ಮಿಥುನ ರಾಶಿಯ ಗುಣ ಲಕ್ಷಣ ಮತ್ತು ಸ್ವಭಾವ ಹೇಗೆ ಇರುತ್ತದೆ

ನಾವು ಈ ಲೇಖನದಲ್ಲಿ ಮಿಥುನ ರಾಶಿಯ ಗುಣ ಲಕ್ಷಣ ಮತ್ತು ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಜ್ಯೋತಿಷ್ಯದ ಪ್ರಕಾರ 12 ರಾಶಿಗಳು 27 ನಕ್ಷತ್ರಗಳು ತನ್ನದೇ ಆದ ಗುಣ ಧರ್ಮಗಳನ್ನು ಹೊಂದಿದೆ . ಪ್ರತಿಯೊಂದು ವ್ಯಕ್ತಿಯು ಜನಿಸಿದ ಸ್ಥಳ , ಸಮಯ, ದಿನಾಂಕಕ್ಕೆ ಅನುಗುಣವಾಗಿ ಆತನ ರಾಶಿ ನಕ್ಷತ್ರಗಳು ನಿರ್ಧಾರವಾಗುತ್ತದೆ.
ಮಿಥುನ ರಾಶಿಯಲ್ಲಿ ಜನಿಸಿದ ವ್ಯಕ್ತಿಯ ಗುಣಲಕ್ಷಣ ಮತ್ತು ಸ್ವಭಾವ ತಿಳಿದುಕೊಳ್ಳೋಣ.

ಮಿಥುನ ರಾಶಿಯ ಗುಣ ಸ್ವಭಾವಗಳು : ಮಿಥುನ ರಾಶಿ ಮಹಿಳೆಯ ಗುಣ ಸ್ವಭಾವಗಳು . ಇವರು ಚಾಣಾಕ್ಷ , ಚತುರ ಹಾಗೂ ತೀಕ್ಷ್ಣಮತಿಗಳು ಆಗಿರುತ್ತಾರೆ . ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ಇವರು ಜೀವನದಲ್ಲಿ ಸವಾಲುಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುತ್ತಾರೆ . ತಾಳ್ಮೆ ಇಲ್ಲದ ವ್ಯಕ್ತಿ ಆಗಿರುತ್ತಾರೆ . ವಿಚಾರಗಳನ್ನು ದಿಢೀರ್ ಎಂದು ಬದಲಾಯಿಸುತ್ತಾರೆ .

ಚಂಚಲ ಮನಸ್ಸಿನವರು ಆದ ಇವರು ಎಲ್ಲಿಗೆ ಹೋಗಬೇಕಾದರೂ , ಕನಿಷ್ಠ 10 ನಿಮಿಷಗಳು ವಿಳಂಭವಾಗಿ ಹೋಗುತ್ತಾರೆ . ಹಾಸ್ಯ ಪ್ರಜ್ಞೆ ಮತ್ತು ತೀಕ್ಷ್ಣ ನಾಲಿಗೆ ಹೊಂದಿರುವ ಇವರು ಅತಿ ತುಂಟಾಟದ ಸ್ವಭಾವದವರು . ಆಕರ್ಷಕ ಮಾತುಗಾರರಾದ ಇವರು ಉತ್ಸಾಹಿ ವ್ಯಕ್ತಿ . ಪ್ರೇಮದ ವಿಷಯದಲ್ಲಿ ಇವರು ತೀವ್ರ ವಿಮರ್ಶೆಯ ಮನಸ್ಸು ಬದಲಾಯಿಸುವ ವ್ಯಕ್ತಿ . ವಾದದಲ್ಲಿ ಚತುರರಾದ ಇವರು ವದಂತಿ ಪ್ರಿಯರು , ತಾಳ್ಮೆ ಇಲ್ಲದೆ ಸಂಕುಚಿತ ಸ್ವಭಾವದವರು ಆಗಿರುತ್ತಾರೆ.

ಮಿಥುನ ರಾಶಿಯ ಪುರುಷನ ಗುಣಲಕ್ಷಣ ಸ್ವಭಾವಗಳು : – ಇವರು ಚತುರರು , ಸದಾ ಉತ್ಸಾಹಿಗಳು ಮತ್ತು ಎಲ್ಲಾ ಸಂದರ್ಭಕ್ಕೆ ಹೊಂದಿಕೊಳ್ಳುವವರು ಆಗಿರುತ್ತಾರೆ. ಮಾನಸಿಕವಾಗಿ ಸೂಕ್ಷ್ಮ ಮತಿಗಳಾದ ಇವರು ಯಶಸ್ಸನ್ನು ಗಳಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಹಾಸ್ಯ ಪ್ರಜ್ಞೆ ಇತರರನ್ನು ಗಮನ ಸೆಳೆಯುತ್ತದೆ . ತರ್ಕ ಬದ್ಧ , ಪ್ರತಿ ಸ್ಪರ್ಧಾತ್ಮಕ , ವಿಶ್ಲೇಷಣಾತ್ಮಕ ,

ಹಾಗೂ ಗುರಿ ಸಾಧಕ ವಿಚಾರಗಳು ಇವರದಾಗಿರುತ್ತದೆ . ಮೋಜು ಪ್ರಿಯರಾದ ಇವರ ವ್ಯಕ್ತಿತ್ವ ಅನೇಕ ಮಹಿಳೆಯರನ್ನು ನಿಮ್ಮತ್ತ ಆಕರ್ಷಿಸುತ್ತದೆ. ನಕ್ಕು ನಗಿಸುವ ನಿಮ್ಮನ್ನು ಚಿಕ್ಕ ಮಕ್ಕಳು ಇಷ್ಟ ಪಡುತ್ತಾರೆ. ಪ್ರೇಮ ಜೀವನದಲ್ಲಿ ವಿಭಿನ್ನ ರುಚಿಗಳನ್ನು ಸವಿಯುವ ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅಲ್ಪ ಮತಿಗಳಾಗಿ , ಉದ್ರೇಕಕಾರಿಯಾಗಿ ದುಡುಕಿನ ವರ್ತನೆಯನ್ನು ತೋರುತ್ತಾರೆ.

ಮಿಥುನ ರಾಶಿಯವರ ಪ್ರೇಮ ವಿಚಾರ: – ಎಲ್ಲವೂ ಒಮ್ಮೆಲೆ ಬೇಕೆನ್ನುವ ಅಥವಾ ಯಾವುದೂ ಬೇಡವೇ ಬೇಡ ಎಂಬ ವಿಚಾರದಲ್ಲಿ ಕೆಲವೊಮ್ಮೆ ಹುಚ್ಚರಾಗುತ್ತಾರೆ . ಪರಿಪೂರ್ಣತೆಯನ್ನು ನಿರೀಕ್ಷಿಸುವ ಇವರು ಪ್ರತಿಯೊಂದನ್ನು ವಿಮರ್ಶಾತ್ಮಕವಾಗಿ ನೋಡುತ್ತಾರೆ . ತೀಕ್ಷ್ಣ ಬುದ್ಧಿಶಕ್ತಿ ಮತ್ತು ತರ್ಕಬದ್ಧ ದೃಷ್ಟಿಕೋನದಿಂದ ಜೀವನದಲ್ಲಿ ನಿರ್ದಿಷ್ಟ ನೆಲೆ ಹೊಂದುತ್ತಾರೆ . ಇವರು ಮತ್ತೊಬ್ಬರ ಸೌಂದರ್ಯಕ್ಕಿಂತ ಹೆಚ್ಚಾಗಿ ಅವರ ಬುದ್ಧಿ ಕೌಶಲ್ಯಕ್ಕೆ ಮರುಳಾಗುತ್ತಾರೆ .

ಮಿಥುನ ರಾಶಿಯವರ ಮದುವೆ ಜೀವನ : – ಮದುವೆಯಾಗುವುದಕ್ಕೆ ಮುಂಚೆ ಇವರು ವಿಭಿನ್ನ ರೀತಿಯ ಪ್ರೇಮ ಜೀವನವನ್ನು ಅನುಭವಿಸುವುದರಿಂದ, ಮದುವೆ ತಡವಾಗಿ ಆಗುತ್ತದೆ . ಇವರ ಮನಸ್ಸಿನ ಆಸಕ್ತಿ ಅಭಿರುಚಿಗಳನ್ನು ಹಂಚಿಕೊಳ್ಳುವಂತಹ ಅನುರೂಪ ಜೀವನ ಸಂಗಾತಿಯನ್ನು ಇವರು ಬಯಸುತ್ತಾರೆ. ಮದುವೆಯಾದ ವ್ಯಕ್ತಿಯನ್ನು ಇವರು ಬಹಳ ಗೌರವಿಸುತ್ತಾರೆ. ಅನೈತಿಕ ಸಂಬಂಧಗಳು ಅಪಾಯ ತರುತ್ತವೆ .

ಮಿಥುನ ರಾಶಿಯವರ ಹಣಕಾಸಿನ ವಿಚಾರ : ಇಷ್ಟೇ ಹಣ ಗಳಿಸಿದರು ಅದು ಎಲ್ಲಿಗೆ ಹೋಗುತ್ತದೆ ಎಂದು ಇವರಿಗೆ ಗೊತ್ತಾಗುವುದಿಲ್ಲ . ಯಾವುದೇ ಒಬ್ಬ ರಾಜಕಾರಣಿಗಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನು ಇವರು ಹೊಂದಿರುತ್ತಾರೆ . ಆಕರ್ಷಕ ಎನಿಸಿದ್ದನ್ನು ಹೊಂದಲು ಬಯಸುವ ಇವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ . ಹಣ ಉಳಿತಾಯ ಮಾಡುವ ಹೆಚ್ಚು ಪ್ರೌವೃತ್ತಿ ಬೆಳೆಸಿಕೊಳ್ಳಬೇಕು .

ಮಿಥುನ ರಾಶಿಯವರ ವೃತ್ತಿ ಜೀವನ : ಮಾತಿನಲ್ಲಿ ಚತುರರಾದ ಇವರು ಜನರನ್ನು ಭೇಟಿಯಾಗಲು ಮಾತನಾಡಲು ಇಷ್ಟಪಡುತ್ತಾರೆ . ಇವರ ಉತ್ತಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಬಹುದು . ದೂರದರ್ಶನ ವೀಕ್ಷಕ ವಿವರಣೆಕಾರರು ಆಗಬಹುದು . ಟೆಲಿಫೋನ್ ನಿರ್ವಾಹಕರು ಆಗಬಹುದು. ಇವರ ವ್ಯಕ್ತಿತ್ವ ಮತ್ತು ಹಾಸ್ಯ ಪ್ರಜ್ಞೆ , ಇವರ ಬರಹದಲ್ಲಿ , ಬಾನುಲಿಯಲ್ಲಿ , ದೂರದರ್ಶನದಲ್ಲಿ , ಭೋಧನೆಯಲ್ಲಿ, ಅಥವಾ ಇತರೆ ಯಾವುದೇ ಸಂಪರ್ಕ ಮಾಧ್ಯಮದಲ್ಲಿ ಜೀವನೋಪಾಯವನ್ನು ಒದಗಿಸಬಹುದು . ತೀವ್ರ ತರ್ಕ ಶಕ್ತಿಯಿಂದ ಕಾನೂನು ಕ್ಷೇತ್ರದಲ್ಲಿ ಇವರು ಮುಂದುವರಿಯಬಹುದು . ಪಾಲುದಾರಿಕೆ ವ್ಯವಹಾರ ಮಾಡಬೇಡಿ .

ಮಿಥುನ ರಾಶಿಯವರ ಸ್ನೇಹಿತರು : ಜಾಸ್ತಿ ಜನರೊಡನೆ ಸಂಪರ್ಕ ಹೊಂದಿದ್ದರೂ , ಸಹ ಸ್ನೇಹಿತರು ಬಹಳ ಕಡಿಮೆ . ನಿಮ್ಮಷ್ಟೇ ಚಟುವಟಿಕೆ ಉಳ್ಳ ಕುತೂಹಲಕಾರಿಯಾದ ಉತ್ಸಾಹಿ ಜನರೊಂದಿಗೆ ಸಮಯ ಕಳೆಯುವುದರಲ್ಲಿ ಸಂತೋಷ ಇರುತ್ತದೆ. ಎಲ್ಲರೊಡನೆ ನಗುನಗುತ್ತಾ ಮುಕ್ತವಾಗಿ ಮಾತನಾಡುವ ಇವರ ಆಸಕ್ತಿ ವಿಶೇಷ ಸ್ನೇಹಿತರಲ್ಲಿ ಮಾತ್ರ ಇರುತ್ತದೆ. ಸ್ನೇಹದಲ್ಲಿ ಇವರು ಸಹಕಾರಿ ಸಹಾಯಕಾರಿ ನಿಷ್ಠೆ ಉಳ್ಳವರು ಆಗಿರುತ್ತಾರೆ.

ಮಿಥುನ ರಾಶಿಯವರ ಆರೋಗ್ಯ ವಿಚಾರ : ನರಗಳ ಸಮಸ್ಯೆಯೊಂದಿಗೆ ಇವರು ಜೀವನ ಪರ್ಯಂತ ಹೋರಾಟ ನಡೆಸುತ್ತಾರೆ. ಹೃದಯ, ಉಬ್ಬಸ ರೋಗಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿ ಇದೆ. ಜೀವನದ ಉದ್ದಕ್ಕೂ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸುವುದು ಸೂಕ್ತ .

ಮಿಥುನ ರಾಶಿಯವರ ಮನೆ: ಇವರ ಪ್ರತಿಯೊಂದು ಚಟುವಟಿಕೆಯ ಆರಂಭಕ್ಕೆ ಮನೆಯೇ ಆರಂಭದ ತಾಣ . ಇವರ ಮನೆ ವ್ಯವಸ್ಥೆಯಿಂದ ಕೂಡಿದ್ದು ಆಗಿರುತ್ತದೆ . ಓದಿನಲ್ಲಿ ಆಸಕ್ತಿ ಹೊಂದಿರುವ ಇವರು ಮನೆಯಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಇರುತ್ತದೆ. ಮನೆಯ ವಾತಾವರಣದಲ್ಲಿ ಹೆಚ್ಚು ನೆಮ್ಮದಿ ಶಾಂತಿಯನ್ನು ಕಾಣಬಹುದು.

ಮಿಥುನ ರಾಶಿಯವರ ಹಿನ್ನೆಡೆಗೆ ಕಾರಣ ಮತ್ತು ಅದಕ್ಕೆ ಪರಿಹಾರ : ಇವರ ಅಶಿಸ್ತಿನ ಕಾರ್ಯ ವೈಖರಿಯಿಂದಾಗಿ ಇವರ ಯೋಜನೆ ಅಪೂರ್ಣವಾಗಿ ಉಳಿಯುವುದು . ಆದ್ದರಿಂದ ಪೂರ್ವ ಸಿದ್ದತೆ ಮತ್ತು ಅಚ್ಚುಕಟ್ಟು ತನವನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ಮಾನಸಿಕ ಶಾಂತಿಗಾಗಿ ಹಾಗೂ ಮನೋಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಇವರು ಧ್ಯಾನ ಮಾಡುವ ಅಗತ್ಯವಿದೆ.

ಮಿಥುನ ರಾಶಿಯವರು ಇತರ ರಾಶಿಯೊಂದಿಗೆ ಪ್ರೇಮ ಮತ್ತು ಅನುರೂಪತೆ : – ಮಿಥುನ ರಾಶಿಯೊಂದಿಗೆ ಮಿಥುನ ರಾಶಿಯವರು . ಈ ಮದುವೆ ಅತ್ಯಂತ ಬೇಸರದಾಯಕ ಆದರೂ,ಪರಸ್ಪರ ಭಾವೈಕ್ಯತೆಯಿಂದ ನಿಭಾಯಿಸಬಹುದು .

ಕಟಕ ರಾಶಿಯೊಂದಿಗೆ ಮಿಥುನ ರಾಶಿಯವರು . ಮಿಥುನ ರಾಶಿಯ ಮಹಿಳೆ ಮತ್ತು ಕಟಕ ರಾಶಿಯ ಪುರುಷನ ಸಂಬಂಧ ಪರಸ್ಪರ ಪೂರಕವಾಗಿ ಸಾಗುವುದು ಕಷ್ಟ ಸಾಧ್ಯ. ಅವರಿಬ್ಬರ ವಿಚಾರಗಳು , ಅಭಿರುಚಿ, ಆಸಕ್ತಿಗಳು ವಿಭಿನ್ನವಾಗಿರುವುದೇ ಇದಕ್ಕೆ ಕಾರಣ. ಮಿಥುನ ರಾಶಿಯ ಪುರುಷ ಮತ್ತು ಕಟಕ ರಾಶಿಯ ಮಹಿಳೆಯ ಸಂಬಂಧದಲ್ಲೂ ಕನಿಷ್ಟ ಪ್ರಮಾಣದಲ್ಲಿ ಅನುರೂಪತೆ ಇರುತ್ತದೆ.

ಸಿಂಹ ರಾಶಿಯೊಂದಿಗೆ ಮಿಥುನ ರಾಶಿಯವರು . ವೈವಾಹಿಕ ಜೀವನ ಯಶಸ್ವಿಯಾಗಬೇಕು ಅಂದರೆ, ಮಿಥುನ ರಾಶಿಯ ಮಹಿಳೆ ತನ್ನ ಸಿಂಹ ರಾಶಿಯ ಪತಿಯಿಂದ ಹೆಚ್ಚಿನ ಗಮನವನ್ನು ಪಡೆದುಕೊಳ್ಳಬೇಕಾಗುತ್ತದೆ. ಸಿಂಹ ರಾಶಿಯ ಮಹಿಳೆ ತನ್ನ ಮಿಥುನ ರಾಶಿಯ ಪತಿಯನ್ನು ಸಂತಸ ಪಡಿಸಲು ಹಾಗೂ ತನ್ನಲ್ಲಿ ಅವನ ಆಸಕ್ತಿಯನ್ನು ಕಾಪಾಡಿಕೊಂಡು ಹೋಗಲು ಬಹಳ ಪ್ರಯಾಸ ಪಡಬೇಕಾಗುತ್ತದೆ.

ಕನ್ಸಾ ರಾಶಿಯೊಂದಿಗೆ ಮಿಥುನ ರಾಶಿಯವರು . ಮಿಥುನ ರಾಶಿಯ ಪುರುಷನೊಂದಿಗೆ ಕನ್ಯಾ ರಾಶಿಯ ಮಹಿಳೆಯ ಸಂಬಂಧವಾಗಲಿ ಅಥವಾ ಕನ್ಯಾ ರಾಶಿಯ ಪುರುಷನೊಂದಿಗೆ ಮಿಥುನ ರಾಶಿಯ ಮಹಿಳೆಯ ಸಂಬಂಧವಾಗಲಿ ಅನುರೂಪ ಹೊಂದಿರುವುದಿಲ್ಲ .

ತುಲಾ ರಾಶಿಯೊಂದಿಗೆ ಮಿಥುನ ರಾಶಿಯವರು . ಮಿಥುನ ರಾಶಿಯವರು ತನ್ನ ಪತ್ನಿಯ ಬಗ್ಗೆ ತುಲಾ ರಾಶಿಯ ಪುರುಷನ ನಿರಂತರ ಗಮನ , ಆಸಕ್ತಿ , ಕಾಳಜಿ ತೋರುವುದರಿಂದ , ಅವರ ವೈವಾಹಿಕ ಜೀವನ ಯಶಸ್ವಿ ಯಾಗುತ್ತದೆ. ತುಲಾ ರಾಶಿಯ ಮಹಿಳೆ ಹಾಗೂ ಮಿಥುನ ರಾಶಿಯ ಪುರುಷನ ಸಂಬಂಧ ಯಶಸ್ವಿಯಾಗಬೇಕಾದರೂ ಸಹ ಪರಸ್ಪರ ಹೊಂದಾಣಿಕೆ ಬಹಳ ಅಗತ್ಯ .

ವೃಶ್ಚಿಕ ರಾಶಿಯವರೊಂದಿಗೆ ಮಿಥುನ ರಾಶಿಯವರು . ವೃಶ್ಚಿಕ ರಾಶಿಯ ಪುರುಷ ಹಾಗೂ ಮಿಥುನ ರಾಶಿಯ ಮಹಿಳೆಯರು ಮದುವೆಯ ಸಂಬಂಧ ಆರಂಭದಲ್ಲಿ ಉತ್ತಮವಾಗಿದ್ದರೂ , ಕ್ರಮೇಣ ಬೇಸರ , ವಿರಸದಿಂದ ಕೂಡಿರುತ್ತದೆ. ವೃಶ್ಚಿಕ ರಾಶಿಯ ಮಹಿಳೆ ಮತ್ತು ಮಿಥುನ ರಾಶಿಯ ಪುರುಷನ ಸಂಬಂಧ ಸ್ನೇಹದ ಮಟ್ಟಿಗೆ ಮಾತ್ರ ಉತ್ತಮವಾಗಿರುತ್ತದೆ .

ಧನು ರಾಶಿಯೊಂದಿಗೆ ಮಿಥುನ ರಾಶಿಯವರು . ಪರಸ್ಪರ ವಿಶ್ವಾಸ , ಹೊಂದಾಣಿಕೆ , ಗೌರವ, ಇರುವುದರಿಂದ ಧನು ರಾಶಿಯ ಪುರುಷ ಮತ್ತು ಮಿಥುನ ರಾಶಿಯ ಮಹಿಳೆ ಅಥವಾ ಧನು ರಾಶಿಯ ಮಹಿಳೆ ಅಥವಾ ಮಿಥುನ ರಾಶಿಯ ಪುರುಷನ ವೈವಾಹಿಕ ಸಂಬಂಧ ಅತ್ಯಂತ ಯಶಸ್ವಿಯಾಗುತ್ತದೆ .

ಮಕರ ರಾಶಿಯೊಂದಿಗೆ ಮಿಥುನ ರಾಶಿಯವರು . ಪ್ರೀತಿ ಪ್ರೇಮದ ವಿಷಯದಲ್ಲಿ ಮಕರ ರಾಶಿಯ ಪುರುಷ ಬಹಳ ಪ್ರಾಮಾಣಿಕರಾಗಿ ಇರುವುದರಿಂದ , ಅವನು ತನ್ನ ಪತ್ನಿಗೆ ಶಾಂತಿ, ನೆಮ್ಮದಿ , ಸಮೃದ್ಧಿಯ ಜೀವನವನ್ನು ನೀಡುತ್ತಾನೆ . ಪತ್ನಿಯನ್ನು ಸಂತುಷ್ಟಗೊಳಿಸುತ್ತಾನೆ . ಮಿಥುನ ರಾಶಿಯ ಪುರುಷ ಮಕರ ರಾಶಿಯ ಮಹಿಳೆಯ ಮದುವೆಯಾದರೂ ಸಹ ಅವರ ಸಂಬಂಧದಲ್ಲಿ ಸ್ನೇಹವೇ ಪ್ರಧಾನವಾಗಿರುತ್ತದೆ .

ಕುಂಭ ರಾಶಿಯೊಂದಿಗೆ ಮಿಥುನ ರಾಶಿಯವರು . ಮಿಥುನ ರಾಶಿಯ ಮಹಿಳೆ ಹಾಗೂ ಕುಂಭ ರಾಶಿಯ ಪುರುಷನ ಸಂಬಂಧ ಸ್ವರ್ಗದಲ್ಲಿ ಮದುವೆಯಾದಷ್ಟು ಅನ್ಯೋನ್ಯವಾಗಿರುತ್ತದೆ . ಮಿಥುನ ರಾಶಿಯ ಪುರುಷ ಹಾಗೂ ಕುಂಭ ರಾಶಿಯ ಮಹಿಳೆಯ ವೈವಾಹಿಕ ಸಂಬಂಧವೂ ಅಷ್ಟೇ, ಹೊಂದಾಣಿಕೆ ಇದ್ದು ಜೀವನಪೂರ್ತಿ ಆದರ್ಶದಾಯಕ ದಾಂಪತ್ಯ ಜೀವನವನ್ನು ನಡೆಸುತ್ತಾರೆ .

ಮೀನ ರಾಶಿಯೊಂದಿಗೆ ಮಿಥುನ ರಾಶಿಯವರು . ಮೀನ ರಾಶಿಯ ಪುರುಷನೊಂದಿಗೆ ಮಿಥುನ ರಾಶಿಯ ಮಹಿಳೆಯ ಸಂಬಂಧವಾಗಲಿ ಅಥವಾ ಮೀನ ರಾಶಿಯ ಮಹಿಳೆಯೊಂದಿಗೆ ಮಿಥುನ ರಾಶಿಯ ಪುರುಷನ ಸಂಬಂಧ ಎಂದಿಗೂ ಯಶಸ್ವಿಯಾಗಲಾರದು .

ಮಿಥುನ ರಾಶಿಯ ಇತರ ಗುಣಲಕ್ಷಣಗಳು : ಪ್ರಭಾವಿ ಗ್ರಹ ಬುಧ , ಮೂಲ ಧಾತು ವಾಯು , ಗುಣ ಪುರುಷ ಧನಾತ್ಮಕ . ಮಹತ್ವಾಕಾಂಕ್ಷೆ ಸಂಪರ್ಕ , ಅದೃಷ್ಟದ ಬಣ್ಣ ದಟ್ಟ ಹಸಿರು , ಅಮೂಲ್ಯ ಹರಳು ಪಚ್ಚೆ , ಅದೃಷ್ಟದ ದಿನ ಬುಧವಾರ . ಅದೃಷ್ಟ ಸಂಖ್ಯೆ 5 . ಶುಭ ದಿಕ್ಕು ಪಶ್ಚಿಮ ಮತ್ತು ಉತ್ತರ .

Leave a Comment