ವೃಶ್ಚಿಕ ರಾಶಿಯ ಗುಣ , ಲಕ್ಷಣ, ಮತ್ತು ಸ್ವಭಾವ ಹೇಗೆ ಇರುತ್ತದೆ

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಗುಣ , ಲಕ್ಷಣ, ಮತ್ತು ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಪ್ರತಿಯೊಬ್ಬ ವ್ಯಕ್ತಿಯೂ ಜನಿಸಿದ ಸ್ಥಳ , ದಿನಾಂಕ , ಸಮಯಕ್ಕೆ ಅನುಗುಣವಾಗಿ ಆತನ ರಾಶಿ ನಕ್ಷತ್ರಗಳು ನಿರ್ಧಾರವಾಗುತ್ತದೆ . ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಸ್ವಭಾವ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ . ಜ್ಯೋತಿಷ್ಯದ ಪ್ರಕಾರ 12 ರಾಶಿಗಳು 27 ನಕ್ಷತ್ರಗಳು ಇರುತ್ತವೆ.

ವೃಶ್ಚಿಕ ರಾಶಿಯವರ ಗುಣಲಕ್ಷಣಗಳು : ವೃಶ್ಚಿಕ ರಾಶಿ ಪುರುಷನ ಗುಣಲಕ್ಷಣಗಳು : ಜನರ ಬಗ್ಗೆ ಕಾಳಜಿ ಮಾಡುವ ಮತ್ತು ಅವರ ಆಪತ್ಕಾಲದಲ್ಲಿ ನೆರವಾಗುವ ಜನಾಕರ್ಷಕ ವ್ಯಕ್ತಿ ಇವರು ಆಗಿರುತ್ತಾರೆ . ಕರುಣಾಮಯಿಗಳು, ಉದಾರಿಗಳು, ಮತ್ತು ನಿಷ್ಠಾವಂತರು ಆದ ಇವರು ಸಾರ್ವಜನಿಕ ಜೀವನಕ್ಕಾಗಿ ಇವರು ತಮ್ಮ ಕುಟುಂಬವನ್ನೇ ಸಮರ್ಪಿಸುತ್ತಾರೆ . ಅತ್ಯಧಿಕ ಏಕಾಗ್ರತಾ ಶಕ್ತಿಯನ್ನು ಹೊಂದಿರುವ ಇವರು ಪರಿಪೂರ್ಣ ವಾದಿಗಳು ಆಗಿರುತ್ತಾರೆ . ಶಕ್ತಿ ಶಾಲಿಗಳು , ಸ್ವತಂತ್ರರು ಸ್ವಾವಲಂಬಿಗಳು , ಆದ ಇವರು ಸಂಗಾತಿಯ ಅಗತ್ಯಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಾರೆ . ಬೇರೆ ಅವರ ಜೀವನದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಇವರು ಖಾಸಗಿ ಜೀವನದಲ್ಲಿ ಅತ್ಯಂತ ಎಚ್ಚರಿಕೆ ಉಳ್ಳವರು ಆಗಿರುತ್ತಾರೆ . ಚತುರರು ಶೀಘ್ರ ಕೋಪಿಗಳು ಆದ ಇವರು ನಿಗೂಢ ವ್ಯಕ್ತಿತ್ವದವರು ಆಗಿರುತ್ತಾರೆ .

ವೃಶ್ಚಿಕ ರಾಶಿ ಮಹಿಳೆಯ ಗುಣಲಕ್ಷಣಗಳು : ಇವರು ಕರುಣೆ ಉಳ್ಳವರು, ಸ್ನೇಹಜೀವಿ , ಮತ್ತು ಭಾವನಾ ಜೀವಿ ಮತ್ತು ಸಹಾಯ ಮಾಡಲು ಸದಾ ಸಿದ್ದರು. ನಾಚಿಕೆ ಸ್ವಭಾವದ ಅಂತರ್ಮುಖಿಯಾದ ಇವರು ಏಕಾಂಗಿತನವನ್ನು ಬಯಸುತ್ತಾರೆ . ಭಾವನಾತ್ಮಕವಾಗಿ ಅತ್ಯಂತ ಸೂಕ್ಷ್ಮ ಗ್ರಹಿಗಳಾದ ಇವರು ಚತುರರಾಗಿದ್ದು, ಎಲ್ಲಾ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಡೆಸುತ್ತಾರೆ .

ಚಾಣಾಕ್ಷರಾದ ಇವರು ಯಾವುದೇ ಕಾರ್ಯದಲ್ಲಿ ದೃಢಸಂಕಲ್ಪವನ್ನು ಹೊಂದಿರುತ್ತಾರೆ . ಶಾಂತ ಸ್ವಭಾವದ ಮತ್ತು ಮತ್ತೊಬ್ಬರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ ಹೊಂದಿದ ಇವರು ಘನತೆ ಗೌರವವನ್ನು ಕಾಪಾಡಿಕೊಳ್ಳುತ್ತಾರೆ . ಆಳವಾಗಿ ಪ್ರೇಮಿಸುವ ಇವರು ನಿಷ್ಠರು , ನಂಬಿಗಸ್ತರು , ಹಾಗೂ ಅಗತ್ಯ ಬಿದ್ದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧವಾದ ವ್ಯಕ್ತಿ ಆಗಿರುತ್ತಾರೆ. ಶೀಘ್ರ ಕೋಪಿಯಾದ ಇವರು ಕೆಲವು ಸಂದರ್ಭಗಳಲ್ಲಿ ನಿರ್ಧಾಕ್ಷಿಣ್ಯವಾಗಿ ವರ್ತಿಸುತ್ತಾರೆ .

ವೃಶ್ಚಿಕ ರಾಶಿಯವರ ಪ್ರೇಮ ವಿಚಾರ: ಇವರ ಕಾಮಾಭಿಲಾಷೆ ಸ್ಥಿರವಾಗಿದ್ದು, ರೋಮಾಂಚನವಾಗಿದ್ದು, ಇವರ ಕಣ್ಣುಗಳಿಂದಲೇ ಹೊರ ಸೂಸುತ್ತದೆ. ಪ್ರೇಮದಲ್ಲಿ ಬಿಟ್ಟರೆ ಇವರು ಉದಾರಿಗಳು ಮತ್ತು ಅಸೂಯೆ ಪಡುವವರು ಆಗಿರುತ್ತಾರೆ.

ವೃಶ್ಚಿಕ ರಾಶಿಯವರ ಮದುವೆ ವಿಚಾರ : ಮದುವೆಯ ವಿಷಯದಲ್ಲಿ ಭಾವನಾತ್ಮಕ , ದೈಹಿಕ ,ಹಾಗೂ ಬೌತಿಕ ಅಗತ್ಯಗಳು ನಿಮ್ಮ ಮೇಲುಗೈ ಸಾಧಿಸುತ್ತವೆ . ನಿಮ್ಮ ಸಂಗಾತಿಗೆ ತಿಳಿಸಬೇಕಾದ ವಿಷಯದಲ್ಲಿ ಇವರು ಬಹಳ ಆಯ್ಕೆ ಮಾಡುತ್ತಾರೆ. ಇವರ ಬಾಳ ಸಂಗಾತಿ ಜಾಣರು , ಸೂಕ್ಷ್ಮ ಗ್ರಹಿಗಳು , ಕಾಮಾಭಿಲಾಷೆಗೆ ತಕ್ಷಣ ಸ್ಪಂಧಿಸುವವರು ಆಗಿರುತ್ತಾರೆ. ದಾಂಪತ್ಯದಲ್ಲಿ ಸ್ವಾರ್ಥತೆ ಬೇಡ .

ವೃಶ್ಚಿಕ ರಾಶಿಯವರ ಹಣಕಾಸಿನ ವಿಚಾರ : ಹಣವನ್ನು ಹೇಗೆ ಗಳಿಸಬೇಕೆಂದು ಅರಿತಿರುವ ಇವರು ಹಣವೇ ಸರ್ವಸ್ವ ಎಂದು ನಂಬುವವರು ಅಲ್ಲ . ಹಣವಿದ್ದಾಗ ನೀರಿನಂತೆ ಖರ್ಚು ಮಾಡುವ ಇವರು ಅದು ಖಾಲಿಯಾದಾಗ ಸಂಪಾದನೆಯಲ್ಲಿ ತೊಡಗುತ್ತಾರೆ . ಜೀವನದಲ್ಲಿ ಸುಖ ಭೋಗಗಳಿಗೆ ಖರ್ಚು ಮಾಡುವ ಇವರು ಹಣ ಗಳಿಕೆಯಲ್ಲಿ ವಿಶ್ವಾಸ ಹೊಂದಿದವರು ಅಲ್ಲ, ಉಳಿತಾಯದ ಅನೇಕ ಮಾರ್ಗಗಳನ್ನು ಮತ್ತು ಸ್ಥಿರ ಆಸ್ತಿಯ ರಕ್ಷಣೆಯನ್ನು ಮಾಡಿಕೊಳ್ಳಬೇಕು .

ವೃಶ್ಚಿಕ ರಾಶಿಯವರ ವೃತ್ತಿ ಜೀವನ : ಇವರು ಚತುರರು , ಶ್ರಮಜೀವಿಗಳು, ಸಂಘಟಿತರು ಹಾಗೂ ದೂರದೃಷ್ಟಿಯುಳ್ಳವರು, ಆಗಿರುತ್ತಾರೆ . ಸ್ವಯಂ ವ್ಯಾಪಾರ ಮತ್ತು ನಿರ್ಣಯಗಳು ಉತ್ತಮ . ಇವರು ಉತ್ತಮ ಆಧ್ಯಾತ್ಮಿಕ ವ್ಯಕ್ತಿ . ಇಲ್ಲವೇ ಶಸ್ತ್ರ ಚಿಕಿತ್ಸಕ , ಬಾಡಿಗೆ ಕೊಲೆಗಾರ, ಅಂತರಾಷ್ಟ್ರೀಯ ಗೂಡಾಚಾರಿ, ಅಥವಾ ಧರ್ಮ ಉಪದೇಶಕ ಆಗಬಹುದು .ದುಡಿಮೆ ವ್ಯವಹಾರದಲ್ಲಿ ಇವರ ಪ್ರೇರಣಾ ಶಕ್ತಿ ನೆರವಾಗುತ್ತದೆ . ನೌಕರಿಯಿಂದ ಪ್ರಗತಿ . ಧನಸಹಾಯ ಅತಿಯಾಗಿ ಮಾಡಬೇಡಿ . ಅವಶ್ಯಕತೆಗೆ ತಕ್ಕಂತೆ ವ್ಯವಹಾರ ಬೆಳೆಸಿಕೊಳ್ಳಿ .

ವೃಶ್ಚಿಕ ರಾಶಿಯವರ ಸ್ನೇಹಿತರು : ನಿಮ್ಮ ಭಾವನೆಗೆ ಸ್ಪಂದಿಸುವ ಜನರೊಡನೆ ಮಾತ್ರ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ. ಸ್ನೇಹದಲ್ಲಿ ಬಹಳ ಆಯ್ಕೆ ಮಾಡುವವರು ನಿಮ್ಮ ಸ್ನೇಹಿತರು ನಿಮ್ಮ ಚಲನವಲನಗಳನ್ನು ಗಮನಿಸುತ್ತಾರೆ ಎಂದು ಶಂಖಿಸುತ್ತಾರೆ . ಸ್ನೇಹದಲ್ಲಿ ಮೋಸ ಹೋದರೆ ತಕ್ಷಣ ಸಂಬಂಧವನ್ನು ಕಡಿದುಕೊಳ್ಳುತ್ತಾರೆ

ವೃಶ್ಚಿಕ ರಾಶಿಯವರ ಆರೋಗ್ಯ ವಿಚಾರ: ಇವರು ಭಾವವೇಷಕ್ಕೆ ಒಳಗಾದಾಗ ಮೆದುಳು ಮಿತಿ ಮೀರಿ ಕೆಲಸ ಮಾಡುವುದರಿಂದ ನಿದ್ರಾಹೀನತೆಯಿಂದ ಬಳಲುತ್ತಾರೆ. ಅತಿಯಾದ ಕುಡಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ, ಅತಿ ಕಡಿಮೆ ನಿದ್ರೆ ಮಾಡುವುದರಿಂದ , ವೃದ್ಯಾಪ್ಯದ ಕಡೆಗೆ ದಾಪುಗಾಲು ಹಾಕುತ್ತಾರೆ . ಹಾಗೂ ಹೆಚ್ಚಿನ ಮಾನಸಿಕ ಒತ್ತಡದಿಂದ ಬಳಲುತ್ತಾರೆ . ಇವರು ವಿಶ್ರಾಂತಿಗೆ ಹೆಚ್ಚಿನ ಗಮನ ನೀಡುವುದು ಸೂಕ್ತ . ಅನಾರೋಗ್ಯದಿಂದ ಪರಾವಲಂಬಿ ಜೀವನ ಆಗುವುದು ಎಚ್ಚರ .

ವೃಶ್ಚಿಕ ರಾಶಿಯವರ ಗೃಹ ವಾಸಸ್ಥಾನ : ಇವರು ಏಕಾಂತ ಪ್ರಿಯರು ಆಗಿರುವುದರಿಂದ , ಆಹ್ವಾನ ನೀಡಿದಾಗ ಮಾತ್ರ, ಸ್ನೇಹಿತರು, ಅತಿಥಿಗಳು ನಿಮ್ಮ ಮನೆಗೆ ಬರುತ್ತಾರೆ . ಸ್ವಂತ ಮನೆಯಲ್ಲಿ ವಿಶಾಲ ಜಾಗ ಇರುವುದನ್ನು ಇವರು ಬಯಸುತ್ತಾರೆ. ಯೋಜನೆಯಿಂದ ಮನೆಯನ್ನು ಮಾಡಿಕೊಂಡಿರುತ್ತಾರೆ .ಜಗತ್ತಿನಿಂದ ದೂರವಾಗಿದೆ ಎಂಬಂತೆ ಇರುವ ಇವರ ಮನೆ . ಸುಖವಾಗಿ ಹಾಗೂ ದೈಹಿಕವಾಗಿ ಸಕ್ರಿಯವಾಗಿರುವ ನಿಮ್ಮ ಆಕಾಂಕ್ಷೆಯನ್ನು ಪ್ರತಿಬಿಂಬುಸುತ್ತದೆ .

ವೃಶ್ಚಿಕ ರಾಶಿಯವರಿಗೆ ಹಿನ್ನಡೆಯಾಗಲು ಕಾರಣ ಮತ್ತು ಪರಿಹಾರ: ಯಾವಾಗಲೂ ಚಿಂತಾ ಕಾಂತ ಮುಖಭಾವ ಹೊಂದಿರುವ ಇವರು ಮೂರ್ಖ ಪ್ರಜ್ಞೆಯ ಭೀತಿ ಹೊಂದಿರುತ್ತಾರೆ . ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು ಒಳಿತು.

ವೃಶ್ಚಿಕ ರಾಶಿಯವರು ಇತರ ರಾಶಿಯೊಂದಿಗೆ ಪ್ರೇಮ ಮತ್ತು ಅನುರೂಪತೆ : ವೃಶ್ಚಿಕ ರಾಶಿಯವರೊಂದಿಗೆ ವೃಶ್ಚಿಕ ರಾಶಿಯವರು . ಈ ಸಂಬಂಧದಲ್ಲಿ ಅನೇಕ ಏಳು ಬೀಳುಗಳು, ಸುಖ , ದುಃಖಗಳು , ಸಮಾನವಾಗಿ ಬರುವುದರಿಂದ ದಂಪತಿಗಳಿಗೆ ಬೇಸರವಾಗುವ ಅವಕಾಶವೇ ಇರುವುದಿಲ್ಲ . ಪರಸ್ಪರ ತಿಳುವಳಿಕೆ , ಹೊಂದಾಣಿಕೆ ಅವಶ್ಯಕವಾಗಿದೆ.

ಧನು ರಾಶಿಯೊಂದಿಗೆ ವೃಶ್ಚಿಕ ರಾಶಿಯವರು .ಧನು ರಾಶಿಯ ಪುರುಷನೊಂದಿಗೆ ವೈವಾಹಿಕ ಸಂಬಂಧ ಬೆಳೆಸುವ ವೃಶ್ಚಿಕ ರಾಶಿಯ ಮಹಿಳೆಗೆ ಜೀವನದಲ್ಲಿ ಸುಖ ಶಾಂತಿ ಎಂಬುದು ಇರುವುದಿಲ್ಲ . ಆದರೆ ವೃಶ್ಚಿಕ ರಾಶಿಯ ಪುರುಷ ಮತ್ತು ಧನು ರಾಶಿಯ ಮಹಿಳೆಯ ವೈವಾಹಿಕ ಸಂಬಂಧ ಅನುರೂಪತೆಯಿಂದ ಕೂಡಿರುತ್ತದೆ . ಆಳವಾದ ಪರಸ್ಪರ ಪ್ರೀತಿಯೊಂದಿಗೆ ಹೊಂದಾಣಿಕೆಯೊಂದಿಗೆ ಹಿಂದೆಂದೂ ಕಾಣದ ಸುಖ ಸಂತೋಷವನ್ನು ಅನುಭವಿಸಬಹುದು .

ಮಕರ ರಾಶಿಯವರೊಂದಿಗೆ ವೃಶ್ಚಿಕ ರಾಶಿಯವರು . ವೃಶ್ಚಿಕ ರಾಶಿಯ ಮಹಿಳೆ ಮತ್ತು ಮಕರ ರಾಶಿಯ ಪುರುಷನ ಸಂಬಂಧ ಪರಸ್ಪರ ಗೌರವ, ಬೆಂಬಲ, ಹಾಗೂ ಹೊಣೆಗಾರಿಕೆಯ ಅಂಜಿಕೆ ಪ್ರಜ್ಞೆಯಿಂದ ಕೂಡಿರುತ್ತದೆ . ವೃಶ್ಚಿಕ ರಾಶಿಯ ಪುರುಷ ಮತ್ತು ಮಕರ ರಾಶಿಯ ಮಹಿಳೆಯ ಸಂಬಂಧದಲ್ಲಿ ಮಾತು ಹೆಚ್ಚಾಗಿದ್ದರೂ ,

ಭಾವನಾತ್ಮಕ ಸಂಬಂಧ ತಿಳುವಳಿಕೆ ಹೊಂದಾಣಿಕೆ ಅತ್ಯಲ್ಪವಾಗಿ ಇರುತ್ತದೆ . ಪರಸ್ಪರ ಅರಿತುಕೊಂಡು ನಡೆದರೆ ಈ ವೈವಾಹಿಕ ಸಂಬಂಧ ಸಫಲವಾಗಲು ಸಾಧ್ಯವಾಗುತ್ತದೆ . ಸಣ್ಣ ಪುಟ್ಟ ಮಾತುಗಳು ಈ ಸಂಬಂಧದಲ್ಲಿ ವಿಕೋಪಕ್ಕೆ ತಿರುಗಿ ವಿರಸ ಮನಸ್ತಾಪಕ್ಕೆ ಕಾರಣವಾಗುವ ಸಾಧ್ಯತೆ ಇದೆ . ಸಂಗಾತಿಗಳಿಬ್ಬರು ಸ್ವಪ್ರತಿಷ್ಠೆಯನ್ನು ಬದಿಗಿಟ್ಟು ನಡೆದುಕೊಂಡರೆ ಮಾತ್ರ ಹೊಂದಾಣಿಕೆ ಸಾಧ್ಯವಾಗುತ್ತದೆ .

ಕುಂಭ ರಾಶಿಯವರೊಂದಿಗೆ ವೃಶ್ಚಿಕ ರಾಶಿಯವರು : ವೃಶ್ಚಿಕ ರಾಶಿಯ ಮಹಿಳೆ ಮತ್ತು ಕುಂಭ ರಾಶಿಯ ಪುರುಷ ಮುಕ್ತ ಮನಸ್ಸಿನೊಂದಿಗೆ ಪರಸ್ಪರರ ಬೆಳವಣಿಗೆಗೆ ನೆರವಾದಲ್ಲಿ ಹಾಗೂ ಸಹಕರಿಸಿಕೊಂಡು ನಡೆದಲ್ಲಿ ಅವರ ವೈವಾಹಿಕ ಸಂಬಂಧದಲ್ಲಿ ಸುಖ, ಸಂತೋಷದ , ಸಮೃದ್ಧಿಗೆ ಮಿತಿಯೇ ಇರುವುದಿಲ್ಲ . ಇದೇ ರೀತಿ ಹೊಂದಾಣಿಕೆಯಲ್ಲಿ ನಡೆದರೆ ವೃಶ್ಚಿಕ ರಾಶಿಯ ಪುರುಷ ಕುಂಭ ರಾಶಿಯ ಮಹಿಳೆಯ ವೈವಾಹಿಕ ಜೀವನದಲ್ಲಿ ಯಶಸ್ವಿಯಾಗಬಹುದು .

ಮೀನ ರಾಶಿಯವರೊಂದಿಗೆ ವೃಶ್ಚಿಕ ರಾಶಿಯವರು : ಮೀನ ರಾಶಿಯ ಪುರುಷನೊಂದಿಗೆ ವೃಶ್ಚಿಕ ರಾಶಿಯ ಮಹಿಳೆಯ ವೈವಾಹಿಕ ಸಂಬಂಧವನ್ನು ನಿರೀಕ್ಷಿಸಲಾಗದು . ಮೀನ ರಾಶಿಯ ಮಹಿಳೆ ಮತ್ತು ವೃಶ್ಚಿಕ ರಾಶಿಯ ಪುರುಷನ ನಡುವೆ ಲೈಂಗಿಕ ಆಕರ್ಷಣೆಗೆ ಮಾತ್ರ ಅವಕಾಶ ಇದ್ದು , ಇಬ್ಬರೂ ದೇಹ ಸುಖವನ್ನು ಮಾತ್ರ ಅತ್ಯಧಿಕವಾಗಿ ಅನುಭವಿಸಬಲ್ಲರು .

ವೃಶ್ಚಿಕ ರಾಶಿಯವರ ಇನ್ನಿತರ ಗುಣಲಕ್ಷಣಗಳು : – ಪ್ರಭಾವಿ ಗ್ರಹ ಮಂಗಳ, ಮೂಲ ಧಾತು ನೀರು, ಗುಣಲಕ್ಷಣ ಸ್ತ್ರೀ , ಮಹತ್ವಾಕಾಂಕ್ಷೆ ನಿಯಂತ್ರಣ , ಶುಭ ದಿಕ್ಕು ಉತ್ತರ , ಅದೃಷ್ಟ ಬಣ್ಣ ಕೆಂಪು , ಅಮೂಲ್ಯ ಹರಳು ಅವಳ , ಶುಭದಿನ ಮಂಗಳವಾರ , ಅದೃಷ್ಟ ಸಂಖ್ಯೆ ಒಂಬತ್ತು .

ವೃಶ್ಚಿಕ ರಾಶಿಯವರು ಜೀವನವಿಡೀ ಮಾಡಬೇಕಾದ ಪರಿಹಾರಗಳು : – ವೃಶ್ಚಿಕ ರಾಶಿಯ ಅಧಿಪತಿ ಮಂಗಳನೂ ಆಗಿರುವುದರಿಂದ , ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ , ಕೆಂಪು ವಸ್ತ್ರವನ್ನು ಧರಿಸಿ ಹೋಗುವುದರಿಂದ , ಯಶಸ್ಸು ಸಾಧ್ಯವಾಗುತ್ತದೆ . ಕುಜನ ನವಗ್ರಹ ಮಂತ್ರವನ್ನು ಪ್ರತಿದಿನವೂ ಪಠಿಸುವುದರಿಂದ , ಹೊಸ ಕಾರ್ಯಗಳಲ್ಲಿ

ಯಶಸ್ಸು ಸ್ಥೈರ್ಯ , ಧೈರ್ಯ , ಮತ್ತು ಆರೋಗ್ಯ ದೊರೆಯುತ್ತದೆ .ಗುರುವಾರದಂದು ಶಿವನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಮಕ್ಕಳಲ್ಲಿ ಯಶಸ್ಸು ಕೀರ್ತಿ ದೊರೆಯುತ್ತದೆ . ಆದಿತ್ಯ ಉದಯ ಸ್ತೋತ್ರವನ್ನು ಪ್ರತಿದಿನವೂ ಪಠಣೆ ಮಾಡುವುದರಿಂದ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಉದ್ಯೋಗದಲ್ಲಿ ಸಾಧನೆ ಮಾಡಬಹುದು . ವೃಶ್ಚಿಕ ರಾಶಿಯ ಸ್ತ್ರೀಯರು ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸುವುದರಿಂದ, ಜೀವನದಲ್ಲಿ ಯಶಸ್ಸು ಕೀರ್ತಿ ಸಾಧಿಸಬಹುದು .

Leave a Comment