ನಾವು ಈ ಲೇಖನದಲ್ಲಿ ಯಾರಾದರೂ ನಿಮ್ಮನ್ನು ಪದೇ ಪದೇ ನೋಯಿಸುತ್ತಿದ್ದರೆ, ತಪ್ಪದೇ ಈ ಒಂದು ಕೆಲಸ ಮಾಡಿ , ನಂತರ ಅವರೇ ನಿಮಗಾಗಿ ಹೇಗೆ ಒದ್ದಾಡುತ್ತಾರೆ ಎಂದು ತಿಳಿಯೋಣ .ಶುದ್ಧವಾದ ಆಸೆ ನಿಮ್ಮನ್ನು ಮೇಲ್ಮಟ್ಟಕ್ಕೆ ಒಯ್ಯುತ್ತದೆ ಕೆಟ್ಟ ಆಸೆಗಳು ನಿಮ್ಮನ್ನು ಕೆಡಿಸಿ ಪಾತಾಳದಷ್ಟು ಕೆಳ ಮಟ್ಟಕ್ಕೆ ನೂಕುತ್ತದೆ .
ತೊಂದರೆಗಳಿಗೆ ಎರಡು ಕಾರಣಗಳಿರುತ್ತವೆ .ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು . ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು .ಯಾವಾಗ ನಿನ್ನ ಉದ್ದೇಶಗಳು ಶುದ್ಧವಾಗಿರುತ್ತೋ, ಅಂದು ನೀನು ಯಾರನ್ನು ಕಳೆದುಕೊಳ್ಳುವುದಿಲ್ಲ .ಸಂಬಂಧಿಕರಲ್ಲಿ ನಮ್ಮ ಮೊದಲ ಶತ್ರುಗಳು ಇರುತ್ತಾರೆ ಎಚ್ಚರ .
ಒಂದು ಕಡೆ ಪಾಂಡವರು ಐದು ಜನ . ಹಾಗೂ ಶ್ರೀ ಕೃಷ್ಣ ಇನ್ನೊಂದು ಕಡೆ, ನೂರು ಜನ ಕೌರವರು ಅಕ್ಷಯೊಣಿ ಸೈನ್ಯ . ಆದರೂ ಪಾಂಡವರಿಗೆ ಯುದ್ಧದಲ್ಲಿ ಜಯ ಸಿಗುತ್ತದೆ . ಧರ್ಮದ ಮಾರ್ಗದಲ್ಲಿ ಇದ್ದರೆ ಪರಮಾತ್ಮನು ಜೊತೆಗೆ ಇರುತ್ತಾನೆ.
ಒಂಟಿಯಾದೆ ಎಂದು ಕೊರಗ ಬೇಡ . ಸೂರ್ಯನು ಒಂಟಿ , ಚಂದ್ರನು ಒಂಟಿ .ಆದರೂ ಜಗತ್ತಿಗೆ ಬೆಳಕು ನೀಡುತ್ತಿಲ್ಲವೇ , ಒಂಟಿಯಾದಾಗಲೇ ನೀನು ಏನು ಎಂದು ಅರ್ಥ ಆಗುತ್ತದೆ .ನಿನ್ನ ಸಾಮರ್ಥ್ಯ ಎಷ್ಟು ಎಂದು ತಿಳಿಯುತ್ತದೆ . ಸೂರ್ಯ ಚಂದ್ರನಂತೆ ನೀನು ಜಗತ್ತಿಗೆ ಬೆಳಕು ನೀಡುವುದು ಬೇಡ . ನಿನ್ನ ಬದುಕಿಗೆ ನೀನು ಬೆಳಕಾಗು ಸಾಕು ಆಗ ನಿನ್ನ ಬದುಕು ಧನ್ಯವಾಗುತ್ತದೆ.
ತೊಂದರೆ ಬಂದಾಗ ಪ್ರಾಮಾಣಿಕವಾಗಿ ರಿ , ಹಣ ಬಂದರೆ ಸರಳವಾಗಿರಿ , ಹಕ್ಕನ್ನು ಪಡೆದ ನಂತರ ವಿನಯವಾಗಿರಿ , ನೀವು ಕೋಪಗೊಂಡಾಗ ಶಾಂತವಾಗಿರಿ , ಇದನ್ನು ಜೀವನ ನಿರ್ವಹಣೆ ಎಂದು ಕರೆಯಲಾಗುತ್ತದೆ . ಶತ್ರು ಎಷ್ಟೇ ಋಣಾತ್ಮಕವಾಗಿ ಬಲ ಶಾಲಿಯಾಗಿ ಇದ್ದರು, ಕರ್ಮದ ಫಲ ಎದುರಾದಾಗ ಶರಣಾಗತಿ ಹೊಂದಲೇಬೇಕು .
ಕೆಟ್ಟವರು ಎಷ್ಟೇ ಮೆರೆಯಲಿ ನೀನು ಪ್ರತಿಕ್ರಿಯಿಸದೆ ಸುಮ್ಮನಿರು . ಅವರ ವಿನಾಶ ಸದ್ಯದಲ್ಲಿ ಬಂದೇ ಬರುತ್ತದೆ .ಆಗ ನೀನು ಹಾಕಿದ ಕಣ್ಣೀರಿನ ಬೆಲೆ ಅವರಿಗೆ ತಿಳಿಯುತ್ತದೆ .ಮೌನಕ್ಕಿಂತ ಒಳ್ಳೆಯ ಉತ್ತರ ಇಲ್ಲ . ಕ್ಷಮಿಸುವುದಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ಮನಸ್ಸಿಗಿಂತ ಒಳ್ಳೆಯ ಸ್ನೇಹಿತ ಇಲ್ಲ. ಕೋಪಕ್ಕಿಂತ ದೊಡ್ಡ ಶತ್ರು ಇಲ್ಲ . ತಾಳ್ಮೆ ಗಿಂತ ದೊಡ್ಡ ಪರಿಹಾರವಿಲ್ಲ .
ಒಳ್ಳೆಯ ಸಂಬಂಧಗಳನ್ನು ಪ್ರೀತಿ ಕೊಟ್ಟು ಉಳಿಸಿಕೊಳ್ಳಿ. ಕೆಟ್ಟ ಸಂಬಂಧಗಳನ್ನು ಮೌನವಾಗಿದ್ದು ಕಳೆದುಕೊಳ್ಳಿ .ಮೂರ್ಖರಾಗಿರಿ ಸಂಬಂಧಗಳು ಹಾಗೆ ಉಳಿಯುತ್ತದೆ . ತಪ್ಪಿನ ವಿರುದ್ಧ ಧ್ವನಿ ಎತ್ತುವ ದಿನ ಸಂಬಂಧಗಳು ಒಡೆಯಲು ಪ್ರಾರಂಭಿಸುತ್ತದೆ .
ಬೆಳಕಿನಲ್ಲಿ ಇರುವಾಗ ಒಬ್ಬರಿಂದ ಒಬ್ಬರು ಸಿಗುತ್ತಲೇ ಇರುತ್ತಾರೆ. ನೀನು ಹುಡುಕಬೇಕಾಗಿರುವುದನ್ನು ಕತ್ತಲೆಯಲ್ಲಿ ಜೊತೆಯಾಗಿದ್ದವರನ್ನು .ಯಾರು ಯಾರನ್ನು ಉದ್ದಾರ ಮಾಡುವುದಕ್ಕೆ ಆಗುವುದಿಲ್ಲ . ಯಾರು ಯಾರನ್ನು ಹಾಳು ಮಾಡುವುದಕ್ಕೂ ಆಗುವುದಿಲ್ಲ . ಅವರವರ ಯೋಚನೆಯಲ್ಲಿ ಅವರವರ ಉದ್ಧಾರಕ್ಕೆ ಹಾಗೂ ಅವರು ಹಾಳಾಗುವುದಕ್ಕೆ ಮೂಲ ಕಾರಣವಾಗುತ್ತದೆ .
ಯಾರಾದರೂ ನಿಮಗೆ ನೋಯಿಸಿದರೆ ದುಃಖ ಪಡಬೇಡಿ .ಯಾವ ಮರ ಸಿಹಿಯಾದ ಹಣ್ಣನ್ನು ಕೊಡುತ್ತದೋ , ಜನರು ಅದೇ ಮರಕ್ಕೆ ಕಲ್ಲು ಎಸೆಯುತ್ತಾರೆ .