ಮೋಸ ಕಪಟ ವಂಚನೆ ಮಾಡಿ ಯಾರ ಆತ್ಮಕ್ಕೂ ಮೋಸ ಮಾಡಬೇಡಿ

0

ನಾವು ಈ ಲೇಖನದಲ್ಲಿ ಮೋಸ , ಕಪಟ, ವಂಚನೆ ಮಾಡಿ ಯಾರ ಆತ್ಮಕ್ಕೂ ಮೋಸ ಮಾಡಬೇಡಿ. ನೋವು ಮಾಡಿದವರು ತಪ್ಪದೇ ಇದನ್ನು ಹೇಗೆ ಅನುಭವಿಸುತ್ತಾರೆ ಎಂದು ತಿಳಿಯೋಣ . ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ ಎಡವಿ ಆ ತಾಳಕ್ಕೆ ಬಿದ್ದರೂ , ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ .

ಜೀವನದಲ್ಲಿ ನೀನು ಎಂದೋ ಯಾರಿಗೋ ಮಾಡಿದ ಒಂದು ಉಪಕಾರ ಯಾವತ್ತೂ ವ್ಯರ್ಥವಾಗುವುದಿಲ್ಲ . ಒಂದಲ್ಲ ಒಂದು ರೀತಿಯಲ್ಲಿ ಯಾವುದೋ ರೂಪದಲ್ಲಿ ನಿನ್ನ ಬಳಿ ಬಂದೇ ಬರುತ್ತದೆ . ಕಾಡುವ ಬಡತನ ನಾಳೆ ಹೋಗಬಹುದು . ಇಲ್ಲದ ಸಿರಿತನ ಮುಂದೆ ಬರಬಹುದು. ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ , ವಿಶ್ವಾಸ , ಪ್ರೀತಿ, ಮತ್ತೆ ಸಿಗುವುದಿಲ್ಲ .

ನಡೆವ ಹಾದಿಯಲ್ಲಿ ಚುಚ್ಚುವ ಮುಳ್ಳು ಇದ್ದರೆ , ಪಾದರಕ್ಷೆಯನ್ನು ಮೆಟ್ಟಿ ನಡೆ .ಬದುಕೆಂಬ ದಾರಿಯಲಿ ಚುಚ್ಚಿ ಮಾತನಾಡುವ ಜನರು ಇದ್ದರೆ , ನಿನ್ನ ಪಾದರಕ್ಷೆ ಬಿಡುವ ಸ್ಥಳದಲ್ಲಿ ಬಿಟ್ಟು ನಡೆ .. ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ .ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದು ಇಲ್ಲ .ಆದರೆ ಅದರ ರಭಸಕ್ಕೆ ಎಲ್ಲವನ್ನು ಸೋಲಿಸುವ ಸಾಮರ್ಥ್ಯ ಇದೆ .

ಸಮಯ ಮತ್ತು ಪರಿಸ್ಥಿತಿ ಯಾವ ಸಮಯದಲ್ಲಾದರೂ ಬದಲಾಗಬಹುದು .ಆದ್ದರಿಂದ ನೀವು ಯಾರಿಗೂ ಅವಮಾನ ಮಾಡಬೇಡಿ .ಕೀಳಾಗಿ ನೋಡಬೇಡಿ .ನೀವು ಶಕ್ತಿಶಾಲಿ ಆಗಿರಬಹುದು , ಆದರೆ ಸಮಯ ನಿಮಗಿಂತ ಶಕ್ತಿಶಾಲಿ ಎನ್ನುವುದನ್ನು ಮರೆಯಬೇಡಿ .

ಮನುಷ್ಯನಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕು .ಯಾಕೆಂದರೆ ಅಲ್ಲಿ ನಾನು ನನ್ನಿಂದಲೇ ಎಂದು ಹೇಳಿದ ಎಷ್ಟೋ ಜನ ಮಣ್ಣಾಗಿರುವುದು ಕಾಣಿಸುತ್ತದೆ .

ಸಹನೆ ಧೈರ್ಯವಂತ ನ ಲಕ್ಷಣ .ಕೋಪ ಹೇಡಿಯ ಲಕ್ಷಣ . ಮನಸ್ಸು ದುರ್ಬಲವಾಗಿರುವಾಗ ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆ ಆಗುತ್ತದೆ .ಮನಸ್ಸು ಸಮತೋಲನದಲ್ಲಿದ್ದಾಗ ಸನ್ನಿವೇಶಗಳು ಸವಾಲುಗಳಾಗುತ್ತದೆ . ಮನಸ್ಸು ಪ್ರಬಲವಾಗಿದ್ದಾಗ ಸನ್ನಿವೇಶಗಳು ಅವಕಾಶಗಳಾಗಿ ಬದಲಾಗುತ್ತದೆ ಇದೇ ಜೀವನ .

ಕೆಟ್ಟ ಸಮಯದಲ್ಲಿ ಗಾಬರಿ ಯಾಗುವುದರಿಂದ ಪರಿಹಾರ ಸಿಗುವುದಿಲ್ಲ. ಕೆಟ್ಟ ಸಮಯವಷ್ಟೇ ಅವನ್ನು ಕಳೆಯಲು ಬಿಡಿ .ಭಗವಂತನ ಮೇಲೆ ನಂಬಿಕೆ ಇಡಿ . ದಾರಿ ತನ್ನಷ್ಟಕ್ಕೆ ತಾನೇ ಕಾಣುವುದು . ಮಾತು ಬರುತ್ತದೆ ಎಂದು ಅತಿಯಾಗಿ ಮಾತನಾಡಬಾರದು .ಯಾಕೆಂದರೆ ಆ ಮಾತು ಒಬ್ಬರನ್ನು ನಗಿಸುತ್ತದೆ . ಮತ್ತೊಬ್ಬರನ್ನು ಅಳಿಸುತ್ತದೆ .

ಹಸಿದವರಿಗೆ ನೀಡಿದ ಅನ್ನ, ಬಯಸಿದವರಿಗೆ ನೀಡಿದ ದಾನ ,ಅವಶ್ಯಕತೆ ಇದ್ದವರಿಗೆ ಮಾಡಿದ ಸಹಾಯ ,ನೀವು ಸಾವಿನ ನಂತರ ನಿಮ್ಮನ್ನು ಬದುಕಿಸಬಲ್ಲ ಸಂಜೀವಿನಿಯಾಗಿದೆ .

ಆಗಿ ಹೋದ ಕ್ಷಣಗಳ ಬಗ್ಗೆ ಚಿಂತಿಸಬೇಡಿ .ಅದು ಕಂಬನಿ ತರುತ್ತದೆ .ಮುಂದೆ ಆಗುವ ಕ್ಷಣಗಳ ಬಗ್ಗೆ ಚಿಂತಿಸಬೇಡಿ .ಅದು ಗಾಬರಿ ತರುತ್ತದೆ .ಇಂದಿನ ಕ್ಷಣಗಳನ್ನು ಖುಷಿಯಿಂದ ಜೀವಿಸಿ .ಅದು ಉಲ್ಲಾಸ ತರುತ್ತದೆ .

ಕರ್ಮದ ಏಟು ತುಂಬಾ ಭಯಂಕರವಾಗಿ ಇರುತ್ತದೆ .ನಮ್ಮ ಸಂಗ್ರಹವಾದ ಪುಣ್ಯ ಯಾವಾಗ ಮುಗಿದು ಹೋಗುತ್ತದೆ , ಎಂದು ನಮಗೆ ತಿಳಿಯುವುದಿಲ್ಲ .ಪುಣ್ಯ ಮುಗಿದ ನಂತರ ಸಮರ್ಥ ರಾಜನುಭಿಕ್ಷೆ ಬೇಡಬೇಕಾಗುತ್ತದೆ .ಆದ್ದರಿಂದ ಯಾರೊಂದಿಗಾದರೂ ಮೋಸ, ಕಪಟ, ವಂಚನೆ ಮಾಡಿ ಯಾರ ಆತ್ಮಕ್ಕೂ ಮೋಸ ಮಾಡಬೇಡಿ.

Leave A Reply

Your email address will not be published.