ಮಾತು ಮಾತಿಗೆ ಸಿಟ್ಟು ಮಾಡಿಕೊಳ್ಳುವವರು ಯಾವಾಗಲೂ

0

ನಾವು ಈ ಲೇಖನದಲ್ಲಿ ಯಾರು ನಿಮ್ಮನ್ನು ಬೇಡ ಅಂತಾ ಬಿಟ್ಟು ಹೋಗುತ್ತಾರೋ ಅವರಿಗೆ ನಿಮ್ಮ ಬೆಲೆ ತಿಳಿಯಲು ಏನು ಮಾಡಬೇಕು ಎಂಬುದನ್ನು ತಿಳಿಯೋಣ . ಕೆಲವು ಜನರನ್ನು ಬಿಟ್ಟುಬಿಡುವುದು ತುಂಬಾ ಅವಶ್ಯಕ . ಏಕೆಂದರೆ ನಾವು ಅವರನ್ನು ಬಿಡಲಿಲ್ಲ ಅಂದರೆ ಅವರೇ ನಮ್ಮನ್ನು ಯಾವುದಕ್ಕೂ ಲಾಯಕ್ಕಾಗಿರಲ್ಲು ಬಿಡುವುದಿಲ್ಲ .

ಕೆಲವೊಮ್ಮೆ ಪರಿಸ್ಥಿತಿ ಹೇಗಾಗುತ್ತದೆ ಎಂದರೆ , ನಮ್ಮವರನ್ನು ಪ್ರೀತಿಯಲ್ಲಿ ಪಡೆದು ಕೊಳ್ಳುವುದಕ್ಕಿಂತ, ಅವರನ್ನು ಬಿಟ್ಟು ಬಿಡುವುದೇ ನಿಜವಾದ ಪ್ರೀತಿ ಎನಿಸಿಬಿಡುತ್ತದೆ . ಜೀವನದಲ್ಲಿ ಮುಂದುವರೆಯಲು ಕೆಟ್ಟ ಪರಿಸ್ಥಿತಿ ಅವಶ್ಯಕತೆ ಇದೆ . ಯಾಕೆಂದರೆ ಬರಿ ಒಳ್ಳೆಯ ಪರಿಸ್ಥಿತಿಯಲ್ಲಿ ಇದ್ದರೆ ಮನುಷ್ಯ ಒಳ್ಳೆಯ ಕೆಲಸ ಮಾಡುವುದನ್ನು ಯೋಚಿಸುವುದೇ ಇಲ್ಲ .

ಅವಶ್ಯಕತೆಗಿಂತ ಹೆಚ್ಚಾಗಿ ಚಿಂತೆ ಮಾಡಿ, ಇಲ್ಲದಿರುವ ಸಮಸ್ಯೆಯನ್ನು ತಂದುಕೊಳ್ಳುತ್ತೇವೆ . ಜನ ನಿಮ್ಮನ್ನು ಇಷ್ಟಪಡುತ್ತಾರೆ ಅಂದರೆ , ಅದರ ಹಿಂದೆ ಅವರ ಸ್ವಾರ್ಥ ಅಡಗಿರುತ್ತದೆ . ಒಂದು ನಿಮ್ಮಿಂದ ಅವರಿಗೆ ಏನೋ ಉಪಯೋಗವಾಗುತ್ತಿದೆ, ಅಥವಾ ನಿಮ್ಮಿಂದ ಏನೋ ಸಿಗಬಹುದು ಎಂಬ ನಿರೀಕ್ಷೆ ಇರುತ್ತದೆ .

ನಿಮ್ಮ ಮೇಲೆ ನಿಮಗೆ ಸ್ವಲ್ಪ ಅಹಂಕಾರ ಇರಲೇ ಬೇಕಾಗುತ್ತದೆ . ಇಲ್ಲ ಅಂದರೆ ಜನ ಎಲ್ಲಿ ನಿಮ್ಮ ಅಧಿಕಾರವಿರುತ್ತೋ, ಅಲ್ಲೂ ಕೂಡ ಜನ ನಿಮ್ಮನ್ನು ಒತ್ತಿ ಹಿಡಿಯುವ ಪ್ರಯತ್ನ ಮಾಡುತ್ತಾರೆ .

ನಿಮ್ಮನ್ನು ನೀವು ಹುಡುಕುವ ಪ್ರಯತ್ನ ಮಾಡಿ. ಇಲ್ಲ ಅಂದರೆ ಬೇರೆಯವರ ನಿರ್ಣಯದ ಮೇಲೆ ನಿರ್ಭರವಾಗ ಬೇಕಾಗಬಹುದು . ಯಾರಿಗಾದರೂ ಸುಂದರವಾದ ಉಡುಗೊರೆ ಕೊಡಬೇಕು ಎಂದರೆ , ಅವರ ಭಾವನೆಗಳಿಗೆ ಗೌರವ ಕೊಡುವುದೇ , ಒಂದು ಸುಂದರವಾದ ಉಡುಗೊರೆ .

ನಿಮ್ಮ ಕೋಪವನ್ನು ಸಹಿಸಿಕೊಂಡು ನಿಮ್ಮ ಜೊತೆಯಲ್ಲಿ ನಿಂತರೆ , ಅವರಷ್ಟು ಪ್ರೀತಿ ನಿಮ್ಮನ್ನು ಯಾರು ಮಾಡುವುದಿಲ್ಲ . ಯಾರನ್ನು ತುಂಬಾ ಕಾಳಜಿ ಮಾಡಬೇಡಿ .ಅವರು ನಿಮ್ಮ ಕಾಳಜಿಯನ್ನು ಮಾಡುವುದನ್ನೇ ಬಿಟ್ಟುಬಿಡುವಷ್ಟು ಆಗುತ್ತದೆ.

ಕುಂತರೂ, ನಿಂತರು , ಮಲಗಿದರೂ ಎಚ್ಚರವಿದ್ದರೂ ,ಬರೀ ಕಣ್ಣ ಮುಂದೆ ಆ ವ್ಯಕ್ತಿಯೇ ಕಾಣಿಸುತ್ತಿದ್ದರೆ ,ನೀವು ಅವರನ್ನು ತುಂಬಾ ಆಳವಾಗಿ ಪ್ರೀತಿ ಮಾಡುತ್ತಿದ್ದೀರಾ ಎಂದರ್ಥ . ಮನಸ್ಸಿನ ಎಲ್ಲ ರಹಸ್ಯಗಳನ್ನು ಪ್ರತಿಯೊಬ್ಬರಿಗೂ ಹೇಳುವುದು ಅನುಚಿತ .ಯಾಕೆಂದರೆ ಮಿತ್ರ ಯಾವಾಗ ಶತ್ರು ಆಗುತ್ತಾನೆ ಎಂಬುದು ಹೇಳಲು ಬರುವುದಿಲ್ಲ .

ಪ್ರತಿಯೊಂದು ನೋವು ಹೃದಯಕ್ಕೆ ತುಂಬಾ ನೋವು ಕೊಡುತ್ತದೆ . ಆದರೆ ಆ ನೋವಿನಿಂದ ಪಾಠವನ್ನು ಕಲಿಯಬಹುದು . ಯಾರಾದರೂ ನಿಮ್ಮನ್ನು ನೋಡಿ ಕೂಡ ನೋಡದೆ ಇರುವವರ ತರಹ ನಟಿಸಿದರೆ , ತಿಳಿದುಕೊಳ್ಳಿ ಅವರ ದೃಷ್ಟಿ ನಿಮ್ಮ ಮೇಲೆ ಇದೆ ಎಂದು .

ಕಷ್ಟದಲ್ಲಿ ಕೈ ಬಿಟ್ಟವರು ಮತ್ತು ಕೈ ಹಿಡಿದವರು ಜೀವನ ಪೂರ್ತಿ ನೆನಪಿನಲ್ಲಿ ಇರುತ್ತಾರೆ . ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಬೇಕೇ ಬೇಕು . ಏಕೆಂದರೆ ಕಷ್ಟಗಳೇ ಇಲ್ಲವೆಂದರೆ ಯಶಸ್ಸಿನ ಆನಂದವನ್ನು ಸವಿಯಲು ಸಾಧ್ಯವಿಲ್ಲ .

ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೆ ಕಾರಣ ನೀವೇ ಆಗಿರುತ್ತೀರಾ. ಇದನ್ನು ನೀವು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತೀರೋ ಜೀವನ ಅಷ್ಟೇ ಬೇಗ ಸರಳವಾಗಿರುತ್ತದೆ . ಯಾವಾಗ ನಿಮ್ಮ ಆತ್ಮವಿಶ್ವಾಸವು ಆಕಾಶದ ಎತ್ತರಕ್ಕೆ ಹಾರುತ್ತದೆ ನೆನಪಿಡಿ .ಯಾರಾದರೂ ಒಬ್ಬರು ಆ ರೆಕ್ಕೆಯನ್ನು ಕತ್ತರಿಸಲು ಬಂದೆ ಬರುತ್ತಾರೆ .

ಒಂಟಿಯಾಗಿ ನಡೆಯುವುದನ್ನು ಕಲಿಯಿರಿ ಆಗ ನಿಮ್ಮ ಜೊತೆ ನಡೆಯುವವರು ಕೊನೆವರೆಗೂ ಜೊತೆಯಾಗಿ ನಡೆಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ . ಪರಿಸ್ಥಿತಿಯ ಮೇಲೆ ನಿಮ್ಮ ಸರಿಯಾದ ಹಿಡಿತ ಇದ್ದರೆ ,ಇಲ್ಲಿ ವಿಷ ಕಾರುವವರಿಂದಲೂ ನಿಮಗೆ ಯಾವ ರೀತಿಯ ತೊಂದರೆ ಆಗುವುದಿಲ್ಲ .

ಯಾವ ಸಂಬಂಧ ನಿಮ್ಮ ಸ್ವಾಭಿಮಾನವನ್ನು ಕಿತ್ತುಕೊಳ್ಳುತ್ತೋ ಅದು ಸಂಬಂಧ ಅಲ್ಲ. ಉಸಿರುಗಟ್ಟಿಸುವ ಸಂಬಂಧ . ಯಾವ ಪ್ರೀತಿಯಲ್ಲಿ ಗೌರವ ಇಲ್ಲವೋ, ಅದು ಪ್ರೀತಿಯಲ್ಲ . ಒಂದು ರೀತಿ ಹಿಂಸೆ ಆಗಿರುತ್ತದೆ . ಪ್ರಾಮಾಣಿಕ ವ್ಯಕ್ತಿಯೊಂದಿಗೆ ಮಾಡಿದ ಮೋಸ ನೀವು ಹಾಳಾಗುವ ಎಲ್ಲಾ ಬಾಗಿಲನ್ನು ತೆರೆದು ಬಿಡುತ್ತದೆ . ನೀವು ಎಷ್ಟೇ ದೊಡ್ಡ ಚದುರಂಗದ ಆಟದ ಆಟಗಾರನಾಗಿರಲಿ.

ಎಲ್ಲರೂ ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂದು ಯೋಚಿಸುವುದನ್ನು ಬಿಟ್ಟರೆ, ತಿಳಿದುಕೊಳ್ಳಿ .ಆದರೆ ಆ ದಿನದಿಂದ ಜೀವನವನ್ನು ಆನಂದಿಸುವುದನ್ನು ಕಲಿತುಕೊಳ್ಳುತ್ತೀರಿ ಎಂದು . ಕೆಟ್ಟ ಜನರೊಂದಿಗೆ ಗೆಳೆತನ ಮಾಡುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಇದು ಸರಿಯಾದ ಯೋಚನೆ ಕೂಡ ಆಗಿರುತ್ತದೆ. ನಿಮ್ಮ ದಾರಿಯನ್ನು ನೀವೇ ಹುಡುಕಿ ನಿಮ್ಮನ್ನು ನೀವು ಅರಿತಷ್ಟು ಯಾರು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ

ಎಲ್ಲರಿಗೂ ನಿಮ್ಮ ಶಕ್ತಿಯ ಪರಿಚಯ ಆಗಲೇಬೇಕೆಂದೇನೂ ಇಲ್ಲ . ಕೆಲವು ವಿಷಯಗಳು ಗುಪ್ತವಾಗಿ ಇಡುವುದರಲ್ಲಿ ಚತುರತೆ ಇದೆ . ಮಾತು ಮಾತಿಗೆ ಸಿಟ್ಟು ಮಾಡಿಕೊಳ್ಳುವವರು ಯಾವಾಗಲೂ ತಮಗಿಂತ ಬೇರೆಯವರ ಕಾಳಜಿ ಮಾಡುವವರೇ ಆಗಿರುತ್ತಾರೆ .

ಯಾವ ವ್ಯಕ್ತಿಗೆ ನಿಮ್ಮ ಸಂಬಂಧದ ಗೌರವ ಇರುವುದಿಲ್ಲ, ಅಂತವರ ಜೊತೆ ನಿಲ್ಲುವುದಕ್ಕಿಂತ ಒಂಟಿಯಾಗಿ ನಿಲ್ಲುವುದು ಎಷ್ಟು ಉತ್ತಮ. ಇದು ಅಭಿಮಾನವಲ್ಲ ಸ್ವಾಭಿಮಾನ . ಆ ವ್ಯಕ್ತಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದರು ಕೂಡ ಒಳ ಮನಸ್ಸಿನಿಂದ ನಿಮ್ಮನ್ನು ಪ್ರೀತಿಸುತ್ತಿದ್ದರೆ , ಅವರಲ್ಲಿ ಎರಡು ಸಂಕೇತವನ್ನು ನೋಡಬಹುದು.

ಒಂದು ಯಾವುದೇ ಕೆಲಸವಿಲ್ಲದಿದ್ದರೂ ನಿಮ್ಮ ಮುಂದೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಇನ್ನೊಂದು ನಿಮಗೆ ಇಷ್ಟವಾದ ಕೆಲಸವನ್ನೇ ಮಾಡುತ್ತಾರೆ .

ಜೀವನದಲ್ಲಿ ಒಂಟಿಯಾಗಿ ಸಾಗಿ. ಆದರೆ ಬಲವಂತವಾಗಿ ಯಾರೊಂದಿಗೂ ಸಂಬಂಧವನ್ನು ನಿಭಾಯಿಸಬೇಡಿ ಜೀವನದಲ್ಲಿ ಒಂದು ನೀತಿಯನ್ನು ಇಟ್ಟುಕೊಳ್ಳಿ . ಯಾರು ನಿಮ್ಮನ್ನು ಬಿಟ್ಟು ಹೋಗುತ್ತಾರೋ, ಅವರನ್ನು ನೀವು ಮರೆತುಬಿಡಬೇಕು ಎಂದು .

Leave A Reply

Your email address will not be published.