ನಾವು ಈ ಲೇಖನದಲ್ಲಿ ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು ಯಾವುವು ಎಂದು ತಿಳಿಯೋಣ. ಆರೋಗ್ಯವೇ ಭಾಗ್ಯ ಅದಿಲ್ಲದೆ ಮತ್ತೇನು ಸಾಧಿಸಿದರು ವ್ಯರ್ಥ,ಸಾಧಿಸುವುದು ಅಸಾಧ್ಯ.. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ವಾಸ್ತುವಿನಲ್ಲಿ ಹತ್ತು ಸಲಹೆಗಳು ಇವೆ
ಜೀವನದಲ್ಲಿ ಏನೇ ಸಾಧಿಸಬೇಕು ಸಂತೋಷವಾಗಿ ಇರಬೇಕು ಎಂದರೂ ಮೊದಲು ಆರೋಗ್ಯ ಚೆನ್ನಾಗಿರಬೇಕು . ಕೇವಲ ನಮ್ಮ ಆರೋಗ್ಯವಷ್ಟೇ ಅಲ್ಲ, ನಮ್ಮ ಕುಟುಂಬದ ಜೊತೆಗೆ ಇರುವವರು ಆಪ್ತರು ಎಲ್ಲಾರೂ ಆರೋಗ್ಯವಾಗಿ ಇದ್ದಾಗಷ್ಟೇ ಬದುಕಲ್ಲಿ ನೆಮ್ಮದಿ ಸಾಧ್ಯ. ಇಂಥಹ ಆರೋಗ್ಯ ಸಾಧಿಸಲು ನಮ್ಮ ಜೀವನ ಶೈಲಿ ಚೆನ್ನಾಗಿರಬೇಕು .ಆಹಾರದಲ್ಲಿ ಪತ್ಯ ಇರಬೇಕು. ಜೊತೆಗೆ ವಾಸ್ತು ಚೆನ್ನಾಗಿರಬೇಕು .ಆರೋಗ್ಯಕ್ಕಾಗಿ ವಾಸ್ತು ಹೇಳಿದ ಹತ್ತು ಸಲಹೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸಂತೋಷ ಸೌಖ್ಯಕ್ಕೆ ಕೊರತೆ ಇರುವುದಿಲ್ಲ
1 . ಮಲಗುವ ದಿಕ್ಕು : – ಆರೋಗ್ಯವಂತ ಜೀವನಕ್ಕಾಗಿ ಪ್ರತಿನಿತ್ಯ 6 – 8 ಗಂಟೆ ನಿದ್ರೆ ಬೇಕೇ ಬೇಕು . ನೆಮ್ಮದಿಯ ನಿದ್ರೆಗಾಗಿ ದಕ್ಷಿಣಕ್ಕೆ ತಲೆ ಇಟ್ಟು ಮಲಗಿ
2 . ಆರೋಗ್ಯದ ಮೆಟ್ಟಿಲು : – ಮನೆಯ ಮೆಟ್ಟಿಲು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ , ಎಂದು ತಿಳಿಸಿದರೆ ಆಶ್ಚರ್ಯವಾಗುತ್ತದೆ . ಮನೆಗೆ ಮೆಟ್ಟಿಲು ಅಗತ್ಯವಿದ್ದಾಗ, ಅದು ಮನೆಯ ಮಧ್ಯ ಭಾಗದಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮನೆಯ ಮಧ್ಯೆ ಇರುವ ಮೆಟ್ಟಿಲು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ .
3 . ಶಕ್ತಿಯ ಮೂಲ : – ಬ್ರಹ್ಮ ಸ್ಥಾನ ಎಂದರೆ, ಮನೆಯ ಮಧ್ಯ ಭಾಗವೂ ಯಾವಾಗಲೂ ಖಾಲಿ ಇರಬೇಕು. ಅಲ್ಲಿ ಯಾವುದೇ ಭಾರವಾದ ಪೀಠೋಪಕರಣಗಳು ಇರಕೂಡದು. ಇದರಿಂದ ಮನೆಯ ಒಳ ಹೊರಗೆ ಶಕ್ತಿಯು ಆರಾಮಾಗಿ ಹರಿದಾಡುತ್ತದೆ .ಹೆಚ್ಚು ಪೀಠೋಪಕರಣಗಳು ಆದಷ್ಟು ಶಕ್ತಿ ಹರಿದಾಟಕ್ಕೆ ತೊಡಕಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ . ಇದೇ ಕಾರಣಕ್ಕಾಗಿ ಹಳೆಯ ಕಾಲದ ಮನೆಗಳ ಮಧ್ಯೆ ಭಾಗದಲ್ಲಿ ಬಾವಂತಿ ಇರುತ್ತಿತ್ತು. ಅಂದರೆ, ಅಲ್ಲಿ ತೆರೆದ ಕೇಂದ್ರ ಇರುತ್ತಿತ್ತು .
4 . ಪೂಜಾ ಸ್ಥಳ : – ಮನೆಯ ಪೂಜಾ ಸ್ಥಳವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವಂತೆ ಇರಬೇಕು . ಆಗ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಹೊರಗೆ ಓಡುತ್ತದೆ. ದೇವರ ಪೂಜೆಗಾಗಿ ಒಂದು ಸ್ಥಳ ಮೀಸಲಿರಿಸಬೇಕು. ನಿಮಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೂ ಮನೆಯಲ್ಲಿ ದೇವರ ವಿಗ್ರಹ ಇರಬೇಕು …..
5 . ತಲೆಯ ಮೇಲಿನ ದೀಪ :- ಮನೆಯಲ್ಲಿ ದೀಪಗಳು ಸಾಕಷ್ಟು ಬೇಕು. ಈಗಂತಲೂ ಡೆಕೋರೇಷನ್ ಹೆಸರಿನಲ್ಲಿ ಪಾಲ್ ಸೀಲಿಂಗ್ ಮಾಡಿ ಸಾಕಷ್ಟು ಬಲ್ಬ್ಗಳನ್ನು ಅಳವಡಿಸಿ ಕೊಳ್ಳಲಾಗಿರುತ್ತದೆ .ಆದರೆ ಹೀಗೆ ಮಾಡುವಾಗ ಕೋಣೆಯ ಮಧ್ಯೆ ಭಾಗದಲ್ಲಿ ಕಣ್ಣಿಗೆ ಹೊಡೆಯುವಂತ ಯಾವುದೇ ಲೈಟ್ ಇರಕೂಡದು. ಹಾಗೆ ಅಳವಡಿಸಿದ್ದಲ್ಲಿ ಅದು ಸಕಾರಾತ್ಮಕ ಶಕ್ತಿ ಹಾಗೂ ಮನಸ್ಸನ್ನು ಬ್ಲಾಕ್ ಮಾಡುತ್ತದೆ ….
6 . ಅಗ್ನಿ ಶಕ್ತಿಯ ಸಮತೋಲನ : – ಅಗ್ನಿ ಶಕ್ತಿ ಅತಿ ಮುಖ್ಯ ಮೂಲಗಳಲ್ಲಿ ಒಂದು . ಹಾಗಾಗಿ ಮನೆಯಲ್ಲಿ ಅಗ್ನಿ ತತ್ವ ಪ್ರತಿಷ್ಠಾಪನೆ ಮಾಡುವಾಗ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕು. ಇದು ಕುಟುಂಬದ ಆರೋಗ್ಯದ ವಿಷಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ . ಏಕೆಂದರೆ ಮನೆಯಲ್ಲಿ ಅಗ್ನಿಯನ್ನು ಅಡುಗೆ ತಯಾರಿಸಲು ಬಳಸುತ್ತೇವೆ. ಆಹಾರವು ಆರೋಗ್ಯಕ್ಕೆ ಮೂಲವಾಗಿದೆ . ಕುಟುಂಬದ ಶಕ್ತಿಗೆ ಮೂಲವಾಗಿದೆ . ಹಾಗೆ ಅಡುಗೆ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಒಲೆ ಇಡಬೇಕು
7 . ದೀಪದ ಬೆಳಕು : – ಪ್ರತಿದಿನ ಮನೆಯಲ್ಲಿ ದೀಪ ಹಚ್ಚುವ ಅಭ್ಯಾಸ ಇಟ್ಟುಕೊಳ್ಳಿ . ಮನೆಯ ಆಗ್ನೇಯ ಇಲ್ಲವೇ ವಾಯುವ್ಯ ದಿಕ್ಕಿನಲ್ಲಿ ದೀಪ ಬೆಳಗಬೇಕು. ಇದರಿಂದ ಅಂಧಕಾರ ನಿರ್ಮೂಲನೆ ಆಗುವುದು . ಮನೆಯ ನಕಾರಾತ್ಮಕ ಶಕ್ತಿಯನ್ನು ಇದು ಸುಡುತ್ತದೆ . ಈ ದೀಪದ ಉರಿಯ ಬಣ್ಣವು ಮನೆಯ ಹಾಗೂ ಬದುಕಿನ ಮೇಲೆ ಅದು ಬೀರುವ ಪರಿಣಾಮದ ಪ್ರತಿನಿಧಿಯಾಗಿದೆ
8 . ದಿಕ್ಕುಗಳ ಪ್ರಾಮುಖ್ಯತೆ : – ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿ ಇಲ್ಲವೆಂದರೆ, ಅವರ ಕೋಣೆಯಲ್ಲಿ ಹುಷಾರಾಗುವ ವರೆಗೂ ದೀಪ ಹಚ್ಚಿ ಇಡುವ ಅಭ್ಯಾಸ ಮಾಡಿ . ಆರೋಗ್ಯಕ್ಕಾಗಿ ದೀಪ ಹಚ್ಚುವಾಗ ಅದನ್ನು ಕೋಣೆಯ ಪೂರ್ವ ದಿಕ್ಕಿನಲ್ಲಿ ಇರಿಸಬೇಕು
9 . ಆರೋಗ್ಯದ ಬಾಗಿಲು :- ಮನೆಯ ಮುಖ್ಯ ದ್ವಾರಕ್ಕೆ ವಾಸ್ತುವಿನಲ್ಲಿ ವಿಶೇಷ ಮಹತ್ವವಿದೆ. ಮನೆಯ ಸುತ್ತ ಇರುವ ಗೋಡೆಯಷ್ಟೇ ಎತ್ತರ ಮುಖ್ಯ ದ್ವಾರ ಇರಬೇಕು. ಇದರಿಂದ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ
10 . ದೇವರ ಫೋಟೋ :- ಮನೆಯ ದೇವರ ಕೋಣೆಯಲ್ಲಿ ಇಲ್ಲವೇ ಎಲ್ಲಿಯಾದರೂ ದೇವರ ಫೋಟೋ ಇರಲೇಬೇಕು. ಅದು ದಕ್ಷಿಣ ದಿಕ್ಕಿಗೆ ಮುಖ ಹಾಕಿರಬೇಕು ಇದರಿಂದ ಕುಟುಂಬದ ಸದಸ್ಯರು ಕಾಯಿಲೆ ಬೀಳದಂತೆ ನೋಡಿಕೊಳ್ಳಬಹುದು