ತೆರೆದಿರುವ ಹಾಲಿನ ಪಾತ್ರೆಯಿಂದ ದರಿದ್ರ ಆವರಿಸುತ್ತದೆ. ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದರೂ ಕೆಲವೊಮ್ಮೆ ಹಣ ಕೈನಲ್ಲಿ ನಿಲ್ಲುವುದಿಲ್ಲ. ಬಂದ ಹಣ ಹಾಗೆಯೇ ವಾಪಸ್ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲವಾಗುತ್ತದೆ. ಇದಕ್ಕೆ ವಾಸ್ತುದೋಷ ಕಾರಣ. ನಮಗೆ ತಿಳಿಯದೆ ಅಥವಾ ತಿಳಿದೂ ನಿರ್ಲಕ್ಷಿಸುವ ಕೆಲ ಕೆಲಸಗಳಿಂದ ಸಮಸ್ಯೆ ಶುರುವಾಗುತ್ತದೆ.
ಹಾಲು ಕೂಡ ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಎಂದೂ ಹಾಲನ್ನು ಮುಚ್ಚದೆ ಇಡಬಾರದು. ಹಾಲು ಬಿಸಿಯಾಗಿದೆ ಎನ್ನುವ ಕಾರಣಕ್ಕೆ ಹಾಗೆ ಬಿಡಬೇಡಿ. ಹಾಲಿನ ಪಾತ್ರೆಯನ್ನು ಸ್ವಲ್ಪವಾದರೂ ಮುಚ್ಚಿಡಿ. ಹಳೆ ಹೂವನ್ನು ದೇವರ ಮನೆಯಲ್ಲಿ ಎಂದೂ ಇಡಬಾರದು. ಸ್ನಾನ ಮಾಡಿ, ದೇವರಿಗೆ ಹೊಸ ಹೂವನ್ನು ಹಾಕಿ ಪೂಜೆ ಮಾಡುತ್ತಾರೆ. ಆದರೆ ಹಳೆ ಹೂವನ್ನು ದೇವರ ಮನೆಯಲ್ಲಿಯೇ ಇಡುತ್ತಾರೆ.
ಈ ಹಳೆ ಹೂ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬುದು ನೆನಪಿರಲಿ. ಮನೆಯ ಸದಸ್ಯರು ಆಹಾರ ಸೇವನೆ ಮಾಡುವ ಮೊದಲು ಆಕಳಿಗೆ ಆಹಾರ ನೀಡಿ. ಪ್ರತಿದಿನ ಹೀಗೆ ಮಾಡುತ್ತ ಬಂದಲ್ಲಿ ಕಾಡುವ ಆರ್ಥಿಕ ಸಮಸ್ಯೆ ಕಡಿಮೆಯಾಗುತ್ತದೆ. ಅಡಿಗೆ ಮನೆ ಅಥವಾ ಕಪಾಟಿನ ಬಳಿ ಶೂ-ಚಪ್ಪಲಿಯನ್ನು ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ. ಇದರಿಂದ ಕುಟುಂಬಸ್ಥರು ಸಾಕಷ್ಟು ಹಾನಿಗಳನ್ನು ಎದುರಿಸಬೇಕಾಗುತ್ತದೆ.
ಮುಳ್ಳಿನ ಗಿಡ ಎಷ್ಟು ಸುಂದರವಾಗಿದ್ದರೂ ಮನೆಯೊಳಗೆ ಇಡಬೇಡಿ. ಮುಳ್ಳಿನ ಗಿಡವನ್ನು ಮನೆಯಿಂದ ಹೊರಗಿಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯ ಆರ್ಥಿಕ ಸಮಸ್ಯೆಗೆ ಸರಳ ಪರಿಹಾರಗಳು: ಎಷ್ಟು ಹಣ ಗಳಿಕೆ ಮಾಡಿದರೂ ಕೆಲವರು ಸದಾ ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಹಣ ಕೈನಲ್ಲಿ ನಿಲ್ಲೋದಿಲ್ಲ. ದುಡಿದ ಹಣ ಮನೆಯಲ್ಲಿರಬೇಕಾದರೇ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಅವಶ್ಯಕವಾಗಿ ಇಡಬೇಕಾಗುತ್ತದೆ.
ಮಣ್ಣಿನಿಂದ ಮಾಡಿದ ಹೂಜಿಯಲ್ಲಿ ನೀರು ತುಂಬಿ ಮನೆಯ ಉತ್ತರ ದಿಕ್ಕಿಗೆ ಇಡಿ. ಇದನ್ನು ಖಾಲಿಯಾಗಿ ಇಡಬೇಡಿ. ನೀರು ಇಂಗಿದರೆ ಮತ್ತೆ ನೀರು ತುಂಬಿಡಿ. ಮನೆಯ ನೈರುತ್ಯ ದಿಕ್ಕಿನಲ್ಲಿ ಪಂಚಮುಖಿ ಹನುಮಂತನ ಮೂರ್ತಿ ಅಥವಾ ಚಿತ್ರವನ್ನಿಟ್ಟು ಪ್ರತಿದಿನ ಪೂಜೆ ಮಾಡಿ.ಮನೆಯಲ್ಲಿ ವಾಸ್ತು ದೋಷವಿದ್ದರೆ ಹಣದ ಅಭಾವ ಎದುರಾಗುತ್ತದೆ. ಹಾಗಾಗಿ ಮನೆಯಲ್ಲಿ ವಾಸ್ತುದೋಷ ನಿವಾರಣೆ ಚಿತ್ರಪಟವನ್ನು ತಂದು ಹಾಕಿ.
ಮನೆಯ ಮುಖ್ಯದ್ವಾರದ ಬಳಿ ಲಕ್ಷ್ಮಿ ಹಾಗೂ ಕುಬೇರನ ಚಿಹ್ನೆ ಅಥವಾ ಮೂರ್ತಿಯನ್ನು ಇಡಿ.
ಮನೆಯ ಸದಸ್ಯರು ಹೆಚ್ಚಾಗಿ ಕುಳಿತುಕೊಳ್ಳುವ ಸ್ಥಳದ ಬಳಿ ಕಂಚು ಅಥವಾ ತಾಮ್ರದ ಪಿರಾಮಿಡ್ ಇಡಿ.
ಈ ರೀತಿ ಮಾಡುವುದರಿಂದ ಕ್ರಮೇಣ ಸಮಸ್ಯೆಗಳು ಮಾಯವಾಗುತ್ತದೆ.