ನಾವು ಈ ಲೇಖನದಲ್ಲಿ ತುಲಾ ರಾಶಿಯವರಿಗೆ ,ಶನಿಯ ಗೋಚಾರ ಫಲಗಳೇನು ಮತ್ತು ಪಂಚಮ ಶನಿಯ ಸ್ಥಿತಿ ಗತಿಗಳ ಬಗ್ಗೆ, ತಿಳಿದುಕೊಳ್ಳೋಣ .ತುಲಾ ರಾಶಿಯವರಿಗೆ, ಪಂಚಮ ಶನಿಕಾಟ .ಜಗಳ, ಮನಸ್ತಾಪ ಸಿಟ್ಟು ,ಬೇಜಾರು ,ಅಂತ 2023 ರ ಜನವರಿಯಿಂದ , ಇಲ್ಲಿ ತನಕ ಬಹಳಷ್ಟು ಜನ, ಕಾಲ ಕಳೆದಿರಬಹುದು. ಆಲಸಿತನದಿಂದ, ಬರುವ ಲಾಭ ಕೈಗೆ ಸಿಗದೇ ಇರಬಹುದು. ಆದರೆ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಪಾಠ ಹೇಳಿಕೊಡುವ ಶನಿ 2024 ರಲ್ಲಿ, ನಿಮ್ಮಲ್ಲಿ ಬಹಳಷ್ಟು ಜನಕ್ಕೆ ಪರಿಶ್ರಮ ಇಲ್ಲದ ಹಾಗೆ ದುಡ್ಡು ಬರುವ ಹಾಗೆ ಮಾಡುತ್ತಾನೆ, ಅದೃಷ್ಟ ಕೈ ಹಿಡಿಯುತ್ತದೆ .
ಪ್ರೀತಿ , ಪ್ರೇಮ, ಸಂಗಾತಿ ವಿಚಾರದಲ್ಲೂ, ಒಳ್ಳೆಯ ಸುದ್ದಿ ಕೇಳುತ್ತೀರಾ. ಬಹಳ ಉತ್ಸಾಹಕರಾಗಿರುತ್ತೀರಾ . ಹಾಗೆ ಜಗಳ , ಮನಸ್ತಾಪ , ಕಡಿಮೆಯಾಗಿ ತಾಳ್ಮೆಂದಿರುತ್ತೀರಾ . ಅದ್ಭುತ ಫಲಗಳು ಸಿಗುತ್ತದೆ. ಇಂತಹ ಇನ್ನೂ ಹೆಚ್ಚಿನ ಘಟನೆಗಳು ಮುಂದೆ ಒಂದಷ್ಟು ದಿನಗಳಲ್ಲಿ ನಡೆಯಲಿದೆ. ನಿಮಗೆ ಅದೃಷ್ಟ ತಂದು ಕೊಡುವ ಸಮಯ ಶುರುವಾಗೋದು, ಯಾವಾಗ ಯಾಕೆ ಪಂಚಮ ಶನಿ ಕಾಟ ಇದ್ದರೂ ಇಷ್ಟೆಲ್ಲಾ ಒಳ್ಳೆಯದಾಗುತ್ತದೆ , ಅಂತ ತಿಳಿದುಕೊಳ್ಳೋಣ.
ಶುಭ ದಿನಗಳು ಶುರುವಾಗುವ ಮುಂಚೆ ನಿಮ್ಮ ಪರಿಸ್ಥಿತಿ ಯಾವ ರೀತಿಯಲ್ಲಿ ಇರಬಹುದು. ಈಗಾಗಲೇ ಶನಿ ನಿಮ್ಮ ಪಂಚಮ ಸ್ಥಾನವಾಗಿರುವ ಕುಂಭ ರಾಶಿಯಲ್ಲಿದ್ದಾನೆ . ನಿಮಗೆ ಅದರಿಂದ ಬಹಳಷ್ಟು ವಿಚಾರಗಳಲ್ಲಿ ನಷ್ಟ ಆಗುತ್ತದೆ . ತೊಂದರೆಗಳು ಬರುತ್ತವೆ ಅಂತ , ಆ ತೊಂದರೆಗಳು ಮತ್ತಷ್ಟು ಜಾಸ್ತಿಯಾಗುತ್ತದೆ . ಫೆಬ್ರವರಿ ಹನ್ನೊಂದರಿಂದ ಕಷ್ಟಗಳು ಯಾಕೆ ಅಂದ್ರೆ ಫೆಬ್ರವರಿ ಹನ್ನೊಂದಕ್ಕೆ ಶನಿ ಹಸ್ತನಾಗುತ್ತಾನೆ. ಹಸ್ತ ಎಂದರೆ, ಶನಿ ಗೋಚರ ಇರುವುದಿಲ್ಲ. ಶನಿ ಭೂಮಿಗೆ ದೂರ ಆಗಿ ಸೂರ್ಯನಿಗೆ ಹತ್ತಿರ ಆಗುತ್ತಾ ಹೋಗುತ್ತಾನೆ. ಇದು ನಿಮ್ಮ ಜೀವನದಲ್ಲಿ ತುಂಬಾನೇ ಮುಖ್ಯ. ಅದರಿಂದ ಈಗ ಒಂದಷ್ಟು ಘಟನೆಗಳು ನಡೆಯಬಹುದು.
ಸಣ್ಣ ಪುಟ್ಟ ವಿಚಾರಕ್ಕೂ ಬೇಜಾರ್ ಮಾಡಿ ಕೊಳ್ಳುಬಹುದು. ಗೊಂದಲಗಳು ಹೆಚ್ಚಾಗುತ್ತದೆ . ಬೇಕಾ ಬೇಡವ , ನಾನು ಮಾಡುವ ಕೆಲಸ ಸರಿನಾ, ತಪ್ಪಾ ,ಅನ್ನೋದರಲ್ಲಿ ಬಹಳಷ್ಟು ಜನ ಸಮಯ ವ್ಯರ್ಥ ಮಾಡಬಹುದು . ಮತ್ತೆ ಮಕ್ಕಳ ವಿಚಾರದಲ್ಲೂ ಅಷ್ಟೇ ಒಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಷ್ಟ ಆಗುತ್ತದೆ . ಅವರ ಓದಿನ ವಿಚಾರದಲ್ಲಿ ಆಗಿರಬಹುದು. ಮದುವೆ ಅಥವಾ ಕೆಲಸದ ವಿಚಾರದಲ್ಲಿ ನೀವು ಹಸ್ತಕ್ಷೇಪ ಮಾಡಿ ಮನಸ್ತಾಪವಾದರೂ ಆಗಬಹುದು.
ಹಾಗೆ ಅವರು ನಿಮ್ಮ ಮಾತನ್ನು ಕೂಡ ಕೇಳದೆ ಇರಬಹುದು. ಇನ್ನು ಕೆಲವು ಮನೆಯಲ್ಲಿ ಮಕ್ಕಳು ತಂದೆ ತಾಯಿಯನ್ನು ದ್ವೇಷಿಸುವ ಅವಕಾಶ ಕೂಡ ಇರುತ್ತದೆ . ಹಾಗೆ ಮುಖ್ಯವಾಗಿ ಅವರ ಓದಿನ ವಿಚಾರದಲ್ಲಿ ಅವರ ಗಮನ ತಪ್ಪುವ ಹಾಗೆ ಇರುತ್ತದೆ. ಫಲಿತಾಂಶ ಕೂಡ ಚೆನ್ನಾಗಿ ಬರುವುದಿಲ್ಲ . ಮೊದಲನೆಯ ದರ್ಜೆಯಲ್ಲಿ, ಉತ್ತೀರ್ಣರಾಗುತ್ತಿದ್ದವರು, ಕಡಿಮೆ ಅಂಕವನ್ನು ತೆಗೆದು ಉತ್ತೀರ್ಣರಾಗುತ್ತಾರೆ. ಹಾಗೆಯೇ ಮಕ್ಕಳು ಆಲಸ್ಯತನ ಮಾಡುವುದು ಜಾಸ್ತಿ ಆಗುತ್ತದೆ . ಹೇಳಿದ ಕೆಲಸ ಮಾಡುವುದಿಲ್ಲ . ನಿಮ್ಮ ಕೆಲಸದಲ್ಲಿ ಸಣ್ಣಪುಟ್ಟ ಸಹಾಯ ಮಾಡಿಕೊಡದೆ ಬರೀ ಟಿವಿ ,
.ಜಂಗಮವಾಣಿ , ಆಟ , ಹರಟೆ , ಹೊಡೆಯುವುದು, ಅದು ಇದು ಅಂತಾನೆ ಕಾಲ ಕಳೆಯುತ್ತಾರೆ. ಅಂತ ಹೇಳಬಹುದು. ಇನ್ನು ನಿಮ್ಮ ಕೆಲಸದ ವಿಚಾರಕ್ಕೆ ಬಂದರೆ ಅಷ್ಟೇನು ಪ್ರಗತಿ ಇರುವುದಿಲ್ಲ. ಒಂದಲ್ಲಾ ಒಂದು ತೊಂದರೆಗಳು ಕಾಡಬಹುದು. ಅನುಮಾನ ಅಥವಾ ಕೆಲಸ ಮಾಡುವ ಜಾಗಗಳಲ್ಲಿ ಅವಮಾನ ಆಗುವ ಪ್ರಸಂಗಗಳು, ಅದು ಇಲ್ಲ ಅಂತ ಅಂದರೆ ನಿಮ್ಮ ಕೈಯಲ್ಲಿ ಹೇಳುವ ಸಮಯಕ್ಕೆ ಕೆಲಸ ಮುಗಿಸದೆ ಇರಬಹುದು. ಅಥವಾ , ಕೆಲಸಕ್ಕೆ ಕೂತ ತಕ್ಷಣ ಮತ್ತೇನೋ ನೆನಪಾಗಿ ಅಥವಾ ಮತ್ತೊಂದು ಕೆಲಸ ಸಲುವಾಗಿ ನಿಮ್ಮ ಸಮಯ ಕೂಡ ಹಾಳಾಗಬಹುದು. ಹೆಚ್ಚಿನ ಚಿಂತೆ ಆತಂಕಗಳು ಎದುರಾಗುವ ಸಾಧ್ಯತೆ ಕೂಡ ಇದೆ.
ಹಾಗೆಯೇ ಎಲ್ಲಾ ವಿಚಾರ ತುಂಬಾನೇ ಮುಖ್ಯ.ಕೆಲವರ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕಳ್ಳತನವಾಗಿರಬಹುದು. ಅಥವಾ ನೀವು ಕೆಲಸ ಮಾಡುವ ಕಡೆ ಏನಾದರೂ ಕಾಣೆಯಾಗಿ ಅದರ ಅನುಮಾನ ನಿಮ್ಮ ತಲೆಗೆ ಬರಬಹುದು . ಹೀಗೆ ಸುಮಾರು ವಿಚಾರಗಳಲ್ಲಿ ಯೋಚನೆ ಶುರುವಾಗಬಹುದು .ದೇವರೇ ಕಾಪಾಡಪ್ಪ ಅಂತ ಕೆಲವರು ದೇವರ ಮೊರೆ ಹೋದರು ಹೋಗಬಹುದು. ಶನಿಯೂ ಹಸ್ತನಾಗಿರೋ , ಸಮಯದಲ್ಲಿ ಇಂಥದೆಲ್ಲಾ ಹೆಚ್ಚಾಗಿ ನಡೆಯುತ್ತದೆ. ಮಾರ್ಚ್18 ರ ತನಕ ನೀವು ಜಾಸ್ತಿ ಹುಷಾರಾಗಿರಬೇಕು.
ಮಾರ್ಚ್ 18 ಕ್ಕೆ ಶನಿ ಉದಯನಾದ ಮೇಲೆ ಇಂತಹ ಸಮಸ್ಯೆಗಳು ಕಡಿಮೆ ಆಗಬಹುದು. ಆದರೆ ಪಂಚಮ ಶನಿ ಕಾಟ ಬಿಡುವುದಿಲ್ಲ.ಅಲ್ಲಿ ತನಕ ಭಕ್ತಿಯಿಂದ ತಾಳ್ಮೆಯಿಂದ ಶನಿಯ ಕೃಪೆ ಪಡೆಯುವ ಕಡೆಗೆ ನಿಮ್ಮ ಗಮನ ಇರಬೇಕು . ಹಿರಿಯರಿಗೆ ಗೌರವ ಕೊಡಿ .ಅವರನ್ನು ಅಭಿಪ್ರಾಯ ಕೇಳಿ ನಿರ್ಧಾರ ತೆಗೆದುಕೊಳ್ಳಿ. ಹಾಗೆಯೇ ಸಾಧ್ಯವಾದಷ್ಟು , ಪ್ರತಿ ಶನಿವಾರವು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಸಾಸಿವೆ ಎಣ್ಣೆ ದೀಪ ಅಥವಾ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ, ಅದು ನಿಮ್ಮ ಮಟ್ಟಿಗೆ ತುಂಬಾನೇ ಶುಭ ಫಲಗಳನ್ನು ಕೊಡುವ ಸಾಧ್ಯತೆ ಇರುತ್ತದೆ. ಸಾಧ್ಯವಾದರೆ, ಶನಿ ಹಸ್ತನಾಗಿರುವಾಗ ಸಮಯದಲ್ಲಿ ಶನಿಯ ಮಂತ್ರಗಳನ್ನು ಪಠಿಸಿಕೊಳ್ಳಿ .
ಈ ವರ್ಷದಲ್ಲಿ ಅದು ಸುಮಾರು ನಾಲ್ಕುವರೆ ತಿಂಗಳು ಅಂದರೆ , ಜೂನ್ 29 ತುಂಬಾನೇ ಮುಖ್ಯವಾಗಿದೆ. ಶನಿ ಶುಭದಲ್ಲಿ ಶುಭ ,ಮತ್ತು ಅದೃಷ್ಟದಲ್ಲಿ ಅದೃಷ್ಟ, ತಂದು ಕೊಡಲು ಶುರು ಮಾಡುವುದು ಈ ದಿನಾಂಕದಲ್ಲೇ . ಯಾಕೆಂದರೆ ಇದೇ ದಿನ ಶನಿಯು ಹಿಮ್ಮುಖ ಚಲನೆಯನ್ನು ಶುರು ಮಾಡುತ್ತಾನೆ . ಇದನ್ನು ವಕ್ರ ಶನಿ ಎಂದು ಹೇಳುತ್ತೇವೆ. 2023ರಲ್ಲಿ ಶನಿಯು ವಕ್ರನಾಗಿದ್ದ .ಶನಿಯು ಶುಭ ಫಲಗಳನ್ನು ಕೊಡುವ ಬಗ್ಗೆ ತಿಳಿದುಕೊಳ್ಳೋಣ. ನಕಾರಾತ್ಮಕ ಚಿಂತನೆಗಳಿಂದ , ದೂರವಿರುತ್ತೀರಾ .
ತುಲಾ ರಾಶಿ ಎಂದ ತಕ್ಷಣ ಇವರು ನ್ಯಾಯ ನೀತಿಗೆ ಸತ್ಯದ ಪರ ನಿಲ್ಲುವವರು ಎಂದು ತಿಳಿಯುತ್ತದೆ. ಅದರಲ್ಲೂ ಶನಿ ಅಂತೂ ನ್ಯಾಯಾಧೀಶರು. ತುಲಾ ರಾಶಿಯವರ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ಇದೇ ಕಾರಣಕ್ಕೆ ಹಲವಾರು ಮೂಲಗಳಿಂದ ದುಡ್ಡು ಬರುವಂತೆ ಶನಿಯು ಮಾಡುತ್ತಾರೆ. ಕೆಲವು ಪಂದ್ಯ ಜೂಜು ಅಂತಹ ವ್ಯವಹಾರಗಳಲ್ಲಿ ಲಾಭ ಮಾಡಿಕೊಳ್ಳುವುದು .ಪಂಚಮ ಶನಿ ದೆಸೆ ಇಂದ ಬಹಳಷ್ಟು ಜನರಲ್ಲಿ, ಆಲಸ್ಯತನ ಇರಬಹುದು.ಮಾಡುವ ಕೆಲಸದಲ್ಲಿ ಉತ್ಸಾಹವಿಲ್ಲದೆ, ಕಾಟಾಚಾರಕ್ಕೆ ಕೆಲಸ ಮಾಡುವವರು ಹಾಗೆ ಏನಾದರೂ ಇದ್ದರೆ ವಕ್ರ ಶನಿಯ ಪ್ರಭಾವದಿಂದವಾಗಿ ಆಲಸ್ಯ ತನ ದೂರವಾಗಿ ಖುಷಿಯಿಂದ ಕೆಲಸ ಮಾಡುವಂತಾಗುತ್ತದೆ.
ಇನ್ನು ಕೆಲವರಿಗೆ ಪ್ರೀತಿ ಪ್ರೇಮದ ವಿಚಾರದಲ್ಲಿ ನಂಬಿಕೆ ಬರುವ, ಸಾಧ್ಯತೆ ಹೆಚ್ಚಿದೆ.ಇನ್ನು ಕೆಲವರಿಗೆ ಆಧ್ಯಾತ್ಮಿಕ ದತ್ತ ಒಲವು ಹೆಚ್ಚಾಗುತ್ತದೆ. ಕೆಲವರು ದಾನ ಧರ್ಮಗಳಲ್ಲೂ ಸಹ ಮುಂದಾಗುತ್ತಾರೆ. ಹಣಕಾಸಿನ ವಿಚಾರಕ್ಕೆ ಬಂದರೆ, ಶನಿಯು ತುಂಬಾ ದಾರಾಳವಾಗಿರುತ್ತಾನೆ .ವೃತ್ತಿ ಜೀವನದಲ್ಲಿ ತೃಪ್ತಿ ಇರುತ್ತದೆ .ಹೊಸ ಉದ್ಯೋಗಗಳಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿದೆ.ಜೊತೆಗೆ ಹಣಕಾಸಿನ ಪ್ರಯೋಜನವನ್ನು ಸಹ ಪಡೆದುಕೊಳ್ಳಬಹುದು.ಇನ್ನು ಕೆಲವರಿಗೆ ಕ್ರೀಡೆಯಲ್ಲಿ ಪ್ರಶಸ್ತಿಗಳು ಲಭಿಸಬಹುದು . ಅದರಿಂದ ಹಣಕಾಸಿನ ಪ್ರಯೋಜನವನ್ನು
ಸಹ ಪಡೆದುಕೊಳ್ಳಬಹುದು.ಇನ್ನು ಕೆಲವರು ಹೆಚ್ಚಿನ ವಿದ್ಯಾಭ್ಯಾಸವನ್ನು ಸಹ ಮಾಡಬಹುದು .ಶನಿ ಪಂಚಮ ಸ್ಥಾನದಲ್ಲಿ ಇರುವುದರಿಂದ, ಪೂರ್ವ ಪುಣ್ಯ ಸ್ಥಾನ ಎಂದು ಕರೆಯುತ್ತೇವೆ. ಹಿಂದೆ ಮಾಡಿದ ದಾನ ಧರ್ಮದಿಂದ ಬಹಳಷ್ಟು ಉಪಕಾರಗಳು, ಲಭಿಸುತ್ತದೆ. ಸಾಲವನ್ನು ಮಾಡಿದ್ದರೆ ತೀರಿಸಲು ಒಂದು ಒಳ್ಳೆಯ ದಾರಿ ಸಿಗುತ್ತದೆ . ಹಣ ಹೂಡಿಕೆಗೆ ಬಹಳ ಒಳ್ಳೆಯ ಕಾಲವಿದು., ವರ್ಗಾವಣೆಯಾಗಬಹುದು. ಅಥವಾ ಒಳ್ಳೆಯ ಬಡ್ತಿ ಸಿಗಬಹುದು .ಇದರ ಜೊತೆಗೆ ನಿಮ್ಮ ಪರಿಶ್ರಮ ತುಂಬಾ ಮುಖ್ಯ. ನವೆಂಬರ್ 15 ಕ್ಕೆ ವಕ್ರ ಶನಿ, ನೇರ ಚಲನೆಯನ್ನು ಶುರು ಮಾಡುತ್ತಾನೆ ಎಂದು ಹೇಳಲಾಗಿದೆ.