ಕೂದಲೂ ಉದುರುವಿಕೆ ಸರಳ & ಶೀಘ್ರ ಪರಿಹಾರ

0

ನಾವು ಈ ಲೇಖನದಲ್ಲಿ ಕೂದಲು ಉದುರುವಿಕೆಗೆ ಸರಳ ಮತ್ತು ಶೀಘ್ರ ಪರಿಹಾರಗಳನ್ನು ಹೇಗೆ ಪಾಲಿಸಬೇಕು ಎಂಬುದರ ಬಗ್ಗೆ ತಿಳಿಯೋಣ. ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿದೆ . ಎಷ್ಟೋ ಜನರಿಗೆ 25 ರ ವಯಸ್ಸಿನಲ್ಲಿ ಕೂದಲು ಉದುರುವುದು ಶುರುವಾದಾಗ , ಅವರ ಆತ್ಮ ಸ್ಥೈರ್ಯವನ್ನೇ ಕಳೆದುಕೊಳ್ಳುತ್ತಾರೆ . ಬೇರೆಯವರು ಇಷ್ಟು ಬೇಗ ಕೂದಲು ಉದುರುವಿಕೆ ಎಂದು ಕೇಳಿದಾಗ ಮನಸ್ಸಿಗೆ ತುಂಬಾ ಬೇಜಾರು ಮಾಡಿಕೊಳ್ಳುತ್ತಾರೆ.

ನೀವು ನಂಬುವುದಾದರೆ ಜನರು ಖರ್ಚು ಮಾಡುವುದೇ ಕಾಸ್ಮೆಟಿಕ್ಸ್ ಗಳಿಗೆ ಮತ್ತು ಕೂದಲಿನ ಆರೈಕೆಗೆ, ಮತ್ತು ಕೂದಲು ಉದುರುವಿಕೆಗೆ ತುಂಬಾ ಕಾರಣಗಳಿವೆ. ಒಂದು ಹಾರ್ಮೋನ್ ಬದಲಾವಣೆಯಿಂದ, ಮತ್ತು ಕೂದಲಿನ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಾಗ , ಕೂದಲು ಉದುರಬಹುದು . ಮತ್ತು ಕೆಲವು ಔಷಧಿಗಳ ಪರಿಣಾಮದಿಂದ ಕೂದಲು ಉದುರಬಹುದು, ಕೆಲವು ಕಾಯಿಲೆಗಳ ಪರಿಣಾಮದಿಂದ, ವಂಶ ಪಾರಂಪರೆಯಿಂದ ಮತ್ತು ವೈರಸ್ಗಳ ಹಾವಳಿಯಿಂದ ಕೂದಲು ಉದುರುವ ಸಾಧ್ಯತೆ ಇದೆ .

ಮುಖ್ಯವಾಗಿ ಹೇಳುವುದೇನೆಂದರೆ, ಕೂದಲು ಸರಿಯಾಗಿ ಬೆಳೆಯಬೇಕೆಂದರೆ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕೆಂದರೆ ಬಹಳಷ್ಟು ನ್ಯೂಟ್ರಿಯೆಂಟ್ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ . ಆದರೆ ನಮ್ಮ ಆಹಾರದಲ್ಲಿ ಆ ಪೋಷಕಾಂಶಗಳ ಕೊರತೆ ಇದ್ದರೆ, ನಮ್ಮ ಕೂದಲಿನ ಆರೋಗ್ಯ ಸರಿ ಇರುವುದಿಲ್ಲ . ಕೂದಲು ಉದುರುತ್ತದೆ. ಇದನ್ನು ನೋಡಿದಾಗ ಕೆಲವು ಜನರಲ್ಲಿ ತುಂಬಾ ತೆಳುವಾಗಿ ಕೂದಲು ಕಾಣಿಸುತ್ತದೆ. ಕೆಲವರಿಗೆ ನಿಧಾನವಾಗಿ, ಬೋಳುತಲೆ ಯಾಗುತ್ತದೆ.

ಕೆಲವರಿಗೆ ಕೈಯಿಂದ ತಲೆಯನ್ನು ಮುಟ್ಟಿ ಕೊಡವಿದರೆ ಕೂದಲು ಕೈಗೆ ಬರುತ್ತದೆ . ಇನ್ನು ಕೆಲವರಿಗೆ ಬೈತಲೆಯಿಂದ ಶುರುವಾಗಿ ಕೂದಲು ಉದುರುತ್ತದೆ. ಕೆಲವರಿಗೆ ಹುಳು ಕಡ್ಡಿಯ ರೀತಿಯಾಗಿ ಮಚ್ಚೆಯ ತರ ಕಾಣಿಸಿ ಕೊಂಡು ಕೂದಲು ಉದುರುತ್ತದೆ . ಮುಖ್ಯವಾಗಿ ಕೂದಲಿನ ಆರೈಕೆ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಐದು ಪೋಷಕಾಂಶಗಳ ಬಗ್ಗೆ ತಿಳಿಸಲಾಗಿದೆ. ವಯಸ್ಸು ಆದಂತೆ 40 ರಿಂದ 50 ಸಾಮಾನ್ಯವಾಗಿ ಕೂದಲು ಉದುರುತ್ತದೆ. ಆದರೂ ಸಹ ನಾವು ಆಕರ್ಷಕವಾಗಿ ಕಾಣಬೇಕೆಂದರೆ ಕೂದಲು ತುಂಬಾ ಮುಖ್ಯ.

ಇದರಿಂದ ನಮ್ಮ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಸುಮಾರು 20 ರಿಂದ 25 ವರ್ಷದವರಲ್ಲಿ ಕೂದಲು ಉದುರುವ ಸಮಸ್ಯೆಯೂ ತುಂಬಾ ಕಾಣಿಸುತ್ತಿದೆ.ಇದಕ್ಕೆ ಮುಖ್ಯ ಕಾರಣ ಪೋಷಕಾಂಶಗಳ ಕೊರತೆ ಮತ್ತು ವಂಶಾವಳಿ. ಆದರೂ ಸಹ ತಂದೆಗೆ ಕೂದಲು ಬೇಗ ಉದುರಿದ್ದರೆ, ಅದು ಮಕ್ಕಳಿಗೂ ಸಹ ಅನ್ವಯವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಹೆಂಗಸರಿಗೆ ಬೇಗ ಕೂದಲು ಉದುರುವ ಸಮಸ್ಯೆ ತುಂಬಾ ಕಡಿಮೆ.

ಆದರೂ ಕೂಡ ಹೆಂಗಸರಿಗೆ ಗರ್ಭವತಿಯ ಸಮಯದಲ್ಲಿ, ಮಕ್ಕಳು ಹುಟ್ಟುವ ಸಮಯದಲ್ಲಿ ಅಂದರೆ ಹೆರಿಗೆ ಸಮಯದಲ್ಲಿ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರುತ್ತದೆ . ಒಟ್ಟಾರೆಯಾಗಿ ಹೇಳುವುದಾದರೆ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಾದರೆ , ಹೆಚ್ಚಿನ ಪ್ರಮಾಣದಲ್ಲಿ ಕೂದಲಿಗೆ ಹಾನಿಯಾಗುತ್ತದೆ . ನಮಗೆ ವಯಸ್ಸು ಹೆಚ್ಚಾದಂತೆ ನಮ್ಮ ಶರೀರದಲ್ಲಿ ಕೊಲಾಜಿನ್ ಎಂಬ ಅಂಶವು ಕಡಿಮೆಯಾದಂತೆ , ಮುಖದಲ್ಲಿ ಸುಕ್ಕುಗಳು ಮತ್ತು ಕೂದಲು ಉದುರುವುದು ಸರ್ವೇ ಸಾಮಾನ್ಯವಾಗಿ ಕಾಡುತ್ತದೆ . ಇದೊಂದು ಪ್ರಮುಖವಾದ ಅಂಶವಾಗಿದೆ .

ಆದ್ದರಿಂದ ನಾವು ನಮ್ಮ ಆಹಾರದಲ್ಲಿ ಕೊಲಾಜಿನ್ ಎಂಬ ಅಂಶವು ಹೆಚ್ಚಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು . ಮತ್ತು ನಮ್ಮ ಕೂದಲಿನ ಬುಡಕ್ಕೆ ರಕ್ತ ಸಂಚಾರ ಹೆಚ್ಚಾಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು .ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ನಾವು ಅಭಿವೃದ್ಧಿ ಮಾಡಿಕೊಳ್ಳಬೇಕು. ನಮ್ಮ ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಬೇಕು. ಕೆಲವರಿಗೆ ವಂಶ ಪಾರಂಪರಿಕವಾಗಿ ಕೂದಲು ಉದುರುವ ಸಮಸ್ಯೆ ಇದ್ದರೆ , ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು .

ಸ್ವಲ್ಪ ಕೂದಲು ಉದುರುವ ಸೂಚನೆ ಕಂಡುಬಂದ ತಕ್ಷಣ ಒಳ್ಳೆಯ ಆಹಾರ ಪದ್ಧತಿ, ಒಳ್ಳೆಯ ಜೀವನ ಕ್ರಮ , ಮತ್ತು ಕೂದಲಿನ ಬುಡವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಮತ್ತು ತಲೆಯ ಹೊಟ್ಟನ್ನು ಕಡಿಮೆ ಮಾಡಿಕೊಳ್ಳುವುದು , ಹೊಟ್ಟೆಯನ್ನು ಆರೋಗ್ಯವಾಗಿ ನೋಡಿಕೊಳ್ಳುವುದು ಒಂದು ಉತ್ತಮವಾದ ಕ್ರಮವಾಗಿದೆ. ಮತ್ತು ಕೆಲವರಿಗೆ ಹೈಪೋ ಅಸಿಡಿಟಿಯ ಸಮಸ್ಯೆಯಿಂದಾಗಿ ಕೂದಲು ಉದುರುತ್ತದೆ, ಅಸಿಡಿಟಿಯ ಸಮಸ್ಯೆಯಿಂದ ನಾವು ತಿಂದ ಆಹಾರವು ಸರಿಯಾಗಿ ಜೀರ್ಣವಾಗದೆ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುವುದಿಲ್ಲ .ಹಾಗಾಗಿ ಅನೀಮಿಯಾ ದಂತಹ ತೊಂದರೆಗಳು ಕಾಣುತ್ತದೆ .

ಅಸಿಡಿಟಿಯಿಂದ ಚರ್ಮದ ಕಾಂತಿ ಕಳೆದುಕೊಳ್ಳುವುದು ಮತ್ತು ಕೂದಲಿನ ಆರೋಗ್ಯ ಹಾಳಾಗುತ್ತದೆ . ಆದ್ದರಿಂದ ನಾವು ಹೊಟ್ಟೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಮುಖ ಮಾಡಿಕೊಳ್ಳಬೇಕು. ಕೂದಲಿಗೆ ಬೇಕಾದಂತಹ ಪೋಷಕಾಂಶಗಳು ನಮ್ಮ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಗಳು ಇಲ್ಲದಿದ್ದರೂ ಸಹ ಕೂದಲಿನ ಉದುರುವಿಕೆಗೆ ಕಾರಣವಾಗಬಹುದು. ಮುಖ್ಯವಾಗಿ ನಾವು ಕೂದಲಿನ ಬೆಳವಣಿಗೆಗೆ ಯಾವ ಯಾವ ರೀತಿಯ ವಿಟಮಿನ್ಸ್ ಗಳು ಮತ್ತು ಮಿನರಲ್ಸ್ ಗಳು ಬೇಕಾಗುತ್ತದೆ ಎಂದು ತಿಳಿದುಕೊಳ್ಳೋಣ.

ಕೂದಲಿನ ಸಮಸ್ಯೆಗೆ ಐದು ಪೋಷಕಾಂಶಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಅದ್ಭುತ ರೀತಿಯ ಪ್ರಯೋಜನಗಳನ್ನು ಕಾಣಬಹುದು . ಮತ್ತು ನಮಗೆ ಯಾವ ಸಮಸ್ಯೆಯಿಂದ ಕೂದಲು ಉದುರುತ್ತಿದೆ ಎಂದು ತಿಳಿದುಕೊಂಡು ಅದಕ್ಕೆ ಬೇಕಾದ ಆಹಾರ ಕ್ರಮಗಳನ್ನು ತೆಗೆದುಕೊಂಡರೆ ಬಹಳ ಬೇಗ ಒಳ್ಳೆಯ ಫಲಿತಾಂಶವನ್ನು ಕಾಣಬಹುದು . ಅದರಲ್ಲಿ ಪ್ರಮುಖವಾದದ್ದು ಐರನ್ ನಿಮಗೆಲ್ಲ ತಿಳಿದಿರುವಂತೆ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗಬೇಕಾದರೆ ಕಬ್ಬಿಣ ಅಂಶ ಬೇಕೇ ಬೇಕು.

ಎಷ್ಟೋ ಜನರಲ್ಲಿ ನಾವು ನೋಡುವಂತೆ ರಕ್ತ ಹೀನತೆ, ಕಂಡುಬರುತ್ತದೆ. ಅದಕ್ಕೆ ಪ್ರಮುಖ ಕಾರಣ ಐರನ್ ನ ಕೊರತೆ . ನಮಗೆ ಇದ್ದರೆ ಕೂದಲಿನ ಬುಡಕ್ಕೆ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಒದಗಿಸುವುದು ಹಿಮೋಗ್ಲೋಬಿನ್ . ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇದ್ದರೆ ಕೂದಲು ಉದುರುವುದು ಶುರುವಾಗುತ್ತದೆ . ಐರನ್ ಕೊರತೆಯನ್ನು ಹೋಗಲಾಡಿಸಲು ಹಸಿರು ತರಕಾರಿಗಳು ಬೆಲ್ಲ, ನಟ್ಸ್ ಗಳು, ಮೊಟ್ಟೆ,ಹಸಿರು ಸೊಪ್ಪುಗಳನ್ನು ತೆಗೆದು ಕೊಳ್ಳಬಹುದು. ಹರಿವೆ ಸೊಪ್ಪು,

ನುಗ್ಗೆ ಸೊಪ್ಪು, ಪಾಲಕ್ ಸೊಪ್ಪು ಮುಂತಾದವುಗಳನ್ನು ರುಬ್ಬಿ ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನಮಗೆ ಬೇಕಾದಂತಹ ವಿಟಮಿನ್ಸ್ ಗಳು ಮತ್ತು ಮಿನರಲ್ಸ್ ಗಳು ದೊರೆಯುತ್ತದೆ. ಎರಡನೆಯದಾಗಿ ಮೆಗ್ನೀಷಿಯಂ ಶರೀರದಲ್ಲಿ ಮೂಳೆಗಳು ಗಟ್ಟಿಯಾಗಿ ಇರಬೇಕಾದರೆ ,ಮೆಗ್ನೇಶಿಯಂ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ನಮ್ಮ ಆಹಾರದಲ್ಲಿ ಮೆಗ್ನೀಷಿಯಂ ಕೊರತೆ ಇದ್ದರೆ,ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ . ನಾವು ಕ್ರಮವಾಗಿ ನಮ್ಮ ಆಹಾರದಲ್ಲಿ ಮೆಗ್ನೀಷಿಯಮ್ ಅಳವಡಿಸಿಕೊಂಡರೆ , ಕೂದಲಿನ ಬುಡದಲ್ಲಿ ರಕ್ತ ಸಂಚಾರ ಅಭಿವೃದ್ಧಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ.

ನಮ್ಮ ದೈನಂದಿನ ಚಟುವಟಿಕೆಗಳ ಆಯಾಸವನ್ನು ಕಡಿಮೆ ಮಾಡಲು ಮೆಗ್ನೀಷಿಯಂ ತುಂಬಾ ಅನುಕೂಲವಾಗಿದೆ . ಹಸಿರು ತರಕಾರಿಗಳನ್ನು ತೆಗೆದುಕೊಳ್ಳುವುದರಿಂದ ಅಂದರೆ ಮೊಟ್ಟೆ , ಮೀನು, ನಟ್ಸ್ ಗಳನ್ನು ನಿಯಮಿತವಾಗಿ ಬಳಸಿದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಮೂರನೇಯದಾಗಿ ಸಿಲಿಕಾ ನಮ್ಮ ಕೂದಲಿನ ಬೆಳವಣಿಗೆಗೆ ಮತ್ತು ಚರ್ಮದ ಸುರಕ್ಷತೆಗೆ ನಮ್ಮ ದೇಹದಲ್ಲಿ ಕೊಲಾಜಿನ ಉತ್ಪತ್ತಿ ಇರಲೇಬೇಕು . ವಯಸ್ಸಾದಂತೆ ಚರ್ಮ ಸುಕ್ಕು ಗಟ್ಟುವುದು ಕೂದಲು ಉದುರುವುದು ಕೊಲಾಜಿನ್ ಅಂಶ ಕಡಿಮೆಯಾಗುವುದರಿಂದ ನಮಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ .

ಆದ್ದರಿಂದಅದರ ಉತ್ಪತ್ತಿ ಹೆಚ್ಚಾಗಬೇಕಾದರೆ ಸಿಲಿಕ ಇರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಅಂದರೆ ಹಸಿರು ತರಕಾರಿ ಹಸಿರು ಸೊಪ್ಪು ಮತ್ತು ಕಳಲೆಯಲ್ಲಿ ಅಂದರೆ ಬಿದಿರು ಕಳಲೆಯಲ್ಲಿ ಹೆಚ್ಚಾಗಿ ಸಿಗುತ್ತದೆ . ಮತ್ತು ವೈದ್ಯರ ಸಂಪರ್ಕ ಮಾಡಿ ಅವರು ಕೊಡುವ ಔಷಧಿಯನ್ನು ಸೇವಿಸಿದರೆ ಇದರ ಸಮಸ್ಯೆ ನಿವಾರಣೆಯಾಗುತ್ತದೆ . ಮಾರುಕಟ್ಟೆಯಲ್ಲಿ ಇದು ಸಿಗುತ್ತದೆ ನಾವು ದಿನಕ್ಕೆ 10 ರಿಂದ 15 ಮಿಲಿ ಗ್ರಾಂ ತೆಗೆದುಕೊಳ್ಳಬಹುದು . ಇದರಿಂದ ನಮ್ಮ ದೇಹದಲ್ಲಿ ಕೊಲಾಜಿನ್ ಅಂಶ ಕಡಿಮೆಯಾಗುವುದನ್ನು ತಪ್ಪಿಸಬಹುದು .

ಚರ್ಮದ ಸುಕ್ಕುಗಟ್ಟುವಿಕೆಗೆ ಮತ್ತು ಕೂದಲು ಉದುರುವಿಕೆಗೆ ಮುಂಚೆಯೇ ಕ್ರಮ ಕೈಗೊಂಡರೆ ಅದನ್ನು ತಪ್ಪಿಸಬಹುದು . ಆದರೆ ಕೆಲವರಿಗೆ ವಂಶವಾಹಿನಿಯಿಂದ ಬಂದಿರುವವರಿಗೆ ತಪ್ಪಿಸಲು ಕಷ್ಟವಾಗುತ್ತದೆ, ಆದರೆ ಈ ರೀತಿ ಇರುವವರಿಗೆ ಮುಂಚಿತವಾಗಿ ಗುರುತಿಸಿ ಅವರಿಗೆ ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಿಕೊಂಡರೆ, ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು. ಇನ್ನೂ ಕೆಲವರಿಗೆ ತಲೆ ಹೊಟ್ಟಿನಿಂದ ಮತ್ತು ಧೂಮಪಾನದ ಅಭ್ಯಾಸದಿಂದ ಕೂದಲು ಉದುರುತ್ತದೆ .

ಕೂದಲು ಇರುವಾಗ ಅದರ ಬೆಲೆ ತಿಳಿಯುವುದಿಲ್ಲ . ದಿನಕ್ಕೆ 50 ರಿಂದ 100 ಕೂದಲು ಉದುರಿದರು ಅದು ಸಮಸ್ಯೆಯಲ್ಲ,ಆದರೆ ಅದರ ಜಾಗದಲ್ಲಿ ಬೇರೆ ಕೂದಲು ಬರದೇ ಇದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ .
ನಾಲ್ಕನೆಯದಾಗಿ ಜಿಂಕ್.ಜಿಂಕ್ ನ ಕೊರತೆ ಇರುವುದನ್ನು ಕಂಡುಹಿಡಿಯಲು ಉಗುರಿನಲ್ಲಿ ಬಿಳಿ ಮಚ್ಚೆ ಇರುತ್ತದೆ. ಇನ್ನು ಅದರ ಬಗ್ಗೆ ತಿಳಿಯಲು ಲಿವರ್ ನ ಪರೀಕ್ಷೆ ಮಾಡಿಸಿದರೆ ಎ ಎಲ್ ಪಿ ಕಡಿಮೆ ಇದ್ದರೆ ಜಿಂಕ್ ನ ನ್ಯೂನ್ಯತೆ ಇದೆ ಎಂದು ಅರ್ಥವಾಗುತ್ತದೆ .

ಜಿಂಕ್‌ನ ನ್ಯೂನತೆಯನ್ನು ಕಡಿಮೆ ಮಾಡಲು ಜಿಂಕ್ ಸಲ್ಫೈಡನ್ನು ತೆಗೆದುಕೊಳ್ಳಬೇಕು. ನಾವು ಯಾವುದರಿಂದ ಕೂದಲು ಉದುರುತ್ತಿದೆ ಎಂದು ತಿಳಿದುಕೊಳ್ಳಲು ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು,ಅದಕ್ಕೆ ಕ್ರಮವಾಗಿ ಔಷಧಗಳನ್ನು ತೆಗೆದುಕೊಳ್ಳಬೇಕು. ಜಿಂಕ್ ಕೂಡ ಹಸಿರು ತರಕಾರಿ ,ಸೊಪ್ಪು ಮೊಟ್ಟೆ ನಟ್ಸ್ ಗಳಲ್ಲಿ ಸಿಗುತ್ತದೆ. ಕೊನೆಯದಾಗಿ ಅಂದರೆ , ಐದನೆಯದಾಗಿ ಮುಖ್ಯವಾಗಿ ವಿಟಮಿನ್ ಡಿ ನಮಗೆಲ್ಲಾ ತಿಳಿದಿರುವಂತೆ ಇದು ಸೂರ್ಯನ ಬೆಳಕಲ್ಲಿ ಸಿಗುತ್ತದೆ .ನಮ್ಮ ಶರೀರದಲ್ಲಿ ಬಹಳಷ್ಟು ಅಂಗಗಳು ಕಾರ್ಯನಿರ್ವಹಿಸಬೇಕಾದರೆ, ವಿಟಮಿನ್ ಡಿ ತುಂಬಾ ಮುಖ್ಯ. ಕೂದಲು ಚೆನ್ನಾಗಿರಬೇಕಾದರೆ, ಕ್ಯಾಲ್ಸಿಯಂ ಬೇಕಾಗುತ್ತದೆ .

ಕ್ಯಾಲ್ಸಿಯಂ ದೇಹಕ್ಕೆ ಒದಗ ಬೇಕಾದರೆ . ವಿಟಮಿನ್ ಡಿ ಬೇಕೇ ಬೇಕು. ದೇಹದಲ್ಲಿ ವಿಟಮಿನ್ ಡಿ ಯನ್ನು ಪರೀಕ್ಷೆ ಮಾಡಿಸಿ ,ಅದಕ್ಕೆ ಬೇಕಾದ ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು . ಈಗಿನ ಜೀವನ ಶೈಲಿಯಲ್ಲಿ ಜನರು ಬೆಳಗ್ಗೆ ಕಚೇರಿಗೆ ಹೋದರೆ ,ರಾತ್ರಿಗೆ ಬರುತ್ತಾರೆ .ಆದಕಾರಣ ಸೂರ್ಯನ ಬೆಳಕು ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಜನರು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಶಿಸ್ತುಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ವಿಟಮಿನ್ ಬಿ12 ಕೂದಲಿನ ಆರೈಕೆಗೆ , ತುಂಬಾ ಮುಖ್ಯವಾಗಿ ಬೇಕಾಗುತ್ತದೆ . ಮೇಲೆ ಹೇಳಿದ ಹಾಗೆ ಇಷ್ಟನ್ನು ಸರಿ ಮಾಡಿಕೊಂಡರೆ , ಕೂದಲು ಉದುರುವುದನ್ನು ತಪ್ಪಿಸಬಹುದು.

Leave A Reply

Your email address will not be published.