ರಾಶಿಗನುಗುಣವಾಗಿ ಬಟ್ಟೆ ಧರಿಸಿದರೆ ಅದೃಷ್ಟ ವೃದ್ಧಿಯಾಗುವುದು. ಅಂದುಕೊಂಡ ಕೆಲಸ ಕಾರ್ಯ ಬೇಗ ನನಸಾಗುವುದು. ನಿಮ್ಮ ಜನ್ಮ ದಿನ, ಜನಿಸಿದ ತಿಂಗಳು ಹಾಗೂ ರಾಶಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣುತ್ತೀರಿ.
ಚಂದವಾದ ಹಾಗೂ ಆಕರ್ಷಕವಾದ ವಸ್ತುಗಳನ್ನು ಕಣ್ಣು ಬೇಗನೆ ಗ್ರಹಿಸುತ್ತದೆ ಅಷ್ಟೇ ಅಲ್ಲದೆ ಅಂತಹ ವಸ್ತುಗಳನ್ನು ಬಳಸುವಂತೆ, ಧರಿಸುವಂತೆ ಪ್ರೋತ್ಸಾಹಿಸುತ್ತದೆ.
ಕಣ್ಣಿಗೆ ಅಂದವಾಗಿ ಕಾಣಿಸಿದ ಬಟ್ಟೆಗಳನ್ನು ಧರಿಸುವುದು ನಮ್ಮಲ್ಲಿನ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಿಮ್ಮ ಜನ್ಮ ದಿನ, ಜನಿಸಿದ ತಿಂಗಳು ಹಾಗೂ ರಾಶಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣಬಲ್ಲಿರಿ. ಬಟ್ಟೆಗಳಿಗೂ ರಾಶಿಗೂ ಸಂಬಂಧವಿದೆಯಾ? ಎಂದು ಯೋಚಿಸಬೇಡಿ, ಕಣ್ಣಿಗೆ ಚೆನ್ನಾಗಿ ಕಂಡಿದ್ದನ್ನು ನೀವು ಧರಿಸಬಹುದು. ಆದರೆ ಅದು ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತಾ? ನೀವು ಧರಿಸುವ ಬಟ್ಟೆಗೂ ಹಾಕಿಕೊಳ್ಳುವ ವಸ್ತುವಿಗೂ ನಿಮ್ಮ ರಾಶಿಗೂ ಸಂಬಂಧವಿದೆ.
ನಾವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಚೆಂದ ಕಾಣುತ್ತದೆ ಎಂಬುದು ಮುಖ್ಯವಲ್ಲ. ಯಾವ ಮಾದರಿಯ ಬಟ್ಟೆಗಳನ್ನು ಧರಿಸಿದರೆ ನಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚುತ್ತದೆ ಎಂಬುದು ಮುಖ್ಯ. ಎಲ್ಲಾ ರಾಶಿಗಳೂ ಅಗ್ನಿ,ವಾಯು, ನೆಲ, ಜಲ ಹಾಗೂ ಆಕಾಶ ಈ ತತ್ತ್ವಗಳನ್ನು ಆಧರಿಸಿ ಇರುವುದರಿಂದ ಈ ಎಲ್ಲ ತತ್ವಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಆದರೆ ನಮ್ಮಲ್ಲಿನ ಬಹುತೇಕರು ತಮ್ಮ ರಾಶಿಗೆ ಹೊಂದುವ ಬಟ್ಟೆಯನ್ನು ತೊಡುವ ಗೋಜಿಗೆ ಹೋಗುವುದಿಲ್ಲ. ಉದಾಹರಣೆಗೆ ಸಿಂಹರಾಶಿಯವರ ಸ್ವಭಾವ ಮೃಗೀಯವಾಗಿದ್ದು, ಅವರ ಗುಣಕ್ಕೂ ಚರ್ಮದ ವಸ್ತುಗಳಿಗೂ ಸರಿ ಹೊಂದುವುದಿಲ್ಲ.
ಯಾವ ರಾಶಿಯವರು ಯಾವ ರೀತಿಯ ಬಟ್ಟೆ ಧರಿಸಬೇಕೆಂದರೆ ಮೇಷ: ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ. ಈ ರಾಶಿಯವರು ಸಾಮಾನ್ಯವಾಗಿ ಕೆಂಪು ಬಣ್ಣವನ್ನು ಧರಿಸಿದರೆ ಬಹಳ ಉತ್ತಮ. ಇವರಿಗೆ ಇದು ಅದೃಷ್ಟದ ಬಣ್ಣವಾಗಿದ್ದು, ಇದರ ಜೊತೆಗೆ ಬಿಳಿ ಹಾಗೂ ಗುಲಾಬಿ ಬಣ್ಣ ಸಹ ಸೂಕ್ತವಾಗುತ್ತದೆ. ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಧರಿಸಲೇಬಾರದು.
ವೃಷಭ: ಹಸಿರು, ಬಿಳಿ, ಕಂದು ಮತ್ತಿತರ ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ. ಅದೃಷ್ಟವನ್ನು ತರುತ್ತದೆ. ಇದರಿಂದ ಅನೇಕ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಇದರಿಂದ ನಿಮ್ಮ ಆದಾಯ ಸಹ ಹೆಚ್ಚಾಗುತ್ತದೆ. ಗುಲಾಬಿ, ಕೆನೆ ಮತ್ತು ಬಿಳಿ ಬಣ್ಣ ಸಹ ಅದೃಷ್ಟವನ್ನು ತರುತ್ತದೆ. ಆದರೆ ಕೆಂಪು ಬಣ್ಣದಿಂದ ದೂರ ಇರಬೇಕು. ಈ ಬಣ್ಣದ ಬಟ್ಟೆಗಳು ಸದಾ ಅರ್ಥಾತ್ ಡಿಸೈನ್ ರಹಿತ ಹಾಗೂ ಬಹುಬಣ್ಣದ ಲೇಯರ್ಗಳುಳ್ಳ ಈಗಿದ್ದರೆ ಇನ್ನೂ ಉತ್ತಮ.
ಮಿಥುನ: ಪರಿಶುದ್ಧ ಕಾಟನ್ ಹಾಗೂ ಲಿನೆನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು, ಬಿಳಿ ಇವರಿಗೆ ಅತ್ಯುತ್ತಮ. ಇದರ ಜೊತೆಗೆ ಈ ರಾಶಿಯವರು ಕಪ್ಪು, ಬಿಳಿ, ಗುಲಾಬಿ, ಕೆಂಪು ಬಣ್ಣಗಳನ್ನು ಸಹ ಧರಿಸಬಹುದು. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಕೆಲಸಕ್ಕೆ ಹೋದರೆ ಯಶಸ್ಸು ಸಿಗುತ್ತದೆ. ಕರ್ಕ: ಹಸಿರು ಬಣ್ಣ ಈ ಕಟಕ ರಾಶಿಯವರಿಗೆ ಬಹಳ ಒಳ್ಳೆಯದು ಎನ್ನಬಹುದು. ಇದರ ಜೊತೆಗೆ ಹಳದಿ ಮತ್ತು ತಿಳಿ ಹಸಿರು ಬಣ್ಣವೂ ಇವರ ಅದೃಷ್ಟವನ್ನು ಹೆಚ್ಚು ಮಾಡುತ್ತದೆ. ಆದರೆ ಈ ರಾಶಿಯವರು ಎಂದಿಗೂ ಕಪ್ಪು ಬಟ್ಟೆಯನ್ನ ಧರಿಸಬಾರದು. ಕರ್ಕ ರಾಶಿಯ ಮಂದಿಗೆ ಸಿಲ್ಕ್, ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ. ಬಿಳಿಬಣ್ಣದ ಬಟ್ಟೆಗಳು ಅಥವಾ ತುಂಬಾ ಸರಳವಾದ ಡಿಸೈನ್ ಹೊಂದಿದ ಬಟ್ಟೆಗಳು ಇವರಿಗೆ ಒಳ್ಳೆಯದು.
ಸಿಂಹ: ಈ ಸಿಂಹರಾಶಿಯವರು ಸಾಧ್ಯವಾದಷ್ಟು ಬಿಳಿ ಬಣ್ಣದ ಬಟ್ಟೆ ಧರಿಸಬೇಕು. ಇದು ನಿಮಗೆ ಸಂತೋಷ ಹಾಗೂ ಸಮೃದ್ಧಿಯನ್ನು ನೀಡುತ್ತದೆ. ಅಲ್ಲದೇ, ಇದರಿಂದ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ. ಅಲ್ಲದೇ ಇದರ ಜೊತೆಗೆ ಗೋಲ್ಡನ್ ಮತ್ತು ಹಳದಿ ಬಣ್ಣದ ಬಟ್ಟೆಯನ್ನ ಧರಿಸಬಹುದು. ಸಿಂಹ ರಾಶಿಯ ಮಂದಿಗೆ ಕೆಂಪು, ಹಳದಿ ಹಾಗೂ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಉತ್ತಮ.
ಕನ್ಯಾ: ಈ ಕನ್ಯಾರಾಶಿಯವರು ಪೀಚ್, ತಿಳಿ ನೀಲಿ, ತಿಳಿ ಗುಲಾಬಿ ಬಣ್ಣವನ್ನು ಧರಿಸಿದರೆ ಬಹಳ ಒಳ್ಳೆಯದಾಗುತ್ತದೆ. ಈ ಬಣ್ಣದ ಬಟ್ಟೆ ಧರಿಸಿ ಕೆಲಸಕ್ಕೆ ಹೋದರೆ ಸಕ್ಸಸ್ ಆಗುತ್ತದೆ. ಇದರ ಜೊತೆಗೆ ನೀವು ಬಾಟಲ್ ಗ್ರೀನ್, ಕಪ್ಪು ಮತ್ತು ಹಸಿರು ಬಣ್ಣಗಳನ್ನ ಸಹ ಧರಿಸಬಹುದು. ಕಾಟನ್ ಹಾಗೂ ಲಿನೆನ್ ಬಟ್ಟೆ ಇವರಿಗೆ ಒಳ್ಳೆಯದು. ಅಗಲವಾದ ಕಟ್ ಗಳು ಅಥವಾ ಶೇಡ್ಗಳಿರುವ ಬಟ್ಟೆ ಅಷ್ಟು ಒಳ್ಳೆಯದಲ್ಲ.
ತುಲಾ: ನೀಲಿ ಬಣ್ಣ ತುಲಾ ರಾಶಿಯವರ ಬದುಕನ್ನ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎನ್ನಬಹುದು. ಇವು ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನ ಮೂಡಿಸುತ್ತದೆ. ಈ ಬಣ್ಣ ಮಾತ್ರವಲ್ಲದೇ, ಗುಲಾಬಿ, ಕಪ್ಪು ಮತ್ತು ಬಿಳಿ ಬಣ್ಣ ಸಹ ನಿಮಗೆ ಸೂಕ್ತವಾಗುತ್ತದೆ. ತುಲಾರಾಶಿಯ ಮಂದಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆಗಳು ಒಳ್ಳೆಯದು. ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ.
ವೃಶ್ಚಿಕ: ಈ ರಾಶಿಯವರಿಗೆ ಮರೂನ್, ಕೆಂಪು, ಬಾಟಲ್ ಹಸಿರು, ನೇರಳೆ ಬಣ್ಣದ ಬಟ್ಟೆಗಳು ಬಹಳ ಶುಭ ಎನ್ನಲಾಗುತ್ತದೆ. ಇದರಿಂದ ನಿಮಗೆ ಯಶಸ್ಸು ಸಿಗುತ್ತದೆ. ಈ ಬಣ್ಣಗಳನ್ನ ಬಿಟ್ಟು ಬೇರೆ ಬಣ್ಣದ ಬಟ್ಟೆಯನ್ನ ಧರಿಸದಿದ್ದರೆ ಸೂಕ್ತ. ಕಾಟನ್ ಬಟ್ಟೆಗಳು ಉತ್ತಮ.
ಧನಸ್ಸು: ಧನಸ್ಸು ರಾಶಿಯವರಿಗೆ ಕೆಂಪು, ಹಳದಿ ಕಿತ್ತಳೆ ಬಣ್ಣ ಒಳ್ಳೆಯದು. ಇದು ಅವರಿಗೆ ಯಶಸ್ಸನ್ನು ನೀಡುತ್ತದೆ. ಇವರು ಬಿಳಿ ಬಣ್ಣವನ್ನು ಸಹ ಧರಿಸಬಹುದು. ಆದರೇ ಯಾವುದೇ ಕಾರಣಕ್ಕೂ ಕಪ್ಪು ಬಣ್ಣವನ್ನ ಧರಿಸಬಾರದು. ಈ ರಾಶಿಯ ಮಂದಿಗೆ ಹಳದಿ, ತಿಳಿ ಕೇಸರಿ, ಅದೃಷ್ಟ ತರುತ್ತವೆ.
ಮಕರ: ಮಕರ ರಾಶಿಯವರಿಗೆ ಕಂದು ಮತ್ತು ಖಾಕಿ ಬಣ್ಣ ಸೂಕ್ತವಾಗುತ್ತದೆ. ಈ ಬಣ್ಣದ ಬಟ್ಟೆಯಿಂದ ಮಕರ ರಾಶಿಯವರಿಗೆ ಅದೃಷ್ಟ ಒಲಿಯುತ್ತದೆ. ಆದರೆ ಈ ರಾಶಿಯವರು ಕೆಂಪು ಬಣ್ಣವನ್ನು ಧರಿಸಬಾರದು ಎನ್ನಲಾಗುತ್ತದೆ. ಈ ರಾಶಿಯ ಮಂದಿಗೆ ಕಾಟನ್, ಸಿಲ್ಕ್, ಲಿನೆನ್ ಮಾದರಿಗಳ ಬಟ್ಟೆ ಉತ್ತಮ. ಕಪ್ಪು, ನೀಲಿ ಉತ್ತಮ.
ಕುಂಭ: ಈ ರಾಶಿಯ ಜನರಿಗೆ ದಟ್ಟ ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಕುಂಭ ರಾಶಿಯವರಿಗೆ ನೇರಳೆ ಬಣ್ಣದ ಉಡುಪುಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಇದರಿಂದ ಅನೇಕ ಅವಕಾಶಗಳು ನಿಮ್ಮನ್ನ ಹುಡುಕಿ ಬರುತ್ತದೆ. ಇದು ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ.
ಮೀನ: ಹಳದಿ ಬಣ್ಣ ಮೀನ ರಾಶಿಯವರಿಗೆ ಸೂಕ್ತವಾಗುತ್ತದೆ. ಇದರಿಂದ ಬಹಳ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಮರೂನ್ ಬಣ್ಣವು ಉತ್ತಮ ಯಶಸ್ಸನ್ನು ನೀಡುತ್ತದೆ. ಆದರೆ ನೀವು ಕಪ್ಪು ಬಣ್ಣವನ್ನು ಧರಿಸಬಾರದು. ಇದರಿಂದ ಸಮಸ್ಯೆ ಆಗುತ್ತದೆ. ಈ ರಾಶಿಯವರು ಕಿತ್ತಳೆ, ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇವರಿಗೆ ಸಾಮಾನ್ಯವಾಗಿ ಕಪ್ಪು ಬಣ್ಣ ಬಿಟ್ಟು ಎಲ್ಲಾ ಬಟ್ಟೆ ಹೊಂದುತ್ತವೆ.