ದೊಡ್ಡ ಲಾಭ ಮಿಥುನ ರಾಶಿಗೆ

0

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರಿಗೆ ಗುರು ಬಲವು ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಗುರುವು ಇಷ್ಟು ದಿನ ಲಾಭ ಸ್ಥಾನದಲ್ಲಿ ಇರುವುದರಿಂದ ಬಹಳಷ್ಟು ಆದಾಯ ಗಳಿಸುವುದರ ಜೊತೆಗೆ ಸ್ನೇಹಿತರು ಬಂಧುಗಳ ಜೊತೆ ಬಹಳ ಖುಷಿಯಾಗಿ ಕಾಲ ಕಳೆದಿದ್ದೀರಾ ಮತ್ತು ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಂಡು ಆರಾಮಾಗಿ ನಿಮ್ಮ ಆಸೆಗಳನ್ನು ಪೂರೈಸಿಕೊಂಡು ನೆಮ್ಮದಿಯಾದ ದಿನವನ್ನು ಕಳೆದಿರುತ್ತೀರಾ. ಆದರೆ ಆದರೆ ಗುರು ಪರಿವರ್ತನೆಯ ನಂತರ ಈ ರೀತಿಯ ಸಮಯ ಇನ್ನು ಹೆಚ್ಚಿಗೆ ದಿನ ಇರುವುದಿಲ್ಲ.

ನೀವು ಏನೇನು ಗಳಿಕೆ ಮಾಡಿದ್ದೀರಾ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿಯು ಸಹ ಬರಬಹುದು. ಒಂದು ರೀತಿ ಕತ್ತಿಯ ಹಲಗಿನ ಮೇಲೆ ನಡೆಯುವಂತಹ ಪರಿಸ್ಥಿತಿ ಆಗಿರುತ್ತದೆ . ಎಚ್ಚರ ತಪ್ಪಿದರೆ ಅಪಾಯ ನಿಮ್ಮನ್ನು ಸುತ್ತುವರೆಯಬಹುದು. ಗುರುವು ಅಂತಹ ಫಲವನ್ನು ಕೊಡಲು ರೆಡಿಯಾಗಿದ್ದಾನೆ. ಯಾವ ವಿಚಾರಗಳಲ್ಲಿ ನೀವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಎಷ್ಟನೇ ತಾರೀಖಿನವರೆಗೆ ನಿಮಗೆ ಈ ರೀತಿಯ ಫಲ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಗುರುಬಲವನ್ನು ಹೆಚ್ಚಿಸಿಕೊಳ್ಳಲು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮೇ ಒಂದು ,2024 ಬುಧವಾರ ನಿಮ್ಮ ಪಾಲಿಗೆ ನಿಮ್ಮ ಪಾಲಿಗೆ ಒಳ್ಳೆಯ ಆಘಾತ ಸಿಗುವ ದಿನ‌ . ಅಂದಿನ ದಿನ ಗುರು ನಿಮ್ಮಿಂದ 12ನೇ ಮನೆಯಾದ ವೃಷಭ ರಾಶಿಗೆ ಪರಿವರ್ತನೆಯಾಗಲಿದ್ದಾನೆ. ಆ ಸ್ಥಾನಕ್ಕೆ ನಾವು ನಷ್ಟ ಸ್ಥಾನ ಎಂದು ಕರೆಯುತ್ತೇವೆ . ಅಂದರೆ ಮೇ ಒಂದರ ತನಕ ಗುರು ಗ್ರಹವು ಭಾಗ್ಯ ಸ್ಥಾನದಲ್ಲಿದ್ದು ನಿಮಗೆ ಲಾಭ ‌ ಸ್ಥಾನವನ್ನು ನೀಡಿರುತ್ತಾರೆ . ಅದನ್ನು ಕಳೆದುಕೊಳ್ಳುವ ಪರಿಸ್ಥಿತಿಯನ್ನು ತಂದೊದಗಿಸುತ್ತಾನೆ .

ಮಿಥುನ ರಾಶಿಯವರಿಗೆ ಬಹಳಷ್ಟು ಜನರಿಗೆ ಈ ಕಾಲವು ಚೆನ್ನಾಗಿರುವುದಿಲ್ಲ. ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ನೀವು ಎಡವಿದರೆ ಎಚ್ಚರ ತಪ್ಪಿದರೆ ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಬಹಳಷ್ಟು ಜನರ ಖರ್ಚು ವೆಚ್ಚಗಳು ಹೆಚ್ಚಾಗುತ್ತಾ ಹೋಗುತ್ತದೆ. ಅನಗತ್ಯವಾಗಿ ಖರ್ಚುಗಳನ್ನು ಮಾಡಬೇಕಾಗುತ್ತದೆ .ಮತ್ತು ಕೆಲವರಿಗೆ ವಿದೇಶಿ ಜೀವನದ ಬಗ್ಗೆ ಆಸೆ ಹುಟ್ಟಿಕೊಳ್ಳುತ್ತದೆ. ಈ ರೀತಿಯ ಆಸೆಗಳಿಂದ ‌ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ವಿದೇಶಿ ಪ್ರಯಾಣದ ಪ್ರವಾಸವನ್ನು ಕೈಗೊಂಡು ಅದರಿಂದ ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗುತ್ತದೆ. ವಿದೇಶಿ ಪ್ರವಾಸಕ್ಕೆ ನೀವು ಹೋದಾಗ ನಿಮ್ಮ ವಸ್ತುಗಳನ್ನು ಕಳೆದುಕೊಳ್ಳಬಹುದು ಹಣಕಾಸನ್ನು ಕಳೆದುಕೊಳ್ಳಬಹುದು ಅಥವಾ ವಿದೇಶದ ಆಸೆ ತೋರಿಸಿ ನಿಮ್ಮ ಕೈಯಿಂದ ಬಹಳಷ್ಟು ಹಣವನ್ನು ದುಂದು ವೆಚ್ಚ ಮಾಡಿಸಬಹುದು. ಶೇರು ಮಾರುಕಟ್ಟೆಯಿಂದ ನೀವು ಗಳಿಸಿದಂತಹ ಹಣ ಗುರು ಬದಲಾವಣೆಯಾದ ನಂತರ ಅದರಲ್ಲಿ ನೀವು ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಉಂಟಾಗುತ್ತದೆ.

ಭೂಮಿ ಒಡವೆ ಬೇರೆ ಯಾವುದೇ ರೀತಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಅದರಲ್ಲಿ ಒಂದಲ್ಲ ಒಂದು ರೀತಿಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹೊಸದಾಗಿ ಕೆಲಸ ಮಾಡುವ ಕಡೆಯಲ್ಲೂ ನಿಮಗೆ ಅಡೆತಡೆಗಳು ಉಂಟಾಗುತ್ತದೆ. ಕೆಲವರು ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದರೆ ಇನ್ನು ಕೆಲವರಿಗೆ ಜೊತೆಯಲ್ಲಿ ಇದ್ದಂತಹ ಜನರೇ ಮೋಸವನ್ನು ಮಾಡಬಹುದು. ಇದರಿಂದ ನೀವು ಜಾಗೃತರಾಗಿರಬೇಕು. ಬೇರೆಯವರ ಆಂತರಿಕ ವಿಷಯದಲ್ಲಿ ನೀವು ತಲೆ ಹಾಕುವುದು ಒಳ್ಳೆಯದಲ್ಲ.

ಆರೋಗ್ಯದ ವಿಷಯದಲ್ಲಿ ನೀವು ಜಾಗೃತರಾಗಿರಬೇಕು . ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ಎಂದು ನೀವು ಅದನ್ನು ತಳ್ಳಿ ಹಾಕುವಂತಿಲ್ಲ. ಅದು ಹೆಚ್ಚಿಗೆ ಪ್ರಮಾಣದಲ್ಲಿ ನಿಮ್ಮನ್ನು ಕಾಡುವಂತೆಯೂ ಸಹ ಇರುತ್ತದೆ. ಗುರು ಗ್ರಹವು ನಿಮಗೆ ಕೈಹಿಡಿಯದಿದ್ದರೂ, ಇನ್ನೊಂದು ಗ್ರಹವು ನಿಮಗೆ ಜೊತೆಯಾಗುತ್ತದೆ. ಉದ್ಯೋಗ ವಿಚಾರದಲ್ಲಿ ನಿಮಗೆ ತುಂಬಾ ಅಭಿವೃದ್ಧಿಯಾಗಲಿದೆ . ಕೆಲವರು ಮನೆಯಲ್ಲಿ ಕಳ್ಳತನವಾಯಿತು ಮತ್ತು ಖಾತೆಯಲ್ಲಿದ್ದಂತಹ ಹಣ ಹೋಯಿತು .ಎಂದು ಹೇಳುವ ಸಾಧ್ಯತೆ ಇರುತ್ತದೆ.

ದುಡ್ಡು ಕಳೆದುಕೊಳ್ಳುವುದರ ಜೊತೆಗೆ ಅವಮಾನ ಮತ್ತು ರಹಸ್ಯ ಶತ್ರುಗಳು ಸಹ ಹುಟ್ಟಿಕೊಳ್ಳಬಹುದು. ಕೆಲವೊಂದು ಕೆಲಸಗಳು ನಿಮ್ಮ ಮಟ್ಟಿಗೆ ಸರಿ ಎನಿಸಿದರು ಬೇರೆಯವರ ಮಟ್ಟಿಗೆ ಅದು ಸರಿ ಅನಿಸುವುದಿಲ್ಲ .ಇದರಿಂದ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತವೆ. ಇದರ ಜೊತೆಗೆ ನಿಮ್ಮ ಆಂತರಿಕ ವಿಷಯ ಮತ್ತು ನಿಮ್ಮ ಮುಂದಿನ ಕೆಲಸದ ಬಗ್ಗೆ ಯಾರ ಹತ್ತಿರವೂ ಚರ್ಚೆ ಮಾಡಬೇಡಿ. ಮೇ 14 . 2025 ಗುರು ನಷ್ಟ ಸ್ಥಾನ ಅಥವಾ ವ್ಯಯಸ್ಥಾನವನ್ನು ಬಿಟ್ಟು ಮುಂದಕ್ಕೆ ಹೋಗುತ್ತಾನೆ.

ಈಗ ಹೇಳಿದ ಎಲ್ಲಾ ಎಚ್ಚರಿಕೆಗಳನ್ನು ನೀವು ಮೇ 14 2025 ರವರೆಗೆ ನೆನಪಿಟ್ಟುಕೊಳ್ಳಬೇಕು. ಇನ್ನೂ ಒಂದು ವರ್ಷದವರೆಗೂ ಮರೆಯದೆ ಹುಷಾರಾಗಿರಬೇಕು. ಇಲ್ಲವಾದರೆ ಬೇರೆ ಯಾರದೋ ಸಂಚಿಗೆ ನೀವು ಬಲೀಪಶುವಾಗುವ ಸಾಧ್ಯತೆ ಇರುತ್ತದೆ. ಕಾನೂನಿನ ವಿಷಯದಲ್ಲಿ ನೀವು ತುಂಬಾ ಎಚ್ಚರವಾಗಿರಬೇಕು . ಏಕೆಂದರೆ ಗುರುವು ನಷ್ಟ ಸ್ಥಾನದಲ್ಲಿ ಇರುವುದರಿಂದ ಜಾಗರೂಕರಾಗಿರಬೇಕು. ಹೆಚ್ಚಿನವರಿಗೆ ತಮ್ಮ ಕುಟುಂಬದ ಬಗ್ಗೆ ಚಿಂತೆ. ಶುರುವಾಗುತ್ತದೆ. ಪದೇ ಪದೇ ಭಿನ್ನಾಭಿಪ್ರಾಯ ಮನಸ್ತಾಪ ಜಗಳ ಮನೆ ಬಿಟ್ಟು ಹೊರಗಡೆ ಹೋಗುವಂತಹ ಯೋಚನೆಯನ್ನು ಕೆಲವರು ಮಾಡುವ ಸಾಧ್ಯತೆ ಇರುತ್ತದೆ.

ತಂದೆ ತಾಯಿ ಮತ್ತು ಮಕ್ಕಳ ನಡುವಿನ ಒಡನಾಟ ಅಷ್ಟು ಚೆನ್ನಾಗಿರುವುದಿಲ್ಲ. ಚಿಕ್ಕ ಮಕ್ಕಳಿಂದಲೂ ಸಹ ನಿಮಗೆ ಗೌರವ ಸಿಗುವುದಿಲ್ಲ. ಆಸ್ತಿ ವಿಚಾರಕ್ಕೂ ಅಥವಾ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಕಿರಿಕಿರಿ ಮಾಡಿಕೊಂಡು ಮನೆ ಬಿಡುವ ಪರಿಸ್ಥಿತಿಯು ಸಹ ಬರಬಹುದು. ಅಣ್ಣ ತಮ್ಮಂದಿರು ಬೇರೆ ಆಗುವಂತಹ ಪರಿಸ್ಥಿತಿಯೂ ಸಹ ಬರಬಹುದು. ” ಓಂ ನಮಃ ಪ್ರಣವಾರ್ಥಾಯ ಶುದ್ಧ ಜ್ಞಾನೈಕ ಮುರ್ತಯೇ ನಿರ್ಮಲಾಯ ಪ್ರಶಾಂತಾಯ ದಕ್ಷಿಣ ಮೂರ್ತಯೇ ನಮಃ. ” ಈ ಗುರು ಮಂತ್ರವನ್ನು ನಿಮಗೆ ಸಾಧ್ಯವಾದಾಗಲೆಲ್ಲ ಹೇಳಿಕೊಳ್ಳಿ. ಇದರಿಂದ ನಿಮಗೆ ಗುರುವಿನ ಅನುಗ್ರಹ ಸಿಗುತ್ತದೆ. ಇದರಿಂದ ನಿಮ್ಮ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಮಾಧಾನ ದೊರಕುತ್ತದೆ.

Leave A Reply

Your email address will not be published.