ನಿಂತ ಲಕ್ಷ್ಮಿಯನ್ನು ಮನೆಯ ಮುಖ್ಯದ್ವಾರದಲ್ಲಿ ಹಾಕಬಾರದು ಈ ರೀತಿ ಹಾಕಿದರೇ ಮನೆಗೆ ದರಿದ್ರ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮನುಷ್ಯ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪಿಗೆ ಪ್ರತಿನಿತ್ಯ ಪಶ್ಚಾತಾಪ ಪಡುತ್ತಿರುತ್ತಾನೆ. ಏನೇ ಮಾಡಿದರೂ ಏಳಿಗೆ ಆಗುತ್ತಿಲ್ಲ ಎಂಬ ಚಿಂತೆ ಮತ್ತು ಘೋರವಾದ ಸಂಕಷ್ಟಗಳಿಂದ ವಿಮುಕ್ತಿ ಸಿಗುತ್ತಿಲ್ಲವೆಂಬ ನೋವಿನಲ್ಲೇ ಇರತ್ತೀರಿ. ಅದು ಭಗವಂತನಿಂದ ಬಂದ ಫಲವಲ್ಲ. ತನಗೆ ತಾನೇ ಮಾಡಿಕೊಂಡ ಕರ್ಮದ ಫಲವಿರುತ್ತದೆ.
ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಎರಡು ತಪ್ಪುಗಳು ಇರುತ್ತವೆ ಆ ತಪ್ಪುಗಳನ್ನು ಮಾಡಬೇಡಿ ಆ ತಪ್ಪು ಯಾವುದು ಎಂದರೆ ಧರ್ಮಶಾಸ್ತ್ರದ ಪ್ರಕಾರವಾಗಿ ಮನೆಯ ಮುಖ್ಯದ್ವಾರವನ್ನು ಲಕ್ಷ್ಮಿ ಎಂದು ಕರೆಯುತ್ತೇವೆ. ಗೋದೂಳಿಯ ಸಮಯದಲ್ಲಿ ಬಾಗಿಲನ್ನು ಪೂಜೆ ಮಾಡುವ ಪದ್ಧತಿ ನಮ್ಮ ಧರ್ಮದಲ್ಲಿದೆ. ಇದನ್ನು ಲಕ್ಷ್ಮಿ ಎಂದು ಕರೆಯುತ್ತೇವೆ. ಲಕ್ಷ್ಮಿ ಮನೆಗೆ ಒಳಗೆ ಬಂದು ಕೂರಬೇಕು ಹೊರತು ನಿಲ್ಲಬಾರದು. ಮನೆಗೆ ಬೇಕಾದ ಪೂಜೆ, ಪುನಸ್ಕಾರಗಳನ್ನು ಮಾಡದೇ ಲಕ್ಷ್ಮಿಯನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಪೂಜೆ ಮಾಡದೇ, ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡದೇ,
ಸ್ಮರಣೆಯನ್ನು ಮಾಡದೇ ನಿಂತಿರುವ ಫೋಟೋವನ್ನು ಮನೆಯ ಬಾಗಿಲಿಗೆ ನೇತುಹಾಕುತ್ತೀರಿ. ನಿಂತ ಲಕ್ಷ್ಮಿಯನ್ನು ಯಾವತ್ತು ಮನೆಯ ಬಾಗಿಲಿಗೆ ಹಾಕಬಾರದು. ಯಾವಾಗಲೂ ಲಕ್ಷ್ಮಿ ಕಮಲದ ಮೇಲೆ ನಗುನಗುತ್ತಾ ಕೂಳಿತಿರಬೇಕು ಅಥವಾ ಗಜಲಕ್ಷ್ಮಿಯಾಗಿ ಕುಳಿತಿರಬೇಕು. ಕುಳಿತ ಲಕ್ಷ್ಮಿ ಮನೆಯಲ್ಲಿ ಕುಳಿತೇ ಇರುತ್ತಾಳೆ. ಮನೆಯ ಬಾಗಿಲಿನಲ್ಲಿ ಒಂಟಿ ಕಾಲಿನಲ್ಲಿರುವ ಲಕ್ಷ್ಮಿ ನಿಮ್ಮ ಮನೆಗೆ ದರಿದ್ರವನ್ನು ತರುತ್ತಾಳೆ ಎಚ್ಚರವಾಗಿರಿ. ಮನೆಯ ಪ್ರವೇಶದ್ವಾರದಲ್ಲಿ ಲಕ್ಷ್ಮಿಯನ್ನು ನಿಲ್ಲಿಸಿದರೇ ಪ್ರವೇಶದ ಪದ್ಧತಿಯೇ ಸರಿ ಇಲ್ಲವೆಂದರ್ಥ.
ಯಾವಾಗಲೂ ಲಕ್ಷ್ಮಿ ಬಲಗಾಲಿನಲ್ಲಿ ಒಳಗೆ ಬರಬೇಕು. ಆಕೆ ಮನೆ ಒಳಗೆ ವಾಸಸ್ಥಳ ಮಾಡಿರಬೇಕು. ನೀವು ಮನೆಯ ಬಾಗಿಲಿಗೆ ಲಕ್ಷ್ಮಿಯನ್ನು ತೂಗಿ ಹಾಕಿದರೇ ತಪ್ಪಾದ ನಿಯಮವಾಗಿರುತ್ತದೆ. ಕೆಲವರು ಡೋರ್ ಗೆ ಕನ್ನಡಿಯನ್ನು ಜೋಡಿಸುತ್ತಾರೆ ಇದರಿಂದ ನೆಗೆಟಿವ್ ನಿಮಗೇ ಪ್ರತಿಬಿಂಬಿಸುತ್ತದೆ ಹೊರಗಡೆ ಹೋಗುವುದಿಲ್ಲ. ಮನೆ ಯಾವಾಗಲೂ ದೈವ ಸ್ಮರಣೆಯಿಂದ, ಪೂಜಾ ವಿಧಿ ವಿಧಾನಗಳಿಂದ ಕರ್ಪೂರದಿಂದ, ಗಂಧದಿಂದ, ಸುಗಂಧಿತವಾಗಿರಬೇಕು. ಮನೆದೇವರು ನಿಮ್ಮ ಮನೆಯಲ್ಲಿ ವಾಸವಾಗುವುದರಿಂದ ನಿಮ್ಮ ಸಂಕಷ್ಟ ದೂರ ಆಗುತ್ತದೆ. ನಿಂತ ಲಕ್ಷ್ಮಿಯನ್ನು ಯಾರೂ ಪೂಜೆ ಮಾಡಬಾರದು.
ಕೊಲ್ಲಾಪುರದ ಲಕ್ಷ್ಮಿ ದೇವಸ್ಥಾನವು ಶಕ್ತಿ ಪೀಠವಾಗಿರುವುದರಿಂದ ಲಕ್ಷ್ಮಿ ನಿಂತಿದ್ದಾಳೆ. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕೇ ಹೊರತು ಮನೆಯ ಬಾಗಿಲಿಗೆ ನಿಂತಿರುವ ಲಕ್ಷ್ಮಿಯನ್ನು ತೂಗಿಹಾಕಬಾರದು. ಮೂಲ ಬಾಗಿಲಿಗೆ ಲಕ್ಷ್ಮಿಯನ್ನು ಕೆತ್ತನೆ ಮಾಡಬೇಡಿ. ಏಕೆಂದರೆ ಹೆಣ್ಣು ಮಕ್ಕಳು ಋತುಕರ್ಮದ ದೋಷಗಳಿದ್ದಾಗ ಆ ಹೊಸ್ತಿಲನ್ನು ದಾಟುತ್ತಾರೆ. ಇವೆಲ್ಲವೂ ನೀವೇ ಮಾಡಿಕೊಳ್ಳುವ ತಪ್ಪಾಗುತ್ತದೆ. ಮನೆಯ ಬಾಗಿಲಿಗೆ ಅಂಕೋಲಿ ಕಡ್ಡಿಗಳನ್ನು ತಂದು ಹಾಕುತ್ತೀರಿ. ಹಾಗೇ ಮಾಡಬೇಡಿ.
ಮೊದಲು ನಿಮ್ಮ ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳಿ. ನೀವು ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ಮಾಡಿ ಮತ್ತು ದೇವಸ್ಥಾನಕ್ಕೆ ಹೋಗುವುದನ್ನು ರೂಢಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಸಾತ್ವಿಕ ಗುಣ ಹುಟ್ಟುತ್ತದೆ, ತಾಮಸ ಗುಣ ಹೋಗುತ್ತದೆ. ವಾಸ್ತುವಿಗೆ ವಿರುದ್ಧವಾಗಿ ಕನ್ನಡಿಯನ್ನು ಹಾಕಿರುತ್ತೀರಿ ಅದನ್ನೆಲ್ಲಾ ತೆಗೆದುಹಾಕಿ. ನಿಮ್ಮ ಮನೆಯಲ್ಲಿ ಸಾತ್ವಿಕವಾದ ಹೋಮ, ಹವನಗಳನ್ನು ಮಾಡಿ, ದೇವರನ್ನು ಸ್ಮರಣೆ ಮಾಡಿ ಎಲ್ಲವೂ ಉಚ್ಛಾಟಣೆ ಮಾಡಿಸಿ. ನಿಮಗೆ ಮತ್ತು ನಿಮ್ಮ ಮನೆಯ ಎಲ್ಲಾ ಸದಸ್ಯರಿಗೂ ಒಳ್ಳೆಯದಾಗುತ್ತದೆ.