ಧನು ರಾಶಿಗೆ ಏಕೆ ಈ ಗೊಂದಲ?

0

ನಾವು ಈ ಲೇಖನದಲ್ಲಿ ಧನು ರಾಶಿಯವರ ಏಪ್ರಿಲ್ ಮಾಸ ಭವಿಷ್ಯ ಮತ್ತು ಧನುರ್ ರಾಶಿಯವರಿಗೆ ಏಕೆ ಈ ರೀತಿಯ ಗೊಂದಲ ಎಂಬುದನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಕೆಲವು ವಿಶೇಷವಾದ ವ್ಯಕ್ತಿಗಳನ್ನು ನೋಡುತ್ತೇವೆ .ಮತ್ತು ವಿಶೇಷವಾದ ಘಟನೆಗಳು ನಡೆಯುತ್ತವೆ. ಒಂದಷ್ಟು ಘಟನೆಗಳು ಸಕಾರಾತ್ಮಕ ರೀತಿಯಲ್ಲಿ ಇದ್ದರೆ ಒಂದಷ್ಟು ನಖರಾತ್ಮಕ ರೀತಿಯಲ್ಲಿ ಇರುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದಾಗ ಕೆಲವರು ಬೇರೆಯವರ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.

ಇವರಿಗೆ ತಮ್ಮ ಬಗ್ಗೆಯ ಯೋಚನೆ ಮಾಡುವ ಪರಿವೇ ಇರುವುದಿಲ್ಲ. ಈ ರೀತಿಯ ವಿಚಾರ ಧನು ರಾಶಿಯವರಿಗೆ ತುಂಬಾ ಹೊಂದಾಣಿಕೆಯಾಗುತ್ತದೆ. ಯಾಕೆಂದರೆ ಇದು ಎಲ್ಲಿಯವರೆಗೆ ಮುಂದುವರೆಯುತ್ತದೆ .ಮತ್ತು ಇದರಿಂದ ಏನು ತೊಂದರೆಗಳಿವೆ ಎಂಬುದನ್ನು ಮತ್ತು ಮತ್ತೆ ಈ ತಿಂಗಳಲ್ಲಿ ಅವರು ಅದರಿಂದ ಹೊರಗಡೆ ಬರಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಧನು ರಾಶಿಯವರಿಗೆ ಬಹಳಷ್ಟು ಒಳ್ಳೆಯ ಪರಿವರ್ತನೆಗಳು ನಡೆಯುತ್ತಿದೆ.

ಧನು ರಾಶಿಯವರಿಗೆ ಸಾಡೇ ಸಾತಿಯ ಸಮಯ ಮುಗಿಯಿತು. ಬಹಳಷ್ಟು ಒಳ್ಳೆಯ ಬದಲಾವಣೆಗಳು ನಡೆಯುತ್ತಿವೆ. ಆದರೆ ಬೇರೆಯವರ ಬಗ್ಗೆ ಯೋಚನೆ ಮಾಡದೆ ನಿಮ್ಮ ಜೀವನದ ಬಗ್ಗೆ ಯೋಚನೆ ಮಾಡಬೇಕು. ಬೇರೆಯವರು ಅವರು ಪಡೆದುಕೊಂಡ ಬಂದ ಅದೃಷ್ಟ ಇರುತ್ತದೆ . ಆದರೆ ನಿಮ್ಮ ಪಾಲಿಗೆ ಏನು ಬರುತ್ತದೆ. ಅದನ್ನು ಸ್ವೀಕರಿಸಲು ಕಲಿಯುವುದು ಒಳ್ಳೆಯದು. ಬೇರೆಯವರನ್ನು ನಿಮ್ಮ ಜೊತೆಗೆ ಹೋಲಿಕೆ ಮಾಡಿಕೊಳ್ಳಬೇಡಿ. ಮಾಡಿಕೊಳ್ಳುವುದಾದರೆ ನಿಮಗಿಂತ ಹೆಚ್ಚಿನ ಕಷ್ಟದಲ್ಲಿರುವವರನ್ನು ನೋಡಿ ತಿಳಿದುಕೊಳ್ಳಿ.

ದುಃಖದಲ್ಲಿರುವವರನ್ನು ಸಮಾಧಾನ ಮಾಡಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಬೇರೆಯವರು ಸಂತೋಷದಲ್ಲಿರುವುದನ್ನು ಕಂಡು ಮನಸಾರೆ ಹರಸಿರಿ . ನಿಮ್ಮ ಯೋಚನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳಿ. ನಿಮ್ಮ ತೃತೀಯ ಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ. ಒಂದಷ್ಟು ಗ್ರಹಗಳು ಒಂದಾಗುತ್ತದೆ. ವಿಶೇಷವಾಗಿ 15ನೇ ತಾರೀಖಿನಿಂದ ಕುಜ ಗ್ರಹ , 14ನೇ ತಾರೀಖಿನಿಂದ ರವಿ ಗ್ರಹ ,ಏಳನೇ ತಾರೀಕಿನಿಂದ ಶುಕ್ರ ಗ್ರಹ , ಈ ಗ್ರಹಗಳೆಲ್ಲವೂ ನಿಮ್ಮ ತೃತೀಯ ಭಾಗದಲ್ಲಿರುತ್ತದೆ.

ನಿಮಗೆ ಮಿಶ್ರಫಲವನ್ನು ಕೊಡುತ್ತದೆ. ಈ ಗ್ರಹಗಳೆಲ್ಲವೂ ನಿಮಗೆ ಸಕಾರಾತ್ಮಕ ವಾಗಿದ್ದು ,ಆದರೆ ನಿಮಗೆ ಯಶಸ್ಸು ಸಿಕ್ಕಿದ್ದರೂ ತೃಪ್ತಿ ಇರುವುದಿಲ್ಲ. ಶತ್ರು ನಾಶವಾಗುತ್ತದೆ .ನಿಮ್ಮ ಪ್ರಯತ್ನಗಳಲ್ಲಿ ವಿಶ್ವಾಸ ಹೆಚ್ಚಿಗೆ ಆಗುತ್ತದೆ. ಮತ್ತು ಯಾವುದಾದರೂ ವಿಚಾರದಲ್ಲಿ ಭರವಸೆ ಮೂಡುತ್ತದೆ . ದುಡ್ಡಿನ ವಿಚಾರದಲ್ಲಿ ಧೈರ್ಯ ಸಿಗುತ್ತದೆ . ಆದರೆ ಸಮಾಧಾನವಿರುವುದಿಲ್ಲ. ಏಕೆಂದರೆ ಸುಖ ಸ್ಥಾನದಲ್ಲಿ ರಾಹು ಇರುತ್ತಾರೆ. ಮತ್ತು ಬೇಜಾರು ಮಾಡಿಕೊಳ್ಳಲು ಯಾವುದಾದರು ಒಂದು ದಾರಿಯನ್ನ ನೀವೇ ಹುಡುಕಿಕೊಳ್ಳುತ್ತೀರಾ .

ಅಥವಾ ಬೇರೆಯವರು ಆ ರೀತಿಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಸತತವಾಗಿ ಪ್ರಯತ್ನ ಮಾಡುತ್ತಾರೆ. ಅಥವಾ ನಿಮ್ಮ ಮನಸ್ಸಿನಲ್ಲಿ ವಿಚಿತ್ರ ರೀತಿಯ ಆಲೋಚನೆಗಳು ಬಂದು ಮರೆಯಾಗುತ್ತದೆ. ಯೋಚನೆಗಳು ನಿಮ್ಮಲ್ಲಿ ನಕರಾತ್ಮಕ ಬದಲಾವಣೆಯನ್ನು ತರುತ್ತದೆ. ಏಕೆಂದರೆ ಸುಖ ಸ್ಥಾನದಲ್ಲಿ ರಾಹು ಇರುವುದರಿಂದ ತುಂಬಾ ಭ್ರಾಂತಿಗಳನ್ನು ತರುತ್ತಾನೆ. ಮತ್ತು ಬುಧ ಗ್ರಹವು ಚತುರ್ಥಭಾವದಲ್ಲಿ ಇರುತ್ತಾನೆ . ನಿಮ್ಮ ಸಂಪತ್ತನ್ನು ಹೆಚ್ಚಿಗೆ ಮಾಡುವಂತಹ ಕೆಲಸವನ್ನು ಬುಧ ಗ್ರಹವು ಮಾಡುತ್ತದೆ.

ವಿದ್ಯಾರ್ಥಿಗಳಿಗೆ ಪಂಚಮದಲ್ಲಿ ಗುರು ಚತುರ್ಥದಲ್ಲಿ ‌ಬುಧ ಸಣ್ಣ ಪುಟ್ಟ ಸಿದ್ಧತೆಗಳು ಅಂದರೆ ಶಿಸ್ತಿನಿಂದ ಮಾಡಿರುವಂತಹ ಕೆಲಸಗಳು ನಿಮಗೆ ಬಹಳ ಯಶಸ್ಸನ್ನು ತಂದುಕೊಡುತ್ತದೆ. ನಿಮಗೆ ತುಂಬಾ ಚೆನ್ನಾಗಿ ನೆನಪಿನಲಿಟ್ಟುಕೊಳ್ಳಲು ಈ ಗ್ರಹಗಳಿಂದ ನಿಮಗೆ ಅನುಕೂಲವಾಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ವ್ಯವಹಾರ ವ್ಯಾಪಾರ ,ಸ್ಥಿರಾಸ್ತಿ, ಉದ್ಯೋಗ ಕೃಷಿಗೆ ಸಂಬಂಧಿಸಿದಂತಹ ವಿಚಾರಗಳಿಗೆ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಒಳ್ಳೆಯ ಆದಾಯವನ್ನು ಗಳಿಸುವಂಥದ್ದು ಮತ್ತು ಯಾವುದೇ ಕ್ಷೇತ್ರವಿದ್ದರೂ ಸಮಾನವಾದಂತಹ ಯಶಸ್ಸು ಸಿಗಲಿದೆ. ಏಪ್ರಿಲ್ ತಿಂಗಳಿನಲ್ಲಿ ನಿಮಗೆ ತುಂಬಾ ಅದ್ಭುತವಾದ ಯಶಸ್ಸನ್ನು ಕೊಡುತ್ತದೆ.

Leave A Reply

Your email address will not be published.