುತ್ತಾರೆ . ಬಿಡ್ತು ಅಂತ ಹೇಳು ಎಂದು, ಒತ್ತಾಯಿಸಿದ ಅನುಭವ ನಿಮಗೂ ಆಗಿರಬಹುದು . ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನು ಆಡುವಾಗ , ಅಶ್ವಿನಿ ದೇವತೆಗಳು ಅಥವಾ ಅಸ್ತು ದೇವತೆಗಳು ಅಸ್ತು ಎಂದರೆ , ಅದು
ಖಂಡಿತ ನಡೆಯುತ್ತದೆ ಎನ್ನುತ್ತಾರೆ . ಈ ಕಾರಣಕ್ಕಾಗಿ ಅವರು ಕೆಡುಕು ಉಂಟು ಮಾಡುವ ಮಾತುಗಳನ್ನು ಆಡಿದಾಗ ಬಿಡ್ತು ಎಂದು , ಹೇಳುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದರು . ಹಾಗಾದರೆ ಈ ಅಸ್ತು ದೇವತೆಗಳು ಯಾರು..? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತಿದೆಯೇ.. .? ಈ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ …..
ಅಶ್ವಿನಿ ದೇವತೆಗಳು ಅಂದರೆ ಯಾರು…? ಅಶ್ವಿನಿ ದೇವತೆಗಳು ಎಂದರೆ , ಸೂರ್ಯ ಪುತ್ರರು . ಭಗವಾನ್ ಸೂರ್ಯದೇವನಿಗೆ ಮತ್ತು ಸಂಧ್ಯಾ ದೇವಿಗೆ ಜನಿಸಿದ ಅವಳಿ ಮಕ್ಕಳು . ಇವರು ಅದೃಷ್ಟದ ದೇವತೆಗಳಾಗಿದ್ದು , ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು . ಇವರನ್ನು ಅಶ್ವಿನಿ ಕುಮಾರರೆಂದು , ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ . ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ . ಯಾಕೆಂದರೆ , ಈ ಅವಳಿ ಅಶ್ವಿನಿ ಕುಮಾರರದ್ದು ದೇಹ ಮಾನವ ದೇಹವಾದರೆ , ಮುಖ ಕುದುರೆಯ ಮುಖ . ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು .
ಅಶ್ವಿನಿ ದೇವತೆಗಳಿಗೆ ಕುದುರೆಮುಖ ಬರಲು ಕಾರಣವೇನು…? ಒಮ್ಮೆ ಸೂರ್ಯದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯದೇವನ ತಾಪವನ್ನು ತಾಳಲಾರದೆ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾಳೆ . ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿ ಕೊಳ್ಳಲು ಮುಂದಾಗುತ್ತಾನೆ . ಆಗ ಸಂಧ್ಯಾ ದೇವಿಯು ಸೂರ್ಯ ದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ , ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ .
ಎಂದು ಯೋಚಿಸಿ , ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ. ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ವಿಹರಿಸುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ , ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ . ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು . ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ .
ಅಶ್ವಿನಿ ದೇವತೆಗಳ ಮಹತ್ವ :- ಇನ್ನು ಜೀವನದಲ್ಲಿ ವಿಪರೀತ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ತೊಂದರೆಗಳಿಂದ ಮುಕ್ತಿಯನ್ನು ಹೊಂದಬೇಕು ಜೊತೆಗೆ , ಆರೋಗ್ಯ ಅಭಿವೃದ್ಧಿಯಾಗಬೇಕು , ಎಲ್ಲಾ ಶುಭ ಫಲಗಳು ಪ್ರಾಪ್ತಿಯಾಗಬೇಕು ಎಂದರೆ , ಮುಸ್ಸಂಜೆ ಅಂದರೆ , ಸೂರ್ಯ ಮುಳುಗುವುದಕ್ಕಿಂತ ಮುಂಚಿತವಾದ ಮುಸ್ಸಂಜೆ ಸಮಯವನ್ನು ಅಂದರೆ , ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯ ಎಂದು ಪರಿಗಣಿಸಲಾಗುತ್ತದೆ . ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ. ಈ ಒಂದು ಸಮಯವನ್ನು ಪಂಚಾಂಗದಲ್ಲಿ ನೋಡಿಕೊಳ್ಳಬೇಕು . ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು , ಸುಳ್ಳನ್ನು ಹೇಳಬಾರದು , ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು , ಮತ್ತು ಮಲಗಬಾರದು ಎಂದು ಹೇಳಲಾಗುತ್ತದೆ . ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ನುಡಿಯುತ್ತಿರುತ್ತಾರೆ . ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ
ಅವರು ಅಸ್ತು ಎಂದರೆ , ಅದು ಖಂಡಿತ ನಡೆಯುತ್ತದೆ , ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ನೆನೆಯಬೇಕು , ಮಾತನಾಡಬೇಕು .
ಅಶ್ವಿನಿ ದೇವತೆಗಳು ಸಂಚಾರ ಮಾಡುವಂತಹ ಸಮಯದಲ್ಲಿ ಸ್ನಾನ ಅಥವಾ ಕೈ – ಕಾಲು , ಮುಖವನ್ನು ತೊಳೆದು ಶುದ್ಧರಾಗಿ , ಮನೆಯ ದೇವರ ಕೋಣೆಯಲ್ಲಿ , ತುಳಸಿಯ ಬಳಿ , ಹಾಗು ಇನ್ನು ಕೆಲವು ಮನೆಯ ಹೊರೆಗೆ ದೀಪವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾರೆ . ಅಶ್ವಿನಿ ದೇವರ ಸಂಚಾರದ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿ ಪ್ರಾರ್ಥನೆ ಮಾಡಿದರೆ , ಅವರು ನಮ್ಮೆಲ್ಲಾ ಕಷ್ಟಗಳನ್ನು ದೂರಾಗಿಸುತ್ತಾರೆ . ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸು , ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸುತ್ತಾರೆ . ಹಾಗೂ ಜೀವನದ ಪ್ರತಿಯೊಂದು ಹಂತದಲ್ಲೂ ಏಳಿಗೆಯನ್ನು ಹೊಂದುತ್ತಾರೆ ಎನ್ನುವ ನಂಬಿಕೆ ಇದೆ .
ಅಶ್ವಿನಿ ಕುಮಾರರು ಮುಸ್ಸಂಜೆ ವೇಳೆಯಲ್ಲಿ ಭೂಲೋಕ ಸಂಚಾರವನ್ನು ಮಾಡುತ್ತಾರೆ . ಅಶ್ವಿನಿ ಕುಮಾರರು ಯಾರು ಮತ್ತು ಇವರು ಸಂಚರಿಸುವ ಸಮಯದಲ್ಲಿ ಸಂಕಲ್ಪವನ್ನು ಮಾಡಿಕೊಂಡು , ಈ ಒಂದು ಮಂತ್ರವನ್ನು ಜಪಿಸಿದರೆ , ಅಶ್ವಿನಿ ದೇವತೆಗಳ ಕೃಪೆ ಸಿಗುತ್ತದೆ . ಅಂದರೆ ನೀವು ಅಂದುಕೊಂಡ ಕೆಲಸಗಳು ಆಗುತ್ತದೆ.
ನೀವು ಅಂದುಕೊಂಡ ಕೆಲಸಗಳು ಆಗಬೇಕು , ಮತ್ತು ಸಂಸಾರಿಕ ಜೀವನವು ಚೆನ್ನಾಗಿರಬೇಕು ಎಂದರೆ, ಪ್ರತಿಯೊಬ್ಬರೂ ಕೂಡ ಈ ಒಂದು ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚಾರ ಮಾಡುವ ಸಮಯದಲ್ಲಿ ಈ ಒಂದು ಮಂತ್ರವನ್ನು ಹೇಳಿ ಸಂಕಲ್ಪವನ್ನು ಮಾಡಿಕೊಂಡರೆ , ಸಾಕು ಅಶ್ವಿನಿ ದೇವತೆಗಳ ಅನುಗ್ರಹದಿಂದ ಅಂದುಕೊಂಡ ಕೆಲಸಗಳು ನೆರವೇರುತ್ತದೆ .
ಈ ಒಂದು ಸಮಯದಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಸಂಕಲ್ಪವನ್ನು ಮಾಡಿಕೊಂಡು , ಅಶ್ವಿನಿ ದೇವತೆಗಳಿಗೆ ಸಂಬಂಧಪಟ್ಟ ಈ ಒಂದು ಮಂತ್ರವನ್ನು ಪಠಿಸಿದರೆ , ನಿಮಗೆ ಇರುವಂತಹ ಕಷ್ಟಗಳು ದೂರವಾಗುತ್ತದೆ . ಒಂದು ಶಕ್ತಿಶಾಲಿಯಾದ ಮಂತ್ರ ಹೀಗಿದೆ , “ಓಂ ಶ್ರೀ ಅಶ್ವಿನೈ ನಮಃ ” ಅಶ್ವಿನಿ ದೇವತೆಗಳ ಒಂದು ಮಂತ್ರವನ್ನು ಪ್ರತಿದಿನ ಒಂದು ಬಾರಿ ಮಂತ್ರವನ್ನು ಪ್ರತಿದಿನ ಒಂದು ಬಾರಿ ಅಥವಾ ಮೂರು ಬಾರಿ ಅಥವಾ 21 ಬಾರಿ 108 ಬಾರಿ ಪಠಿಸಿದರೆ , ನಿಮಗೆ ಇರುವಂತಹ ಕಷ್ಟಗಳೆಲ್ಲ ದೂರವಾಗುತ್ತದೆ .
ಇನ್ನು ಉದ್ಯೋಗ ರಂಗದಲ್ಲಿ ಒಳ್ಳೆಯದಾಗಬೇಕು ಎಂದು ಸಂಕಲ್ಪವನ್ನು ಮಾಡಿಕೊಂಡಿದ್ದಲ್ಲಿ , ಯಶಸ್ಸು ಪ್ರಾಪ್ತಿಯಾಗುತ್ತದೆ . ನೀವು ಅಂದುಕೊಂಡಂತಹ ಕೋರಿಕೆಗಳು ಈಡೇರಲಿ ಎಂದು ಈ ಒಂದು ಮಂತ್ರವನ್ನು ಪಠಿಸುತ್ತಾ , ಅಶ್ವಿನಿ ದೇವರನ್ನು ನಮಸ್ಕರಿಸಿದರೆ , ಅಶ್ವಿನಿ ದೇವತೆಗಳ ಅನುಗ್ರಹದಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆ . ಅದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ . ಮತ್ತು ಜೀವನದಲ್ಲಿ ಏಳಿಗೆ ಆಗುತ್ತದೆ . ಆದ್ದರಿಂದ ಪ್ರತಿ ಮುಸ್ಸಂಜೆಯ ಸಮಯದಲ್ಲಿ ಅಶ್ವಿನಿ ದೇವತೆಗಳು ಸಂಚರಿಸುತ್ತಿರುವಾಗ ತಪ್ಪದೇ ನೀವು ಈ ಒಂದು ಕೆಲಸವನ್ನು ಮಾಡಿ . ಈ ಒಂದು ಮಂತ್ರವನ್ನು ಹೇಳಿದರೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಹ ನೆರವೇರುತ್ತದೆ .