ಕೆಟ್ಟ ಸ್ತ್ರೀಯರ ಲಕ್ಷಣಗಳು ಪ್ರತಿಯೊಬ್ಬ ಸ್ತ್ರೀಯು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರ ವ್ಯಕ್ತಿತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಕೂಡ ಹೇಳಲು ಸಾಧ್ಯವಿಲ್ಲ. ಹಾಗಾದರೇ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಅದು ಸ್ತ್ರೀಯರ ಕೆಟ್ಟ ಗುಣಲಕ್ಷಣಗಳು ಅಂದರೆ ಅದು ಒಳ್ಳೆಯದಲ್ಲ ಎಂದು ಹೇಗೆ ಹೇಳಬಹುದು.
ಆ ಲಕ್ಷಣಗಳು ಯಾವುವು ಎನ್ನುವುದನ್ನು ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೌದು ಮನೆಯಲ್ಲಿ ಯಾವುದೇ ರೀತಿಯ ಕಷ್ಟಸುಖ ದುಃಖ ಏನೇ ಇರಲಿ ಅವೆಲ್ಲವನ್ನೂ ಸಹ ಸರಿಯಾಗಿ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವಳಿಗೆ ಹೆಣ್ಣು ಎಂದು ಕರೆದರೆ ತಪ್ಪಲ್ಲ.
ತ್ಯಗಮಯಿ ಕರುಣಾಮಯಿ ಎಂಬ ಅರ್ಥವೂ ಕೂಡ ಹೆಣ್ಣಿಗೆ ಇದೆ ಇಷ್ಟೆಲ್ಲ ಗುಣಗಳನ್ನು ಹೊಂದಿರುವಂತಹ ಹೆಣ್ಣು ಒಂದಷ್ಟು ಸಂದರ್ಭಗಳಲ್ಲಿ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ ಈ ಕೆಲಸ ಹೀಗೆ ಆಗಬೇಕು ನನಗೆ ಈ ವಸ್ತು ಬೇಕೇ ಬೇಕು ಹೀಗೆ ಎಲ್ಲವನ್ನು ಕೂಡ ಹಠ ಮಾಡಿ ಪಡೆದುಕೊಳ್ಳಬಾರದು.
ಹಾಗೇನಾದರು ನೀವು ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹಠವನ್ನು ಮಾಡಿದರೆ
ಆ ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಎನ್ನುವುದಾಗುವುದಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅದೇ ರೀತಿಯಲ್ಲಿ ಯಾವ ಕೆಲವು ಕೆಟ್ಟ ಗುಣ ಲಕ್ಷಣಗಳನ್ನು ಹೊಂದಿರುವ ಸ್ತ್ರೀಯರನ್ನು ಕೆಟ್ಟ ಸ್ತ್ರೀ ಎಂದು ಹೇಳಬಹುದು ಎಂಬುವುದರ ಬಗ್ಗೆ ನೋಡೋಣ ಬನ್ನಿ. ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ ಅತಿಯಾಗಿ ಆವೇಶ ಪಡುವ ಸ್ತ್ರೀಯರು ಅವರಿಗೆ ಸಂತೋಷ ಇರುವುದಿಲ್ಲ. ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರಿಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ.
ಪದೇ ಪದೇ ಬಾಯಿಯಲ್ಲಿ ಬೈಗುಳ ಸ್ನಾನ ಮಾಡದೇ ಕೊಳಕಾಗಿರುವುದು ಸೀರೆಯ ಸೆರಗನ್ನು ಸರಿ ಮಾಡಿಕೊಳ್ಳದೇ ಅಂಗಾಂಗಗಳನ್ನು ಬಚ್ಚಿಟ್ಟುಕೊಳ್ಳದಿರುವುದು ಹೀಗೆ ಮಾಡಬಾರದು. ಮದುವೆಯಾದ ನಂತರ ಗಂಡನ ಬಿಟ್ಟು ಪರಪುರುಷರನ್ನು ತಲೆಯೆತ್ತಿ ನೋಡುವ ಸ್ತ್ರೀಯರು ಪರಪುರುಷರ ಜೊತೆ ಸಂಬಂಧವಿರುವ ಸ್ತ್ರೀ ಕೆಟ್ಟ ಸ್ತ್ರೀಯೆಂದು ಹೇಳಿದರೇ ತಪ್ಪಲ್ಲ.ಅಲ್ಲಿಯ ಮಾತು ಇಲ್ಲಿ, ಇಲ್ಲಿಯ ಮಾತು ಅಲ್ಲಿ ಹೀಗೆ ಎಲ್ಲ ಕಡೆಯಲ್ಲಿಯೂ ಬೆಂಕಿ ಹಚ್ಚುವ ಸ್ತ್ರೀ ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆ.
ಬೇರೆಯವರ ಖುಷಿ ನೆಮ್ಮದಿ ಕಂಡು ಅಸೂಯೆ ಪಡುವ ಸ್ತ್ರೀ ಯಾವಾಗಲೂ ಹೋಲಿಕೆ ಮಾಡುವ ಸ್ತ್ರೀ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ. ಸ್ತ್ರೀಯು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು. ಅತಿಯಾದ ಆವೇಶ ಹಾಗೂ ಅತಿಯಾದ ಕೋಪಾ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ. ಸ್ತ್ರೀ ಗೆ ತಿನ್ನುವ ಯೋಗ ಇದ್ದರೆ ಮಾತ್ರ ಪುರುಷನು ಸಂಪಾದಿಸುತ್ತಾನೆ.
ಸ್ತ್ರೀಯು ಮಾಡಿದ ಪಾಪ ಖಂಡಿತವಾಗಿಯೂ ಪುರುಷನನ್ನು ಹಿಂಬಾಲಿಸುತ್ತದೆ.
ಹೀಗೆ ಇಷ್ಟೆಲ್ಲಾ ಕೆಟ್ಟ ಗುಣ ಹೊಂದಿರುವಂತಹ ಸ್ತ್ರೀಯನ್ನು ಕೆಟ್ಟ ಸ್ತ್ರೀ ಅಂತ ಹೇಳಬಹುದು. ಆದ್ದರಿಂದ ಇವೆಲ್ಲವನ್ನೂ ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ. ಇದೆಲ್ಲಾ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಸ್ತ್ರೀಯರಿಗೆ ಮಾತ್ರ ಅನ್ವಯಿಸುತ್ತದೆ ಎಲ್ಲರಿಗೂ ಅಲ್ಲ. ಅವರಿಗೆ ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯುವ ಒಂದು ಒಳ್ಳೆಯ ಮಾರ್ಗ ತೋರಿಸುವ ಉದ್ದೇಶವಾಗಿದೆ.