ಬೆಳಗ್ಗೆ ಎದ್ದ ತಕ್ಷಣ ಈ 10 ವಸ್ತುಗಳನ್ನು ನೋಡಲೇ ಬಾರದು, ಎಚ್ಚರ

0

ನಾವು ಈ ಲೇಖನದಲ್ಲಿ ಬೆಳಗ್ಗೆ ಎದ್ದ ತಕ್ಷಣ ಈ 10 ವಸ್ತುಗಳನ್ನು ಯಾಕೆ ನೋಡಲೇ ಬಾರದು ಎಂಬುದರ ಬಗ್ಗೆ ತಿಳಿಯೋಣ . ದಿನದ ಉತ್ತಮ ಆರಂಭ ಇಡೀ ದಿನವನ್ನು ಸುಂದರವಾಗಿಸುತ್ತದೆ . ಇದರಿಂದ ಒಬ್ಬ ವ್ಯಕ್ತಿ ಪ್ರತಿದಿನ ಸಂತೋಷವಾಗಿ ಇರುತ್ತಾನೆ. ಮತ್ತು ಅವನು ಎಲ್ಲದರಲ್ಲೂ ಯಶಸ್ವಿಯಾಗುತ್ತಾನೆ .

ಆದರೆ ಬೆಳಗ್ಗೆ ಎದ್ದ ತಕ್ಷಣ ಈ 10 ವಸ್ತುಗಳನ್ನು ನೋಡಲೇ ಬೇಡಿ ದಿನ ಹಾಳಾಗುತ್ತದೆ .ಹಗಲಿನಲ್ಲಿ ಏನಾದರೂ ಸಮಸ್ಯೆಯಾದರೆ ಅಪಘಾತವಾದರೆ ಬೆಳಿಗ್ಗೆ ಯಾರ ಮುಖ ನೋಡಿದೆ ಎಂದು ನಮ್ಮನ್ನು ಹಲವರು ಕೇಳುತ್ತಾರೆ . ಅನೇಕರು ಇದನ್ನು ಮೂಢ ನಂಬಿಕೆ ಎಂದು ಪರಿಗಣಿಸುತ್ತಾರೆ .

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯ ಜೊತೆಗೆ ನಕಾರಾತ್ಮಕ ಶಕ್ತಿಯು ಇದೆ . ಅದಕ್ಕಾಗಿಯೇ ನಮ್ಮ ಮನೆಯ ಕೆಲವು ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ .

ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡುವುದದಿಂದ ವ್ಯಕ್ತಿಯ ದೈನಂದಿನ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ . ಇದು ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ನೋಡಲೇ ಬಾರದು ಎಂಬುದನ್ನು ನೋಡೋಣ.

ಬೆಳಗ್ಗೆ ಎದ್ದಾಗ ಒಡೆದ ವಸ್ತುಗಳನ್ನು ನೋಡಬೇಡಿ .ಅವರಲ್ಲೂ ಒಡೆದ ಗಡಿಯಾರ ನೋಡಲೇ ಬಾರದು . ನಿಮ್ಮ ಮನೆಯಲ್ಲಿ ಇಂತಹ ಗಡಿಯಾರವಿದ್ದರೆ, ತಕ್ಷಣ ತೆಗೆಯಿರಿ. ಇದರಿಂದ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯ ಪರಣಾಮ ಬೀರುವ ಸಾಧ್ಯತೆಯಿದೆ .

ಬೆಳಿಗ್ಗೆ ಎದ್ದ ನಂತರ ಒಬ್ಬರ ನೆರಳನ್ನು ನೋಡಬೇಡಿ . ಇದು ನಿಮ್ಮ ಜೀವನದಲ್ಲಿ ಅಥವಾ ಸಂಬಂಧಪಟ್ಟ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯನ್ನು ತರಬಹುದು , ಅದರ ನಂತರ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ .

ಮನೆಯಲ್ಲಿ ಮುರಿದ ಪಾತ್ರೆಗಳು ಮತ್ತು ಹಾನಿಗೊಳಗಾದ ಪೀಠೋಪಕರಣಗಳು ನಕಾರಾತ್ಮಕ ಶಕ್ತಿಯನ್ನು ತರುತ್ತದೆ . ಮುಂಜಾನೆ ಎದ್ದು ಈ ರೀತಿಯ ಪಾತ್ರೆಗಳನ್ನು ನೋಡಬೇಡಿ. ಇಂತಹ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಲೇ ಬಾರದು .

ಬೆಳಗ್ಗೆ ಎದ್ದ ನಂತರ ಹಾಸಿಗೆಯಿಂದ ನೇರವಾಗಿ ಅಡುಗೆ ಮನೆಗೆ ಹೋಗಬೇಡಿ . ಏಕೆಂದರೆ ಮುಂಜಾನೆ ಎದ್ದ ತಕ್ಷಣ ಒಲೆ ಹಚ್ಚುವುದು ಅಶುಭ . ಎದ್ದ 10 – 15 ನಿಮಿಷಗಳ ನಂತರ ಅಡುಗೆ ಮನೆಗೆ ಹೋಗಿ .

ಮಲಗುವ ಕೋಣೆಯಲ್ಲಿ ಕಾರ್ಟೂನ್ ಅಥವಾ ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳನ್ನು ಹಾಕಬೇಡಿ . ಮುಂಜಾನೆ ಅವುಗಳನ್ನು ನೋಡಿದರೆ ಇಡೀ ದಿನ ಹಾಳಾಗುತ್ತದೆ. ಮಕ್ಕಳ ಕೋಣೆಯಲ್ಲೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ .

ಬೆಳಗ್ಗೆ ಎದ್ದಾಗ ಅಡುಗೆ ಮನೆಯಲ್ಲಿ ತೊಳೆಯದ ಪಾತ್ರೆಗಳು ಕಾಣಬಾರದು . ನಮ್ಮಲ್ಲಿ ಹೆಚ್ಚಿನವರು ಊಟದ ನಂತರ ಪ್ಲೇಟ್ ಗಳನ್ನು ಸಿಂಕ್ ನಲ್ಲೇ ಬಿಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ಅದು ಅಶುಭ .

ಎದ್ದಾಗ ಚಾಕುಗಳು, ಕತ್ತರಿ ಮತ್ತು ಕೋಲುಗಳನ್ನು ಸಹ ನೋಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಇದು ದಿನದ ಕೆಟ್ಟ ಆರಂಭಕ್ಕೆ ಕಾರಣವಾಗುತ್ತದೆ.

ಹಾಗಾದರೆ ಎದ್ದ ತಕ್ಷಣ ಏನು ಮಾಡಬೇಕು . ಮುಖದಲ್ಲಿ ನಗುವನ್ನು ತನ್ನಿ ಸಾಧ್ಯವಾದರೆ ನೀರು ಕುಡಿದು ಸೂರ್ಯನನ್ನು ನೋಡಿ . ಮರ, ಗಿಡ, ಹಕ್ಕಿ , ತಂದೆ , ತಾಯಿ , ಮಕ್ಕಳ ಮುಖ , ಹೂಗಳು, ಹಸಿರು ವಾತಾವರಣ ಅಥವಾ ನಿಮ್ಮ ಅಂಗೈಗಳನ್ನು ನೋಡಿ . ಸೂರ್ಯೋದಯಕ್ಕೆ ಮೊದಲು ಎಚ್ಚರಗೊಳ್ಳುವ ಜನರು ಚಂದ್ರನನ್ನು ನೋಡಬಹುದು . ಈ ರೀತಿಯಲ್ಲಿ ಬೆಳಿಗ್ಗೆ ಪ್ರಾರಂಭಿಸಿ ಇಡೀ ದಿನ ಸಕಾರಾತ್ಮಕ ಶಕ್ತಿ ಮತ್ತು ಸಂತೋಷದಿಂದ ಕೂಡಿರುತ್ತದೆ .

Leave A Reply

Your email address will not be published.